ಸಾವು ನಾನಿದ್ದಾಗ ಬರೋದಿಲ್ಲ, ಬಂದಾಗ ನಾನಿರೋದಿಲ್ಲ !

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಭೂಮಿಯಲ್ಲಿ ಹೆಸರು,‌ ಹಣ ಮಾಡಿಟ್ಟು ಹೋದರೆ‌ ಮುಕ್ತಿ ಎನ್ನುವುದು ಅರ್ಧಸತ್ಯ. ಸಾತ್ವಿಕ ಶಕ್ತಿಯ ಹಾಗೆ ರಾಜಸ ಶಕ್ತಿ,ತಾಮಸ ಶಕ್ತಿಯುಳ್ಳವರೂ ಹೆಸರು,ಹಣ ಮಾಡುತ್ತಾರೆ. ಎಲ್ಲರೂ ಭೂಮಿಯ ಮೇಲಿದ್ದ ಮಾನವರೆ. ದೇವರು ಮಾನವರು ಅಸುರರು ಎನ್ನುವ ಮೂರು ಶಕ್ತಿ ಭೂಮಿಯಲ್ಲಿ  ಯುಗಯುಗದಿಂದಲೂ ನಡೆದು ಬಂದಿದೆ. ಪುರಾಣ,ಇತಿಹಾಸವೆಲ್ಲವೂ ಅವರ ಕಥೆಗಳಾಗಿದೆ.

ಹಾಗಾದರೆ ಅವರುಗಳು ಭೂಮಿಯಲ್ಲಿ ಬಿಟ್ಟು ಹೋದ ಹೆಸರು,ಹಣ ಎಲ್ಲಿದೆ? ಇವೆಲ್ಲವೂ ಇಂದು ಮಾನವನ ಪಾಲಾಗಿ ನಾನೇ ದೇವರು ಎನ್ನುವ ಮಟ್ಟಿಗೆ ಬೆಳೆದಿದೆ. ದೇವರು ಇದ್ದ‌ಮೇಲೆ ಅಸುರರೂ ಇದ್ದಾರಲ್ಲವೆ. ಹಾಗೆಯೇ ಇಂದಿಗೂ ಮನುಕುಲ ಜೀವನ ನಡೆಸಲು ಹಣ ಸಂಪಾದನೆ ಮಾಡುವುದು ಅಗತ್ಯವಿದೆ.ದೈವತ್ವ ಪಡೆಯಬಯಸುವವರು ಹಣವನ್ನು ಸತ್ಕರ್ಮದಿಂದ ದುಡಿದು ಸತ್ಕಾರ್ಯಕ್ಕೆ ಬಳಸುತ್ತಾರೆ.

ಮಾನವರು ಮಧ್ಯವರ್ತಿಗಳ ಸ್ಥಾನದಲ್ಲಿದ್ದು ಹಣವನ್ನು ಮೇಲೆಕೆಳಗೆ ಬರೋವಾಗ ಹೋಗುವಾಗ ತನಗೆ ಬೇಕಾದಷ್ಟು ಹಿಡಿದಿಟ್ಟುಕೊಂಡು ಜೀವನ ನಡೆಸಿದರೆ, ಅಸುರರು ಎಲ್ಲರಲ್ಲಿಯೂ ಇರುವ ಹಣಕ್ಕಾಗಿ ಅಧರ್ಮದಿಂದ ಮುಂದೆ ನುಗ್ಗಿ ಪಡೆದು ಎಲ್ಲರನ್ನೂ ಆಳೋದಕ್ಕೆ ಬಳಸಬಹುದು.

- Advertisement -

ಇಲ್ಲಿ ಹಣ, ಹೆಸರಿಗಾಗಿ ಭೌತಿಕದಲ್ಲಿಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಧರ್ಮ, ದುರ್ಬಳಕೆ ಮಾಡಿಕೊಂಡರೆ ಅಧರ್ಮ. ನಾವೀಗ ಪುರಾಣ ಕಾಲದ ವಿಚಾರಗಳನ್ನು ತಿಳಿಯುವುದಕ್ಕೂ ಹಣ ಬೇಕು. ತಿಳಿಸುವುದಕ್ಕೆ ಅಧಿಕಾರ ಬೇಕು.

