spot_img
spot_img

ಕನ್ನಡಪರ ಹೋರಾಟಗಾತಿ೯ ಮಹಿಳಾ ರತ್ನ ದಿ ಮಹಾನಂದಾ ಗಂಗಾಧರ ಸದಲಗೆ

Must Read

- Advertisement -

(ಲೇಖನ : ಮಿಥುನ ಅಂಕಲಿ)

ಕನ್ನಡ ನಾಡುನುಡಿಯ ಬೆಳವಣಿಗೆಯಲ್ಲಿ ಅಲ್ಲಿಯ ಮಾನವಸಂಪನ್ಮೂಲವು ಕೂಡಾ ತನ್ನದೇ ಯಾದ ಪಾತ್ರ ವಹಿಸಿದೆ.ಕನ್ನಡವು ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು.ಇದಕ್ಕೆ ಎರಡು ಸಾವಿರ ವರುಷಗಳ ಇತಿಹಾಸವಿದೆ ತನ್ನದೇಯಾದ ಲಿಷಿ ಹೊಂದಿ ಪರಿಪೂರ್ಣ ಭಾಷೆಯಾಗಿ ಹೊರಹೊಮ್ಮಿದೆ.

ಇಂತಹ ಕನ್ನಡ ಮತ್ತು ಕನ್ನಡ ನೆಲದ ಸವಾ೯ಂಗೀಣ ಅಭಿವೃದ್ದಿಯಲ್ಲಿ ಮಹಿಳಾಮಣಿಗಳ ಪಾತ್ರ ಮಹತ್ವದಾಗಿದೆ.ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಕನ್ನಡ ಕಲಿಸುವ ಕೇಂದ್ರ ತಾಣ ಎಂದರೆ ತಾಯಿಯ ಮನೋಭಾವ.

- Advertisement -

ಮಹಿಳೆಯರು ಕನ್ನಡದ ಏಳಿಗೆಗೆ ದುಡಿದು ಸಭಲೆಯರು ಎನಿಸಿಕೊಂಡಿದ್ದಾರೆ.ಅಂತೆಯೇ ನಿಪ್ಪಾಣಿ ಪರಿಸರದಲ್ಲಿ ಕನ್ನಡದ ಕೈಂಕಯ೯ ತೊಟ್ಟು ಕನ್ನಡಪರ ಹೋರಾಟ ಮಾಡಿದವರಲ್ಲಿ ಆಧ್ಯಾತ್ಮ ಜೀವಿ ದಿ ಮಹಾನಂದಾ ಗಂಗಾಧರ ಸದಲಗೆ ಅಮ್ಮನವರು ಒಬ್ಬರು.

ಕನ್ನಡನಾಡು ಅಂದದ ಬೀಡು.ಹಲವು ಜಿಲ್ಲೆಗಳ ಒಕ್ಕೂಟ.ಅದರಲ್ಲಿ ಆಧ್ಯಾತ್ಮದ ಗಂಧವನ್ನು ಬೀರಿ ಶರಣರಿಗೆ ಜನ್ಮ ನೀಡಿದ ನಾಡು ಬಾಗಲಕೋಟ.

ಅಂತಹ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಸುಸಂಸ್ಕೃತ ಘನತೆಯತ್ತ ಪಟ್ಟಣ ಮನೆತನದ ದೈವಿ ಶರಣ ದಂಪತಿಗಳಾದ ಮಡಿವಾಳಪ್ಪಾ ಮತ್ತು ಸಿದ್ದವ್ವಾ ತಾಯಿಯ ಪುಣ್ಯ ಗಭ೯ದಿಂದ ಮಹಾನಂದಾ ಅವರು ೦೧ ಜೂನ್ ೧೯೨೫ ರಲ್ಲಿ ಜನಿಸಿದರು.

- Advertisement -

ಸಮಾಜಸೇವೆಯನ್ನೆ ಉಸಿರಾಗಿಸಿಕೊಂಡಿದ್ದ ಅಪ್ಪಟ ಕನ್ನಡದ ನೆಲವಾದ ಜಮಖಂಡಿಯ ಪುಣ್ಯ ತಾಣದಲ್ಲಿ ತಂದೆತಾಯಿಯ ವಾತ್ಸಲ್ಯದ ಪುತ್ರಿಯಾಗಿ ಬೆಳೆದು ತಾಯಿಯ ಉದಾತ್ತ ಮನೋಭಾವದ ಚಿಂತನೆಗಳನ್ನು ತನ್ನಲ್ಲಿ ಕರಗತ ಮಾಡಿಕೊಂಡು ಮನೆಯ ಘನತೆಯಂತೆ ಬಾಳತೊಡಗಿದರು.

