“ಹಬ್ಬಗಳಸಿರಿ” ಸಂಸ್ಕೃತಿಯ ಪಡಿಯಚ್ಚು

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

‘ಹಬ್ಬಗಳಸಿರಿ’ ವೈ.ಬಿ.ಕಡಕೋಳ ಅವರ ವಿಶಿಷ್ಟ ಕಲಾಕುಸುಮ. ಕಡಕೋಳ ಅವರು ಪರಿಶ್ರಮ ಪ್ರವೃತ್ತಿಯ ಶಿಕ್ಷಕ ಸಾಹಿತಿ. ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯ ಜೊತೆಗೆ ಹವ್ಯಾಸಿ ಬರಹಗಾರನಾಗಿ ರೂಪಗೊಂಡುದು ಆಶ್ಚರ್ಯದ ಸಂಗತಿ. ಇದ್ದ ಶಿಕ್ಷಕ ವೃತ್ತಿಯನ್ನೇ ಸರಿಯಾಗಿ ನಿಬಾಯಿಸದ ಶಿಕ್ಷಕರೆ ತುಂಬಿರುವ ಈ ದಿನಮಾನದಲ್ಲಿ ಕಡಕೋಳ ಅವರ ವ್ಯಕ್ತಿತ್ವ ಕಂಡು ಸಂತಸ ಉಂಟಾಗುತ್ತದೆ.

ಇವರ ಬೆಲೆವುಳ್ಳ ಕಾರ್ಯ ಮಾದರಿಯಾಗಿದೆ ಪ್ರಸ್ತುತ ಸಮಾಜಕ್ಕೆ. ಮಾಸದ ಪರಿಕಲ್ಪನೆ ಗಮನಿಸಿದಾಗ ಹಿಂದೆ ಕನ್ನಡ ಶಾಲೆಯಲ್ಲಿ ಕಂಠಪಾಠ ಮಾಡಿಸುತ್ತಿದ್ದ ‘ಚೈತ್ರ ವೈಶಾಖ ದಂತಹ ನೆನಪು ಮತ್ತೆ ನೆನಪಿಗೆ ತರುವಂಥ ಪ್ರಯತ್ನ ಲೇಖಕರು ಮಾಡಿದ್ದಾರೆ. ಇಲ್ಲಿ ಚೈತ್ರ ಮಾಸದಿಂದ ಹಿಡಿದು ಪಾಲ್ಗುಣ ಮಾಸದ ವರಗೆ ಅಂದರೆ ಆಯಾ ಮಾಸಗಳಲ್ಲಿ ಬರುವ ಹುಣ್ಣಿಮೆ, ಅಮವಾಸ್ಯೆ, ಜಯಂತಿ, ಉತ್ಸವಗಳ ಸುಂದರ ಹೂದೋಟ ಅರಳಿ ನಿಂತಿದೆ ಚಂದದಿಂದ.

ನೋಡಗರ ಮನಸ್ಸು ಆನಂದದ ಹೊಳೆಯಲ್ಲಿ ತೇಲಿಸುವದು ಸಹಜತೆಯಲ್ಲಿ. ದೇಶಿಯ ಸೊಗಡಿನ ಹಬ್ಬಗಳನ್ನು ಮನದುಂಬಿ ಬಣ್ಣಿಸಿ ಅವುಗಳ ವೈಶಿಷ್ಟ್ಯವನ್ನು ಸುಂದರವಾಗಿ ಕಟ್ಟಿಕೊಡುವಲ್ಲಿ ಕಡಕೋಳರು ಯಶಸ್ವಿಯಾಗಿದ್ದಾರೆ ಎಂದು ಹೇಳಲು ಅಭಿಮಾನವೆನಿಸುತ್ತದೆ. ಗಡಿನಾಡ ಭಾಗದ ಗಟ್ಟಿ ಕಾಳನ್ನು ಗಟ್ಟಿತನದಲ್ಲಿ ಕಟ್ಟಿಕೊಡುತ್ತ ಕನ್ನಡಮ್ಮನ ಸೇವೆ ಸದಾ ಮಾಡುತ್ತಿರುವದು ಅಂದವೆನಿಸಿದೆ.