ಅಧಿಕಾರ ಹೆಚ್ಚಾದಂತೆ‌ ಜನಬಲ,ಹಣಬಲವೂ ಸೇರಿಕೊಂಡು ತನ್ನ ತಾನರಿಯಲಾಗದೆ ರಾಜಕೀಯತೆ ನಡೆಸುವುದು ಸಹಜ. ಹೀಗಾಗಿ ಯಾವುದೂ ಅತಿಯಾಗದಂತೆ ತನ್ನ ಸಂಸಾರದ ಜೊತೆಗೆ ಸಮಾಜವನ್ನು ಅರ್ಥ ಮಾಡಿಕೊಂಡು ಭೂಮಿಯಲ್ಲಿ ಜೀವನ ನಡೆಸುವವರು ವಿರಳ.

ಭೂ‌ಮಿಯಿಂದ ಮುಕ್ತಿ ಪಡೆಯಬೇಕಾದರೆ ಇಲ್ಲಿ ನಮ್ಮದೆನ್ನುವುದನ್ನು ಕಡಿಮೆಮಾಡಿಕೊಳ್ಳಬೇಕೆನ್ನುವುದು ಆಧ್ಯಾತ್ಮ. ಭೂಮಿಯನ್ನೇ ಆಳೋದಾದರೆ ನಮ್ಮಲ್ಲಿ ಹಣ ಅಧಿಕಾರ, ಹೆಸರು ಇರಬೇಕು. ಆದರೆ, ನಿಜಕ್ಕೂ‌ ಅದ್ವೈತ ತಿಳಿಸಿದಂತೆ ಇಲ್ಲಿ ನಾನೆಂಬುದಿಲ್ಲ.

ಆದರೂ ನಾನು ಇರೋವರೆಗೆ ನಾನು ಹೋಗೋದಿಲ್ಲ. ಸಾವು ಹಾಗೆಯೇ ನಾನಿದ್ದಾಗ ಬರೋದಿಲ್ಲ.ಬಂದ ಮೇಲೆ ನಾನಿರೋದಿಲ್ಲ.‌ ಹೆಸರುಮಾತ್ರ ಇರುತ್ತದೆ. ಹೀಗಾಗಿ ಹೆಸರು ಭೂಮಿಯಲ್ಲಿ ಶಾಶ್ವತವಾಗಿರಲು ಉತ್ತಮ ಕಾರ್ಯ ನಡೆಸಬೇಕು. ಸುಪ್ರಸಿದ್ಧ, ಪ್ರಸಿದ್ದ,ಕುಪ್ರಸಿದ್ದರ ನಡುವಿನ ಮಾನವ ಪ್ರಸಿದ್ದನಾದರೂ ,ಅದಕ್ಕೆ ಸಹಕಾರ ನೀಡಿದ ಸುಪ್ರಸಿದ್ದ ಕುಪ್ರಸಿದ್ದರು ನೇರವಾಗಿ ಕಾರಣರಲ್ಲ.

