ಬೀದರ – ತಾವು ಜನನಾಯಕರಾಗಿ ಸಮಾಜಕ್ಕೆ ಏನು ಸಂದೇಶ ಕೊಡಬೇಕು ಎಂಬುದರ ಬಗ್ಗೆ ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಬೀದರ್ ನ ಖಟಕ್ ಚಿಂಚೋಳಿಯಲ್ಲಿ ಶುದ್ಧ ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಸಹ್ಯ ಅಶ್ಲೀಲತೆ ಬಗ್ಗೆ ನಾನು ಟೀಕೆ ಟಿಪ್ಪಣಿ ಮಾಡಲು ಹೋಗುವುದಿಲ್ಲ. ಸಿಡಿ ಪ್ರಕರಣ ಬಗ್ಗೆ ತನಿಖೆ ಆಗಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದರೆ ಎಲ್ಲರೂ ಕ್ಲೀನ್ ಆಗಿ ಹೊರಬರಬೇಕು ಎಂದರು.
ಇಡೀ ಸರ್ಕಾರ ರಾಜೀನಾಮೆ ನೀಡಬೇಕು. ನಮಗೇನು ಅಧಿಕಾರದ ಆಸೆ ಇಲ್ಲ ಆದರೆ ಸಿಡಿ ವಿಚಾರ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು ಎಂದು ಖಂಡ್ರೆ ನುಡಿದರು.