spot_img
spot_img

ನಮ್ಮ ಸುತ್ತಲಿನ ಇತಿಹಾಸ ಅರಿಯುವ ಮೂಲಕ ಪಠ್ಯದ ಇತಿಹಾಸ ಅರಿಯೋಣ – ವೈ.ಬಿ.ಕಡಕೋಳ

Must Read

- Advertisement -

ಮುನವಳ್ಳಿಃ ನಮ್ಮ ಸುತ್ತಮುತ್ತಲೂ ದೊರೆಯುವ ಶಾಸನಗಳು,ಗ್ರಂಥಗಳು,ಆ ಸ್ಥಳದ ಚರಿತ್ರೆಯನ್ನು ಕಟ್ಟಿಕೊಡುತ್ತವೆ.ಅಂಥ ಸ್ಥಳ ಮುನವಳ್ಳಿ .ಮುನೀಂದ್ರವಳ್ಳಿ.ಮುನವಳ್ಳಿ ಎಂಬ ಹೆಸರನ್ನು ಮುನವಳ್ಳಿ ಪಂಚಲಿಂಗೇಶ್ವರ ದೇವಾಲಯದಲ್ಲಿನ ಶಾಸನದಲ್ಲಿ ಕಾಣುತ್ತೇವೆ.

ಹಾಗೆಯೇ ವಿಷ್ಣುತೀರ್ಥರ ಆಶ್ರಮ ಕಟ್ಟಿ, ಕೈವಲ್ಯಾಶ್ರಮ,‌‌‌‌‌  ಸಿಂದೋಗಿ ಮುನವಳ್ಳಿಯ ಆಲೂರಮಠ.‌‌ ಸೋಮಶೇಖರ ಮಠ,ಸಾವಳಗಿ ಮಠ,ವಿಠೋಬಾ ಮಂದಿರ ಮುಂತಾದ ಮಠ ಮಾನ್ಯಗಳು ದೇಗುಲಗಳ ಇತಿಹಾಸ ನಮ್ಮ ಗ್ರಾಮದ ಸತ್ಪರಂಪರೆಯನ್ನು ಹೊಂದಿದೆ.ಪಕ್ಕದ ಗ್ರಾಮಗಳಾದ ಸಿಂದೋಗಿ,ಎಕ್ಕೇರಿ.ಮಬನೂರು ಅರ್ಟಗಲ್ ಗಳಲ್ಲಿ ಕೂಡ ಶಾಸನಗಳು ವೀರಗಲ್ಲು ಮಾಸ್ತಿಕಲ್ಲುಗಳನ್ನು ಹೊಂದಿವೆ.

ಹೀಗೆ ನಮ್ಮ ಸುತ್ತಮುತ್ತಲಿನ ಇತಿಹಾಸ ಅರಿಯುವ ಮೂಲಕ ಪಠ್ಯದ ಇತಿಹಾಸವನ್ನು ಅರಿಯೋಣಎಂದು ಸವದತ್ತಿ ಕ್ಷೇತ್ರ ಸಂಪನ್ಮೂಲ ಕೇಂದ್ರ ವಿಕಲಚೇತನ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಹೇಳಿದರು.

- Advertisement -

ಅವರು ಎಮ್.ಎಲ್.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ‘ಮುನವಳ್ಳಿ ಇತಿಹಾಸ ಅರಿಯೋಣ’ ಕಾರ್ಯಾಗಾರದ ಅತಿಥಿಗಳಾಗಿ ಉಪನ್ಯಾಸ ನೀಡಿದರು.