ಅಂದಿನ ಕಾಲದಲ್ಲಿ ಇವರ ತಂದೆಯವರಾದ ದಿ ಮಡಿವಾಳಪ್ಪ ಪಟ್ಟಣ ಅವರು ಕನ್ನಡ ಮಕ್ಕಳಿಗೆ ಅನುಕೂಲವಾಗಲೆಂದು ಕನ್ನಡ ಶಾಲೆಯನ್ನು ತೆರೆದಿದ್ದರು.ತನ್ನ ಮಗಳಿಗೆ ಆ ಶಾಲೆಗೆ ಸೇರಿಸಿ ಶಿಕ್ಷಣ ನೀಡಿದರು.ಇಂದು ಕೂಡಾ ಕನ್ನಡದ ಕೋಟೆಯಾಗಿ ಕೆಲಸ ಮಾಡುತ್ತಿದೆ.ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಮನೆತನದ ಕೆಲಸಗಳಲ್ಲಿ ಸಕ್ರೀಯವಾಗತೊಡಗಿದರು.

ತಾಯಿಯೊಂದಿಗೆ ಸಮಾಜದ ಆಧ್ಯಾತ್ಮದ ಕಾಯ೯ದಲ್ಲಿ ತೊಡಗೆ ತಂದೆಯ ಕನ್ನಡ ಸೇವೆಗೆ ಬಲಕೊಟ್ಟು ಕನ್ನಡಾಭಿಮಾನ ಕರಗತಮಾಡಿಕೊಂಡರು.ಇವರ ತಂದೆಯ ಕನ್ನಡ ಶಾಲೆ ಇವರಲ್ಲಿ ಕನ್ನಡ ಉತ್ಸಾಹದ ಬೀಜ ಮೊಕೆಯೊಡೆಯಲು ಕಾರಣವಾಯಿತು. ಮನೆತನದೊಂದಿಗೆ ಕನ್ನಡದ ಕಾಯ೯ಗಳಲ್ಲಿ ಸಕ್ರೀಯರಾದರು.

ವಯಸ್ಸಿಗೆ ಬಂದಾಗ ಎಂದರೆ ಅಂದಾಜು ೧೯೪೧ ರ ಸುಮಾರಿಗೆ ನಿಪ್ಪಾಣಿಯ ಮೌಲ್ಯಯುತ ಮನೆತನವಾದ ಸದಲಗೆ ಮನೆತನದ ಗಂಗಾಧರ ಅವರೊಂದಿಗೆ ಮದುವೆ ಸಂಸಾರದ ಸಾರಥ್ಯ ವಹಿಸಿಕೊಂಡು ಸದಲಗೆ ಮನೆತನದ ಸೊಸೆಯಾಗಿ ಮನೆತನದ ಭಾರ ಹೊತ್ತರು.ನಿಪ್ಪಾಣಿ ಸಮಾಜದ ಕಾಯಕದಲ್ಲಿ ಸಕ್ರೀಯವಾಗ ತೊಡಗಿದರು. ಸತಿಪತಿಗಳೊಂದಾಗಿ ಸಮಾಜದ ಸೇವೆ ಮಾಡುತ್ತಾ ೦೪ ಮಕ್ಕಳ ತಂದೆತಾಯಿಯಾಗಿ ಅವರಲ್ಲಿ ಆದಶ೯ಗಳನ್ನು ಬಿತ್ತುತ್ತಾ ಮುನ್ನಡೆದರು.

ಇವರು ನಿಪ್ಪಾಣಿಗೆ ಬಂದಾಗ ಸಕಲವೂ ಮರಾಠಿಮಯವಾಗಿತ್ತು. ಕನ್ನಡ ನೆಲದಿಂದ ಬಂದ ಈ ಮಹಿಳಾ ಮಣಿಗೆ ಮರಾಠಿ ಬರುತ್ತಿರಲಿಲ್ಲ ಆದರೂ ಎದೆಗುಂದದೆ ಸಂಸಾರ ನಡೆಸಿದರು. ಕನ್ನಡ ಬೆಳೆಸಲು ಎಲೆ ಮರೆ ಕಾಯಿಯಂತೆ ಕೆಲಸ ಮಾಡತೊಡಗಿದರು.

