ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಂಧಿತನಾಗಿರುವ ಆಕಾಶ ತಳವಾಡೆ ಎಂಬ ಯುವಕ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿದ್ದು ಪ್ರಕರಣದ ಪ್ರಮುಖ ಅಂಶವಾಗಿದೆ.
ಸಿಆರ್ಪಿಸಿ ೧೬೪ ರ ಕಲಂ ಅಡಿ ಆಕಾಶ್ ಹೇಳಿಕೆ ದಾಖಲು ಮಾಡಿದ್ದಾನೆ.
ಸಿಡಿಯನ್ನು ಹೇಗೆ ಮಾಡಲಾಯಿತು, ಆಮೇಲೆ ಅದನ್ನು ಹೇಗೆ ಬಿಡುಗಡೆ ಮಾಡಲಾಯಿತು, ಗೋವಾ ಹಾಗೂ ಹೈದರಾಬಾದ್ ಗೆ ಹೋಗಿ ಬಂದಿದ್ದು ….ಎಲ್ಲ ಅಂಶಗಳನ್ನು ಆಕಾಶ ನ್ಯಾಯಾಲಯದ ಎದುರು ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ.
ಮಾರ್ಚ್ ೧ ರಂದು ರಮೇಶ ಜಾರಕಿಹೊಳಿಯವರ ಸಿಡಿ ವೈರಲ್ ಆಗಿತ್ತು ಅದರ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಪ್ರಕರಣದ ತನಿಖೆಗಾಗಿ ಸರ್ಕಾರದಿಂದ ಎಸ್ಐಟಿ ನೇಮಕ ಮಾಡಲಾಗಿದ್ದು ಈವರೆಗೆ ಒಂಬತ್ತು ಜನರನ್ನು ತನಿಖಾ ತಂಡ ಬಂಧಿಸಿತ್ತು ಅವರಲ್ಲಿ ಆಕಾಶ ತಳವಾಡೆ ಒಬ್ಬನಾಗಿದ್ದು ಇಂದು ಆತನನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು.