spot_img
spot_img

ಹೊಸ ವರ್ಷಾಚರಣೆ ಸ್ವಚ್ಛವಾಗಿದ್ದರೆ ಉತ್ತಮ

Must Read

spot_img
- Advertisement -

ಹೊಸವರ್ಷದ ಆಚರಣೆಯಲ್ಲಿಯೇ ನಮ್ಮಲ್ಲಿ ಗೊಂದಲ ಇದೆ. ಇದು ನಮ್ಮದು ಅದು ಪರರದ್ದು. ಹಾಗಾದರೆ ನಮ್ಮ ಶಿಕ್ಷಣದಲ್ಲಿ ಯಾಕಿಲ್ಲ?

ಕೊರೊನ ದಿಂದ ನಿಂತ ಶಿಕ್ಷಣವನ್ನು ಆಂಗ್ಲರ ವರ್ಷಾಚರಣೆ ದಿನ ಪ್ರಾರಂಭಿಸುತ್ತಿರುವ ಸರ್ಕಾರಯಾವ ದಿಕ್ಕಿಗೆ ಹೋಗುತ್ತಿದೆ?
ಶಿಕ್ಷಣವೆ ಪರರ ವಶದಲ್ಲಿದ್ದರೂ ಅದನ್ನು ನಮ್ಮದೆಂದು ಒಳಗೆಳೆದುಕೊಂಡು ಇಷ್ಟು ವರ್ಷ ಮುಂದೆ ಬಂದವರಿಗೆ ವರ್ಷಾಚರಣೆ ಮಾಡೋದರಿಂದ ಏನಾಗುತ್ತದೆ? ಎಂಬಪ್ರಶ್ನೆಗೆ ಉತ್ತರ ಕೊಡಲಾಗುವುದಿಲ್ಲ.

ಆಚರಣೆಗಳಿಂದ ನಮ್ಮ ಜ್ಞಾನ ಬೆಳೆದರೆ ಉತ್ತಮ.ಆರೋಗ್ಯ ವೃದ್ದಿಯಾದರೆ ಇನ್ನೂ ಉತ್ತಮ.

- Advertisement -

ಅದು ಬಿಟ್ಟು ಅಜ್ಞಾನ,ಅನಾರೋಗ್ಯಕರ ಸಮಾಜವನ್ನುನಾವೇ ಬೆಳೆಸಿದ್ದರೆ ಇದರ ಪ್ರತಿಫಲವೂ ದೇಹವೇ ಅನುಭವಿಸಬೇಕಲ್ಲವೆ? ಒಂದು ದಿನದ ಆಚರಣೆಯಿಂದ ಏನೂ ಬದಲಾಗುವುದಿಲ್ಲ ಎನ್ನಬಹುದು.

ಆದರೆ, ಇದರಲ್ಲಿ ಅಧರ್ಮ,ಅಸತ್ಯ,ಅನ್ಯಾಯ,ಅತ್ಯಾಚಾರಗಳು ಇಡೀ ವರ್ಷ ಹರಡಿದರೆ ನಷ್ಟ ಯಾರಿಗೆ?

ಮನರಂಜನೆ ಇರಬೇಕು.ಆತ್ಮವಂಚನೆ ಇರಬಾರದು. ಭಾರತೀಯರ ಹೊಸ ವರ್ಷ ಚೈತ್ರ ಮಾಸದ ಪಾಡ್ಯದ ಯುಗಾದಿಯಲ್ಲಿ ಪ್ರಕೃತಿಯೊಡನೆ ಆಚರಿಸುತ್ತಿದ್ದ ಭಾರತೀಯರಿಗೆ ಈಗಿನ ಚಳಿಯಲ್ಲಿ ಉದುರುತ್ತಿರುವ‌ ತರಗೆಲೆಗಳನ್ನು ನೋಡಿಸಂತೋಷ ಪಡುವ ಮನರಂಜನೆಯ ವರ್ಷಾಚರಣೆಗೆ ದೇಶ ತಲೆಬಾಗಬೇಕೆ? ತಲೆತಗ್ಗಿಸಬೇಕೆ?

- Advertisement -

ದೇಶ ತಲೆತಗ್ಗಿಸುವ ಕೆಲಸ ದೇಶದ ಪ್ರಜೆಗಳೆ ಮಾಡಿದರೆ ಸನ್ಮಾನವೆ? ಅವಮಾನವೆ? ಒಟ್ಟಿನಲ್ಲಿ ಈ ವರ್ಷ ಕೊರೊನವೆ ಅಡ್ಡ ಬಂದು ಸ್ವಲ್ಪ ಮಟ್ಟಿಗೆ ತಡೆ ಹಾಕಿದೆ.

ಪ್ರಕೃತಿಯ ಮುಂದೆ ವಿಕೃತಿ ಹೆಚ್ಚು ದಿನವಿರೋದಿಲ್ಲ. ಆದರೆ, ಆಚರಣೆಗೆ ತಡೆಯಿಲ್ಲ. ಆಚರಣೆಯಲ್ಲಿ ಸತ್ವ ಇರಲಿ ಎಂದಷ್ಟೇ ಆಚರಣೆಯ ಉದ್ದೇಶ. ವರ್ಷವಿಡೀ ಹರ್ಷವಾಗಿರಲು ಪ್ರಥಮಾಚರಣೆ ಪ್ರಮುಖವಾಗಿದೆ.

ಮೊದಲ ದಿನವೇ ಮೋಜು ಮಸ್ತಿ,ಕುಡಿತ,ತಿಂದು ತೇಗಿದರೆ ರೋಗ ಹೆಚ್ಚುವುದಿಲ್ಲವೆ? ಮಕ್ಕಳನ್ನು ಯಾವದಿಕ್ಕಿಗೆ ಎಳೆಯುತ್ತಿದ್ದೇವೆಂಬುದರ ಬಗ್ಗೆ ಪೋಷಕರೆ ಚಿಂತನೆ ನಡೆಸಬೇಕಾಗಿದೆ.

ವರ್ಷಾಚರಣೆ ಕಸದ ಆಚರಣೆಯಾಗದೆ ಸ್ವಚ್ಚವಾಗಿದ್ದರೆ ಉತ್ತಮ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group