ಹೀಗಾಗಿ ಪ್ರತಿಯೊಬ್ಬರ ಹೆಸರಿನ‌ಹಿಂದೆ ಒಂದು ಶಕ್ತಿಯ ಪ್ರೇರಣೆಯಿರುತ್ತದೆ. ಇದನ್ನು ಪರಮಾತ್ಮನ ಶಕ್ತಿ ಎಂದರು. ಆ ಪರಮಾತ್ಮನಿಂದಲೇ ಎಲ್ಲಾ ಹೆಸರು,ಹಣ,ಅಧಿಕಾರ ಸ್ಥಾನ ಮಾನ ಎಂದಾಗ ನನ್ನದೇನಿದೆ? ನಾನು ಕಾರಣಮಾತ್ರನಾದಾಗ ಎಲ್ಲಾ  ಪರಮಾತ್ಮನೇ ನಡೆಸುವ‌‌ ಈ ಜಗತ್ತಿನಲ್ಲಿ ಯಾವುದೂ ,ಯಾರೂ ನನ್ನದಲ್ಲ.ನಮ್ಮವರಲ್ಲ ಹೀಗೇ‌ ವೈರಾಗ್ಯ ತಾಳಿ ಸಂನ್ಯಾಸ ಸ್ವೀಕರಿಸಿ ಮುಕ್ತಿ ಪಡೆದವರ ಹೆಸರಿದೆ ಹಣವಿಲ್ಲ.

ಆದರೆ ವಿಪರ್ಯಾಸವೆಂದರೆ ಮಾನವರು ಅಂತಹ‌ವೈರಾಗಿಗಳ ಮೂರ್ತಿ ಪೂಜೆ ಮಾಡಿ ಚಿನ್ನ ಬೆಳ್ಳಿ, ವಜ್ರದ ಕಿರೀಟ ಮಾಡಿಸಿ ಜನರನ್ನು ಸೇರಿಸಿಕೊಂಡು ಹಣ, ಅಧಿಕಾರ ಪಡೆದು ತಮ್ಮ ಹೆ  ಹೀಗೆಯೇ‌ ಎಲ್ಲಾ ಧರ್ಮ ದೇವತೆಗಳು ಜಗತ್ತಿನ ಮೂಲೆ ಮೂಲೆ ಪೂಜಿಸಲಾದರೂ ಮಾನವನಿಗೆ ಮಾತ್ರ ಪರಮಾತ್ಮನ ದರ್ಶನ ವಾಗಿಲ್ಲ.

ಕೆಲವರು ತಮ್ಮ ನಿಸ್ವಾರ್ಥ ಸಾಧನೆ ಮೂಲಕ ಪರಮಾತ್ಮನೆಡೆಗೆ‌ನಡೆದಿರೋದು ಸತ್ಯ.‌ ಆಗ ಅವರು ಹೆಸರು, ಹಣ, ಅಧಿಕಾರಕ್ಕಾಗಿ ಪರಮಾತ್ಮನ ಬೇಡದೆ ಆತ್ಮಸಾಕ್ಷಾತ್ಕಾರ ಮಾಡಿಕೊಂಡರು. ಒಟ್ಟಿನಲ್ಲಿ ಭೂಮಿಯಲ್ಲಿ ಜೀವನ ನಡೆಸಲು ನಮ್ಮ ಅಸ್ತಿತ್ವಕ್ಕೆ ಹಣ ಹೆಸರು ಅಗತ್ಯವಿದೆ.

ಇದನ್ನು ಸದ್ಬಳಕೆ ಮಾಡಿಕೊಂಡರೆ ಪರಮಾತ್ಮ ನೆಡೆಗೆ ದುರ್ಭಳಕೆ ಮಾಡಿಕೊಂಡು ರಾಜಕೀಯ ನಡೆಸಿದರೆ ಮುಂದಿನ‌ಜನ್ಮದಲ್ಲಿ ಜೀವ ಭೂಮಿಮೇಲಿದ್ದರೂ ಹೆಸರು,ಹಣದ ಕೊರತೆಯಿಂದ ಪರಕೀಯರ ಹಿಂದೆ ನಡೆಯುವಂತಾಗುತ್ತದೆ. ನಮ್ಮವರ‌‌ ಹೆಸರು, ಹಣಕ್ಕಿಂತ ಮುಖ್ಯವಾದ ಜ್ಞಾನವನ್ನು ಬಳಸಿ ಧರ್ಮ/ಕರ್ಮಕ್ಕೆ ತಕ್ಕಂತೆ ದುಡಿದು ಸಂಪಾಧಿಸಿ ತನ್ನ ಕರ್ತವ್ಯ ವನ್ನು ಶ್ರದ್ದಾ ನಿಷ್ಠೆಯಿಂದ. ಮಾಡಿ ಮುಗಿಸಿದ ಎಷ್ಟೋ ಮಹಾತ್ಮರುಗಳು ಮರೆಯಾಗಿದ್ದಾರೆ. ಇವರ ಹೆಸರು ಭೂಮಿಯಲ್ಲಿರದಿದ್ದರೂ ಆತ್ಮಕ್ಕೆ ಶಾಂತಿ, ತೃಪ್ತಿ ಮುಕ್ತಿ ಸಿಕ್ಕಿರುವಾಗ ಹೆಸರಿನಲ್ಲೇನಿದೆ?