- Advertisement -

ಈ ಕೃತಿಯಲ್ಲಿ 71 ಲೇಖನಗಳ ದೇಶಿಯತೆ ದ್ರಾಕ್ಷಿಯ ಗೊಂಚಲಿನಂತೆ ಹರಡಿಕೊಂಡಿವೆ. ಹನ್ನೆರಡು ಮಾಸಗಳ ಹದವರಿತ ಕೃಷಿಯಿಂದ ಹೊರಬಂದ ಸುಂದರ ರಾಶಿ ಇಲ್ಲಿ ಅಳವಟ್ಟಿವೆ. ಇದು 2021 ರಲ್ಲಿ ಬೆಂಗಳೂರಿನ ಎಸ್.ಎಲ್.ಎನ್.ಪಬ್ಲಿಕೇಷನ್‍ದಿಂದ ಪ್ರಕಟಗೊಂಡಿದೆ. ‘ಚೈತ್ರಮಾಸ’ ವೆಂಬ ಮೊದಲ ಅಧ್ಯಾಯದಲ್ಲಿ ಯುಗಾದಿ ಹಬ್ಬದ ವೈಶಿಷ್ಟ್ಯ ಸಡಗರದ ಸೊಗಸಿನಲ್ಲಿ ಸೆರೆಹಿಡಿದಿರುವರು.

ಶ್ರೀರಾಮನವಮಿ ಹಿರಿಮೆ ಮೊದಲಾದ ಅಂಶಗಳನ್ನು ಸುಂದರವಾಗಿ ವಿವೇಚಿಸಿದ್ದಾರೆ. ಇಲ್ಲಿ ಏಕಾದಶಿ ಜಯಂತಿಗಳ ವಿವರಣೆ ಸಂಕ್ಷಿಪ್ತವಾಗಿ ಹರಡಿಕೊಂಡಿದೆ. ‘ವೈಶಾಖ’ ಮಾಸದಲ್ಲಿ ಅಕ್ಷಯ ತೃತೀಯಾದಿಂದ ಹಿಡಿದು ರಾಮಾನುಜ ಜಯಂತಿಗಳ ಪರಿಚಯ ಕಾಣಸಿಗುತ್ತದೆ. ಇದೆ ಮಾಸದಲ್ಲಿ ಜಾಗತಿಕ ಚಿಂತಕರಾದ ಬುದ್ದ, ಬಸವ, ವ್ಯಾಸ, ಶಂಕರಾಚಾರ್ಯರ ಬದುಕಿನ ಎಳೆಗಳನ್ನು ಅವರ ಸಾಧನೆ ಸಿದ್ದಿಗಳನ್ನು ಅಂದವಾಗಿ ಗುರುತಿಸಿದ್ದಾರೆ. ‘ಜೇಷ್ಠಮಾಸ’ದಲ್ಲಿ ವಿಶ್ವಪುಸ್ತಕ ದಿನದಿಂದ ವಿಶ್ವದೂರ ಸಂಪರ್ಕದಿನಗಳ ಮಹತ್ವನ್ನು ಎತ್ತಿಹೇಳಲಾಗಿದೆ.

ಇದೆ ಭಾಗದ ಮಹತ್ವದ ಲೇಖನ ‘ಹೇಮರಡ್ಡಿ ಮಲ್ಲಮ್ಮ ಜಯಂತಿ’ ಬರಹದಲ್ಲಿ ಅವಳ ಬದುಕಿನ ಎಳೆಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ. ‘ಆಷಾಡಮಾಸ’ದಲ್ಲಿ ‘ಪ್ರಕೃತಿ ಧರ್ಮದ ವಿಚಾರ ವಿದ್ದರೆ. ‘ವೇದವ್ಯಾಸ ಜಯಂತಿ’ ಕುರುಹುಗಳಿವೆ. ಗುಳ್ಳವ್ವನಹಬ್ಬ, ಮಣ್ಣೆತ್ತಿನ ಅಮವಾಸ್ಯೆ ಜಾನಪದ ಹಿನ್ನೆಲೆಯಲ್ಲಿ ಚಿತ್ರಿತವಾಗಿವೆ. ‘ಶ್ರಾವಣಮಾಸ’ದಲ್ಲಿ ಮಂಗಳಗೌರಿ ವ್ರತದಿಂದ ಸಿರಿಯಾಳ ಷಷ್ಠಿ ವರಗೆ ಹದಿನಾಲ್ಕು ಲೇಖನಗಳು ಅರಳಿವೆ.

