spot_img
spot_img

ಪುಸ್ತಕ ಪರಿಚಯ: ಇದು ಬರ್ಲಿನ್! ಇದು ಜರ್ಮೇನಿಯ!

Must Read

- Advertisement -

ಲೇಖಕರು : ಆಗುಂಬೆ ಎಸ್. ನಟರಾಜ್

ಪ್ರಕಾಶಕರು : ಹಂಸ ಪ್ರಕಾಶನ ಬೆಂಗಳೂರು-4
ಪುಟಗಳು : 560, ಬೆಲೆ 300 ರೂಪಾಯಿ.
ಮುದ್ರಕರು : ಸ್ನೇಹಾ ಪ್ರಿಂಟರ್ಸ ಬೆಂಗಳೂರು, ಮೊದಲ ಮುದ್ರಣ 2013
ರಕ್ಷಾ ಪುಟ ವಿನ್ಯಾಸ – ನಾರಾಯಣ್

ಯಾವ ವ್ಯಕ್ತಿ ಮನೆಯಿಂದ ಹೊರಟು ಅನೇಕ ಆಶ್ಚರ್ಯಗಳಿಂದ ಕೂಡಿದ ವಿಶಾಲ ಜಗತ್ತನ್ನು ನೋಡುವುದಿಲ್ಲವೋ
ಅವನು ಬಾವಿಯಲ್ಲಿರುವ ಕಪ್ಪೆಯೇ ಸರಿ

- Advertisement -

ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು 1939 ರಲ್ಲಿ ಜನಿಸಿದರು. ಆಗುಂಬೆಯವರು ಕೆನರಾ ಬ್ಯಾಂಕಿನಲ್ಲಿ ಉದ್ಯೋಗಮಾಡಿ ನಿವೃತ್ತಿಯಾಗಿ 25 ವರ್ಷ ಆಯಿತು.

ಕಾದಂಬರಿ,ಹನಿಗವನಗಳು, ಪ್ರವಾಸ ಕಥನ, ಜೀವನ ಚರಿತ್ರೆ, ಇತಿಹಾಸ ಕಥೆಗಳು ಹೀಗೆ 36 ಕೃತಿಗಳನ್ನು ಬರೆದಿದ್ದಾರೆ. ಈ ಕೃತಿಯಲ್ಲಿ ಭಾಗ 1 ರಲ್ಲಿ 16, ಭಾಗ 2,ರಲ್ಲಿ 5 ಅಧ್ಯಾಯ ಬರೆದಿದ್ದು ನಕಾಶೆ ಚಿತ್ರಗಳು 10 ಪುಟ ಮೀಸಲಿಟ್ಟಿದ್ದಾರೆ.

ಪ್ರಪಂಚದ ರಾಜಧಾನಿಗಳ ಸ್ಥಾಪನೆ ಪ್ರಮುಖವಾಗಿ ಅಲ್ಲಿ ಹರಿಯುವ ನದಿ ದಡದ ಮೇಲೆ ಸ್ಥಾಪನೆಯಾಗಿರುವಂತೆ ಜರ್ಮನಿಯ ರಾಜಧಾನಿ ಬರ್ಲಿನ್ ಕೂಡ ‘ಸ್ಪ್ರೀ’ ನದಿಯ ಒಂದು ಬದಿಯಲ್ಲಿ ಸ್ಥಾಪನೆಗೊಂಡಿತು. ನದಿಯ ಇನ್ನೊಂದು ದಡದಲ್ಲಿ ಸ್ಥಾಪಿತಗೊಂಡ ನಗರಕ್ಕೆ ಕೋಲ್ನ (ಅoಟಟಟಿ) ಎಂದು ಕರೆಯಲಾಗಿದೆ. ಬರ್ಲಿನ್ ನಗರದ 12ನೇ ಶತಮಾನದಲ್ಲಿ ಸ್ಥಾಪನೆಗೊಂಡಿದೆ ಎಂದು ಹೇಳಲಾದರೂ ಅದರ ಹುಟ್ಟಿದ ದಿನ ತಿಂಗಳು ಅಥವಾ ವರ್ಷ ನಿಖರವಾಗಿ ತಿಳಿಸಲ್ಪಟ್ಟಿಲ್ಲ.

