ಹೊಗಳುಬಟ್ಟರ ನಡುವೆ ರಾಜಕೀಯ ನಡೆಸಿದರೆ,ನಮ್ಮ ತಪ್ಪು ಕಾಣೋದೆ ಇಲ್ಲ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ತೆಗಳುವವರ ಸತ್ಯ

ತಿಳಿದರೆ ನಮ್ಮ ತಪ್ಪು ತಿದ್ದಿ ನಡೆಯಬಹುದು. ವಿರೋಧಿಗಳಿಗಿಂತ ಹಿತಶತ್ರುಗಳೇ ಅಪಾಯಕರ.ರಾಜಕೀಯ ನಡೆಸೋದೆ ಮಾನವಧರ್ಮಕ್ಕೆ ವಿರುದ್ದ ಅದರಲ್ಲೂ ಪ್ರಜಾಪ್ರಭುತ್ವದ ಇಂತಹ ಅಜ್ಞಾನದ ಮಧ್ಯೆ ನಿಂತು ದೇಶವನ್ನಾಗಲಿ,ದೇಹವನ್ನಾಗಲಿ ಸತ್ಯ ಧರ್ಮದಿಂದ ಕಾಪಾಡುತ್ತೇನೆಂದರೆ ಕಷ್ಟ ಕಷ್ಟ.

ಮಾನವನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಇದರ ಪರಿಣಾಮವನ್ನೂ ಅವನೇ ಎದುರಿಸಬೇಕೆಂಬ ಜ್ಞಾನವಿದ್ದರೆ, ಸತ್ಯಜ್ಞಾನದಲ್ಲಿ ನಿಧಾನವಾಗಿ ನಡೆದು ಸಾಧನೆ ಮಾಡಬಹುದು. ಇದು ಅಧ್ಯಾತ್ಮ ವಿಚಾರದಲ್ಲಿ ಅತ್ಯವಶ್ಯಕ. ಯಾವಾಗ ಧರ್ಮವೇ ಕೆಳಗಿಳಿದು ರಾಜಕೀಯ ನಡೆಸುವುದೋ ಆಗಲೇ ಸಂಕಷ್ಟ ಹೆಚ್ಚಾಗೋದು. ರಾಜಕೀಯದಲ್ಲಿ ಧರ್ಮ ಅಧರ್ಮ ಎರಡೂ ಒಂದೆ ನಾಣ್ಯದ ಎರಡು ಮುಖ.

ಆಡಳಿತ ಪಕ್ಷಕ್ಕೆ ವಿರುದ್ದವಾಗಿ ನಿಲ್ಲೋ ವಿರೋಧ ಪಕ್ಷ ದೇಶದ ಪರವಾಗಿ ನಿಂತರೆ ಉತ್ತಮ. ವಿದೇಶದ ಪರನಿಂತರೆ ಮಧ್ಯಮ, ಪ್ರಜೆಗಳ ಅಜ್ಞಾನದ ಪರವಾಗಿ ನಿಂತರೆ ಅಧಮ.

- Advertisement -

ನಮ್ಮ ದೇಶದ ರಾಜಕೀಯ ಪಕ್ಷಗಳು ಪ್ರಜೆಗಳ ವೈಭವದ ವಿದೇಶ ವ್ಯಾಮೋಹದ ಪರವಾಗಿ ನಿಂತು ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಬಡವರು,ಹಿಂದುಳಿದವರು, ಜಾತಿರಾಜಕೀಯವೆಂದು ಕಷ್ಟಪಟ್ಟು ಎತ್ತಿ ಹಿಡಿದರು.

ಆದರೆ, ಯಾವುದೇ ಒಂದು ಪಕ್ಷ ದೇಶದಮುಂದಿನ ಭವಿಷ್ಯಕ್ಕಾಗಿ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರದೆ,ಭಾರತೀಯ ಮಕ್ಕಳಿಗೆ ವಿದೇಶಿ ಶಿಕ್ಷಣ,ವ್ಯವಹಾರ,ಸಾಲ,ಬಂಡವಾಳದಿಂದ ಮೇಲೆತ್ತಿ ನಿಲ್ಲಿಸಿ, ಈಗ ಭಾರತವನ್ನೇ ಹಿಂದುಳಿದವರ ದೇಶ ಎಂದರೆ ಇದಕ್ಕೆ ನಮ್ಮ ಸಹಕಾರ ಕಾರಣ.

