spot_img
spot_img

ಅಮ್ಮ 💝ನನ್ನ ಹೃದಯದ ಚಿನ್ನದ ಕಿರೀಟ💝

Must Read

- Advertisement -

 

ನೀನೊಂದು ಸಂಪಿಗೆಮರ
ನಿನ್ನ ಹಿತವಚನದ ಕಂಪಿನಲ್ಲಿ
ಜೀವನಾರ್ಥ ತುಂಬಿದೆ.
ನನ್ನ ಹೃದಯದ ಚಿನ್ನದ ಕಿರೀಟ
ತ್ಯಾಗಕ್ಕೆ ಪರ್ಯಾಯ ಪದವಾದೆ ನೀ
ಜೀವ-ಜೀವದ ಚೇತನ….

ನೀನೊಂದು ಅಮೃತಕಲಶ
ಹೆಕ್ಕಿದಷ್ಟು ಜೇನಸಿಹಿ
ನಿನ್ನ ಸಮ ದೇವರಿಲ್ಲ
ನೀನಿಲ್ಲದ ಅವನೂ ಅನಾಥನೇ…

- Advertisement -

ಬುದ್ಧನಾಗಿರುವೆ ನಾ
ನಿನ್ನ ಮಮತೆಯ ವೃಕ್ಷದಡಿಯಲಿ
ಸರಿರಾತ್ರಿಯಲ್ಲೂ ನಿನ್ನ ಮಡಿಲ
ಸುಖವನರಸಿ ಬರುವ ಕೂಸು ನಾ…

ನಿನ್ನ ಮಾತು-ಮುತ್ತುಗಳೆಲ್ಲ
ಸುಂದರ ಹೂ ದಳಗಳಂತೆ
ತಾವರೆಯ ಅರಸಿ ಬಂದ ಸೂರ್ಯನಂತೆ
ನಿನ್ನಪ್ರೀತಿಯೊ ಪ್ರಕಾಶಮಾನ…
ಹಗಲು- ಇರುಳಗಳ ಕಿರುಬೆರಳ ನೀಡಿ
ಕನಸ ಪೋಣಿಸಿ ಲಾಲಿ ಹಾಡಿದವಳು…
ಅಂಜಿದಾಗ ತಲೆಗೂದಲ ನೇವರಿಸಿ
ದೈರ್ಯದ ದೀಪ ಹಚ್ಚಿದವಳು…

ದಿಗಂತದಾಚೆ ಅಪ್ಪ ಮರೆಯಾದಾಗ
ಪೂರ್ಣಚಂದ್ರನಂತೆ ಬಾಳ ಬೆಳಗಿದವಳು
ಅಮ್ಮ ನಿನ್ನ ಪಾದದಿ ಸ್ಥಾನ ನೀಡು
ನಿನ್ನ ಸೇವೆಗೈಯಲು….
ಮತ್ತೊಮ್ಮೆ ಹುಟ್ಟಿ ಬರುವಾಸೆ
ನಿನ್ನ ಲಾಲಿ ಹಾಡು ಕೇಳಲು….

- Advertisement -

ಕವಿಯಿತ್ರಿ

ಶ್ರೀಮತಿ ಮೀನಾಕ್ಷಿ ಸೂಡಿ
ಪೋ:ದೇವಗಾಂವ
ತಾ:ಚನ್ನಮ್ಮನಕಿತ್ತೂರ
ಜಿ:ಬೆಳಗಾವಿ
ಪಿನ್:591115
ಫೋನ್:8073946046.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group