- Advertisement -

ಜಗತ್ಪ್ರಸಿದ್ಧ ರೋಮನ್ ಚಕ್ರಾಧಿಪತಿ ಜೂಲಿಯನ್ ಸೀಜರ್ 12 ಕ್ರಿ.ಪೂ ಯಲ್ಲೇ ರಹೈನ್ ನದಿ ಪ್ರದೇಶವನ್ನು ತನ್ನ ಚಕ್ರಾಧಿಪತ್ಯಕ್ಕೆ ಸೇರಿಸಿಕೊಂಡಿದ್ದರೂ ನದಿ ಪೂರ್ವಕ್ಕೆ ಆಡಳಿತ ಆಕ್ರಮಣದ ಮುಖಾಂತರ ವಿಸ್ತರಿಸಿಲಿಲ್ಲ.

ಈ ಭೂಮಂಡಲದ ಯಾವುದೇ ನಗರ ಬರ್ಲಿನ್ಗೆ ಇರುವ ಪ್ರಕ್ಷುಬ್ಧ ಇತಿಹಾಸವಿಲ್ಲ ಎಂದಿದ್ದಾರೆ ಇತಿಹಾಸಕಾರರು. ಅದು ಎಷ್ಟು ವೇಗವಾಗಿ ಬಲಿಷ್ಠ ನಗರವಾಗಿ ಬೆಳೆಯಿತೋ ಅಷ್ಟೆ ವೇಗವಾಗಿ ಅವನತಿ ಕಂಡಿತು. ಅದು ತನ್ನ ಇತಿಹಾಸದ್ದೂದ್ದಕ್ಕೂ ವಿಜಯೋತ್ಸವದ ಪರಕಾಷ್ಠೆ ಆಚರಿಸಿ ಪರಾಭವದ ಅವಮಾನಗಳಿಂದ ಕಳೆಗುಂದಿತು. ಫ್ರೆಚೆರಿಕ್ ದಿ ಗ್ರೇಟನು 30 ವರ್ಷಗಳ ಯುದ್ಧದಲ್ಲಿ ಜಯಗಳಿಸಿ ವಿಜೃಂಭಿಸಿದರೂ ಫ್ರಾನ್ಸ್ ನ ಚಕ್ರಾಧಿಪತಿ ನೆಪೋಲಿಯನ್ ಕಾಲ್ತುಳಿತಕ್ಕೆ ಸಿಕ್ಕಿ ಬರ್ಲಿನ್ ಪರದಾಡಿತು. ಬಿನ್ ಮಾರ್ಕನಿಂದ ಜರ್ಮನ್ ಭಾಷಿಕರ ಒಕ್ಕೂಟವಾಗಿ ಜರ್ಮನಿಯ ರಾಜಧಾನಿಯಾಗಿ ಮೆರೆದ ಬರ್ಲಿನ್ ಯರೂಪನ್ ಕೈಗಾರಿಕೋದ್ಯಮದ ಪ್ರಬಲ ನಗರವಾಗಿ ಹೊರ ಹೊಮ್ಮಿದರೂ ಮೊದಲನೇ ಮಹಾಯುದ್ಧದಲ್ಲಿ ಅದು ಭಾಗವಹಿಸಿ ಅದರ 3 ಲಕ್ಷ ನಾಗರಿಕರು ಯುದ್ಧ ಭೂಮಿಯ ಕಾಳಗಗಳಲ್ಲಿ ಪ್ರಾಣ ತ್ಯಾಗ ಮಾಡಿದರು. ಪ್ರಜಾಪ್ರಭುತ್ವದಡಿ ವೈಮರ್ ನಗರದಲ್ಲಿ ಸ್ಥಾಪಿತಗೊಂಡ ಸರಕಾರವನ್ನು ತನ್ನ ಕುಟಿಲತೆ ಉಪಾಯ ರಾಜತಂತ್ರ, ಬೀದಿ ಕಾಳಗ ಮತ್ತು ಯಹೂದಿ ವಿರೋಧ ತತ್ವಗಳ ಮುಖಾಂತರ ಸರ್ವಾಧಿಕಾರಿಯಾಗಿ ಸರಕಾರದ ಚುಕ್ಕಾಣಿ ಹಿಡಿದ ಹಿಟ್ಲರನ ಅವತಾರದಲ್ಲಿ ಬರ್ಲಿನ ನಗರ ಸರ್ವ ರೀತಿಯಲ್ಲೂ ಪ್ರಗತಿ ಸಾಧಿಸಿ ವಿಜೃಂಭಿಸಿದರೂ ಎರಡನೇ ಮಹಾಯುದ್ಧದ ಅಂತಿಮ ಕಾಳಗದಲ್ಲಿ ಅದು ಧ್ವಂಸವಾಯಿತು. ಯುದ್ಧನಂತರ ನಗರ ಇಬ್ಭಾಗವಾಗಿ ಮಧ್ಯದಲ್ಲಿ ಗೋಡೆ ಎದ್ದು ಅಂತಿಮವಾಗಿ ಮುರಿದು ಬಿದ್ದು ನಗರ ಒಂದಾಗಿ ನೂತನ ಜರ್ಮನಿಯ ರಾಜಧಾನಿಯಾಗಿ ಮೆರಯುತ್ತ ಇರುವ ಬರ್ಲಿನ್ ನಗರ ಪುನಃ ಜರ್ಮನರ ಹೆಮ್ಮೆಯ, ಮೆಚ್ಚಿನ ಐತಿಹಾಸಿಕ ನಗರವಾಗಿ ಬೆಳೆದಿದೆ. ಬರ್ಲಿನ್ ನಗರ ಜರ್ಮನ್‍ರ ಭಾಗ್ಯನಗರ ಎಂದು ಕರೆಸಿಕೊಂಡು ವಿಜೃಂಭಿಸುತ್ತಾ ಇದೆ.

