ಹೈದರಾಬಾದ್ ಈಗ ಅರ್ಧ ” ಭಾಗ್ಯನಗರ “

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ನಿಜಾಮರ ನಾಡಲ್ಲಿ ಕೇಸರಿ ಪಾರ್ಟಿ ಬಿಜೆಪಿ ಕಮಲವನ್ನು ಅರಳಿಸಿದೆ.

ಹಿಂದಿನ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಹಿಂದಿದ್ದ ಬಿಜೆಪಿ ಇಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಪ್ಪಟ ೪೯ ಸ್ಥಾನಗಳನ್ನು ಗೆದ್ದುಕೊಂಡು ಕೆಸಿಆರ್ ಹಾಗೂ ಓವೈಸಿಗಳು ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ನೀಡಿದೆ.

ದಕ್ಷಿಣ ಭಾರತದಲ್ಲಿ ಬಲವಾಗಿ ಬೇರೂರಬೇಕೆಂದು ಬಹು ವರ್ಷಗಳ ಹಂಬಲ ಹೊಂದಿದ್ದ ಭಾರತೀಯ ಜನತಾ ಪಕ್ಷವೀಗ ಅದನ್ನು ಸಾಧಿಸಿದೆ ಇತ್ತ ೧೩೫ ವರ್ಷಗಳ ಹಳೆಯ ಪಕ್ಷ ಕಾಂಗ್ರೆಸ್ ಹೇಳ ಹೆಸರಿಲ್ಲದ ತರಗೆಲೆಯಂತೆ ಹಾರಿ ಹೋಗಿದೆ.
ಟಿಅರ್ ಎಸ್ ಪಕ್ಷ ಆಡಳಿತ ಪಕ್ಷವಾಗಿದ್ದರೂ ಮೊದಲಿನ ಗೆಲುವನ್ನು ಸಾಧಿಸಲಾಗಿಲ್ಲ. ಹಾಗೆಯೇ ಓವೈಸಿ ಕೂಡ ಕೆಲವು ಸ್ಥಾನಗಳಿಂದ ಹಿಂದೆ ಸರಿದಿದ್ದಾರೆ.

- Advertisement -

ಹಾಗೆ ನೋಡಿದರೆ ಹೈದರಾಬಾದ್ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಪ್ರತಿಷ್ಠಿತವಾಗಿತ್ತು.

ನಗರಪಾಲಿಕೆ ಚುನಾವಣೆಯಾಗಿದ್ದರೂ ಇಲ್ಲಿ ಪ್ರಚಾರಕ್ಕೆ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ ಅಷ್ಟೇ ಅಲ್ಲದೆ ಕರ್ನಾಟಕದ ತೇಜಸ್ವಿ ಸೂರ್ಯ ಕೂಡ ಪ್ರಚಾರಕ್ಕೆ ಹೋಗಿದ್ದು ಬಿಜೆಪಿ ಭಾರೀ ಪ್ರಮಾಣದ ಗೆಲುವು ಸಾಧಿಸಲು ಕಾರಣವಾಗಿದೆ.
ಹೈದರಾಬಾದ್ ನಗರ ಪಾಲಿಕೆಯ. ಚುನಾವಣೆಯೇ ಆಗಿದ್ದರೂ ಮುಖಂಡರು ಪ್ರಣಾಳಿಕೆಯಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.

ಅವೆಂದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಬದಲಿಸಿ ಭಾಗ್ಯನಗರ ಎಂದು ಬದಲಾವಣೆ, ಹೈದರಾಬಾದ್ ನಲ್ಲಿ ನಿಜಾಮರ ವರ್ಚಸ್ಸನ್ನು ಕಡಿಮೆ ಮಾಡುವುದು, ನಗರವನ್ನು ಐಟಿ ಹಬ್ ಅನ್ನಾಗಿ ಮಾಡುವುದು, ಬೂತ್ ಮಟ್ಟದಲ್ಲಿಯೂ ಕಾರ್ಯಕರ್ತರ ನೆರವಿನೊಂದಿಗೆ ಪಕ್ಷವನ್ನು ಬಲಪಡಿಸುವುದು, ಬಿಜೆಪಿಯ ಹಿಂದುತ್ವದ ಅಜೆಂಡಾ,  ಕೇಂದ್ರ ಅನುದಾನದಲ್ಲಿ ಹೈದರಾಬಾದ್ ಅಭಿವೃದ್ಧಿ, ಮುಸ್ಲಿಮ್ ಮಂಡಳಿಯಲ್ಲಿ ಬದಲಾವಣೆ ಇವೇ ಮುಂತಾದ ಭರವಸೆಗಳನ್ನು ಬಿಜೆಪಿ ಚುನಾವಣೆಯಲ್ಲಿ ನೀಡಿದ್ದು ಗಾಳಿ ಈಗ ಅನುಕೂಲಕರವಾಗಿ ಬೀಸಿದೆ.

ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಪಕ್ಷ ನಡೆದುಕೊಳ್ಳುವುದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

ಯಶಸ್ಸಿನ ಹಿಂದೆ ಕನ್ನಡಿಗರ ಜಾದೂ

ಹೈದರಾಬಾದ್ ನಲ್ಲಿ ಬಿಜೆಪಿಯ ಯಶಸ್ಸಿಗೆ ಕಾರಣರಾದ ಕನ್ನಡಿಗರೆಂದರೆ ಆರೋಗ್ಯ ಸಚಿವ ಡಾ.ಸುಧಾಕರ, ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ದಕ್ಷುಣ ರಾಜ್ಯಗಳ ಉಸ್ತುವಾರಿ ಹೊತ್ತಿರುವ ಸಿ ಟಿ ರವಿ.

ಇವರೆಲ್ಲ ಹೈದರಾಬಾದನಲ್ಲಿ ಕಾರ್ಯಕರ್ತರಂತೆ ದುಡಿದು ಯಶಸ್ಸಿಗೆ ಕಾರಣರಾದರು.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!