- Advertisement -
ಪೊಲಿಟಿಕಲ್ ಪದ್ಯಗಳು
1.ಬಂದಿದೆ ಬೈ ಎಲೆಕ್ಷನ್
ಹಾಯ್ ಹೇಗಿದ್ದಿರಾ ಕ್ಷೇಮವೇ?
ಹೇಳುವುದು ಕೇಳುವುದು ಈಗಲೇ
ಗೆದ್ದ ಮೇಲೆ
ಟಾಟಾ ನಾ ಬರಲೇ
ಹೋಗಬೇಕಿದೆ ನಾವು ಆಗಲೇ
2..ಮತದಾರ
ರಾಜಕಾರಣಿ ನಡುವೆ
ಎಷ್ಟೊಂದು ಅಂತರ
ಚುನಾವಣೆ ನಂತರ
- Advertisement -
3..ಚುನಾವಣೆ ವೇಳೆ
ರಾಜಕಾರಣಿಗಳು ಕೊಡುತ್ತಾರೆ
ಆಶ್ವಾಸನೆ
ಆಮೇಲೆ ಮರೆತು ಬಿಡುತ್ತಾರೆ
ಆದರ ವಾಸನೆ
4..ಒಂದೊಂದು ಮತಕ್ಕೂ
ಇರುತ್ತದೆ ಮಹತ್ವ
ಏಕೆಂದರೆ ಇಲ್ಲಿರುವುದು
ಪ್ರಜಾಪ್ರಭುತ್ವ
—
ಗೊರೂರು ಆನಂತರಾಜು
ಹಾಸನ
9449462879