ಈ ಮಾಸದಲ್ಲಿ ಎದ್ದುಕಾಣುವ ಹಬ್ಬ ‘ನಾಗರಪಂಚಮಿ’ ಈ ಕುರಿತು ಜನಪದ ಸೊಗಡಿನಲ್ಲಿ ಚಂದದಿಂದ ಚಿತ್ರಿಸಿರುವದು ಅರ್ಥಪೂರ್ಣವೆನಿಸಿದೆ. ‘ಭಾದ್ರಪದಮಾಸ’ದಲ್ಲಿ ಏಳು ಲೇಖನಗಳಿವೆ. ಸ್ವರ್ಣಗೌರಿ ವ್ರತದಿಂದ ಹಿಡಿದು ಶಿಕ್ಷಕರ ದಿನಾಚರಣೆ ವರಗೆ ಹಬ್ಬಿವೆ. ಈ ಮಾಸದಲ್ಲಿ ಎದ್ದುಕಾಣುವ ಹಬ್ಬವೆಂದರೆ ಗಣಪತಿ ಹಬ್ಬ, ಜೋಕುಮಾರನ ಹುಣ್ಣಿಮೆ ಹಾಗೂ ಶಿಕ್ಷಕರ ದಿನಾಚರಣೆ ಲೇಖನಗಳು ಬಹಳಷ್ಟು ಮಹತ್ವದಾಗಿ ತೋರುತ್ತವೆ.

‘ಅಶ್ವಯುಜ’ ಮಾಸದಲ್ಲಿ ಐದುಲೇಖನ ಎಡೆಪಡೆದಿವೆ. ಲಾಲ್ ಬಹದ್ದುರ ಶಾಸ್ತ್ರೀ ಜಯಂತಿಯಿಂದ ದೀಪಾವಳಿಯವರೆಗೆ ಹರಡಿಕೊಂಡಿವೆ. ಸೀಗೆ ಹುಣ್ಣಿಮೆ ಮಹತ್ವ, ಭೂದೇವಿಗೆ ಸಲ್ಲಿಸುವ ಆಚರಣೆ ಸಾಂಪ್ರದಾಯಕ ನೆಲೆಯಲ್ಲಿ ಮಿಂಚಿದರೆ. ‘ದೀಪಾವಳಿ’ ಹಬ್ಬದ ಆಚರಣೆ ವಿಧಾನ, ವೈಶಿಷ್ಟ್ಯವನ್ನು ಮನದುಂಬಿ ಹೇಳಿದ್ದಾರೆ ಅಂದದಿಂದ. ‘ಕಾರ್ತಿಕ’ ಮಾಸದಲ್ಲಿ ನಾಲ್ಕು ಲೇಖನ ಅರಳಿವೆ. ಇಲ್ಲಿ ಕನಕ ಜಯಂತಿ, ಮಕ್ಕಳ ದಿನಾಚರಣೆ ಲೇಖನಗಳು ಮಹತ್ವದಾಗಿ ತೋರುತ್ತವೆ. ‘ಮಾರ್ಗಶಿರ’ ಮಾಸದಲ್ಲಿ ಆರು ಬರಹಗಳಿವೆ.

ಇವುಗಳು ಸನಾತನ ಭಾರತೀಯ ಸಂಸ್ಕೃತಿಯ ಮಹತ್ವದ ಆಚರಣೆಗಳಾಗಿ ಕಾಣುತ್ತವೆ. ‘ಪುಷ್ಯ ಮಾಸದಲ್ಲಿ ಐದು ಲೇಖನ ಅರಳಿವೆ. ವಿವೇಕಾನಂದ ಜಯಂತಿ ಬಹರ ವಾಸ್ತವದ ಯುವಜನಾಂಗ ದೃಷ್ಟಿಯಲ್ಲಿ ಇಟ್ಟುಕೊಂಡು ವಿವೇಕಾನಂದರ ತತ್ವಗಳಿಗೆ ತುಲನೆ ಮಾಡಿರುವರು. ‘ಬಾದಾಮಿ ಬನಶಂಕರಿ ಜಾತ್ರೆ’ ಜಾತ್ರೆಯ ವೈಶಿಷ್ಟ್ಯವನ್ನು ಕಾಲ್ಪನಿಕ ನೆಲೆಯಲ್ಲಿ ತೇಲಿಸಿದಂತಿದೆ. ಇದಕ್ಕೆ ಜಾನಪದ ಸೊಗಡು ಲೇಪಿಸಿದ್ದರೆ ಚಂದವೆನಿಸುತಿತ್ತು. ಸಂಕ್ರಾಂತಿ ತೆಪ್ಪೋತ್ಸವ ಜನಪದ ಸೊಗಡಿನಲ್ಲಿ ಹೊರಸೂಸಿದೆ. ‘ಮಾಘ’ ಮಾಸದಲ್ಲಿ ಮೂರು ಲೇಖನ ಅರಳಿವೆ. ಇಲ್ಲಿ ‘ಮಹಾಶಿವರಾತ್ರಿ’ ಬರಹ ಲಿಂಗಾಂಗ ಸಾಮರಸ್ಯದ ನೆಲೆಯನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ತೇಲಿಸಿದ್ದಾರೆ.