ಆ ಸಂದಭ೯ದಲ್ಲಿ ಕನ್ನಡ ನಾಡಿನಲ್ಲಿ ಏಕೀಕರಣ ಚಳುವಳಿಗಳು ನಡೆದಿದ್ದವು.ಅದರತ್ತ ಗಮನ ಹರಿಸಿ ಮಹಿಳಾ ಸಬಲೀಕರಣಕ್ಕೆ ಮುಂದಾದರು.ಪ್ರತಿಷ್ಠಿತ ಮನೆತನದ ಮಹಿಳೆಯರೊಂದಿಗೆ ಕುಶಲೋಪರಿ ನಡೆಸಿ ಕನ್ನಡಕ್ಕಾಗಿ ಏನಾದರೂ ಮಾಡೋಣ ಎಂಬ ಮಂತ್ರವನ್ನು ಓದಿ ಸವ೯ರಲ್ಲಿ ಕನ್ನಡಾಭಿಮಾನದ ಬೀಜ ಬಿತ್ತಿದರು.

ಇದಕ್ಕೆ ಪೂರಕವೆಂಬಂತೆ ೧೯೫೭ ರಲ್ಲಿ ಸಮಾನಮನಸ್ಕ ಮಹಿಳಾ ಬಾಂಧವರಾದ ಶಾಂತಾಬಾಯಿ ಬಸವಪ್ರಭು ನೇಷ್ಠಿ,ಕಮಲಕ್ಕಾ ಮಲ್ಲಪ್ಪಾ ಕೋಠಿವಾಲೆ,ಚಂಪಾಬಾಯಿ ಶಿವಬಾಳ ಧುಮಾಳೆ,ಸುಶೀಲಾ ಸಖಾರಾಮ ಪಣದೆ,ಮಾಲತಿಬಾಯಿ ರಾಜಾರಾಮ ಶಿಂಧೆ,ಶಾಂತಕ್ಕಾ ಸಾತವೀರ ಕೊಳಕಿ,ನಿಲಕ್ಕಾ ಸವದಿ ಮುಂತಾದ ಸಮಾನ ಮನಸ್ಕ ಮಹಿಳೆಯರೊಂದಿಗೆ ಕೂಡಿ ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಸಂಘ ಸ್ಥಾಪಿಸಿದರು. ಅದರ ಅಧ್ಯಕ್ಷರಾಗಿ ಸಾರಥ್ಯ ವಹಿಸಿದರು ಮಹಾನಂದಾ ಸದಲಗೆ ತಾಯಿಯವರು. ಅಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಇಂತಹ ಕನ್ನಡದ ಹೆಜ್ಜೆ ಇಟ್ಟಿದ್ದಾರೆಂದರೆ ಅದು ನಿಜಕ್ಕೂ ಮೆಚ್ಚುವಂತಹದ್ದು.

ಮರಾಠಿ ಅಬ್ಬರದ ನಡುವೆ ಕನ್ನಡದ ಸಂಘ ಕಟ್ಟಿದ ಮ‌ಹಿಳಾ ರತ್ನಗಳು ಇವು. ಇಲ್ಲಿಂದಲೇ ಕನ್ನಡದ ಕೆಲಸ ಪ್ರಾರಂಭಿಸಿದರು. ಎಲ್ಲರೂ ಒಂದೆಡೆ ಕೂಡಿ ಕನ್ನಡ ಬೆಳೆಸುವ ಪಣ ತೊಟ್ಟರು.ಮಹಾನಂದರು ಎಲ್ಲರ ನಾಯಕಿಯಾಗಿ ಕನ್ನಡದ ತೇರು ಎಳೆಯುವ ಸಾರಥಿಯಾದರು. ಅಂದಿನ ಕಾಲದಲ್ಲಿ ಕಾಲಕಾಲಕ್ಕೆ ಸಭೆ ಮಾಡಿ ಹಿರಿಯರ ಮಾಗ೯ದಶ೯ನದಂತೆ ಸಂಘ ಕಟ್ಟಿದರು‌. ಈ ಸಂದಭ೯ದಲ್ಲಿ ಕೆಲವು ಕಹಿ ಅನುಭವಗಳನ್ನು ಊಂಡಿದ್ದಾರೆ.

