spot_img
spot_img

ಕನ್ನಡ ಕಾಯುವ ಶರಣ ಚಿಂಚಣಿ ಪೂಜ್ಯ ಅಲ್ಲಮಪ್ರಭು ಮಹಾಸ್ವಾಮಿಜಿ

Must Read

- Advertisement -

೧೨ ನೇ ಶತಮಾನದ ಸರಳ ,ಸಮಾನ ಮತ್ತು ಮಾನವೀಯತೆಯನ್ನು ಸಾರುವ ವಚನಸಾಹಿತ್ಯ ಕ್ರಾಂತಿಯ ಪರಿಣಾಮವಾಗಿ ಸಮಾಜದಲ್ಲಿ ಒಂದು ಹೊಸ ಸಂಚಲನವೇ ಉಂಟಾಯಿತು.ಆ ಸಂಚಲನಕ್ಕೆ ಕಾರಣರು ಬಸವಾದಿ ಶಿವಶರಣರು.ಸಮಸ್ತ ಸಮಾಜವು ಅವನತಿಯ ಹಾದಿ ಹಿಡಿದಾಗ ಶರಣರು ಸಮಾಜದಲ್ಲಿ ಸಮಾನತೆಯನ್ನು ತರುವುದಕ್ಕಾಗಿ ಪ್ರಯತ್ನಿಸಿದ ಫಲವಾಗಿ ಕನ್ನಡದಲ್ಲಿ ವಚನಸಾಹಿತ್ಯ ಜನ್ಯತಾಳಿತು ಇದು ಕನ್ನಡದ ಬೆಳವಣಿಗೆಗೆ ನಾಂದಿ ಹಾಡಿತು.

ಹಲವಾರು ಶರಣ ಪುಂಗವರು ಕನ್ನಡ ನಾಡುನುಡಿಗಾಗಿ ತುಂಬಾ ಪರಿಶ್ರಮದಿಂದ ಹಗಲಿರುಳು ದುಡಿದಿದ್ದಾರೆ ಅಂತಹವರಲ್ಲಿ ಗಡಿ ಕಾಯುವ ಶರಣ ಚಿಂಚಣಿಯ ಶ್ರೀ ಮ.ನಿ.ಪ್ರ.ಸ್ವ ಅಲ್ಲಮಪ್ರಭು ಸ್ವಾಮಿಜಿ.ಉದಾರಮನನಸ್ಸಿನ ಕನ್ನಡದ ಕಾಯಕಯೋಗಿ.ಬಸವತತ್ವ ಪರಿಪಾಲಕ ಅಪರೂಪದ ಜಂಗಮ.

ಗಡಿಭಾಗ ಎಂದಾಕ್ಷಣ ನೆನಪಿಗೆ ಬರುವುದು ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠ. ಮಠಮಾನ್ಯಗಳು ಮಹಾಸ್ವಾಮಿಗಳು ಸಾರಥ್ಯದಲ್ಲಿ ಕನ್ನಡ ಡಿಂಡಿಮ ಮೊಳಗಿಸುತಿವೆ. ಕನ್ನಡ ಕಾಯಕದಿಂದಲೇ ಚಿಂಚಣಿ ಮಠ ನಾಡಿಗೆ ಪರಿಚಿತವಾಗಿದೆ. ಇದಕ್ಕೆ ಕಾರಣರು ಅಲ್ಲಮಪ್ರಭು ಮಠದ ಇಂದಿನ ಪೀಠಾಧೀಶರು. ಎರಡುವರೆ ದಶಕಗಳ ಕಾಲ ಗಡಿಯಲ್ಲಿ ನುಡಿ ಜಾಗೃತಿಯನ್ನು ಮೂಡಿಸುತಿದ್ದಾರೆ. ತಮ್ಮ ಸಕಲ ಬದುಕನ್ನೇ ನಾಡುನುಡಿಗಾಗಿ ಮೀಸಲಿಟ್ಟಿದ್ದಾರೆ.

