ಬೆಳಗಾವಿ – ಜಾರಕಿಹೊಳಿ ಸಿಡಿ ಲೇಡಿಯ ಪೋಷಕರು ತಮ್ಮ ಮಗಳನ್ನು ಹುಡುಕಿ ಕೊಡಿ ಎಂದು ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದಾಗಲೇ ಆಕೆ ಇಲ್ಲೇ ಬೆಳಗಾವಿಯವಳು ಎಂಬ ವಿಷಯ ಗೊತ್ತಾಗಿ ಎಲ್ಲರ ಹುಬ್ಬೇರುವಂತಾಗಿದೆ.
ಇದೀಗ ಯುವತಿಯ ತಂದೆ ಪ್ರಕಾಶ ಕಂಚೇರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದಾರಲ್ಲದೆ ಅವಳಿಗೆ ಕಿರುಕುಳ ನೀಡಿ ಲೈಂಗಿಕವಾಗಿ ಬಳಸಿಕೊಂಡು ಸಿಡಿ ಮಾಡಿದ್ದಾರೆ. ಮಾಧ್ಯಮಗಳ ಲ್ಲಿ ವಿಡಿಯೊ ನೋಡಿ ನಮಗೆ ಗಾಬರಿ ಆಯಿತು ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಅವಳು ತಮಗೆ ಫೋನ್ ಮಾಡಿದ್ದಳು ಮನೆಗೆ ಬರುತ್ತೇನೆ ಅಂತ ಹೇಳಿದ ಮರುದಿನ ಅವಳ ಫೋನ್ ಸ್ವಿಚ್ ಆಫ್ ಆಗಿದೆ. ಅವಳನ್ನು ಎಲ್ಲಿಯೋ ಕೂಡಿಹಾಕಲಾಗಿದೆ. ಅವಳ ಜೀವಕ್ಕೆ ಅಪಾಯವಿದೆ ಆದಷ್ಟು ಬೇಗ ಆಕೆಯನ್ನು ಸುರಕ್ಷಿತವಾಗಿ ಹುಡುಕಿಕೊಡಬೇಕು ಎಂದು ಯುವತಿಯ ತಾಯಿ ಕೂಡ ವಿಡಿಯೋ ಒಂದರಲ್ಲಿ ಅಲವತ್ತುಕೊಂಡಿದ್ದಾರೆ.