ಕನ್ನಡಕ್ಕೆ ಅನ್ಯಾಯವಾದಾಗ ದಬ್ಬಾಳಿಕೆಗಳು ಹೆಚ್ಚಾದಾಗ ಸದಲಗೆ ಮಾತೆಯವರ ನೇತೃತ್ವದ ಮಹಿಳಾ ತಂಡ ಪ್ರತಿಭಟಿಸಿ ಕನ್ನಡಪರ ಹೋರಾಟಕ್ಕೆ ಇಳಿದಿರುವುದು. ಕನ್ನಡಿಗರ ಮೇಲಿನ ಅನ್ಯಾಯಗಳು ಕಡಿಮೆಯಾಗಬೇಕೆಂದೂ ಅಂದಾಜು ೧೯೬೪ ರ ಸುಮಾರಿಗೆ ಗಡಿ ಸತ್ಯಾಗ್ರಹ ಮಾಡಿ ಚಿಕ್ಕೋಡಿಯ ಸೆರೆಮನೆಯಲ್ಲಿ ಒಂದು ದಿನ ಸೆರೆಮನೆವಾಸ ಅನುಭವಿಸಿದ್ದಾರೆ ಅದರ ಛಾಯಾಪ್ರತಿಕೂಡಾ ಉಪಲಬ್ದವಾಗಿದ್ದೂ ಕನ್ನಡಕ್ಕಾಗಿ ಅಂದೇ ಕನ್ನಡದ ಮಹಿಳೆಯರೂ ರಸ್ತೆಗೆ ಇಳಿದಿದ್ದರೂ ಎಂದು ಸಾಬಿತಾಗುತ್ತದೆ.

ಇವರು ನಿಪ್ಪಾಣಿ ಕನ್ನಡಕ್ಕೆ ನೆಲೆ ಕೊಟ್ಟ ಮೊದಲ ಮಹಿಳಾ ಮಣಿಗಳು. ಮುಂದೆ ನಿಪ್ಪಾಣಿ ವಿವಿಧ ಭಾಗಗಳಲ್ಲಿ ಕನ್ನಡದ ಕಾಯ೯ಕ್ರಮ ಹಮ್ಮಿಕೊಂಡು ಕನ್ನಡ ಸೇವೆಗೈದಿದ್ದಾರೆ
ಮುಂದೆ ನಿಪ್ಪಾಣಿ ಗಾಂಧಿ ಚೌಕದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಸ್ಥಾಪನೆಯಾಗಬೇಕೆಂದು ಚಳುವಳಿ ಮಾಡಿದ್ದಾರೆ.ಉಗ್ರ ಹೋರಾಟ ಮಾಡಿದ್ದಾರೆ.

ಅಲ್ಲದೇ ಕನ್ನಡ ಕಾಯ೯ಕ್ರಮಗಳು ನಡೆಯುವ ಸ್ಥಳಗಳಿಗೆ ರೊಟ್ಟಿಯ ಬುತ್ತಿಗಳನ್ನು ಕಳಿಸಿ ಕನ್ನಡದ ಊಟ ನೀಡಿ ಕನ್ನಡದ ಮಕ್ಕಳನ್ನು ಬೆಳೆಸಿದ ಜಾಣೆಯರು ಇವರು.ಮಹಿಳಾಕುಲದ ಮಂದಾರರಾಗಿ ನಿಪ್ಪಾಣಿಯ ದಿಟ್ಟ ಕನ್ನಡ ಹೋರಾಟಗಾತಿ೯ಯಾಗಿ ಮಹಾನಂದಾ ಗುರುತಿಸಿಕೊಂಡರು.