ದೇವಾನುದೇವತೆಗಳ ಹೆಸರಿನಲ್ಲಿಯೇ ಇರುವ ಜ್ಞಾನ ಮಾನವರು ತಿಳಿದು ನಡೆದರೆ ಹೆಸರು,ಹಣಕ್ಕಿಂತ ಜ್ಞಾನ ದೊಡ್ಡದು ಎನ್ನುವ ಅನುಭವವಾಗುತ್ತದೆ ಎನ್ನಬಹುದು. ದೇವನೊಬ್ಬನೆ ನಾಮ ಹಲವು. ಒಂದೇ ದೇವರನ್ನು ಕೋಟಿ ನಾಮಗಳಿಂದ ಕರೆಯಲ್ಪಡುವ ಮಾನವರಲ್ಲಿ
ಒಂದು ಶಕ್ತಿ ದೇವರಿದ್ದಾರೆ. ಅದನ್ನು ಆತ್ಮಶಕ್ತಿ ಎಂದರು.

ಆತ್ಮಾನುಸಾರ ಸತ್ಯ ಧರ್ಮದ ಪ್ರಕಾರ ನಡೆದ ಅನೇಕರು ದೈವತ್ವ ಪಡೆದರು. ಇದಕ್ಕೆ ವಿರುದ್ದ ನಡೆದವರನ್ನು ಅಸುರರೆಂದರು. ಇವರಿಬ್ಬರ ನಡುವಿರುವವರೆ ಮಾನವರೆಂದರು. ಮಾನವರು ಯಾರ ಕಡೆ ನಡೆದರೆ ಜೀವಕ್ಕೆ ಮುಕ್ತಿ ಸಿಗುವುದೆನ್ನುವ ಜ್ಞಾನ ಪಡೆದಾಗಲೆ ಜೀವನದ ಸತ್ಯ ಅರ್ಥ ಆಗುವುದರಿಂದ ಆಧ್ಯಾತ್ಮ ಸಾಧನೆಯಲ್ಲಿ ಹೆಸರು, ಹಣ, ಅಧಿಕಾರದಿಂದ
ದೂರ ಉಳಿದರು.

ಕಲಿಮಾನವನಿಗೆ ಇಂದು ಹಣವಿದೆ ಅಧಿಕಾರವಿದೆ, ಹೆಸರಿದೆ ಆದರೆ ಇದನ್ನು ಸಂಪಾದಿಸಿದ ಮಾರ್ಗ ಸರಿಯಿಲ್ಲದ ಕಾರಣವೆ ಕಷ್ಟ ನಷ್ಟದ ಜೀವನ. ಕಷ್ಟಪಟ್ಟರೆ ಸುಖವಿದೆ. ಸುಖದ ಹಿಂದೆ ಕಷ್ಟವಿದೆ. ಹೆಸರಿಗಾಗಿ ಕಷ್ಟಪಡುವ ಬದಲಾಗಿ, ಕಷ್ಟಪಟ್ಟು ಹೆಸರು ಬರುವುದು ಉತ್ತಮ. ಆಧ್ಯಾತ್ಮ ಸಾಧನೆ ಹೆಸರಿನಿಂದ ಆಗೋದಿಲ್ಲ.

