spot_img
spot_img

ಕನ್ನಡ ಲಿಪಿಗಳ ರಕ್ಷಕ ಕಾಯಕಯೋಗಿ ಲಿಂ ಚಂದ್ರಶೇಖರಯ್ಯಾ ಅಪ್ಪಯ್ಯ ನನದಿಮಠ

Must Read

- Advertisement -

ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಧಾಮಿ೯ಕ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದಕ್ಕೆ ಮಠಮಾನ್ಯಗಳೇ ದಿಕ್ಸೂಚಿ.ನಿಪ್ಪಾಣಿಯ ಧಾಮಿ೯ಕ ಪರಂಪರೆಯಲ್ಲಿ ನನದಿಮಠಕ್ಕೆ ವಿಶೇಷ ಸ್ಥಾನವಿದೆ.

ಅಂತಹ ನನದಿಮಠದ ಕೀತಿ೯ ಬೆಳಗಿ ಕನ್ನಡ ಸಾಹಿತ್ಯಕ್ಕೆ ಮೆರುಗು ಕೊಟ್ಟವರು ಲಿಂ ಚಂದ್ರಶೇಖರಯ್ಯಾ ನನದಿಮಠರು.ಕನ್ನಡ ಮೊಡಿ ಲಿಪಿಗಳೊಂದಿಗೆ ಕನ್ನಡವನ್ನು ರಕ್ಷಿಸಿದ ಪುಣ್ಯಾತ್ಮರು.

ಚಿಕ್ಕೋಡಿ ತಾಲೂಕಿನಲ್ಲಿ ನನದಿ ಎಂಬ ಗ್ರಾಮವಿದೆ.ಆ ಗ್ರಾಮದಲ್ಲಿ ಸುಸಂಸ್ಕೃತ ಜಂಗಮ ಪರಂಪರೆಯ ಹಿರೇಮಠಸ್ಥ ಮನೆತನವಿದೆ. ಆಧ್ಯಾತ್ಮ ಕ್ಷೇತ್ರಕ್ಕೆ ಅದರ ಕೊಡುಗೆ ಅಪಾರವಾಗಿದೆ.ಉಜ್ಯೈನಿ ಪೀಠ ಪರಂಪರೆಯ ಹಿರೆಮಠ.

- Advertisement -

ಈ ಮನೆತನದ ಮೂಲ ಪುರುಷ ಸಿದ್ದಲಿಂಗಪ್ಪಾ .೪೦೦ ವಷ೯ಗಳ ಹಿಂದೆ ಬಾಳಿ ಬದುಕಿದ ಜಂಗಮ.ಈ ನನದಿಯ ಹಿರೇಮಠದ ಪರಮ ಭಕ್ತ ನಿಪ್ಪಾಣಿಯ ಅಂದಿನ ಸರಕಾರ ಸಿದ್ದೋಜಿರಾವ ನಿಂಬಾಳ್ಕರ್.ಇವರು ಲಿಂಗಾಯತ ಪರಂಪರೆಯ ವಾರಸುದಾರರಾಗಿರುವುದರಿಂದ ಪ್ರತಿದಿನ ಸರಕಾರರು ಕುದುರೆ ಮೂಲಕ ನನದಿಗೆ ತೆರಳಿ ಗುರುವಿನ ಪಾದೋದಕ ಪಡೆದು ಬರುತ್ತಿದ್ದರು.

ಹೀಗೆಯೇ ನಡೆದ ಪರಂಪರೆಯೂ ಒಂದು ಹಂತಕ್ಕೆ ಬಂದು ಸರಕಾರರ ಅಪೇಕ್ಷೆಯಂತೆ ೫ ನೇ ತಲೆಮಾರಿನ ಕೊಟ್ರಯ್ಯಾ ಸ್ವಾಮಿಗಳು ನಿಪ್ಪಾಣಿಗೆ ಆಗಮಿಸಿದರು.ಇದು ನನದಿಮಠವಾಗಿ ಪರಿಣಮಿಸಿತು.

ಈ ಮಠಕ್ಕೆ ಸರಕಾರರು ಉಂಬಳಿಯಾಗಿ ೧೫ ಎಕರೆ ಭೂಮಿ ನೀಡಿದ್ದಾರೆ.ಅಂದಿನ ಇಂಗ್ಲೇಂಡ್ ಮಹಾರಾಣಿ ವಿಕ್ಟೋರಿಯಾ ಪರವಾಗಿ ೦೨ ಜನವರಿ ೧೮೬೨ ರಲ್ಲಿ ನೀಡಿದ ಭೂದಾನ ಪ್ರಶಂಸಾ ಪ್ರಮಾಣ ಪತ್ರ ಇಂದಿಗೂ ನೋಡಬಹುದು.ಅಲ್ಲದೇ ಮಹಾರಾಷ್ಟ್ರದ ಸಾಂಗಾವ ಗ್ರಾಮದಲ್ಲಿ ೫೩ ಎಕರೆ ಭೂದಾನ ನೀಡಿ ಧಾಮಿ೯ಕ ಕಾಯಕಕ್ಕೆ ಬಲ ನೀಡಿದ್ದಾರೆ.ಈ ಮಠದಲ್ಲಿ ೫೨ ಹಸ್ತ ಲಿಪಿಗಳು ಕನ್ನಡ ಮೊಡಿ ಭಾಷೆಯಲ್ಲಿವೆ.

