spot_img
spot_img

ದ್ವೇಷಾಸೂಯೆ ರಾಜಕೀಯವಿದ್ದರೆ ಉತ್ಸವಕ್ಕೆ ಅರ್ಥವಿರುವುದಿಲ್ಲ

Must Read

- Advertisement -

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣಗಳ ಅಧಿಪತಿ ಗಣಪತಿಯನ್ನು ಇತ್ತೀಚಿನ ದಿನಗಳಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲಾ ಧರ್ಮದವರೂ ಆರಾಧಿಸುತ್ತಾರೆ. ಆದರೂ ವಿಘ್ನಗಳು ಹೆಚ್ಚುತ್ತಲೇ ಇದೆ.

‘ಗಣ’ ಗುಂಪು ಮಾಡುವ ಉದ್ದೇಶ, ಕೆಲಸದಲ್ಲಿ ಕಾರ್ಯಗಳು ಸುಗಮವಾಗಿ ನೆರವೇರಿದರೆ ಮನಸ್ಸು ಶಾಂತವಾಗುವುದೆನ್ನುವ ಕಾರಣಕ್ಕಾಗಿ. ಆದರೆ ಮಾನವಗಣ ಇದನ್ನು ತನ್ನ ಸ್ವಾರ್ಥ ದ ರಾಜಕೀಯಕ್ಕೆ ಬಳಸಿಕೊಂಡು ಎಲ್ಲರನ್ನೂ ಒಂದುಗೂಡಿಸಿಕೊಂಡು ಆಳೋದಕ್ಕೆ ಪ್ರಾರಂಭ ಮಾಡಿ ತನ್ನ ಮೂಲ ಉದ್ದೇಶ ಮರೆತರೆ ವಿಘ್ನಗಳು ಬರದೆ ಇರುವುದೆ?

ದೇವರಲ್ಲಿಯೂ ಸರಿ ತಪ್ಪು ಇರುತ್ತದೆ. ಯಾರು ತನ್ನ ಪ್ರಕಾರ ಧರ್ಮದಿಂದ ಗಣರಾಜ್ಯವನ್ನು ನಡೆಸುವನೋ ಅವನಿಗೆ ಗಣಪತಿಯ ಅನುಗ್ರಹವಿರುತ್ತದೆ. ವಿರುದ್ದ ನಡೆದರೆ ವಿಘ್ನರಾಜ ತನ್ನ ಪ್ರಭಾವ ತೋರಿಸುತ್ತಾನಷ್ಟೆ.

- Advertisement -

ನಮ್ಮ ಉದ್ದೇಶ ರಾಜಯೋಗವಾಗಿದ್ದು ರಾಜ್ಯದ ಜನತೆಯನ್ನು ಯೋಗ್ಯಮಾರ್ಗದಲ್ಲಿ ನಡೆಸುವುದು ಉತ್ತಮ ಸರ್ಕಾರವಾಗುತ್ತದೆ. ಒಟ್ಟಿನಲ್ಲಿ ನಾವೀಗ ಯಾವ ರಾಜರ ಕಾಲದಲ್ಲಿರದ ಕಾರಣ, ನಮ್ಮ ನಮ್ಮ ಜ್ಞಾನಕ್ಕೆ ತಕ್ಕಂತೆ ರಾಜ್ಯ
ದೇಶ,ವಿಶ್ವವನ್ನು ನೋಡುತ್ತಾ ನಮ್ಮೊಳಗೇ ಅಡಗಿರುವ ಮೂಲ ಉದ್ದೇಶವನ್ನು ಮರೆತು ಹೊರಗಿನ ಉತ್ಸವದಲ್ಲಿ ಮೈ ಮರೆತಿರುವುದು ಸತ್ಯ.

ಇದನ್ನು ಸರ್ಕಾರ ಸರಿಪಡಿಸುವುದೆ?

ಪ್ರಜಾಸರ್ಕಾರ ಅಥವಾ ಸಹಕಾರದಿಂದ ಹುಟ್ಟಿರುವ ಅಸಂಖ್ಯಾತ ಗಣಕೂಟಗಳು ಸಂಘ,ಸಂಸ್ಥೆಗಳು ಮಠ,ಮಂದಿರಗಳು,ಶಾಲಾ ಕಾಲೇಜುಗಳು ತಮ್ಮ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಂಡು ಸಂಘಟನೆಯ ಬಲ ಸಾತ್ವಿಕವಾಗಿ ಹೆಚ್ಚಿಸಿಕೊಂಡರೆ ನಿಜವಾದ ಗಣಪತಿಯ ಅನುಗ್ರಹವಿರುತ್ತದೆ. ಗಣಪತಿ ಒಳಗಿರುವನೋ ಹೊರಗಿರುವನೋ? ಎಲ್ಲರಿಗೂ ಅವರ ಗಣವೆ ಶ್ರೇಷ್ಠ ಸರಿ.