ಸರ್ಕಾರ ನಡೆಸಲು ಹಣದ ಜೊತೆಗೆ ಮುಖ್ಯವಾದ ಸ್ವಂತ ಜ್ಞಾನ ಬೇಕು. ಸ್ವಾವಲಂಬನೆಗೆ ಸ್ವಾಭಿಮಾನ ಬೇಕು.ಸ್ವರಾಜ್ಯಕ್ಕೆ ಅಗತ್ಯವಾದ ಶಿಕ್ಷಣ ಬೇಕು. ಇದನ್ನು ವಿರೋಧಿಸೋ ಪ್ರತಿಷ್ಠಿತರ ಹಿಂದೆ ನಿಂತು ತಮ್ಮಪಕ್ಷವಾಗಲಿ, ಅಧಿಕಾರವಾಗಲಿ ಬೆಳೆಸಿಕೊಂಡರೆ ಮೇಲಿರೋ ಪರಮಾತ್ಮ ತನ್ನ ನ್ಯಾಯಾಲಯದಲ್ಲಿನಿಂತು ಅನಿರೀಕ್ಷಿತ ತೀರ್ಪು ನೀಡೋದು ಸತ್ಯ.

ಏನೇ ಬರಲಿ ಒಗ್ಗಟ್ಟಿರಲಿ ಎನ್ನೋದು ಹಿಂದೂಧರ್ಮದ ಉದ್ದೇಶ. ನಮ್ಮ ಒಗ್ಗಟ್ಟು ಕೇವಲ ಬೇಡೋದರಲ್ಲಿ ಮಾತ್ರ. ನೀಡೋ ಸರದಿ ಬಂದಾಗ ಎಲ್ಲರೂ ಹಿಂದೆ ನಿಲ್ಲುತ್ತಾರೆ. ಅದಕ್ಕೆ ಯಾರೇ ಆಗಲಿ ಬೇರೆಯವರ ಬೇಡಿಕೆಗಳನ್ನು ನೀಡುವಾಗ ಯೋಚಿಸಿದರೆ, ಭವಿಷ್ಯದಲ್ಲಿ ನಾವು ಬೇಡೋದುಬೇಡ.

ಸಾಲ ಮಾಡೋದು ಸುಲಭ ತೀರಿಸೋದೆ ಕಷ್ಟ.ಆದರೆ, ಜೀವ ರಕ್ಷಣೆಗಾಗಿ ಮಾಡೋ ಸಾಲವನ್ನು ಪರಮಾತ್ಮ ಮನ್ನಾ ಮಾಡಬಹುದು. ಅದರೆ, ಇತರರ ಜೀವ ಹೋಗುವಷ್ಟು ಸಾಲ ಕೊಡೋದು ಅಧರ್ಮ.ಸರ್ಕಾರದ ಸಾಲ ಸೌಲಭ್ಯಗಳ ಸರಮಾಲೆಯೊಳಗೆ ಪ್ರಜೆಗಳ ಬಡತನ ಹೆಚ್ಚಾದರೆ ನಷ್ಟ ಇಡೀ ದೇಶಕ್ಕೆ.

ರಾಜಕಾರಣಿಗಳೇನೂ ಬದಲಾಗಬಹುದು.ದೇಶದ ಆರ್ಥಿಕ ಸ್ಥಿತಿಗೆ ಪ್ರಜೆಗಳೇ ಕಾರಣವಾದಾಗ, ಸಾಲತೀರಿಸಲು ದುಡಿಯಲೇ ಬೇಕು.ನಮ್ಮ ದೇಶದ ಜ್ಞಾನದ ಮಟ್ಟ ಉತ್ತಮವಾಗಿದ್ದರೂ ಶಿಕ್ಷಣದಲ್ಲೇ ಅದನ್ನರಿಯದೆ ಕೆಳಗೆ ತಳ್ಳಿ, ವಿಜ್ಞಾನ ವಿದೇಶಿ ಜ್ಞಾನವನ್ನು ತುಂಬಿದ ಮಕ್ಕಳಿಗೆ ರಾಜಕೀಯ ಎಂದರೆ,ರಾಜನಂತೆ ಅಧಿಕಾರ ನಡೆಸೋದಾಗಿರುತ್ತದೆ.

ರಾಜಯೋಗದ ಶಿಕ್ಷಣವೇ ಬೇರೆ, ರಾಜಧರ್ಮವೇ ಬೇರೆ. ಇಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇರೋವಾಗ ಪ್ರಜೆಗಳಿಗೆ ಮುಖ್ಯವಾದ. ರಾಜಯೋಗದ ಶಿಕ್ಷಣ ನೀಡೋದೆ ನಿಜವಾದ ರಾಜಕೀಯ. ಒಟ್ಟಿನಲ್ಲಿ, ಆಗೋದೆಲ್ಲಾ ಒಳ್ಳೆಯದಕ್ಕೆ, ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು. ಅವನ ಇಚ್ಚೆಗೆ ವಿರುದ್ದ ನಡೆದರೆ ನಷ್ಟ ಕಟ್ಟಿಟ್ಟ ಬುತ್ತಿ.