- Advertisement -

ಅದರಲ್ಲಿ ಪರಮಾನಂದ ಸುಧೆ ಎಂಬ ಗ್ರಂಥವನ್ನು ಡಾ ಎಂ ಎಂ ಕಲಬುಗಿ೯ ಅಚ್ಚಗನ್ನಡದಲ್ಲಿ ಬರೆದು ತೋಂಟದಾರ್ಯ ಮಠದಿಂದ ಬಿಡುಗಡೆಗೊಳಿಸಿದ್ದಾರೆ.

ಇಂತಹ ನನದಿಮಠ ವಂಶಜರಲ್ಲಿ ಒಬ್ಬರು ಪಟ್ಟದೇವರಾದರೆ ಮತ್ತೊಬ್ಬರು ವಂಶೋದ್ಧಾರಕ ಆಗುವ ಪರಂಪರೆ ಇದೆ.ಇಲ್ಲಿವರೆಗೆ ೧೫ ಪಟ್ಟದ ಸ್ವಾಮಿಗಳನ್ನು ಕೊಟ್ಟ ವಂಶ. ಇಂತಹ ನನದಿಮಠದ ವಾರಸುದಾರರಾಗಿ ಶರಣ ದಂಪತಿಗಳಾದ ಅಪ್ಪಯ್ಯ ಮತ್ತು ದುಂಡವ್ವ ತಾಯಿಯ ಪುಣ್ಯ ಗಭ೯ದಲ್ಲಿ ಚಂದ್ರಶೇಖರಯ್ಯನವರು ೦೧ ಜೂನ್ ೧೮೯೪ ರಲ್ಲಿ ಜನಿಸಿದರು.

ಮನೆತನದ ವೈದಿಕ ಕಾಯ೯ಗಳಿಗೆ ಅನುಗುಣವಾಗಿ ಬಾಲ್ಯದ ೮ ನೇ ವಯಸ್ಸಿನಲ್ಲಿ ಗಡಿನಾಡು ಅಥಣಿಯ ಮಹಾನ್ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮಠದಲ್ಲಿ ಶಿವಯೋಗಿಗಳ ಆಶೀವಾ೯ದದಿಂದ ಸೇವಕನಾಗಿ ವೈದಿಕ ಪಾಠಕಲಿಯುತ್ತ ಧಮ೯ ಪಾರಾಯಣ ಮಾಡಿದರು. ಶ್ರೀಗಳ ಗರಡಿಯಲ್ಲಿದ್ದೂ ಪ್ರೀತಿಯ ಶಿಷ್ಯರಾಗಿ ಬೆಳೆದರು.ಶಿವಯೋಗಿಗಳಿಗೆ ದೈನಂದಿನ ಪ್ರಸಾದ್ ನೀಡುವ ಜವಾಬ್ದಾರಿ ಇವರದಾಗಿತ್ತು.

ಶ್ರೀಗಳ ಅನುಭಾವದೊಂದಿಗೆ ಶರಣರಾಗಿ ಬೆಳೆದು ಗಡಿಯ ನಿಪ್ಪಾಣಿಯ ನನದಿಮಠದ ಒಡೆಯರಾಗಿ ಆಗಮಿಸಿದರು.

ಚಂದ್ರಶೇಖರಯ್ಯನವರು ನಿಪ್ಪಾಣಿಗೆ ಬಂದಾಗ ಎಲ್ಲವೂ ಮರಾಠಿಮಯವಾಗಿತ್ತು ಶರಣರಾಗಿ ಮನೆತನದ ಲಿಪಿಗಳನ್ನು ಸಂರಕ್ಷಿಸಿ ತಾವು ಕೂಡಾ ಕನ್ನಡ ಮೋಡಿ ಲಿಪಿಯಲ್ಲಿ ಬರಹ ಕೊಟ್ಟು ಕನ್ನಡ ಸಾರಸ್ವತ ಪರಂಪರೆಯನ್ನು ಪೋಷಿಸಿದರು.