ಹಾಗಂತ ಎಲ್ಲರೂ ಇರುವುದು ಒಂದೇ ದೇಶದಲ್ಲಿ, ರಾಜ್ಯದಲ್ಲಿ
ಭೂಮಿಯಲ್ಲಿ ಎನ್ನುವ ಪ್ರಜ್ಞೆ ಬಂದಾಗಲೆ ಎಲ್ಲರೂ ಒಂದಾಗಿ ಗಣರಾಜನ ಕಾಣಲು ಸಾಧ್ಯವಿದೆ. ಗಣಗಳಲ್ಲಿಯೇ
ದ್ವೇಷ,ಅಸೂಯೆ,ಸ್ವಾರ್ಥ, ಅಹಂಕಾರದ ರಾಜಕೀಯವಿದ್ದರೆ ಉತ್ಸವಕ್ಕೆ ಅರ್ಥವಿರೋದಿಲ್ಲ. ಉತ್ಸಾಹದ ಕಾರ್ಯಕ್ರಮವು
ಮಾನವನಿಗೆ ಉತ್ತಮ ಜೀವಶಕ್ತಿ ತುಂಬುತ್ತದೆ.

- Advertisement -

ಜೀವ ಶಾಶ್ವತವಲ್ಲ ಹೀಗಾಗಿ ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಲು ಮಾಡುವ ಉತ್ಸವವೆ ಅತ್ಯುತ್ತಮ ವಾಗಿದೆ. ಉತ್ಸವಗಳು ಕೇವಲ ಊಟ ಉಪಚಾರಕ್ಕಷ್ಟೇ ಸೀಮಿತವಾಗಿರುವುದರಿಂದಾಗಿ ಇಂದಿನ ಎಷ್ಟೋ ಕಾರ್ಯಕ್ರಮಗಳು ಅಕ್ರಮವಾಗುತ್ತಿದೆ. ಉದ್ದೇಶ ಅರಿತು ನಡೆಯುವುದೆ ಸರಿಯಾದ ಕ್ರಮ.

ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಹಿತ್ಯಿಕ, ಸಾಮಾಜಿಕ ಕಾರ್ಯಕ್ರಮಗಳಿಂದ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವುದು ದೇಶ ಮಾತ್ರ. ಇದನ್ನು ಗಮನಿಸಿದರೆ ನಾವು ಪ್ರಜಾಪ್ರಭುತ್ವದ ಪ್ರಜೆಗಳೆ ಎನ್ನುವ ಪ್ರಶ್ನೆ ಮೂಡುತ್ತದೆ. ಪ್ರಜೆಗಳಾಗಿ ನಮ್ಮ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳುವುದೆ ಎಲ್ಲಾ ಗಣಗಳ ಉದ್ದೇಶ.

ಸಾಧ್ಯವಾದವರು ಮಾಡಬಹುದು. ಆಗದಿರುವವರು ಸುಮ್ಮನೆ ಇರಬಹುದು. ಆದರೆ, ಅಧರ್ಮಕ್ಕೆ ಸಹಕರಿಸಿದರೆ
ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿಯೇ ಇಂದು ಹೆಚ್ಚು ಕಷ್ಟ ಅನುಭವಿಸುತ್ತಿರುವವರು ಸಾಮಾನ್ಯರೆ. ತಿಳಿದೋ ತಿಳಿಯದೆಯೋ ನೀಡುವ ಸಹಕಾರವೂ ಭ್ರಷ್ಟರನ್ನು ಬೆಳೆಸುವಾಗ ಸಹಕಾರ ನೀಡುವ ಮೊದಲು ಅವರ ಉದ್ದೇಶ
ಅರ್ಥ ಮಾಡಿಕೊಳ್ಳುವುದು ಮುಖ್ಯ. ಎಲ್ಲರಿಗೂ ಹರಿದು ಹಂಚುತ್ತಿರುವ ಭ್ರಷ್ಟಾಚಾರ ದಿಂದ ಯಾರಿಗೆ ಸುಖವಿದೆ?

ದಿನಕ್ಕೊಂದು ಸಾಮಾನ್ಯಜ್ಞಾನ.

ಅವಕಾಶಗಳು ಬಂದಾಗ ಕೈ ಬಿಡಬಾರದೆನ್ನುತ್ತಾರೆ. ಆದರೆ, ನಮ್ಮ ಉದ್ದೇಶವನ್ನು ಮೊಟುಕುಗೊಳಿಸುವ ಅವಕಾಶವನ್ನು ಮೊದಲೇ ಕೈ ಬಿಡುವುದು ಉತ್ತಮವಾಗಿದೆ. ಮಧ್ಯದಲ್ಲಿ ಸಿಕ್ಕಿಹಾಕಿಕೊಂಡು ನರಳುವುದಕ್ಕಿಂತ ಇದ್ದಲ್ಲಿಯೇ ಇದ್ದು ನಮ್ಮತನವನ್ನು ಕಾಯ್ದುಕೊಂಡರೆ ತೃಪ್ತಿ ಇರುತ್ತದೆ. ಆಗೋದನ್ನು ತಪ್ಪಿಸಲು ಸಾಧ್ಯವಿಲ್ಲ.ನಿನ್ನ ನೀ ತಿಳಿದು ನಡೆ ಎಂದು ಮಹಾತ್ಮರು ತಿಳಿಸಿದ್ದಾರೆ. ಉದ್ದೇಶ ಒಂದೇ ಆದರೂ ಅದರಲ್ಲಿ ರಾಜಕೀಯವಿದ್ದರೆ ವ್ಯರ್ಥ ಪ್ರಯತ್ನ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group