spot_img
spot_img

ಕವನ: ಓ ರೈತಾ…ಸಿಡಿದೇಳು..ಪುಟಿದೇಳು

Must Read

- Advertisement -

ಓ ರೈತಾ…ಸಿಡಿದೇಳು..ಪುಟಿದೇಳು

ಓ ರೈತಾ..ಕುಣಿಯ ತೋಡುವ ಆಸೆ ಬಿಡು,
ನಿನ್ನ ಶೋಷಣೆಯ ಪ್ರತಿಭಟಿಸಿ ಸಿಡಿದೇಳು,ಪುಟಿದೇಳು,
ಜಗದ ಜನಕೆಲ್ಲಾ ಅನ್ನದಾತ,
ನಿನ್ನ ಕುಣಿಯ ನೀನೇ ತೋಡುವ
ಕ್ರೂರ ದುರ್ಗತಿ ನಿನಗೇಕೆ ಬಂತು ?
ಜನಿಸಿದಂದಿನಿಂದ ಕೊನೆಯುಸಿರುವವರೆಗೂ
ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ???

ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ
ಗಿರಕಿ ಹೊಡೆಯುತ್ಅ ಕುಣಿಯುತ್ತಿರುವಾಗ,
ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ,
ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ,
ಬಸವನ ಕಾಯಕ ತತ್ವ ನಿನ್ನ ಉಸಿರು ,
ನಿನಗೇಕೆ ಸ್ವ ಸಮಾಧಿಯಾಗುವ ದುರ್ಗತಿ ???

ನೀ ಬೆಳೆದ ಬೆಳೆಯ ಮಾರಲ್ಹೊರಟರೆ,
ನಿನಗೆ ಸಿಗದು ಬೆಳೆಗೆ ತಕ್ಕ ಬೆಲೆ,
ರಾಗಿ,ಭತ್ತ ಬಿಟ್ಟೆ ಕಬ್ಬು ನೆಟ್ಟೆ,
ತರಕಾರಿ,ಹೂ-ಹಣ್ಣು ಬೆಳೆಗೆ ಜೀವ ಕೊಟ್ಟೆ,
ಏನೇ ಬೆಳೆದರೂ ನಿನಗೆ ಖಾಲಿ ಹೊಟ್ಟೆ,
ದಲ್ಲಾಳಿಗೆ,ವರ್ತಕರಿಗೆ ಯಗಾದಿ ಹಬ್ಬದೂಟ..
ಬಡತನದ ಬಾಳ ಸಹಿಸಿ ಕುಣಿಯ ತೋಡಹೊರಟೆಯಾ ಓ ರೈತ ಬಾಂಧವ….

- Advertisement -

ಒಮ್ಮೆ ಅತಿವೃಷ್ಟಿ,ಆಗಾಗ ಅನಾವೃಷ್ಟಿ
ಚೆಲ್ಲದ ಕಾಳು ಫಸಲಾದರೆ ನಿನ್ನ ಪುಣ್ಯ,
ಬೆಳೆದ ಬೆಳೆಯೇ ಜೀವದುಸಿರಾಗಬೇಕು,
ಹಬ್ಬ-ಹರಿದಿನ,ತಿಥಿ-ಮತಿಗಳಿಗೆ ಬಂಡವಾಳವಾಗಬೇಕು,
ಮದುವೆ-ಮುಂಜಿಗಳಿಗೆ ದಾರಿ ತೋರಿಸಬೇಕು…..

ಬೈಗಿನಿಂದ ಗೋಧೂಳಿಯವರೆಗೂ
ನಿನ್ನ ಮೈ-ಕೈ-ದಿರಿಸು ಕೆಸರಾದರೂ
ನಿನ್ನ ಬಾಯಿ ಮೊಸರಾಗಲಿಲ್ಲ;ಬಾಳು ಹೊನ್ನಾಗಲಿಲ್ಲ
ಸಾಲವೆಂಬ ಶೂಲಕೆ ನೀ ಸಿಲುಕುವುದು ತಪ್ಪಲಿಲ್ಲ…

ನಿನ್ನ ಹೆಸರೇಳಿ ಆಸ್ತಿ ಮಾಡಿದರು,
ನಿನ್ನ ಹೆಸರಲೇ ಗದ್ದುಗೆಯೇರಿ,
ನಿನ್ನ ಕಷ್ಟವ ಮರೆತೇ ಬಿಟ್ಟರು,
ನಿನ್ನ ಬಾಳು ನರಕವಾದರೂ
ನಿನ್ನ ಹೆಸರಲಿ ಅಸ್ತಿತ್ವ ಪಡೆದವರು
ಅಧಿಕಾರದ ಮದದಲಿ ಮೊರೆಯುತಿದ್ದಾರೆ,
ನೀನು ನೊಂದು-ಬೆಂದು ಸ್ವಸಮಾಧಿಯ ದಾರಿ ಹಿಡಿದುಬಟ್ಟಿದ್ದೀಯಾ ???

- Advertisement -

ಓ ರೈತ ಸಹೋದರ ,ಬೇಡ ಆತಂಕ
ಸ್ವಸಮಾಧಿಯ ಆಸೆ ಕೈಬಿಟ್ಟು,
ಮೇಲೇಳು,ಸಿಡಿದೇಳು,ಪುಟಿದೇಳು
ನಿನ್ನ ಧ್ವನಿಗೆ ನೂರಾನೆಯ ಬಲವಿದೆ,
ನಿನ್ನ ಹೋರಾಟಕೆ ಜಗತ್ತನ್ನೇ ಬದಲಿಸುವ ಶಕ್ತಿಯಿದೆ….

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:, 94496 80583,
63631 72368

- Advertisement -

1 COMMENT

Comments are closed.

- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group