ನಿಪ್ಪಾಣಿ ಸರಕಾರರ ರಾಜಗುರುಗಳಾಗಿದ್ದರು ಚಂದ್ರಶೇಖರಯ್ಯನವರು. ಈ ಸಂದಭ೯ದಲ್ಲಿ ಲೋಕಸಂಚಾರಾಥ೯ವಾಗಿ ಅಥಣಿ ಶಿವಯೋಗಿಗಳು ನಿಪ್ಪಾಣಿಗೆ ದಯಮಾಡಿಸಿದ್ದರು.ಮುರಘಾ ಮಠದಲ್ಲಿ ವಾಸ್ತವ್ಯ ಹೂಡಿದರೆ ನನದಿಮಠದಲ್ಲಿ ಪ್ರಸಾದ್ ಸೇವಿಸುತಿದ್ದರು. ಆ ಸಂದಭ೯ದಲ್ಲಿ ಪಾದೋದಕ ವಿಭೂತಿ ನೀಡಿ ಆಶೀವ೯ದಿಸಿದ್ದರು ಅದು ಇಂದಿಗೂ ಕಾಣಬಹುದಾಗಿದೆ.

ಆ ಸಮಯದಲ್ಲಿ ಅವರ ಅವರ ಒವ೯ ಪಟ್ಟದ ಸ್ವಾಮಿಗಳಾಗಿದ್ದರು.ಮತ್ತಿಬ್ಬರು ಸಹೋದರಿಗೆ ಸಂತಾನವಿರಲಿಲ್ಲ ಮನೆತನದ ಪರಂಪರೆಯಂತೆ ಗುರುಗಳ ಅಪ್ಪಣೆಯಂತೆ ಜಂಗಮತ್ವಕ್ಕೆ ವಿರಾಮ ನೀಡಿ ಸಂಸಾರಿಕರಾದರು. ಕನ್ನಡ ಹಸ್ತ ಪ್ರತಿಗಳನ್ನು ಬರೆದು ಸಂಪಾದಿಸಿದ್ದಾರೆ.ನಿಪ್ಪಾಣಿ ಪರಿಸರದಲ್ಲಿ ೧೯ ನೇ ಶತಮಾನದ ಆದಿಭಾಗದಲ್ಲಿ ಕನ್ನಡ ಪದ ಉಳಿಸಿದ ಕೀತಿ೯ ಇವರದ್ದಾಗಿದೆ. ಎಂದರೆ ೧೨೦ ವಷ೯ಗಳ ಹಿಂದೆ ನಿಪ್ಪಾಣಿಯಲ್ಲಿ ಕನ್ನಡ ಉಳಿಸಿ ಬೆಳೆಸಿದ್ದಾರೆ.

ತಾಳೆಗರಿಗಳು,ಹಸ್ತಪ್ರತಿಗಳನ್ನು ಇಂದಿಗೂ ಕಾಣಬಹುದು ಕನ್ನಡ ಸಾಹಿತ್ಯದ ಪೋಷಣೆ ಮಾಡಿದ್ದರು.ಅಂದಿನ ಕನ್ನಡ ಮೋಡಿ ಪದ ನೋಡಿ ನಾನು ಬೆರಗಾದೆ ಅಭಿಮಾನ ಎನಿಸಿತು.ನಿಪ್ಪಾಣಿಯ ಶಿರಗುಪ್ಪಿ ಹತ್ತಿರದ ಇನಾಮಿ ೧೫ ಎಕರೆ ಭೂಮಿಯಲ್ಲಿ ೧೦ ಎಕರೆ ಭೂಮಿ ನಿಪ್ಪಾಣಿ ತಲಾವದಲ್ಲಿ ಮುಳುಗಡೆಯಾಗಿದೆ.

ಅವರ ವಂಶಸ್ಥರ ಯಾದಿಯೂ ಇಂದಿಗೂ ಉಪಲಬ್ದವಿದೆ ಎಂದು ಹಿರಿಯರ ಕನ್ನಡ ಸಾಹಿತ್ಯ ಪ್ರೇಮವನ್ನು ಬಿಚ್ಚಿಡುತ್ತಾರೆ ಅವರು ೧೦ ನೇ ತಲೆಮಾರಿನ ವಂಶಜ ಮಕ್ಕಳಾದ ಶ್ರೀ ಅಪ್ಪಾಸಾಹೇಬ ಗುರುಬಸಯ್ಯಾ ನನದಿಮಠ ಅವರು.

ಅಂದಿನ ಕಾಲದ ಹಸ್ತ ಲಿಪಿಗಳ ಸಂಶೋಧನೆ ನಡೆದು ಆ ಕಾಲದಲ್ಲಿ ಇವರು ಪ್ರಭುಲಿಂಗಲೀಲೆ,ಪಂಚತಂತ್ರ ,ತಾಡೋಲೆ ಜ್ಯೋತಿಷ್ಯ ,ಶಿವಲೀಲಾಮೃತ,ನಾಗವಮ೯ನ ಛಂದಸ್ಸು ಮುಂತಾದ ೫೨ ಹಸ್ತ ಲಿಪಿಗಳನ್ನು ಇಂದಿಗೂ ಕಾಣಬಹುದಾಗಿದೆ.

