ರಮೇಶ ಜಾರಕಿಹೊಳಿಯವರಿಗೆ ಸಂಬಂಧಿಸಿದ ನಕಲಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ ) ಮೊದಲ ದಿನವೇ ಭರ್ಜರಿ ಬೇಟೆಯಾಡಿ ಐವರನ್ನು ಬಂಧಿಸಿದೆ.
ರಾಮನಗರದ ಒಬ್ಬ ಯುವತಿ ಸೇರಿದಂತೆ ಸಿಡಿ ತಯಾರಕ, ಸ್ಕ್ರಿಪ್ಟ್ ತಯಾರಕ, ವಿಡಿಯೋ ಎಡಿಟರ್ ಹಾಗೂ ಅಪ್ ಲೋಡ್ ಮಾಡುವವ ಹೀಗೆ ಐದು ಜನರ ತಡವೊಂದನ್ನು ಸಿಟ್ ಬಂಧಿಸಿದ್ದು ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಪೂರ್ಣ ಪೂರ್ವ ನಿಯೋಜಿತ ಹಾಗೂ ಸಂಚು ರೂಪಿಸಿ ಮಾಡಲಾಗಿದೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದೆ.
ಇದರಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು ಅವರ ಶೋಧಕ್ಕಾಗಿ ತಂಡ ಬಲೆ ಬೀಸಿದೆ.
ಕೆಲವು ದಿನಗಳ ಹಿಂದೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ವಿಡಿಯೋ ಬಹಿರಂಗವಾಗಿದ್ದು ಅದು ಸಂಪೂರ್ಣ ನಕಲಿ ಹಾಗೂ ಜಾರಕಿಹೊಳಿ ಕುಟುಂಬಕ್ಕೆ ಕೆಟ್ಟ ಹೆಸರು ತರಯವ ಸಲುವಾಗಿ ತಯಾರಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದು ಈಗ ಕೆಲವರ ಬಂಧನವಾಗಿದ್ದರಿಂದ ಇದು ದೃಢವಾದಂತಾಗಿದೆ. ಈ ಸಂಚಿನಲ್ಲಿ ಯಾರ್ಯಾರು ಇದ್ದಾರೆ ಎಂಬುದು ಇನ್ನೂ ತನಿಖೆಯಿಂದ ಬಹಿರಂಗವಾಗಬೇಕಾಗಿದೆ.
ರಮೇಶ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹಾಗೂ ತೇಜೋವಧೆ ಮಾಡಲು ಫೇಕ್ ವಿಡಿಯೋ ತಯಾರಿಸಲಾಗಿದ್ದು ನಮ್ಮ ಖಾಸಗಿ ತನಿಖಾ ತಂಡವೂ ಇದರಲ್ಲಿ ಭಾಗವಹಿಸಲಿದೆ ಎಂಬುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಇಂಥ ಪ್ರಕರಣಗಳ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಯಾವುದೇ ಪಕ್ಷದವರಿದ್ದರೂ ಅಂಥವರಿಗೆ ತೊಂದರೆ ತಪ್ಪಿದ್ದಲ್ಲ. ಪಕ್ಷಾತೀತವಾಗಿ ನಾವು ಇಂಥ ಪ್ರಕರಣಗಳನ್ನು ತಡೆಯಬೇಕು ಎಂದು ಅವರು ಹೇಳಿದ್ದಾರೆ.