- Advertisement -

ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಹಿರೇಮಠದ ದಂಪತಿಗಳಾದ ಗುರುಲಿಂಗಯ್ಯ ಮತ್ತು ಬಸಮ್ಮ ಅವರ ಪುಣ್ಯಗಭ೯ದಲ್ಲಿ ಅಲ್ಲಮಪ್ರಭು ಸ್ವಾಮಿಗಳು ೨೨ ಜೂನ್ ೧೯೬೨ ರಂದು ಜನ್ಮತಾಳಿದರು.

ಅವರ ಪೂವಾ೯ಶ್ರಮದ ಹೆಸರು ಶಂಕರಯ್ಯಾ.ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಮನೆತನದ ವೈದಿಕ ಕಾಯ೯ಗಳಿಗೆ ನೆರವಾಗಲು ಗದುಗಿನ ತೋಂಟದಾರ್ಯ ಮಠದ ವೈದಿಕ ಶಾಲೆಗೆ ಸೇರಿದರು.

ಗದುಗಿನ ಪೂಜ್ಯರ ಗರಡಿಯಲ್ಲಿ ಅಧ್ಯಯನ ಮಾಡುತಿದ್ದ ಇವರ ಚತುರತೆ,ಆಧ್ಯಾತ್ಮ ದೃಷ್ಟಿಕೋನ,ನಾಡುನುಡಿ ಅಭಿಮಾನ ಕಂಡ ಜಗದ್ಗುರುಗಳು “ನೀನು ಸನ್ಯಾಸಿ ಆಗಬೇಕು ಸಮಾಜದ ಸಂಪತ್ತು ನೀನಾಗಬೇಕು” ಎಂದು ಶಂಕ್ರಯ್ಯನವರಿಗೆ ಅಪ್ಪಣೆ ಮಾಡಿದರಂತೆ.

- Advertisement -

ಜಗದ್ಗುರುಗಳ ಮಾತಿನಂತೆ ಅವರ ಕರ್ತೃತ್ವ ಶಕ್ತಿಗೆ ಮಾರುಹೋಗಿ ಜಂಗಮವಟುವಾಗಿ ಸಮೀಪದ ತೋಂಟದಾರ್ಯ ಶಾಖಾ ಮಠ ಶಿರೋಳ ಮಠದ ಅಧಿಪತಿಗಳಾಗಿ ನೇಮಿಸಿ ಪಟ್ಟವ ನೀಡಿ ಗುರುಬಸವ ಸ್ವಾಮಿಗಳು ಎಂದು ಅಭಿದಾನ ನೀಡಿದರು.

ಶ್ರೀಮಠದ ಪೀಠಾಧೀಶರಾಗಿ ಮಠವನ್ನು ಅಭಿವೃದ್ಧಿ ಪಥದತ್ತ ಒಯ್ದು ಶಿಕ್ಷಣ ಸಂಸ್ಥೆಯನ್ನು ತೆರೆದರು.ಜಗದ್ಗುರುಗಳ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜದ ಮನಗೆದ್ದು ಶ್ರೀಮಠದ ಜಾತ್ರೆಯನ್ನು ರೊಟ್ಟಿ ಜಾತ್ರೆಯನ್ನಾಗಿಸಿದ್ದಾರೆ.

ಮಠದ ಏಳಿಗೆಯ ಮಾಡುತ್ತಿರುವ ಸಂದಭ೯ದಲ್ಲಿ ಗದುಗಿನ ಜಗದ್ಗುರುಗಳ ಆಣತಿಯಂತೆ ನಿಡಸೋಸಿ ಮತ್ತು ನಾಗನೂರ ಶ್ರೀಗಳು ಶಿರೋಳ ಶ್ರೀಗಳನ್ನು ಚಿಂಚಣಿ ಮಠದ ಪೀಠಾಧಿಪತಿಯನ್ನಾಗಿ ನೇಮಿಸಿದರು.

ಶಿರೋಳ ಜನತೆ ಶ್ರೀಗಳನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಮಧ್ಯಸ್ಥರಾಗಿ ಜಗದ್ಗುರುಗಳು ಎರಡು ಮಠದ ಪೀಠಾಧಿಪತಿಯನ್ನಾಗಿ ಪೂಜ್ಯರೇ ಮುಂದುವರೆಯುವರೆಂದು ಘೋಷಿಸಿದರು.