ಅಭಿಮಾನದ ವಿಷಯವೆಂದರೆ ೨೦೦ ವಷ೯ಗಳ ಹಿಂದೆ ನಿಪ್ಪಾಣಿ ಯಲ್ಲಿ ಕನ್ನಡ ಇತ್ತು ನನದಿಮಠ ಪರಂಪರೆ ನಿಪ್ಪಾಣಿ ಕನ್ನಡ ಪದ ರಕ್ಷಿಸಿದೆ ಎಂದರೆ ತಪ್ಪಾಗಲಾರದು ಎಲ್ಲದಕ್ಕೂ ಸೂಕ್ತ ದಾಖಲೆಗಳಿವೆ. ಧಾರವಾಡದ ಮುರಾಘಮಠದ ಮೃತ್ಯುಂಜಯ ಅಪ್ಪನವರು, ಶ್ರೀ ಶೈಲ ಪಟ್ಟದೇವರು,ಚಿತ್ರದುಗ೯ದ ಜಯದೇವ ಜಗದ್ಗುರುಗಳ ಒಡನಾಡಿಯಾಗಿ ಚಂದ್ರಶೇಖರಯ್ಯನವರು ಅಂದಿನ ಕಾಲದಲ್ಲಿ ಕನ್ನಡ ಪದಗಳ ರಕ್ಷಣೆ ಮಾಡಿ ನಾಡುನುಡಿ ಅಭಿಮಾನ ಮೆರೆದಿದ್ದಾರೆ.

ಕನ್ನಡದಲ್ಲಿ ಪ್ರವಚನ ಮಾಡುತ್ತಿದ್ದರು. ಕನ್ನಡ ಹಸ್ತ ಪ್ರತಿ ಗ್ರಂಥಗಳ ರಕ್ಷಣೆ, ರಚನೆ ಮಾಡಿದ್ದು ವಿಶೇಷ. ಉತ್ತಮ ವಾಕ್ ಚಾತುರ್ಯಇತ್ತು.

ಇಂತಹ ಕನ್ನಡ ಲಿಪಿಗಳ ರಕ್ಷಕರಾಗಿ ನಿಪ್ಪಾಣಿ ಸರಕಾರರ ಧಮ೯ಗುರುಗಳಾಗಿ ಸಮಾಜದ ಜಂಗಮರಾಗಿ ಕನ್ನಡ ನಾಡು ನುಡಿಯನ್ನ ನೂರಾರು ವಷ೯ಗಳ ಹಿಂದೆ ಬೆಳಸಿ ಧಮ೯ದ ಕಾಯಕವ ಮಾಡುತ್ತಾ ೬೪ ರ ವಯಸ್ಸಿನಲ್ಲಿ ಜನವರಿ ೧೯೫೮ ರಲ್ಲಿ ನಿಪ್ಪಾಣಿ ನೆಲದಲ್ಲಿಯೇ ಲಿಂಗದೊಳಗಾದರು. ಇಂದು ನಿಪ್ಪಾಣಿ ಕನ್ನಡವಾಗಿದೆ ಎಂದರೆ ಅದಕ್ಕೆ ಇವರು ಕೂಡಾ ಕಾರಣರು.ಇವರಿಗೆ ನನ್ನ ಭಕ್ತಿಯ ಪ್ರಣಾಮಗಳು ಕನ್ನಡ ರಾಜ್ಯೋತ್ಸವ ಈ ಸಂದರ್ಭದಲ್ಲಿ ಅವರನ್ನು ಭಕ್ತಿಯಿಂದ ಸ್ಮರಿಸೋಣ

ಮಾಹಿತಿ

  • ಶ್ರೀ ಅಪ್ಪಾಸಾಹೇಬ ನನದಿಮಠ
  • ಶ್ರೀ ಶಿವಾನಂದ ಪುರಾಣಿಕಮಠ
  • ಶ್ರೀ ಮಾರುತಿ ಕೊಣ್ಣುರಿ

ಲೇಖನ

  • ಪ್ರೋ ಮಿಥುನ ಅಂಕಲಿ

ಸಹಯೋಗ

  • ಕನ್ನಡ ಸಾಹಿತ್ಯ ಪರಿಷತ್ತು
  • ಶರಣ ಸಾಹಿತ್ಯ ಪರಿಷತ್ತು
  • ಗಡಿನಾಡು ಕನ್ನಡ ಬಳಗ ನಿಪ್ಪಾಣಿ
- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group