ಆಗುಂಬೆ ಎಸ್. ನಟರಾಜ್ ರಚಿಸಿರುವ ‘ಇದು ಬರ್ಲಿನ್! ಇದು ಜರ್ಮೇನಿಯಾ!’ ಎಂಬ ಗ್ರಂಥದಲ್ಲಿ ಬರ್ಲಿನ್ ನಗರದ ಹುಟ್ಟು,ಅಳಿವು ಮತ್ತು ಮರು ಹುಟ್ಟಿನ ಇತಿಹಾಸವನ್ನು ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಹಂಸ ಪ್ರಕಾಶನ ಅಭಿಪ್ರಾಯಪಟ್ಟಿದೆ.

ಬರ್ಲಿನ್ ಗೋಡೆ ಪ್ರಸಿದ್ಧ ಚೀನಾದೇಶದ ‘ಮಹಾನ ಗೋಡೆ’ ತರಹ ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ನಿರ್ಮಿಸಿದಂತಹ ಗೋಡೆಯಾಗಿರಲಿಲ್ಲ. ಈ ಗೋಡೆ ಒಂದೇ ಜನಾಂಗ, ಒಂದೇ ಭಾಷಿಕರ, ಒಂದೇ ಸಂಸ್ಕೃತಿ, ಒಂದೇ ನಡೆ-ನುಡಿಗಳ ಒಂದು ರಾಷ್ಟ್ರ ರಾಜಧಾನಿಯನ್ನು ವಿಭಜನೆಮಾಡಲು ನಿರ್ಮಿಸಲಾಗಿತ್ತು.

ಬರ್ಲಿನ್ ನಗರದ ಪ್ರಜೆಗಳನ್ನು ಎರಡು ಭಾಗಗಳಲ್ಲಿ ಕೂಡಿ ಹಾಕಿದ ಈ ಗೋಡೆಯ ಹಣಬರಹ 10 ನೇ ನವೆಂಬರ್ 1989 ರಲ್ಲಿ ಅದರ ಬಿರುಕಿನಿಂದ ಬರೆದು ಜಗತ್ತಿಗೆ ಸಾರಿತ್ತು. ತನ್ನ ಅಳಿವು ಉಳಿವು ಕೇವಲ ತಾತ್ಕಾಲಿಕ ಎಂದು 10 ನೇ ನವೆಂಬರ್ 1989 ರಂದು ಪೂರ್ವ ಬರ್ಲಿನ್ ಪ್ರಜೆಗಳು ಕ್ರಾಂತಿ ಎಸಗಿದರು.