ಜಗದ್ಗುರುಗಳ ಅಪ್ಪಣೆಯಂತೆ ೧೯೯೪ ಜುಲೈ ೧ ರಂದು ಚಿಂಚಣಿಯ ಸಿದ್ದಸಂಸ್ಥಾನಮಠದ ಪೀಠಾಧಿಕಾರವನ್ನು ವಹಿಸಿಕೊಂಡು ಅಲ್ಲಮಪ್ರಭು ಮಹಾಸ್ವಾಮಿಜಿ ಎಂಬ ಅಭಿದಾನದೊಂದಿಗೆ ಬಸವ ಕಾಯಕ ಪ್ರಾರಂಭಿಸಿದರು.

ಶಿರೋಳ ಮಠದಿಂದ ಚಿಂಚಣಿ ಮಠಕ್ಕೆ ಬರುವಾಗ ಗದುಗಿನ ಜಗದ್ಗುರುಗಳು “ಚಿಂಚಣಿ ಮಠಕ್ಕೆ ಹೋರಟಿದ್ದೀರಿ ,ಗಡಿಯಲ್ಲಿ ಕನ್ನಡದ ಸ್ಥಿತಿ ಶೋಚನೀಯವಾಗಿದೆ ಕನ್ನಡ ಬೆಳಿಬೇಕು ಬೆಳೆಸಬೇಕು ಕನ್ನಡದ ಕಾಯ೯ಕ್ರಮ ಹೆಚ್ಚಾಗಿ ಮಾಡಬೇಕು ಕನ್ನಡದ ನುಡಿಯನ್ನು ಗಡಿಯಲ್ಲಿ ಮಾಧ೯ನಿಗೊಳಿಸಬೇಕು” ಎಂದು ಅಲ್ಲಮಪ್ರಭು ಸ್ವಾಮಿಜಿಗಳಿಗೆ ಕನ್ನಡದ ದೀಕ್ಷೆ ನೀಡಿದರು.

ಗದುಗಿನ ಜಗದ್ಗುರುಗಳ ಗರಡಿಯಲ್ಲಿ ಅವರ ಹೆಜ್ಜೆಗೆ ಹೆಜ್ಜೆಯಾಗಿ ನಡೆದ ಪೂಜ್ಯರು ಅವರ ಆಶಯದಂತೆ ಕನ್ನಡದ ಸ್ವಾಮಿಗಳಾಗಿ ಜನಮನ ಗೆದ್ದಿದ್ದಾರೆ.

ಕನ್ನಡನಾಡಿನ ಹಲವಾರು ಸಾಹಿತಿಗಳ ಒಡನಾಡಿ ಯಾಗಿರುವ ಚಿಂಚಣಿ ಪೂಜ್ಯರೂ ೧೯೯೯ ರಿಂದ ಇಲ್ಲಿಯವರೆಗೆ ನಾಡಿನ ಖ್ಯಾತ ಸಾಹಿತಿಗಳಾದ ಚಿದಾನಂದ ಮೂರ್ತಿ, ಎಂ.ಎಂ.ಕಲಬುಗಿ೯, ಚಂಪಾ, ಪಾಪು, ಕಣವಿ ರಂತಹವರನ್ನು ಗಡಿಗೆ ಕರೆಯಿಸಿ ಕನ್ನಡದ ಡಿಂಡಿಮ ಬಾರಿಸಿದ್ದಾರೆ.

ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ ಕನ್ನಡ ಜಾಗೃತಿ ಪುಸ್ತಕ ಮಾಲೆ ತೆರೆದು ಇಲ್ಲಿವರೆಗೆ ೪೩ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ಗಡಿಕನ್ನಡಿಗರ ಬಳಗ ಸ್ಥಾಪಿಸಿ ರಾಜ್ಯೋತ್ಸವ ಆಚರಿಸುತಿದ್ದಾರೆ. ಬಾಳಿನಬುತ್ತಿ ಕಲಿಕಾ ಕೇಂದ್ರ ತೆರೆದು ಮಕ್ಕಳಲ್ಲಿ ಕನ್ನಡ ಪ್ರೀತಿ ತುಂಬುವುದರೊಂದಿಗೆ ಬಡಮಕ್ಕಳಿಗೆ ಆಶ್ರಯ ನೀಡಿದ್ದಾರೆ. ನಿಪ್ಪಾಣಿ ಕನ್ನಡ ಬೆಳವಣಿಗೆಯಲ್ಲಿ ಪೂಜ್ಯರ ಪಾತ್ರ ಅವೀಸ್ಮರಣಿಯವಾಗಿದೆ.

