ಸಾಹಿತ್ಯ ಸವಿಯುವ ಬರಹಗಾರರನ್ನು ಬೆಂಬಲಿಸಿ : ಹಾನಗಲ್

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣದಿಂದ ಸತ್ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲದು ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕಿ ಶಶಿಕಲಾ ಹುಡೇದ ಅಭಿಪ್ರಾಯಪಟ್ಟರು.

ಹಾನಗಲ್ ತಾಲ್ಲೂಕಿನ ಪುಟ್ಟರಾಜ ಕವಿ ಗವಾಯಿಗಳವರ ಜನ್ಮಸ್ಥಳ ದೇವರ ಹೊಸ ಪೇಟೆಯಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಕವಿ ದಾವಲಮಲೀಕ ಇಂಗಳಗಿ ಅವರ “ಭಾವಯಾನ”ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯವನ್ನು ಸವಿಯುವ ಬರಹಗಾರರನ್ನು ಬೆಂಬಲಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.ಸದ್ವಿಚಾರಗಳನ್ನು ಬಿತ್ತಿ ಸತ್ಸಮಾಜ ನಿರ್ಮಾಣದಲ್ಲಿ ಕವಿ,ಕಲಾವಿದರ ಪಾತ್ರ ಮಹತ್ವದ್ದಾಗಿದೆ ಎಂದರು.

- Advertisement -

ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಯುವ ಕವಿ ದಾವಲಮಲೀಕ ಇಂಗಳಗಿ ಅವರ ಚೊಚ್ಚಲ ಕವನ ಸಂಕಲನ “ಭಾವಯಾನ” ಅವರ ಅಂತರಂಗದ ಅನುಭವಗಳ ಅಭಿವ್ಯಕ್ತಿಗೆ ಸೃಜನಶೀಲ ಬರವಣಿಗೆ ಸಾಕ್ಷಿಯಾಗಿದೆ. ಇದು ಮೊದಲ ಸಂಕಲನವಾಗಿದ್ದರೂ ಪ್ರಬುದ್ಧ ಬರವಣಿಗೆ ಇಲ್ಲಿದೆ ಎಂದರು.

‌‌‌‌‌‌ಸಿಪಿಐ ಶ್ರೀ ಶಂಕರ್ ಗಣಾಚಾರಿ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಮಾತನಾಡಿ, ಕಲೆ,ಸಾಹಿತ್ಯ, ಸಂಸ್ಕ್ರತಿ ಇರುವಲ್ಲಿ ಕಪಟ,ಮೋಸ,ಸುಳ್ಳುಗಳಿಗೆ ಅವಕಾಶವಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದು ವಿಷಾದದ ಸಂಗತಿ. ಸಮಾಜ ಒಳ್ಳೆಯದರತ್ತ ಹೆಜ್ಜೆ ಹಾಕಲು ಕಾನೂನಿನ ಅರಿವು ಬೇಕು.ಇದರೊಂದಿಗೆ ಸಾಂಸ್ಕೃತಿಕ ಮನಸ್ಸುಳ್ಳವರಾಗಿರಬೇಕು ಎಂದರು.

‌‌‌‌‌‌ಶ್ರೀ ವೀರಭದ್ರಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪಿ ಎಸ್ ಐ ಶ್ರೀ ಶ್ರೀಶೈಲ ಪಟ್ಟಣಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಶ್ರೀ ಶಂಕರ ಅರ್ಕಸಾಲಿ,ಶ್ರೀ ಮಹಾರುದ್ರಪ್ಪ ಇಟಗಿ,ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀ ಶೇಕಣ್ಣ ಮಹರಾಜಪೇಟ,ಶ್ರೀ ಕುಮಾರ ಶ್ಯಾಬಳ್ಳಿ,ಶ್ರೀ ರಾಜು ಮಂತ್ರೋಡಿ, ಶ್ರೀ ಹನುಮಂತಪ್ಪ ಭಜಂತ್ರಿ,ಶ್ರೀ ಬಸಪ್ಪ ಕರ್ಜಗಿ,ಕಲಾವಿದ ಹೆಚ್ ಪಿ ವೆಂಕಟೇಶ,ಶ್ರೀ ಬಸವಣ್ಣಯ್ಯ ಶಾಸ್ತ್ರಿಗಳು ವೆಂಕಟಾಪೂರಮಠ,ಹಾವೇರಿ ಜಿಲ್ಲಾ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲಾಧ್ಯಕ್ಷರಾದ ಶ್ರೀ ಸಂತೋಷ ಬಿದರಗಡ್ಡೆ, ಶ್ರೀಮತಿ ದೀಪಾ ಗೋನಾಳ, ಹಾನಗಲ್ ತಾಲೂಕಿನ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ತಾಲ್ಲೂಕಾಧ್ಯಕ್ಷೆ ಮತ್ತು ಸರಸ್ವತಿ ಮಹಿಳಾ ಮಂಡಲದ ಅಧ್ಯಕ್ಷರೂ ಆದ ಶ್ರೀಮತಿ ಪಾರ್ವತಿಬಾಯಿ ಕಾಶೀಕರ, ಹಾಗೂ ತಾಲೂಕಿನ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಉಪಾಧ್ಯಕ್ಷರಾದ ಶ್ರೀ ಮಾರುತಿ ಕೊರಗರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!