ಕನ್ನಡದ ಕಾಯಕವನ್ನುಮನಸಾರೆ ಮಾಡಿ ಸ್ವಾಥ೯ತೆಯನ್ನು ಬದಿಗಿಟ್ಟು ನಿಸ್ವಾಥ೯ದಿಂದ ದುಡಿದ ಕನ್ನಡದ ಮಹಿಳಾ ರತ್ನ ಇವರು.ಸಂಸಾರದ ಜವಾಬ್ದಾರಿಯೊಂದಿಗೆ ಸಮಾಜದ ಜವಾಬ್ದಾರಿ ಹೊತ್ತು ಯಶಸ್ವಿ ಜೀವನ ನಡೆಸಿದ್ದಾರೆ. ಇವರ ಪ್ರತಿ ಕೆಲಸಕ್ಕೆ ಕೈಜೋಡಿಸಿ ನಿಂತವರು ದಿ ಶಾಂತಾಬಾಯಿ ನೇಷ್ಠಿ ,ದಿ ಕಮಲಕ್ಕಾ ಕೋಠಿವಾಲೆ.ನಿಪ್ಪಾಣಿ ಕನ್ನಡ ಕಟ್ಟಿದ ಈ ಮಹಿಳೇಯರ ಕಾಯಕ ಅವಿಸ್ಮರಣೀಯ.

೧೯೬೬ ರಲ್ಲಿ ವೀರಶೈವ ಲಿಂಗಾಯತ ಸಮಾಜದ ಭಾಗವಾಗಿ ದಾನಮ್ಮಾದೇವಿ ದೇವಸ್ಥಾನದ ಆವರಣದಲ್ಲಿ “ಬಸವಪುರಾಣ”ವನ್ನು, ಶಿವಶರಣೆ ದಾನಮ್ಮಾ ಪುರಾಣ ಪ್ರವಚನವನ್ನು ಹಮ್ಮಿಕೊಂಡು ಜಂಗಮರ ಸಾನಿಧ್ಯದಲ್ಲಿ ನಿಪ್ಪಾಣಿಯನ್ನು ಬಸವ ನಿಪ್ಪಾಣಿಯನ್ನಾಗಿ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ.

ಇದಲ್ಲದೇ ಕನ್ನಡ ಭಾಷೆಯ ಅಸ್ತಿತ್ವ ಕಾಯಲು ಮಾತೋಶ್ರೀ ಮಹಾನಂದಾ ಅವರು ಸ್ವತಃ ಕನ್ನಡದ ಜಾನಪದ ಗೀತೆಗಳನ್ನು ಕಟ್ಟಿ ಹಾಡುತ್ತಿದ್ದರು.ಶಿವಶರಣಿಯರ ಕುರಿತು ಜನಜಾಗೃತಿ ಮೂಡಿಸುತಿದ್ದರು. ಮುರುಘೇಂದ್ರದ ಸವಾ೯ಂಗೀಣ ಅಭಿವೃದ್ದಿಗೆ ತನು ಮನ ಧನದಿಂದ ದುಡಿದು ಶರಣ ಸಾಂಪ್ರದಾಯವನ್ನು ಮುನ್ನಡೆಸಿರುವರು.

ಇವರುಗಳ ಆಶಯದಂತೆ ಮುಂದೆ ಚನ್ನಮ್ಮಾ ಪುತ್ಥಳಿ ನಿಪ್ಪಾಣಿ ಹೃದಯಭಾಗದಲ್ಲಿ ವಿರಾಜಮಾನವಾಗಿ ನಿಂತಿದ್ದೂ ನಮಗೆಲ್ಲಾ ಹೆಮ್ಮೆ ಎನಿಸುತ್ತದೆ.ಸಮಾಧಿಮಠದ ಕಾಯ೯ಕ್ರಮಗಳಲ್ಲೂ ಉತ್ಸಾಹದಿಂದ ಪಾಲ್ಗೊಂಡು ಸೇವೆ ಮಾಡಿದ್ದಾರೆ.ನಿಪ್ಪಾಣಿಯ ಮನೆಮನೆಗಳಲ್ಲಿ ಕನ್ನಡದ ದೀಪ ಹಚ್ಚಿ ಕನ್ನಡ ಪದದ ಅಸ್ತಿತ್ವ ಕಾಯ್ದವರಲ್ಲಿ ಇವರು ಒಬ್ಬರು.ಇವರು ಕಟ್ಟಿದ ಕನ್ನಡ ಮಹಿಳಾ ಸಂಘ ನಿಪ್ಪಾಣಿ ಕನ್ನಡದ ಏಳಿಗೆಗೆ ಭದ್ರಬುನಾದಿಯಾಯಿತು.

