ಬೆಳಗಾವಿ: ಯರಗಟ್ಟಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮದ್ಲೂರಿನ ಕಲಾವಿದ ಶಿವಪುತ್ರ ಬಡಿಗೇರ ರಚಿಸಿದ್ದ ಸ್ತಬ್ಧಚಿತ್ರ ಗಮನ ಸೆಳಯಿತು.
ವೃತ್ತಿಯಲ್ಲಿ ನೈಪುಣ್ಯತೆ ಹೊಂದಿರುವ ಇವರು, ಬಿಡುವಿನ ವೇಳೆ ಅನೇಕ ಕಲಾಕೃತಿಗಳನ್ನು ರಚನೆ ಮಾಡುತ್ತ ಬಂದಿದ್ದಾರೆ. ತಂಬೂರಿ, ಅಳಿದುಳಿದ ಅವಶೇಷಗಳಿಂದ ಮಾಡಿದ ವಾಹನಗಳು ಕಣ್ಮನ ಸೆಳೆಯುತ್ತವೆ.ಪ್ರಸ್ತುತ ಇವರು ತಮ್ಮ ಊರಿನ ಇತಿಹಾಸ ಹೊಂದಿರುವ ರಟ್ಟರ ಶ್ರೀರಂಗಪೂರ ಕೋಟೆಯ ಐತಿಹಾಸಿಕ ಮಾದರಿಯನ್ನು ಮಾಡಿದ್ದಾರೆ.