ಸಾಹಿತಿ ಚಿದಾನಂದಮೂತಿ೯ ಅವರಂಥವರನ್ನು ನಿಪ್ಪಾಣಿಗೆ ಕರೆಸಿ ನಿಪ್ಪಾಣಿ ಕನ್ನಡಿಕರಣಗೊಳಿಸಿದ್ದಾರೆ. ಮರಾಠಿಮಯವಾಗಿದ್ದ ನಿಪ್ಪಾಣಿ ಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ನಡೆಸಿ ನಾಡುನುಡಿ ಪ್ರೇಮ ಮೆರದಿರುವರು. ಗಡಿಕನ್ನಡಿಗರ ಬಳಗ ಕಟ್ಟಿಕೊಂಡು ಕನ್ನಡದ ಸೇವೆ ಮಾಡುತ್ತಿದ್ದಾರೆ.

ಗಡಿಭಾಗ ಖಡಕಲಾಟ ಗ್ರಾಮದಲ್ಲಿ ಏಕೀಕರಣನಂತರ ಮೊದಲ ಕನ್ನಡ ಧ್ವಜಾರೋಹಣ ನೆರವೆರಿಸಿ ನಾಡಹಬ್ಬ ಆಚರಿಸಿ ಖಡಕಲಾಟ ಕನ್ನಡದ ಕೋಟೆಯಾಗಲು ಅವರು ಕಾರಣರಾಗಿದ್ದಾರೆ.

ರಾಜ್ಯೋತ್ಸವ ಆಚರಣೆ,ಗಡಿನಾಡ ಉತ್ಸವಗಳು,ಕನ್ನಡ ದಿನಪತ್ರಿಕೆ ಪ್ರಚಾರ,ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಕನ್ನಡದ ಸಂತರೆನಿಸಿಕೊಂಡಿದ್ದಾರೆ.

ಕಾರದಗಾದಂತಹ ಗಡಿಗ್ರಾಮದಲ್ಲಿ ಕನ್ನಡ ಸಮ್ಮೇಳನ ನಡೆಸಿ ಇತಿಹಾಸ ನಿಮಿ೯ಸಿದ್ದಾರೆ.ಮಾಣಕಾಪೂರದಂತಹ‌ ಗಡಿ ಕನ್ನಡ ಶಾಲೆಗಳ ಬೆಳವಣಿಗೆ ಮೇಲೆ ಹದ್ದಿನ ಕಣ್ಣಿಟ್ಟು ಪೋಷಿಸುತಿದ್ದಾರೆ ಕನ್ನಡ ಶಾಲೆಗಳ ಸಬಲೀಕರಣಕ್ಕೆ ದುಡಿಯುತ್ತಿದ್ದಾರೆ.

ಕನ್ನಡದ ವಿಷಯ ಬಂದಾಗ ಯಾವುದಕ್ಕೂ ರಾಜಿ ಆಗದ ಗದುಗಿನ ಜಗದ್ಗುರುಗಳ ಪ್ರತಿರೂಪವಾಗಿ ಅವರಂತೆ ನಡೆ-ನುಡಿ ಆಚಾರ ವಿಚಾರವುಳ್ಳ ಶರಣರಾಗಿದ್ದಾರೆ.