ಇಂತಹ ಕನ್ನಡದ ಅಪರೂಪ ಹೋರಾಟಗಾತಿ೯ಯಾಗಿ ಕನ್ನಡನೆಲದಿಂದ ಬಂದು ನಿಪ್ಪಾಣಿಯ ಕನ್ನಡ ನೆಲದಲ್ಲಿ ಕನ್ನಡದ ಡಿಂಡಿಮ ಬಾರಿಸಿ ಸವ೯ರಿಗೂ ಮಾದರಿಯಾಗಿ ಸರಳತೆಯೊಂದಿಗೆ ಬಾಳಯಾತ್ರೆಯನ್ನು ಸಾಗಿಸಿ ೮೬ ರ ಇಳಿವಯಸ್ಸಿನಲ್ಲಿ ೨೬ ನವೆಂಬರ ೨೦೧೧ ರಲ್ಲಿ ತನ್ನ ಬದುಕಿಗೆ ಅಂತಿಮ ವಿರಾಮ ನೀಡಿ ಲಿಂಗೈಕ್ಯರಾದರು.

ವಿಶೇಷವೆಂದರೆ ಕನ್ನಡದ ಶರಣ ಕಾಯಕ ಮರಣದಲ್ಲಿ ನೋಡು ಎಂಬಂತೆ ಕನ್ನಡದ ಜೀವಿ ಕನ್ನಡ ತಿಂಗಳಲ್ಲಿ ಕೈಲಾಸ ಸೇರಿದ ಅಪರೂಪ ಸನ್ನಿವೇಶ.

ಇಂತಹ ದಿಟ್ಟ ಮಹಿಳಾ ಮಣಿಗಳು ನಿಪ್ಪಾಣಿ ಪರಿಸರದಲ್ಲಿ ಆಗಿಹೋಗಿದ್ದಾರೆಂದರೆ ಅದೇ ನಮಗೆ ಹೆಮ್ಮೆ.ಮಹಿಳೆಯರಾಗಿ ಧೈಯ೯ದಿಂದ ಹೋರಾಡಿ ಕನ್ನಡ ಕಟ್ಟಿದ್ದಾರೆ.ಕನ್ನಡ ಎಂದವರ ಅಭಿಮಾನಿ ಆಗಿದ್ದಾರೆ. ಇಂತಹ ಕನ್ನಡದ ನಾರಿಯರಿಂದಲೇ ಇಂದು ನಿಪ್ಪಾಣಿ ಕನ್ನಡಮಯವಾಗಿದೆ.

ಇಂದು ನಿಪ್ಪಾಣಿ ಕನ್ನಡದ ಭದ್ರಕೋಟೆಯಾಗಿದೆ ಎಂದರೆ ಅದಕ್ಕೆ ಇವರು ಕಾರಣರು.ಇವರ ಪಾದಗಳಿಗೆ ನತಮಸ್ತಕನಾಗಿ ವಂದಿಸಿ ಭಕ್ತಿಯ ಪ್ರಣಾಮಗಳನ್ನು ಸಲ್ಲಿಸುವೆ.ಕನ್ನಡ ರಾಜ್ಯೋತ್ಸವ ಈ ಸಂದಭ೯ದಲ್ಲಿ ಅವರನ್ನು ಭಕ್ತಿಯಿಂದ ಸ್ಮರಿಸೋಣ

ಮಾಹಿತಿ

  • ಶ್ರೀ ಅನಿಲ್ ನೇಷ್ಠಿ
  • ಶ್ರೀ ಚಿದಾನಂದ ಸದಲಗೆ
  • ಶ್ರೀ ಶಿವಾನಂದ ಪುರಾಣಿಕಮಠ
  • ಶ್ರೀ ಮಾರುತಿ ಕೊಣ್ಣುರಿ

ಸಹಯೋಗ

  • ಕನ್ನಡ ಸಾಹಿತ್ಯ ಪರಿಷತ್ತು*
  • ಶರಣ ಸಾಹಿತ್ಯ ಪರಿಷತ್ತು*
  • ಗಡಿನಾಡು ಕನ್ನಡ ಬಳಗ* *ನಿಪ್ಪಾಣಿ*
- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group