ಅವರು ಮಾತನಾಡುತ್ತ, ಮುನವಳ್ಳಿಯ ಕೋಟೆಗೆ ಸಂಬಂಧಿಸಿದಂತೆ ಸ್ವಾತಂತ್ರ್ಯದ ಇತಿಹಾಸದ ರೋಚಕ ಘಟನೆಗಳನ್ನು ತಿಳಿಸುತ್ತ, ತಲ್ಲೂರು ಮುನವಳ್ಳಿಗೆ ಇರುವ ಸಂಬಂಧವನ್ನು ಬ್ರಿಟಿಷ್ ಆಡಳಿತ ಅವಧಿಯಲ್ಲಿ ನಡೆಯುವ ಘಟನೆಗಳು ಮುನವಳ್ಳಿಯಲ್ಲಿ ಜರುಗಿದ್ದು,ಸ್ವಾತಂತ್ರ್ಯ ಹೋರಾಟದಲ್ಲಿ ಮುನವಳ್ಳಿಯ ಪಾತ್ರವನ್ನು ತಿಳಿಸುತ್ತವೆ ಎಂದು ಕೋಟೆಯ ಇತಿಹಾಸವನ್ನು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಉಮೇಶ ಬಾಳಿ ಜೈಂಟ್ಸ ಗ್ರುಪ್ ಡಾ.ಮಲ್ಲಿಕಾರ್ಜುನ ಅಷ್ಠಗಿಮಠ.ಅಶೋಕ ರೇಣಕೆ.ಅನೀಲ ಕಿತ್ತೂರು ಉಪಸ್ಥಿತರಿದ್ದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಉಮೇಶ ಬಾಳಿಯವರು ವೈ.ಬಿ.ಕಡಕೋಳ ಶಿಕ್ಷಕ ವೃತ್ತಿಯ ಜೊತೆಗೆ ಕನ್ನಡ ವಿಶ್ವವಿದ್ಯಾಲಯದಿಂದ ಡಾ.ವ್ಹಿ.ಎಸ್.ಮಾಳಿಯವರ ಮಾರ್ಗದರ್ಶನದಲ್ಲಿ ಮುನವಳ್ಳಿ ಸಾಂಸ್ಕೃತಿಕ ಅಧ್ಯಯನ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆಯುವ ಮೂಲಕ ಮುನವಳ್ಳಿಯ ಇತಿಹಾಸವನ್ನು ಕಟ್ಟಿಕೊಟ್ಟಿರುವರು.ಇವತ್ತಿನ ಅವರ ಉಪನ್ಯಾಸ ನಮ್ಮ ಸುತ್ತಲಿನ ಗ್ರಾಮಗಳು ಮುನವಳ್ಳಿಗೆ ಹೊಂದಿದ ಸಂಬಂಧ ಇತಿಹಾಸದ ಹಿನ್ನೆಲೆ ತಿಳಿಸುವಂತಾಯಿತು.ನಮ್ಮ ಮನೆಯ ಹೆಸರು ಬಂದ ಬಗ್ಗೆ ನಮ್ಮ ಹೆಳವರು ವರ್ಷಕ್ಕೊಮ್ಮೆ ಮನೆಗೆ ಬಂದಾಗ ತಿಳಿಯುವ ಹಾಗೆ ನಮ್ಮ ಸುತ್ತಲಿನ ಪರಿಸರದಲ್ಲಿ ಲಭ್ಯವಾಗುವ ಮಾಹಿತಿಗಳನ್ನು ನಾವು ಅರಿಯುವುದು ಅವಶ್ಯವಾಗಿದೆ.ನಾವು ಜೀವನದಲ್ಲಿ ಎಷ್ಟೇ ಉನ್ನತ ಹುದ್ದೆಗೇರಿದರೂ ನಮ್ಮ ಪರಿಸರದ ಸಂಗತಿಗಳು ನಮಗೆ ಗೊತ್ತಿರಬೇಕು.ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಒಂದರಂದು ಸಾಹಿತ್ಯ,ಕಲೆ,ಸಂಸ್ಕೃತಿ,ಆಡಳಿತ ಹೀಗೆ ವಿವಿಧ ರಂಗಗಳ ಪರಿಚಯವನ್ನು ಆ ರಂಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಕರೆಯಿಸಿ ಕಾರ್ಯಾಗಾರ ಮಾಡುವ ಮೂಲಕ ಮಕ್ಕಳಿಗೆ ವಿಭಿನ್ನ ಜ್ಞಾನವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದು.ಈ ವರ್ಷ ಕೊರೋನಾ ಸಲುವಾಗಿ ಈ ಕಾರ್ಯಾಗಾರ ತಡವಾಗಿ ಆರಂಭವಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಶಾಲೆಯ ಆಡಳಿತಾಧಿಕಾರಿ ಎಸ್.ಆರ್. ಜಗಾಪುರ.ಶಿಕ್ಷಕರಾದ ಎ.ವ್ಹಿ.ನರಗುಂದ.ಮಂಜುನಾಥ ಹಡಪದ.ಎನ್.ಝಬೀನ್ , ಬಸವರಾಜ ಭಜಂತ್ರಿ. ಡಿ.ಡಿ. ಹಲಿಮನವರ, ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಎಚ್. ಕೆ. ಯಡೊಳ್ಳಿಯವರು ಈ ಸಂದರ್ಭದಲ್ಲಿ ವೈ.ಬಿ.ಕಡಕೋಳ ಅವರ ಪರಿಚಯವನ್ನು ಮಾಡಿದರು.ಶಿಕ್ಷಕ ಮಲ್ಲಾಪುರ ಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group