ಸಿಂದಗಿ: ಸರಕಾರಗಳು ಶ್ರೀಮಂತರ ಆದಾಯ ಹೆಚ್ಚಿಸಿ ಬಡವರ ಕೂಲಿ ಕಸಿಯಲು ಮುಂದಾಗಿವೆ. ಇದರಿಂದ ಜನರ ಸಮಸ್ಯೆಗಳು ಹೆಚ್ಚುತ್ತಿವೆ, ಉದ್ಯೋಗ ನಾಶವಾಗುತ್ತಿದೆ, ಕೂಲಿ ಕಡಿಮೆ ಆಗುತ್ತಿದೆ ಬಡಜನರ ಸಂಕಷ್ಟ ಏರಿಕೆಯಾಗುತ್ತಿರುವಾಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರೀಮಂತರ ಆದಾಯ ಹೆಚ್ಚಿಸಲು ಬಡವರ ಕೂಲಿ ಕಸಿಯಲು ಮುಂದಾಗಿವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ವಾಗ್ದಾಳಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಸಿಐಟಿಯು 4ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಬೆಲೆ ಏರಿಕೆ ನಿಯಂತ್ರಣ ಕನಿಷ್ಠ ಕೂಲಿ ನೀಡದ ಸರಕಾರ ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವೈಫಲ್ಯ ಮುಚ್ಚಿಡಲು ಪ್ರಚಾರ ತಂತ್ರವನ್ನು ಬಳಸಿ ಜನರಿಗೆ ಮೋಸ ಮಾಡುತ್ತಿವೆ. ಧರ್ಮದ ಹೆಸರಿನಲ್ಲಿ ಜನರ ನಡುವೆ ಜಗಳ ತಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಸರಕಾರದ ನೀತಿಯನ್ನು ಖಂಡಿಸಿದರು.
ಅಧ್ಯಕ್ಷತೆಯನ್ನು ಸರಸ್ವತಿ ಮಠ ರವರು ವಹಿಸಿದ್ದರು. ಎಮ್. ಕೆ. ಚಳ್ಳಗಿ ಮತ್ತು ಪಿ. ಎಸ್. ಕೊಂಡಗೂಳಿ, ಬಿಸ್ಮಿಲ್ಲಾ ಇನಾಮದಾರ ಮತ್ತು ಎಲ್. ಎಮ್. ಕುಂಬಾರ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಾಲ್ಕನೆಯ ಸಿಐಟಿಯು ಸಮ್ಮೇಳನದಲ್ಲಿ ಅಂಗನವಾಡಿ, ಬಿಸಿ ಊಟ ಮತ್ತು ಗ್ರಾಮ ಪಂಚಾಯತಿ ನೌಕರರಾದ ಮುರುಗೇಂದ್ರ ಹುಣಶ್ಯಾಳ, ಬಿ.ಎಮ್. ಸುರುಪುರ, ಅಂಬಾಜಿ ಬಾವುರ, ಮಲಕಣ್ಣ ಸುಂಗಠಾಣ, ಶರಣಪ್ಪ ಹರಿಜನ, ಭೀಮಬಾಯಿ ಬಾಣಿ, ಈರಮ್ಮ ಬಾಣಿ, ಧರೆಪ್ಪ ಕಕ್ಕಳಮೇಲಿ, ಶಿವಪ್ಪ ಭಾಸಗಿ, ರೇಣುಕಾ ಸುಣಗಾರ, ಯಾಸೀನ ಕೊರಬು, ಎಸ್.ಎಸ್.ತಳವಾರ, ಸವಿತಾ ಕೊಕಟನೂರ, ಸೈನಾಜ್ ಮುಲ್ಲಾ, ಕೆ.ಬಿ.ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಾ ಕುರಡೆ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ವಂದಿಸಿದರು.