ಗೋಡೆಯನ್ನು ಒಡೆದು ಎರಡು ಭಾಗವಾಗಿದ್ದ ನಗರವನ್ನು ಒಂದು ಗೂಡಿಸಿದರು ಗೋಡೆ ಒಡೆದ ಒಂದೇ ವಾರದಲ್ಲಿ ಸುಮಾರು 8 ಲಕ್ಷ ಪೂರ್ವ ಬರ್ಲಿನರು ಪಶ್ಚಿಮ ಬರ್ಲಿನ್‍ಗೆ ತೆರಳಿ ಅಲ್ಲಿದ್ದ ನೂರಾರು ಮಾರುಕಟ್ಟೆಗಳಿಗೆ ಲಗ್ಗೆ ಹಾಕಿ ತಮಗೆ ಇಷ್ಟಬಂದ ವಸ್ತುಗಳನ್ನು ಖರೀದಿ ಮಾಡಿ ಸಂತಸ ಪಟ್ಟರು. ಪಶ್ಚಿಮ ಬರ್ಲಿನರು ಅವರನ್ನು ಹಾರ್ದಿಕವಾಗಿ ಸ್ವಾಗತಿಸಿ ಭೋಜನ ನೀಡಿ ಸತ್ಕರಿಸಿ ಹರ್ಷಪಟ್ಟರು.

ಕ್ರಿ.ಸ್ತನ ಮೂಲ ಮಂತ್ರವಾದ ಶಾಂತಿ ಕಾಪಾಡುವ ಆಚರಣೆಯನ್ನು ಯಹೂದಿಗಳು ನಂಬಿ ಆಚರಿಸಿದ ಹತ್ತು ದೈವಾಜ್ಞೆಗಳನ್ನು ಮತ್ತು ಅವನನ್ನು ಅನುಸರಿಸಿ ಉಪದೇಶಿಸಿದ ತತ್ವ ಎಲ್ಲವನ್ನು ಮರೆತು ಪರಸ್ಪರ ಹೋರಾಡಿ ರಕ್ತ ಹರಿಸುವ ಕಾರ್ಯದಲ್ಲಿ ಉದ್ಯುಕ್ತರಾದರು. ಎರಡು ಪಂಗಡಗಳ ರಾಜರು ಮತ್ತು ಪ್ರಜೆಗಳು ಅದರ ಕಾವು ಹರಡಿದ್ದು ಯೋರೋಪನಲ್ಲಿ ಪ್ರಾರಂಭಗೊಂಡ 30 ವರ್ಷಗಳ ಕಾಳಗ ಎಂಬ ಪ್ರಸಿದ್ಧ ಐತಿಹಾಸಿಕ ಯುದ್ಧದಿಂದ ಈ 30 ವರ್ಷಗಳ ಯುದ್ಧ ಕ್ರಿ.ಶ 1618 ರಿಂದ 1948 ರವರೆಗೆ ಜರುಗಿತು. ಅದು ಈಗಿನ ಜೆಕ್ ರಾಜ್ಯದ ರಾಜಧಾನಿ ಪ್ರಾಗನಲ್ಲಿ ಪ್ರಾರಂಭಗೊಂಡಿತ್ತು 1618 ರಲ್ಲಿ 23 ವರ್ಷ ರಾಜ ಫ್ರೆಡರಿಕನನ್ನು ಬೊಹೀಮಿಯಾ ರಾಜ್ಯವನ್ನಾಳಲು ನೇಮಿಸಿದಾಗ ಜರ್ಮನ್ ಹಾಬ್ಸ್ ಬರ್ಗನ ಕೆಥೋಲಿಕ್ ರಾಜ ವಿರೋದಿಸಿದ ಅವನು ಇತರ ಜರ್ಮನ್ ರಾಜರೊಂದಿಗೆ ಒಟ್ಟಾಗಿ ಪ್ರಾಟೆಸ್ಟೆಂಡ್ ರಾಜ ಫ್ರೆಡರಿಕನ ವಿರುದ್ಧದ ಕಾಳಗದಲ್ಲಿ ನೂತನ ಕಾಲ್ಬನಿಸ್ ರಾಜ ಫೆಡರಿಕನನ್ನು ಸೂಲಿಸಿ ಬೊಹೀಮಿಯಾವನ್ನು ವಶಪಡಿಸಿಕೊಂಡ ರೋಮನ್ ಕಥೋಲಿಕ್ ಎದರು ಹೋರಾಡಿದ ಕಥೆ ಓದಲೇ ಬೇಕು.