ಬೌತಿಕ ಸಾಧನೆಗೆ ಹೆಸರಿರಬೇಕು. ದೇವರು ನಮ್ಮನ್ನು ನಡೆಸುವಾಗ ಒಳಗಿನ ನಿರಾಕಾರ ಶಕ್ತಿ ಕಾಣೋದಿಲ್ಲ ಆದರೆ ಹೆಸರು ನಮ್ಮದಾಗಿರುತ್ತದೆ. ಇದನ್ನು ಅದ್ವೈತ ಎಂದರು. ಭಾರತದ ಪ್ರಜೆಯಾಗಿ ಹೆಸರು ಮಾಡಿದರೆ ದೇಶಕ್ಕೆ ಹೆಸರು ತಂದಂತೆ. ಇಲ್ಲಿ ಜೀವಾತ್ಮ ನಮ್ಮೊಳಗೇ ಇದ್ದು ನಡೆಸುವಾಗ ನಮಗೆ ಕಾಣೋದಿಲ್ಲ.

ಹಾಗೆಯೇ ಭಾರತಾಂಬೆಯ ಒ ಭಾರತಮಾತೆ ನಡೆಸುವಾಗ ದೇಶ ಕಾಣದೆ ನಾನೇ ಕಂಡರೆ ಹೆಸರು ನನ್ನದು ಶಕ್ತಿ ಪರಮಾತ್ಮನದು.ಅದ್ವೈತ ,ದ್ವೈತ, ವಿಶಿಷ್ಟಾದ್ವೈತ ತತ್ವಜ್ಞಾನದಲ್ಲಿಯೂ ಇದೇ ಕಾಣಬಹುದು. ರಾಜಕೀಯ (ಇತರರನ್ನು ಆಳೋದು)ಬಿಟ್ಟು ನಡೆದರೆ ತತ್ವಜ್ಞಾನ, ರಾಜಕೀಯಕ್ಕೆ ಇಳಿದರೆ ಹೆಸರು,ಹಣ,ಅಧಿಕಾರಕ್ಕಾಗಿ ತಂತ್ರಜ್ಞಾನ. ಯಾವುದರಿಂದ ಮುಕ್ತಿ ಸಿಗುತ್ತದೆ?

ಹಿಂದಿನ ರಾಜಾಧಿರಾಜರು ಕೊನೆಗಾಲದಲ್ಲಿ ಮೋಕ್ಷ ಸಾಧನೆಗಾಗಿ ರಾಜ್ಯಭಾರ ಬಿಟ್ಟು ಸಂನ್ಯಾಸಾಶ್ರಮಕ್ಕೆ ಹೋಗುತ್ತಿದ್ದರು. ಅವರು ಎಲ್ಲಾ ಬಿಟ್ಟು ನಡೆದಿದ್ದರಿಂದ ಈಗಲೂ ಅವರ ಹೆಸರು ಅಮರವಾಗಿದೆ. ಹಾಗಂತ ಅವರ ಹಣ, ಅಧಿಕಾರವೆಂದು ಏನೂ ಉಳಿದಿಲ್ಲ. ಎಷ್ಟು ಸಾಧ್ಯವೋ ಅಷ್ಟು ತ್ಯಾಗಕ್ಕೆ ತಯಾರಾದರೆ ಉತ್ತಮ ಹೆಸರಿನ ಜೀವನ. ಜನನ ಮರಣದ ನಡುವಿನ‌ ಜೀವನಕ್ಕೆ ಒಂದು ಹೆಸರಿನ ಅಗತ್ಯವಿದೆಯಷ್ಟೆ. ಇದನ್ನು ಸದಾಚಾರಕ್ಕೆ ಬಳಸಿದರೆ ಮುಕ್ತಿ. ದುರಾಚಾರಕ್ಕೆ ಬಳಸಿದರೆ ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!