ಮೂಡಲಗಿ – ಸಿರಿಗನ್ನಡ ಮಹಿಳಾ ವೇದಿಕೆ ಮತ್ತು ಲೇಖಕಿಯರ ಸಂಘ ಮೂಡಲಗಿ ಹಾಗೂ ಎಸ್.ಆರ್ ಸಂತಿ ಸರ್ಕಾರಿ ಪದವಿಪೂರ್ವ ಕಾಲೇಜು ಹಳ್ಳೂರ.
ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಸಿರಿಗನ್ನಡ ಮಹಿಳಾ ವೇದಿಕೆ ಮತ್ತು ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಕಮಲಾಪೂರ ಅವರು, ಮಹಿಳೆ ನಾಲ್ಕು ಗೋಡೆಯ ಮಧ್ಯೆ ಇರದೇ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬದುಕುತ್ತಿರುವ ಮಹಿಳೆಗೆ ಸಾಹಿತ್ಯದ ವೇದಿಕೆಯು ಸ್ಪೂರ್ತಿಯ ಸೆಲೆಯಾಗಿದೆ. ಬಾಲ್ಯದಲ್ಲಿ ಇರುವಾಗಲೇ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಮೂಡಿಸುವ ಸಲುವಾಗಿ ಮಕ್ಕಳಿಗಾಗಿ ಕವಿಗೋಷ್ಠಿ ಹಾಗೂ ಕಥಾ ಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಲೇಖಕಿಯರ ಸಂಘದ ಕಾರ್ಯದರ್ಶಿ ಶ್ರೀಮತಿ ಶಶಿರೇಖಾ ಬೆಳ್ಳಕ್ಕಿ ಪೂರ್ಣಿಮಾ ಎಲಿಗಾರ ಹಾಜರಿದ್ದರು. ಉಪನ್ಯಾಸಕರಾದ ಮಂಜುನಾಥ ಕುಂಬಾರ ಹಾಗೂ ಪೂರ್ಣಿಮಾ ಎಲಿಗಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜು ಹಾಗೂ ಶಾಲಾ ಮಕ್ಕಳು ತಾವೇ ರಚಿಸಿದ ಕಥೆ ಹಾಗೂ ಕವಿತೆಯನ್ನು ವಾಚಿಸಿ ರಂಜಿಸಿದರು.
ಉಪನ್ಯಾಸಕರಾದ ವಾಯ್.ಬಿ ಕಳ್ಳಿಗುದ್ದಿ. ಕುದರಿಮನಿ, ತೇಲಸಂಗ ಅನಿತಾ ವಂಟಗೋಡಿ ದೀಪಾ ಹೊಸಟ್ಟಿ , ಅಶ್ವಿನಿ ಬಿರಾದಾರ ಹಾಜರಿದ್ದರು.ಪೂಜಾ ಕಂಕಣವಾಡಿ ವಂದಿಸಿದರು.