ಭಕ್ತಿಯ ಬಣ್ಣ ಹಚ್ಚಿದ್ದಾರೆ. ವೈಚಾರಿಕ ಅಂಶಗಳನ್ನು ಸೇರಿಸಿದ್ದರೆ ಈ ಬರಹದ ಕಳೆ ಕಳಸಪ್ರಾಯವಾಗುತಿತ್ತು ಎನಿಸುತ್ತದೆ. ಈ ಕೃತಿಯ ಕೊನೆಯ ಅಧ್ಯಾಯ ‘ಫಾಲ್ಗುಣ’ ಮಾಸ. ಇಲ್ಲಿ ಎರಡು ಲೇಖನ ಹರಡಿಕೊಂಡಿವೆ. ‘ಹೋಳಿಹುಣ್ಣಿಮೆ’ ಬರಹದಲ್ಲಿ. ಕಾಮದಹನದ ಐತಿಹ್ಯಕಥೆಗಳನ್ನು ಲೇಖನಕ್ಕೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ ಎಂದೆ ಹೇಳಬೇಕು. ಈ ಕೃತಿಯ ಕೊನೆಯ ಲೇಖನ ‘ಶ್ರೀರಾಮಕೃಷ್ಣ ಜಯಂತಿ’ ಬರಹವು ಅಂದದಿಂದ ಇಲ್ಲಿ ಕಂಗೊಳಿಸಿದೆ.

ಭಾರತೀಯ ಸಂಸ್ಕೃತಿ, ಸಂಪ್ರದಾಯ, ತಿಥಿ, ನಕ್ಷತ್ರ, ಪಂಚಾಗದ ಬಗ್ಗೆ ಲೇಖಕರಿಗೆ ಬಹಳಷ್ಟು ಆಸಕ್ತಿ ಇದೆ ಎನ್ನುವದು ಇವರ ಬರಹಗಳನ್ನು ಗಮನಿಸಿದಾಗ ತಿಳಿದು ಬರುವ ಅಂಶ ವರ್ತಮಾನದಲ್ಲಿ ಮನುಷ್ಯ ತನ್ನ ಮೂಲವನ್ನು ಮರೆತು ಆಧುನಿಕ ಸೋಕಿಜೀವನದ ಪಾಲಾಗಿ ‘ಸಂಸ್ಕøತಿ’ ನಾಶದಲ್ಲಿ ಇದ್ದಾನೆ. ಇಂತಹದರಲ್ಲಿ ನಮ್ಮ ಸಾಂಪ್ರದಾಯಿಕ ಶ್ರೀಮಂತ ಸಂಸ್ಕøತಿಯ ಸೊಗಡನ್ನು ಮತ್ತೆ ನೆನಪಿಸಿ ಅದು ಜೀವಂತವಾಗಿ ಗಟ್ಟಿಯಾಗಿದೆ ಎಂದು ತಮ್ಮ ಬರಹದ ಮೂಲಕ ಸಾರಿಹೇಳುವ ಪ್ರಾಮಾಣಿಕ ಪ್ರಯತ್ನ ಕಡಕೋಳ ಅವರದು. ಜತನದಿಂದ ಜಾನಪದ ಸಂಸ್ಕೃತಿಯನ್ನು ಇನ್ನೂ ಉಳಿಸಿ ಬೆಳೆಸುವ ಪುಣ್ಯದ ಪವಿತ್ರ ಕಾರ್ಯದಲ್ಲಿ ನಿರತರಾದ ಕಡಕೋಳ ಅವರಿಗೆ ಸಾವಿರದ ಶರಣು.

ಹೀಗೆ ಹಬ್ಬ, ಆಚರಣೆ, ದಿನಾಚರಣೆ, ಜಯಂತಿಗಳಂತಹ ವಸ್ತು ವಿಷಯವನ್ನು ಆಯ್ದುಕೊಂಡು ಪತ್ರಿಕೆಗಳಿಗೆ ನಿರಂತರ ಬರೆಯುತ್ತ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂದು ಸಾರುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರಿಗೆ ಹೃದಯಾಳದಿಂದ ಅಭಿನಂದನೆಗಳು ನ್ಯಾಯವಾಗಿ ಸಲ್ಲುತ್ತವೆ. ಇವರ ಸಾಹಿತ್ಯ ಕೃಷಿಯಿಂದ ನೂರಾರು ಕಲಾಕೃತಿಗಳು ಹೊರಬಂದು ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಲಿ ಎಂದು ತುಂಬು ಹೃದಯದಿಂದ ಹಾರೈಸುವೆ.


ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ಯುವ ಸಾಹಿತಿ
ಬಾದಾಮಿ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!