ಗದುಗಿನ ಪೂಜ್ಯರು ಕನ್ನಡದ ಜಗದ್ಗುರುಗಳಾದರೆ ಚಿಂಚಣಿ ಪೂಜ್ಯರು ಗಡಿ ಕನ್ನಡ ಸಂತ ಎನಿಸಿಕೊಂಡಿದ್ದಾರೆ.ಮಾಹಿತಿ ನಾಣ್ಯ ಸಂಗ್ರಹ,ಪುಸ್ತಕ ಸಂಗ್ರಹ,ಸಸ್ಯ ಸಂಗ್ರಹ,ಸಾಹಿತಿಗಳ ಹಸ್ತಾಕ್ಷರ ಸಂಗ್ರಹ,ಕಲಾಕೃತಿಗಳ ತಯಾರಿ ಮುಂತಾದ ಹವ್ಯಾಸಗಳನ್ನು ಹೊಂದಿರುವ ಪೂಜ್ಯರಿಗೆ ನಾಡೋಜ ಪ್ರತಿಷ್ಠಾನ ಪ್ರಶಸ್ತಿ,ಕನ್ನಡ ಶ್ರೀ ಪ್ರಶಸ್ತಿ,ಗಡಿನಾಡು ಚೇತನ ಪ್ರಶಸ್ತಿ ,ಸಾಧಕ ಕಿರಣ್ ಪ್ರಶಸ್ತಿ,ಉತ್ತಮ ಪ್ರಕಾಶಕ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಮುಡಿಗೇರಿವೆ ಇಂತಹ ಸಾಧನೆಯ ಶರಣರಿಗೆ ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಆದಷ್ಟು ಬೇಗ ದೊರೆಯಲಿ ಕನಾ೯ಟಕ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಗಡಿ ಕನ್ನಡಿಗರ ಪರವಾಗಿ ಆಗ್ರಹಿಸುತ್ತೇನೆ.

ಸವ೯ಜನಾಂಗದ ಪ್ರೀತಿಯ ಪೂಜ್ಯರಾದ ಇವರದು ಸದಾವ ಕನ್ನಡದ ಚಿಂತೆ.ನಮ್ಮಂಥ ಯುವ ಲೇಖಕರಿಗೆ ಪ್ರೇರಣಾಸ್ಥಾನ.ನಿಪ್ಪಾಣಿಯಂತಹ ಗಡಿನಾಡ ಗಡಿಗೆಯಲಿ ಕನ್ನಡದ ಅಡುಗೆ ಮಾಡಿ ಪ್ರೀತಿಯಿಂದ ಊಣಬಡಿಸುತ್ತಿರುವ ಪೂಜ್ಯರು ನಿಜಕ್ಕೂ ಕನ್ನಡದ ಶಕ್ತಿಯಾಗಿದ್ದಾರೆ.

ಆಡಂಬರವಿಲ್ಲದ ಸರಳ ಜೀವಿಯಾಗಿ ನಿಪ್ಪಾಣಿಯ ಪ್ರತಿ ಕನ್ನಡದ ಕಾಯಕದಲ್ಲಿ ಭಾಗಿಯಾಗುತ್ತಾ ಕನ್ನಡ ಸಾಹಿತ್ಯ ಪರಿಷತ್ತು,ಶರಣ ಸಾಹಿತ್ಯ ಪರಿಷತ್ತು,ಗಡಿನಾಡು ಕನ್ನಡ ಬಳಗ ಎಂಬ ಕನ್ನಡದ ಸಸಿಗಳಿಗೆ ನಿರೇರೆದು ಪೋಷಿಸುತ್ತಿದ್ದಾರೆ.

ಜೈನ ಮುನಿಗಳೊಂದಿಗೆ ವಿದ್ವಾಂಸರೊಂದಿಗೆ ಸಂಶೋಧಕರೊಂದಿಗೆ, ಸಾಹಿತಿಗಳೊಂದಿಗೆ ,ಪತ್ರಕತ೯ರೊಂದಿಗೆ, ರೈತರೊಂದಿಗೆ ಉತ್ತಮ ಒಡನಾಟ ಹೊಂದಿ ಕನ್ನಡದ ನಾಡುನುಡಿಗಾಗಿ ದುಡಿಯುತಿದ್ದಾರೆ. ಪ್ರತಿವಷ೯ ನಿಪ್ಪಾಣಿ ಕನ್ನಡ ರಾಜ್ಯೋತ್ಸವದಲ್ಲಿ ತಪ್ಪದೇ ಪಾಲ್ಗೊಂಡು ಮರಾಠಿಗರ ಮನಗೆದ್ದ ಕನ್ನಡದ ಸ್ವಾಮಿಜಿ ಇವರು.

