spot_img
spot_img

ಕವನ: ನೀಲಿಗಗನದಲಿ…

Must Read

spot_img
- Advertisement -

ನೀಲಿಗಗನದಲಿ…

ನೀಲಿಗಗನದಲಿ ನಾಡ ಶಕ್ತಿಯದೋ…..
ನುಡಿಯುತಿದೆ : //ಪ//

ಸಾರ್ವಭೌಮ ತನ್ನ ಗುರಿಯೆಂದು
ಕೇಸರಿ , ಬಿಳಿ, ಹಸಿರು ಮೂರು
ತನ್ನ ಭಾತೃತ್ವದ ಪ್ರತೀಕವೆಂದು……!! //ಪ//

ಮೇಲು- ಕೀಳು , ಬಡವ – ಬಲ್ಲಿದ
ಜಾತಿ – ಪಂಥ , ಪಂಗಡಗಳಿಗೆಲ್ಲಾ ಒಂದೇ ವಿಧಿಯಂದು
ಹಕ್ಕೊಂದೇ ಸಲ್ಲದು
ಕರ್ತವ್ಯ ಪರಮ ಧ್ಯೇಯವೆಂದು !! //ಪ//

- Advertisement -

ಹಿಂದೂ ಮಹಾಸಾಗರದ ಭೂಶಿರವು
ಕಾಶ್ಮೀರದ ಮುಕುಟವು ಅಖಂಡ ಭೂಪಟವೆಂದು
ದೇಶವಾಸಿಗಳಿಗೆಲ್ಲ ಒಂದೇ ಧರ್ಮ
ಒಂದೇ ಕುಲ ಒಂದೇ ಗೋತ್ರ – ಅದುವೇ ಭಾರತವೆಂದು ……!! //ಪ//

ವೃತ್ತಾಕಾರದ ಚಕ್ರವು ಸಾರುತಿದೆ
ಅಲಗಿನ ಹೆಜ್ಜೆಯು ಪ್ರಗತಿಯ ಚಿನ್ಹೆಯು
ಎಲ್ಲರ ಕೈಗಳು ಊರುಗೋಲಾಗಲಿಯೆಂದು …..!!

ಜೇನ್ನೊಣದ ಹಾಗೆ ” ಒಂದಾಗಿ ”
ಭಗೀರಥ ಪ್ರಯತ್ನದ ಹಾಗೆ ಮುಂದಾಗಿ
ನೆಲದ ನೀತಿಗೆ ಬದ್ದರಾಗಿರೆಂದು ನುಡಿಯುತಿದೆ.
ನೀಲಿಗಗನದಲಿ ನಾಡ ಶಕ್ತಿಯು
ನೀಲಿಗಗನದಲಿ ನಾಡ ಶಕ್ತಿಯು

- Advertisement -

ಯಮುನಾ.ಕಂಬಾರ
ರಾಮದುರ್ಗ

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group