spot_img
spot_img

ದಿನದ ವಿಶೇಷ: ವಿಶ್ವ ಹಾಲು ದಿನ (ಜೂನ್ 1)

Must Read

- Advertisement -

ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ೨೦೦೧ರಿಂದ ಪ್ರತಿವರ್ಷ ಒಂದರಂದು ಆಚರಿಸುತ್ತಿದೆ. ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯನ್ನು, ಆದರ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದೇ ಆಗಿದೆ.

♦️ಇತಿಹಾಸ

ವಿಶ್ವ ಆಹಾರ ದಿನವನ್ನು ಮೊದಲ ಬಾರಿಗೆ ೨೦೦೧ರಲ್ಲಿ ಆಚರಿಸಲಾಯಿತು. ಹೈನುಗಾರಿಕೆಯಿಂದ ವಿಶ್ವದಲ್ಲೆಡೆ ನೂರು ಕೋಟಿ ಮಂದಿ ಬದುಕು ಸಾಗಿಸುತ್ತಿದ್ದಾರೆ ಎಂದೂ ಮತ್ತು ಹಾಲನ್ನು ದಿನವಹಿ 600 ಕೋಟಿ ಮಂದಿ ವಿವಿಧ ರೂಪಗಳಲ್ಲಿ ಸೇವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಲನ್ನು ಉತ್ತಮ ಆರೋಗ್ಯಕ್ಕಾಗಿ ಸೇವಿಸುವುದು ಉತ್ತಮ ಎಂದು ಸಾರುವುದು ಈ ಆಚರಣೆಯ ಉದ್ದೇಶ.

ಅಭಿವೃದ್ಧಿಶೀಲ ದೇಶಗಳಲ್ಲಿ ಹಾಲಿನ ಬಳಕೆ ಮತ್ತು ಸದುಪಯೋಗವನ್ನು ಆಹಾರ ಪದ್ಧತಿಯಲ್ಲಿ ಬಳಸಲು ಕ್ರಮಕೈಗೊಳ್ಳುವ ದಿಸೆಯಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯು ಹಾಲು ದಿನಾಚರಣೆಯನ್ನು ಶುರುಮಾಡಿತು.ಜೂನ್ ೧ನೆ ತಾರೀಖು ಹಲವು ರಾಷ್ಟ್ರಗಳಲ್ಲಿ ಹಾಲುದಿನ ಎಂದು ಆಚರಣೆ ಆಗುತ್ತಿತ್ತು. ಇದನ್ನೇ ಪ್ರಾಸ್ತಾವಿಕವಾಗಿ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವ ಹಾಲು ದಿನ ಎಂದು ಘೋಷಿಸಿತು. ದೇಶೀಯ ಆಹಾರ ಪದ್ಧತಿಯಲ್ಲಿ ಹಾಲು ಮಹತ್ವದ ಸ್ಥಾನವನ್ನು ಪಡೆದಿದೆ. ಅಬಾಲವೃದ್ಧರಾದಿಯಾಗಿ ಎಲ್ಲರೂ ಹಾಲನ್ನು ಸೇವಿಸುತ್ತಾ ಆರೋಗ್ಯವಂತರ ಆಗುವುದು ಈ ದಿನಾಚರಣೆಯ ಗುರಿ.

- Advertisement -

♦️೨೦೧೬

೨೦೧೬ರಲ್ಲಿ ವಿಶ್ವ ಹಾಲು ದಿನವನ್ನು ನಲವತ್ತು ದೇಶಗಳಲ್ಲಿ ಆಚರಿಸಲಾಯಿತು. ಮ್ಯಾರಥಾನ್ ಓಟ, ಹಾಲಿನ ಸಂಸ್ಕರಣೆ ಶೇಖರಣೆ ಮತ್ತು ಬಳಕೆಯನ್ನು ತೋರಿಸುವ ನಾಟಕಗಳು, ಶಾಲಾ ಕಾರ್ಯಕ್ರಮಗಳು, ಚರ್ಚಾಕೂಟ ಸ್ಪರ್ಧೆ ಮತ್ತು ಇದೇ ಹಲವಾರು ಕಾರ್ಯಕ್ರಮಗಳ ಮೂಲಕ ಹೈನುಗಾರಿಕೆಯ ವಿಸ್ತೃತ ರೂಪವನ್ನು, ದಿನಬಳಕೆಯಲ್ಲಿ ಅದರ ಉಪಯೋಗವನ್ನು ಸಾರಲಾಯಿತು.

♦️೨೦೧೭

೨೦೧೭ರಲ್ಲಿ ೮೦ ದೇಶಗಳು ಹಾಲು ದಿನಾಚರಣೆಯನ್ನು ಆಚರಿಸಿದವು. ಮಿಲ್ಕ್ ಡೇ ಎಂದು ಟ್ವಿಟ್ಟರ್ ನಲ್ಲಿ ಹಾಲಿನ ಉಪಯೋಗವನ್ನು ಪ್ರಚುರ ಪಡಿಸಲಾಯಿತು.

♦️೨೦೧೮

೨೦೧೮ರಲ್ಲಿ ಎಪ್ಪತ್ತೆರಡು ದೇಶಗಳು ಹಾಲು ದಿನಾಚರಣೆಯನ್ನು ಆಚರಿಸಿದವು. ಮೇ ೧ರಿಂದ ಜೂನ್ ೨ರವರೆಗೆ ಒಂದು ತಿಂಗಳ ಕಾಲ ರೈಸ್ ಎ ಗ್ಲಾಸ್ ಎಂಬ ಘೋಷವಾಕ್ಯದಡಿ ಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವವನ್ನು ಸಾರಲಾಯಿತು. ಒಟ್ಟು ೨೯ ಕೋಟಿ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ, ಈ ವಿಷಯವನ್ನು ತಿಳಿದರು.

- Advertisement -

♦️ವಿರೋಧ

೨೦೧೮ರಲ್ಲಿ ವಿಶ್ವ ಸಸ್ಯ ಹಾಲು ದಿನ ಎಂದು ವಿಶ್ವ ಹಾಲು ದಿನದ ಎದುರಾಗಿ ಕಾರ್ಯಕ್ರಮ ನಡೆಸಲಾಯಿತು. ಹಾಲು ಉತ್ಪಾದನೆ ಮಾಡಲು ರಾಸುಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಹಾಲು ಹಾಲಿನ ಉತ್ಪನ್ನದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ತೋರಿಸಿಕೊಡಲು ಹಾಲು ದಿನವನ್ನು ಆಗಸ್ಟ್ ೨೨ರಂದು ಆಚರಿಸಲಾಯಿತು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group