ಧಮ೯ದ ಕಾಯಕವ ಮಾಡುತ್ತಾ ಬಸವತತ್ವ ಉಳಿಸಿ ಬೆಳೆಸುತ್ತಾ ಶ್ರೀಮಠದ ಏಳಿಗೆ ಮಾಡಿ ಕನ್ನಡದ ಜೋಳಿಗೆ ಹಿಡಿದು ಗಡಿ ಕನ್ನಡಿಗರಿಗೆ ಸಿಹಿ ಹೋಳಿಗೆ ತಿನ್ನಿಸುತ್ತಿರುವ ಆಧ್ಯಾತ್ಮದ ಮಂದಾರ ,ಗಡಿ ಕಾಯುವ ಶರಣ ಅಲ್ಲಮಪ್ರಭು ಸ್ವಾಮಿಜಿಯವರ ಕಾಯಕ ನಿಜಕ್ಕೂ ಶ್ಲಾಘನೀಯ.

ನಿಪ್ಪಾಣಿ ಪರಿಸರದಲ್ಲಿ ಕನ್ನಡ ಬೆಳೆಸಿದ ದಿ ಬಸವಪ್ರಭು ನೇಷ್ಠಿ ಅವರ ಪುಸ್ತಕ ಹೊರತರಲು ಪರಿಶ್ರಮ ಪಡುತ್ತಿರುವ ಪೂಜ್ಯರೂ ನಮ್ಮ ಲೇಖನಿಗೆ ಬಲವಾಗಿ ನಿಂತಿದ್ದಾರೆ.ನಿಪ್ಪಾಣಿ ಪರಿಸರದಲ್ಲಿ ಕನ್ನಡ ಕಟ್ಟಿದ ಹಿರಿಯರ ಸ್ಮರಣೆ ಈ ನನ್ನ ಲೇಖನಗಳಿಗೆ ಅವರೇ ಪ್ರೇರಕರು..

ಸುದೀಘ೯ ಅಧ೯ ಶತಮಾನಗಳ ಕಾಲ ನುಡಿ ಸೇವೆಯಲ್ಲಿ ನಿರತರಾಗಿರುವ ಪೂಜ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಲಿ ಪೂಜ್ಯರಿಗೆ ಕನ್ನಡತಾಯಿ ಉತ್ತಮ ಆರೋಗ್ಯ ದೀರ್ಘ ಆಯಸ್ಸುನೀಡಲಿ ಎಂದು ಪ್ರಾಥ೯ಸುತ್ತೇನೆ.ಪೂಜ್ಯರಿಗೆ ಭಕ್ತಿಯ ಪ್ರಣಾಮಗಳು.

ಇಂದು ನಿಪ್ಪಾಣಿ ಕನ್ನಡಮಯವಾಗಿದೆ ಎಂದರೆ ಅದಕ್ಕೆ ಚಿಂಚಣಿ ಪೂಜ್ಯರೂ ಕೂಡಾ ಕಾರಣರು.ಕನ್ನಡ ರಾಜ್ಯೋತ್ಸವ ಈ ಸಂದರ್ಭದಲ್ಲಿ ಅವರನ್ನು ಭಕ್ತಿಯಿಂದ ಸ್ಮರಿಸೋಣ

ಮಾಹಿತಿ

ಶ್ರೀ ಅನಿಲ ನೇಷ್ಠಿ
ಡಾ.ಎಸ್.ಆರ್ .ಪಾಟೀಲ್
ಶ್ರೀ ರವೀಂದ್ರ ಶೆಟ್ಟ
ಶ್ರೀ ಮಾರುತಿ ಕೊಣ್ಣುರಿ

ಲೇಖಕ

ಪ್ರೋ ಮಿಥುನ ಅಂಕಲಿ
ಖಡಕಲಾಟ

ಸಹಯೋಗ

ಕನ್ನಡ ಸಾಹಿತ್ಯ ಪರಿಷತ್ತು
ಶರಣ ಸಾಹಿತ್ಯ ಪರಿಷತ್ತು

ಗಡಿನಾಡು ಕನ್ನಡ ಬಳಗ
ನಿಪ್ಪಾಣಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group