ಫ್ರಾನ್ಸ್ ನಲ್ಲಿ ಪ್ರಾರಂಭಗೊಂಡ ‘ಜ್ಞಾನ’ ಯುಗದ ಕ್ರಾಂತಿ ಯೂರೋಪಿನ ಎಲ್ಲಾ ದೇಶಗಳಲ್ಲಿ ಹರಡಿ, ಅದರ ಪ್ರಭಾವ ಜರ್ಮನಿ ಮತ್ತು ಅದರ ರಾಜಧಾನಿ ಬರ್ಲಿನನ ಮೇಲೆ ಬೀರಿ ಜನರ ಜೀವನ ಶೈಲಿ ಬದಲಾಗುವುದರೊಳಗೆ ಫ್ರಾನ್ಸ್ ನಲ್ಲಿ ಜರುಗಿದ ‘ರಕ್ತಕ್ರಾಂತಿ’ ಯುರೋಪಿನ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ರಂಗಗಳ ಮೇಲೆ ಮಹತ್ವರ ಪ್ರಭಾವವನ್ನು ಬೀರಿ ಅದರ ಇತಿಹಾಸವೇ ಬದಲಾಗುವಂತಾಯಿತು.

29 ಏಪ್ರೀಲ್ 1945 ಕರಾಳ ದಿನ ಹಿಟ್ಲರನಿಗೆ ಬೆಳಗಿನ ಜಾವ 3 ಘಂಟೆಗೆ ತನ್ನ ಖಾಸಗಿ ಕಾರ್ಯದರ್ಶಿ ಜಂಗ್ ಮಹಾಶಯವನ್ನು ಕರೆದು ತನ್ನ ಕೊನೇಮರಣ ಶಾಸನವನ್ನು ಬರೆಸಿದ ಹಿಟ್ಲರ್ ತನ್ನ ಎಲ್ಲಾ ಗುಪ್ತ ಹಾಗೂ ವೈಯಕ್ತಿಕ ದಾಖಲೆಗಳನ್ನು ಪೆಟ್ಟಗೆಗಳಲ್ಲಿರಿಸಿ ವಿಮಾನದ ಮೂಲಕ ಮ್ಯಾನಿಕ್ ನಗರಕ್ಕೆ ಈಗಾಗಲೇ ಸಾಗಿಸಿದ ಸಾಯುವ ಮುನ್ನ ತನ್ನ ಪ್ರೇಯಸಿ ಇವಾಬ್ರೌನಳನ್ನು ಲಗ್ನವಾಗಲು ನಿರ್ಧರಿಸಿದ ವಿಧ್ಯುಕ್ತವಾಗಿ ವಿವಾಹವಾದ ಕೇವಲ 36 ಘಂಟೆಗಳ ಕಾಲ ವೈವಾಹಿಕ ಜೀವನ ಜರುಗಿಸಿದರು.

30 ಏಪ್ರೀಲ್ 1945 ರಂದು ಹಿಟ್ಲರ್ ತನ್ನದೇ ಮರಣ ಗೈಯವ ಕಾರ್ಯಕ್ಕೆ ಕೈಹಾಕಿದ ಅವನು ಹಾಗೂ ಅವನ ನೂತನ ಪತ್ನಿ ತಮ್ಮ ಖಾಸಗಿ ಮಲಗುವ ಕೋಣೆ ಬಳಿಗೆ ತೆರಳಿ ಬಾಗಿಲು ಹಾಕಿಕೊಂಡರು 3:30 ಘಂಟೆಗೆ ಕೋಣೆಯ ಒಳಗಿನಿಂದ ಗುಂಡು ಹಾರಿದ ಸದ್ದು ಕೇಳಿದ ಗೋಬಲ್ಸ್ ಮತ್ತು ಸಂಗಡಿಗರು ಕೊಣೆಯೊಳಗೆ ನುಗ್ಗಿ ನೋಡಿದಾಗ ಅವರ ಕಣ್ಣುಗಳಿಗೆ ಹಿಟ್ಲರನ ರಕ್ತ ಖಚಿತ ದೇಹ ಸೋಪಾದಲ್ಲಿ ಬಿದ್ದ ದೃಶ್ಯ ಕಂಡಿತು. ಹಿಟ್ಲರನ ನೂತನ ಪತ್ನಿ ಈವಾ ಬ್ರೌನ ಪತಿಯ ಪಕ್ಕದಲ್ಲಿ ಕಣ್ಣುಮುಚ್ಚಿ ಕುಳಿತಿದ್ದಳು ಇಬ್ಬರೂ ಪವಿತ್ರ ಆರ್ಯ ಕುಲದಲ್ಲಿ ಜನಿಸಿದವನಾಗಿದ್ದರು ಆಕೆ ವಿಷ ಪೂರಿತ ಸೈನಾಯಿಡ್ ಗುಳಿಗೆ ನುಂಗಿ ಪ್ರಾಣ ಬಿಟ್ಟಳು.