ಹೊರಗಿನ ರಾಜಕೀಯದಲ್ಲಿ ಅಧಿಕಾರ,ಹಣ,ಪ್ರತಿಷ್ಠೆ ಬೆಳೆದರೆ, ಒಳಗಿನ ರಾಜಕೀಯದಿಂದ ಇದನ್ನು ಹೇಗೆ ಬಳಸಬಹುದೆಂಬ ಜ್ಞಾನ ಪ್ರಾಪ್ತಿ ಆಗಬೇಕಿತ್ತು.ಇಂದಿನ ಸಮಾಜದಲ್ಲಿ ಎರಡೂ ಒಂದೇ ಮಾರ್ಗದಲ್ಲಿ ಮುನ್ನಡೆದು, ಈ ಕಡೆ ಧರ್ಮ ರಕ್ಷಣೆಯೂ ಹಿಂದೆ, ಆಕಡೆ ದೇಶರಕ್ಷಣೆ ಹಿಂದೆ ನಿಂತು,ಹಿಂದುಳಿದವರ ರಕ್ಷಣೆ ಮಾಡೋ ಹೊತ್ತಿಗೆ ಎಲ್ಲವೂ ಮರೆಯಾಗಿರುತ್ತದೆ.

ಆಧ್ಯಾತ್ಮಿಕ ವಿಚಾರದೊಳಗಿನ ರಾಜಕೀಯಕ್ಕೆ ಧರ್ಮ ಒಡೆದರೆ, ಭೌತಿಕ ವಿಚಾರದ ರಾಜಕೀಯಕ್ಕೆ ದೇಶವೇ ಒಡೆಯುತ್ತದೆ. ಧರ್ಮ ದೇಶವೆರಡೂ ನಮ್ಮೊಳಗಿದ್ದರೆ ಶಾಂತಿಯಿಂದ ಮುಕ್ತಿ.

ಇಲ್ಲವಾದರೆ ಅಶಾಂತಿ. ನಮ್ಮ ಪುರಾಣ,ಇತಿಹಾಸದ ರಾಜರ ಕಥೆ
ಪುರಾಣಗಳನ್ನು ಮುಂದಿಟ್ಟುಕೊಂಡು ಎಷ್ಟೇ ಸಂಶೋಧನೆ,ವಾದ ವಿವಾದ ನಡೆಸಿದರೂ ಅವರ ಕಾಲ ಈಗ ಬರಲು ಕಷ್ಟ. ವಾಸ್ತವ ಜಗತ್ತಿನಲ್ಲಿ ಮಿತಿ ಮೀರಿದ ಭ್ರಷ್ಟಾಚಾರದ ಮೂಲವೇ ಪ್ರಚಾರಕರ ಅರ್ಧಸತ್ಯದ ಪ್ರಚಾರ.

ಪ್ರಚಾರ ಮಾಡೋರಿಗೆ ಸಿಗೋ ಹಣ ಮೂಲ ವ್ಯಕ್ತಿ, ಶಕ್ತಿಗೆ ಸಿಗೋಲ್ಲ.ಆದರೆ ಪ್ರಜೆಗಳು ಸತ್ಯ ತಿಳಿಯದೆ, ತಮ್ಮ ಜೀವವನ್ನೇ ಒತ್ತೆಇಟ್ಟರೆ ಜೀವನ ನಡೆಸಿದರೂ ಆತ್ಮವಂಚನೆ ಆಗುತ್ತದೆ. ಇದಕ್ಕಾಗಿ ಹಿಂದಿನ ಮಹಾತ್ಮರುಗಳು ಸತ್ಯವನ್ನು ಅನುಭವದಿಂದ ತಿಳಿದು,ಸಂಸಾರ, ಸಮಾಜವೆರಡನ್ನೂ ಸರಿಯಾಗಿ ನಡೆಯಲು ಸರ್ಕಾರ ನೀಡಿ ನಡೆದರು.ಇಂದು, ಪ್ರಜಾಪ್ರಭುತ್ವ ವೆಂದು, ದೇಶಕ್ಕೆನಾನೇನು ಕೊಡಲು ಸಾಧ್ಯವೆಂದು ತಿಳಿಯೋ ಬದಲು ದೇಶದಿಂದ ನನಗೇನು ಲಾಭವೆಂದು ವಿದೇಶ ವ್ಯವಹಾರ ನಡೆಸಿದರೆ, ನಷ್ಟ ಯಾರಿಗೆ?.

ವಿದೇಶಿಗಳಿಗಿರೋ ಸ್ವದೇಶ ಭಕ್ತಿ ಭಾರತೀಯರಿಗೆ ಇಲ್ಲ. ಹೀಗಾಗಿ ನಮ್ಮ ದೇಶ ಹೀಗಿದೆ.ಇದು ಕೇವಲ ಕೆಲವರಿಗೆ ಮಾತ್ರ ಸರಿಯೆನಿಸಬಹುದು.ಆದರೆ,ಇದು ಸತ್ಯವಲ್ಲವೆ?. ಎಲ್ಲವೂ ಸರ್ಕಾರದಿಂದ ನಡೆದಿದೆ.ಸರ್ಕಾರ ಎಂದರೆ ರಾಜಕಾರಣಿಗಳಲ್ಲ ಪ್ರಜೆಗಳ ಸಹಕಾರ‌ ಎಂದರ್ಥ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!