ಬೆಂಗಳೂರು : ಆದಷ್ಟು ಬೇಗ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರ ಹೆಸರನ್ನು ಬಹಿರಂಗ ಮಾಡ್ತೇವಿ ಅಂತಾ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಮೂರ್ನಾಲ್ಕು ದಿನಗಳಲ್ಲಿ ದೂರು ದಾಖಲಿಸುತ್ತೇವೆ. ನಾವು ಈಗಾಗಲೇ ವಕೀಲರ ಬಳಿ ಚರ್ಚೆ ನಡೆಸಿದ್ದೇವೆ. ಬೆಂಗಳೂರು , ಬೆಳಗಾವಿ ಹಾಗೂ ಗೋಕಾಕ ಮೂರು ಕಡೆಗಳಲ್ಲಿ ಎಲ್ಲಿ ದೂರು ನೀಡಬೇಕೆಂದು ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದಿದ್ದಾರೆ.
ವಕೀಲರು ಹೇಳಿದ ಕೂಡಲೇ ದೂರು ದಾಖಲು ಮಾಡುತ್ತೇವೆ. ಖಾಸಗಿ ಅವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೇವೆ. 2+3+4 ಎಂಬ ಸೂತ್ರ ಸರಿಯಿದೆ. ನಾವು ದೂರು ನೀಡುವಷ್ಟರಲ್ಲಿ ಕನಿಷ್ಟ ಇಬ್ಬರ ಹೆಸರನ್ನು ಬಹಿರಂಗ ಪಡಿಸುತ್ತೇವೆ. ಅವರ ಮುಖಾಂತರ ರಾಜ್ಯದ ಜನತೆಗೆ ಜಾರಕಿಹೊಳಿ ಕುಟುಂಬದ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.