೧.೩೪ ಕೋಟಿ ರೂ. ದಂಡ ವಸೂಲಿ ಮಾಡಿದ ಬೀದರ್ ಪೊಲೀಸರು; ಜನತೆಯ ಆಕ್ರೋಶ

Must Read

ಕೊರೋನಾ ಮಹಾಮಾರಿಯಿಂದಾಗಿ ಜನತೆ ಬಸವಳಿದಿರುವಾಗಲೆ ಗಾಯದ ಮೇಲೆ ಬರೆ ಎಳೆದಂತೆ ಕಳೆದ ವರ್ಷ ಸಂಚಾರಿ ನಿಯಮಗಳ ನೆಪದಲ್ಲಿ ಬೀದರ್ ಪೊಲೀಸರು ೧.೩೪ ಕೋಟಿ ಹಣ ವಸೂಲಿ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಬೀದರ್ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಪತ್ರಕರ್ತರೊಡನೆ ಮಾತನಾಡುತ್ತ ಈ ವಿಷಯ ತಿಳಿಸಿದರು.

ಆದರೆ ಪೊಲೀಸರ ಈ ಕಾರ್ಯ ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನ ಹುಟ್ಟು ಹಾಕಿದ್ದು ಸಂವಿಧಾನದ ಇತರೆ ನಿಯಮಗಳನ್ನು ಪಾಲಿಸದೇ ರಾಜಾರೋಷವಾಗಿ ತಿರುಗುವ ಜನರನ್ನು ಬಿಟ್ಟು ಸಾಮಾನ್ಯ ಜನರಿಂದ ಸಂಚಾರಿ ನಿಯಮ ಉಲ್ಲಂಘನೆಯ ನೆಪ ಇಟ್ಟಕೊಂಡು ಕೋಟಿಗಟ್ಟಲೆ ಹಣ ವಸೂಲು ಮಾಡಿದ್ದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ನಾನು ಜನಪರ, ನನ್ನದು ಜನಪರ ಸರ್ಕಾರ ಎಂದು ಬೊಗಳೆ ಬಿಡುವ ಬಿ ಎಸ್ ಯಡಿಯೂರಪ್ಪನವರ ಸರ್ಕಾರದ ಆದೇಶದಂತೆ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರಿಂದ ಕೊರೋನಾ ಬಿಕ್ಕಟ್ಟಿನಲ್ಲಿಯೂ ೧.೩೪ ಕೋಟಿ ದಂಡದ ಹಣ ಪೊಲೀಸ್ ಇಲಾಖೆ ವಸೂಲು ಮಾಡಿದ್ದು ಇದು ಯಾವ ರೀತಿಯ ಜನಪರ ಸರ್ಕಾರ ಎಂದು ಆಕ್ರೋಶದಿಂದ ಪ್ರಶ್ನೆ ಮಾಡುತ್ತಿದ್ದಾರೆ.

ಇತ್ತ ಸಾರಿಗೆ ಅಧಿಕಾರಿಗಳಿಗೂ ಇದು ಬಿಸಿ ತುಪ್ಪವಾಗಿದ್ದು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ದಾಖಲೆಗಳನ್ನು ಇಟ್ಟುಕೊಂಡು ರಸ್ತೆಗೆ ಇಳಿಯಬೇಕು ಎಂದು ಬೀದರ್ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಮನವಿ ಮಾಡಿಕೊಂಡಿದ್ದಾರೆ.

ವರದಿ: ನಂದಕುಮಾರ ಕರಂಜೆ,
Times of ಕರ್ನಾಟಕ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group