ಹಿಟ್ಲರ ತನ್ನ ಮರಣ ಶಾಸನದಲ್ಲಿ ತಾನು ಸತ್ತ ನಂತರ ಅವರ ಶವಗಳನ್ನು ಕಟ್ಟಡದಲ್ಲೇ ಸುಟ್ಟು ಭಸ್ಮ ಮಾಡಬೇಕೆಂದು ವಿನಂತಿಸಿದ್ದನು. ಅವರ ಶವಗಳನ್ನು ನೆಲಮಾಳಿಗೆಯ ಹೊರಗೆ ಹೊತೋಟದಲ್ಲಿ ಒಂದು ತೋಡಿನಲ್ಲಿರಿಸಿ ಬೆಂಕಿ ಹಚ್ಚಿದ್ದರು. ಅವರ ಭಸ್ಮವಾದ ಅಸ್ತಿಯನ್ನು ಕಾವಲು ಗೋಪುರದ ಬಳಿಯಲ್ಲೇ ಗೋರಿ ತೋಡಿ ಇರಿಸಿದರು ಎನ್ನಲಾಗಿದೆ.

ಮುಂದಿನದು ಬರೇ ಕೆಟ್ಟ ಸುದ್ದಿಗಳೆ ಓದಿಯೇ ಅರಿಯಬೇಕು.
ಪ್ರವಾಸಿಗರಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ ಇತಿಹಾಸಗಾರರು ಇದನ್ನು ಒಮ್ಮೆ ಓದಲೇಬೇಕು.

ಆಗುಂಬೆ ಎಸ್. ನಟರಾಜ್ ಅಗಷ್ಟ 15ಕ್ಕೆ ಮತ್ತೆರಡು ಪುಸ್ತಕ ಬಿಡುಗಡೆಗೊಳಿಸಿದ್ದಾರೆ. ಇದು ಭಾರತ, ಇದು ಹಿಂದೂಸ್ತಾನ, ಇದು ಇಂಡಿಯಾ! ಓಹ್ ಕಲ್ಕತಾ! ಇದು ಹಳೆ ಕಲ್ಕತಾ! ಜಗತ್ತು ಬಾಧೆಗೊಳಗಾಗುತ್ತಿರುವುದು ದುರ್ಜನರ ಹಿಂಸಾಚಾರದಿಂದಲ್ಲ.

ಅದರ ವಿರುದ್ಧ ಧ್ವನಿಯೆತ್ತದ ಸಜ್ಜನರ ಮೌನದಿಂದ. ಪುಸ್ತಕ ಬರವಣಿಗೆ ಮಾಡುತ್ತ ಇದ್ದಾರೆ. ಇಂತಹ ಇಳಿ ವಯಸ್ಸಿನಲ್ಲಿಯೂ ಅವರು ನಿರಂತರ ಕ್ರಿಯಾಶೀಲ ರು ದೇವರು ಅವರಿಗೆ ಆರೋಗ್ಯ ನೀಡಲಿ, ಹೀಗೆ ಸಾಗಲಿ ಎಂದು ಬೇಡಿಕೊಳ್ಳುತ್ತೇನೆ. ಅವರ ಚರವಾಣಿ 89481423004.

ಶ್ರೀ ಎಂ.ವೈ. ಮೆಣಸಿನಕಾಯಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group