ಪೂಜ್ಯರಾದ ಡಾ ಪಂಡಿತಾರಾಧ್ಯ ಸ್ವಾಮೀಜಿ ಅವರಿಗೆ ಶರಣಾರ್ಥಿ
ನೆಲಮಂಗಲದಲ್ಲಿ ಒಬ್ಬ ಒಳ್ಳೆಯ ವಿದ್ಯಾರ್ಥಿ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದಿದ್ದಾರೆ ಅದನ್ನು ಹೇಗೆ ಅರ್ಥೈಸುತ್ತೀರಿ ಎಂಬ ಪ್ರಶ್ನೆಗೆ
ನಿಮ್ಮ ಉತ್ತರ ‘ಕಾಯಕವೇ ಕೈಲಾಸ’ ಬಸವಣ್ಣನವರು ಹೇಳಿಯೆ ಇಲ್ಲ! ಎಂದು ಎಲ್ಲರನ್ನೂ ಚಿಂತನೆಗೆ ಎಡೆ ಮಾಡಿಕೊಡಲು ಮುಂದಾದಿರಿ
ಕಾಯಕ ಮತ್ತು ದಾಸೋಹ ಇವು ಮೂಲ ಬಸವಣ್ಣನವರ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳು ಬಸವಣ್ಣನವರ ಅನೇಕ ವಚನಗಳಲ್ಲಿ ಕಾಯಕವೇ ಕೈಲಾಸ ಎಂಬ ಅರ್ಥ ಕಾಣುವ ಹಲವಾರು ವಚನಗಳಿವೆ. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳದೆ ಬೇರೆ ವಚನಕಾರರಿಗೆ ಹೇಗೆ ಗೊತ್ತಾಗುತ್ತದೆ
ನೀವು ಹಿರಿಯರು ಸಂವಾದ ಪಾಂಡಿತ್ಯ ಪ್ರದರ್ಶನ ಆಗಬಾರದು ಇದನ್ನು ಬಸವಣ್ಣನವರು ಮತ್ತು ಇತರ ಶರಣರು ಹೇಳಿದ್ದಾರೆ ಎಂದು ನೀವು ಹೇಳ ಬೇಕಿತ್ತು
ಶರಣು ಗೈದೊಡೆ ಜಪವ ಕಾಣಿರೋ
ಶರಣನೆದ್ದು ಕುಳಿತರೆ ಶಿವರಾತ್ರಿ
ಶರಣು ನಡೆದುದೆ ಪಾವನ ಕಾಣಿರೋ
ಶರಣ ನುಡಿದುದು ಶಿವತತ್ವ ಕಾಣಿರೋ
ಕೂಡಲ ಸಂಗನ ಶರಣರ ಕಾಯ ಅಲ್ಲ ಅದು *ಕಾಯಕವೇ ಕೈಲಾಸ* ಆಗಬೇಕು
ಕಾರಣ ಮೇಲಿನ ಎಲ್ಲಾ ಸಾಲುಗಳು ಕ್ರಿಯೆಗೆ ಸಂಬಂಧ ಪಟ್ಟಿವೆ ಕಾಯ ಶರೀರ ಕ್ರಿಯೆಯಲ್ಲ
ಅದು ಕಾಯಕ ಅಂತ ತಿದ್ದುಪಡಿ ಆಗಬೇಕು
ಒಟ್ಟಾರೆ ಬಸವ ಪರ ಮಠಾಧೀಶರು ಇಂತಹ ತಪ್ಪು ಹೇಳುತ್ತಾ ಹೋದರೆ ಶರಣರ ಮೂಲ ಆಶಯಕ್ಕೆ ಪೆಟ್ಟು ಬೀಳುತ್ತದೆ
ನಿಮ್ಮ
ಡಾ ಶಶಿಕಾಂತ ಪಟ್ಟಣ ರಾಮದುರ್ಗ