ಸಿಂದಗಿ – ಸಾಲ ತೀರಿಸಲಾಗದೆ ಮನನೊಂದು ರೈತ ಮಹಾಂತಯ್ಯ ಚರಲಿಂಗಯ್ಯ ಹಿರೇಮಠ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದಿದೆ.
ಇದೇ ದಿ. 14 ರಂದು ಸಾಯಂಕಾಲ 17.00 ಗಂಟೆಯಿಂದ 18.00 ಗಂಟೆ ನಡುವಿನ ಅವಧಿಯಲ್ಲಿ ಗಿರಿಮಲ್ಲಯ್ಯ ತಂದೆ ಶರಣಯ್ಯ ಹಿರೇಮಠ ಇವರ ಜಮೀನಿನಲ್ಲಿ ಇರುವ ಬೇವಿನ ಗಿಡಕ್ಕೆ ಮಹಾಂತಯ್ಯ ತಂದೆ ಚರಲಿಂಗಯ್ಯ ಹಿರೇಮಠ ನೇಣಿಗೆ ಶರಣಾಗಿದ್ದಾನೆ.
ಈತನ ಹೆಸರಿನಲ್ಲಿ ಬಂದಾಳ ಸರ್ವೆ ನಂಬರ್ 39/5 ಕ್ಷೇತ್ರ 5 ಗುಂಟೆ ಎಕರೆ 10. ಗುಂಟೆ ಜಮೀನು ಇರುತ್ತದೆ ಸದರ ಜಮೀನಿನಲ್ಲಿ ಕಬ್ಬು ಮತ್ತು ಹತ್ತಿ ಬೆಳೆ ಬೆಳದಿದ್ದು ಬೆಳೆ ಸಾಲ ಅಂತ ಚಿಕ್ಕ ಸಿಂದಗಿ ಪಿಕೆಪಿಎಸ್ ಬ್ಯಾಂಕಿನಲ್ಲಿ ರೂ. 70,000 ಬೆಳೆ ಸಾಲ ಮಾಡಿದ್ದು ಜಮೀನಿನಲ್ಲಿ ಬೆಳೆದ ಕಬ್ಬು ಮತ್ತು ಹತ್ತಿ ಮಳೆ ಸರಿಯಾಗಿ ಬಾರದೇ ಇರುವುದರಿಂದ ಸಾಲ ಹೇಗೆ ತೀರಿಸಬೇಕೆಂದು ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೈತನ ಪತ್ನಿ ದಾನಮ್ಮ ಗಂಡ ಮಹಾಂತಯ್ಯ ಹಿರೇಮಠ ದೂರು ನೀಡಿದ್ದಾರೆ.
ಪತ್ನಿ ನೀಡಿದ ವರದಿಯ ಆಧಾರದ ಮೇಲೆ ಸಿಂದಗಿ ಪೊಲೀಸ್ ಠಾಣೆ ಯು ಡಿ ನಂಬರ್ 19/2024 ಕಲಂ 174 ಸಿ ಆರ್ ಪಿ ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.