ಸಾಮಾನ್ಯವಾಗಿ ನಾವು ಪ್ರತಿನಿತ್ಯ ಸೇವಿಸುವ ಆಹಾರದಿಂದಲೂ ಕೂಡ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಇಂದು ನಾವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ದೇಹದ ತೂಕವನ್ನು ಯಾವ ರೀತಿ ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ನಾವು ಪ್ರತಿನಿತ್ಯ ಬೆಳಗಿನ ಉಪಾಹಾರಕ್ಕೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರು ಮಾಡಿಕೊಂಡು ಸೇವಿಸುತ್ತೇವೆ. ಅದರ ಬದಲಿಗೆ ಆರೋಗ್ಯಕ್ಕೆ ಹಿತಕರವಾಗಿರುವ ಹಾಗೂ ದೇಹಕ್ಕೆ ಉತ್ತಮ ಆರೋಗ್ಯವನ್ನು ಕೊಡುವಂತಹ ಓಟ್ಸ್ ದೋಸೆ ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಒಂದು ಕಪ್ ಓಟ್ಸ್ ಅನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಿ ಈಗ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ.
ನಂತರ ಅದಕ್ಕೆ ಅರ್ಧ ಕಪ್ ಮೊಸರು ಹಾಗೂ ಅರ್ಧ ಕಪ್ಪು ನೀರು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಸ್ವಲ್ಪ ಸಮಯದವರೆಗೂ ನೆನೆಯಲು ಬಿಡಬೇಕು. ಮತ್ತೊಂದು ಕಡೆ ಒಂದು ಈರುಳ್ಳಿ, ಎರಡು ಹಸಿ ಮೆಣಸಿನಕಾಯಿ, ಒಂದು ಟೇಬಲ್ ಸ್ಪೂನ್ ಜೀರಿಗೆ, ಒಂದು ಇಂಚು ಶುಂಠಿ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು, ಇವೆಲ್ಲವನ್ನೂ ಕೂಡ ಚಿಕ್ಕದಾಗಿ ಮಾಡಿಕೊಳ್ಳಬೇಕು. ಈಗ ಗ್ಯಾಸ್ ಮೇಲೆ ದೋಸೆ ತವಾವನ್ನು ಇಟ್ಟು ಅದಕ್ಕೆ ಒಂದು ಟೇಬಲ್ ಸ್ಪೂನ್ ತುಪ್ಪವನ್ನು ಹಾಕಿ ತಯಾರಿಸಿ ಕೊಂಡಿರುವ ಓಟ್ಸ್ ಮಿಶ್ರಣವನ್ನು ಅದರ ಮೇಲೆ ಹಾಕಿ.
ನಂತರ ಚಿಕ್ಕದಾಗಿ ಕಟ್ ಮಾಡಿಕೊಂಡಿರುವ ಮಸಾಲೆ ಪದಾರ್ಥಗಳನ್ನು ದೋಸೆ ಮೇಲೆ ಹಾಕಿ ಚೆನ್ನಾಗಿ ಬೇಯಿಸಬೇಕು. ಈ ರೀತಿ ತಯಾರಾದ ಓಟ್ಸ್ ದೋಸೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಹಾಗೂ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಕೇಶವ ನಾರಾಯಣ