spot_img
spot_img

ಪುಸ್ತಕ ಪರಿಚಯ

Must Read

- Advertisement -

ಪುಸ್ತಕ ಹೆಸರು : ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ
ಲೇಖಕರು : ಸ. ರಾ. ಸುಳಕೂಡೆ ಹಿರಿಯ ಸಾಹಿತಿಗಳು ಬೆಳಗಾವಿ
ಸ್ನೇಹಾ ಪ್ರಿಂಟರ್ಸ್
ಬೆಲೆ : 130/-
ರಕ್ಷಾಪುಟ : ನಾರಾಯಣ.

ಆತ್ಮೀಯರೆ, ಇಲ್ಲಿ ಸೇರಿದ ನನ್ನ ಸಾಹಿತ್ಯಕ ಬಳಗಕ್ಕೆ ವಂದನೆಗಳು. ಇಂದು ತುಂಬಾ ಸಂತಸದ ದಿನ ಏಕೆಂದರೆ ನಮ್ಮೆಲ್ಲರಿಗೂ ಹಿರಿಯರಾದ ಸ.ರಾ. ಸುಳಕೂಡೆ ಸರ್ ಅವರ *“ಮಕ್ಕಳು ಮತ್ತು ಪ್ರಚಲಿತ”* ಸಾಹಿತ್ಯ ಪುಸ್ತಕ ಲೋಕಾರ್ಪಣೆಗೊಳುತ್ತಿದೆ. ಅವರಿಗೆ ಮನದಾಳದ ಅಭಿನಂದನೆಗಳು. ಪ್ರಸ್ತುತ ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ ಪುಸ್ತಕವನ್ನು ಸ್ನೇಹಾ ಪ್ರಿಂಟಿಂಗ್ ಪ್ರೆಸ್‍ನವರು ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ. ಮುಖ ಪುಟವೆ ಪುಸ್ತಕದ ಕನ್ನಡಿಯಾಗಿದೆ ಎಂದರೆ ತಪ್ಪಲ್ಲ.

ಶಿಕ್ಷಣ ತಜ್ಞರಾದ ಶಿವಶಂಕರ ಹಿರೇಮಠರ ಶುಭಾಶಯದೊಂದಿಗೆ ವಿದ್ಯಾಧರ ಮುತಾಲಿಕ ದೇಸಾಯಿಯವರ ” ಮತ್ತೊಮ್ಮೆ ಬಾಲ್ಯ ಬಯಸುವಾಸೆ ” ಎನ್ನುವ ಚಂದದ ಮುನ್ನಡಿಯು ಪುಸ್ತಕದ ಸಾರ/ಹಿನ್ನೆಲೆ ಎಲ್ಲವನ್ನು ಬಿಡಿಸಿಟ್ಟಿದೆ. 18 ಅಧ್ಯಾಯಗಳ ಹೂರಣ ಉಣಬಡಿಸಿದ್ದಾರೆ. ಲೇಖಕರ ಮಾತಿನಲ್ಲಿ ಮಕ್ಕಳ ಮುಗ್ಧತೆ ಪ್ರಚಲಿತ ಅವರಿಗೆ ಬೇಕಾದ ವಿಷಯ. ಅವರಿಗೆ ಸಹಕರಿಸಿದ ಎಲ್ಲರನ್ನು ಸ್ಮರಿಸಿದ್ದಾರೆ. ಎಸ್.ಆರ್ ಹಿರೇಮಠ ನಿವೃತ್ತ ಪ್ರಾಚಾರ್ಯರು ಮೆಚ್ಚುಗೆಯ ಮಾತು, ಪ್ರಕಾಶಕರ ಮಾತು ಜಿಲ್ಲಾ ಕ.ಸಾ.ಪ ರ ಹಾರೈಕೆ ಪುಸ್ತಕಕ್ಕೆ ನವಿಲುಗರಿಯ ಮೆರುಗು ನೀಡಿದೆ.

- Advertisement -

ಮಕ್ಕಳ ಭವಿಷ್ಯ ವಾಸ್ತವ ನೆಲೆಗಟ್ಟಿನಲ್ಲಿ ನಿಂತು ವಿಚಾರ ಮತ್ತು ಆಚಾರದತ್ತ ಅವಲೋಕಿಸಿದರೆ ಉತ್ತಮ ಭವಿಷ್ಯ ಸಾಧ್ಯ ಎಂದು ಒಂದನೆ ಅಧ್ಯಾಯದಲ್ಲಿ ವ್ಯಕ್ತವಾಗಿದೆ. ಎರಡನೆ ಅಧ್ಯಾಯದಲ್ಲಿ ವಯೋಮಿತಿವಾರು ಮಾಹಿತಿ ಅಂಕಿ ಅಂಶದೊಂದಿಗೆ ನೀಡಿದ್ದಾರೆ. ಇದೇ ರೀತಿ ಹಲವಾರು ವಿಷಯ ಮಕ್ಕಳ ಪ್ರಗತಿ, ಬೆಳವಣಿಗೆ, ತಂದೆ ತಾಯಿ, ಸ್ನೇಹಿತ, ಸಮಾಜದ ಪಾತ್ರಗಳನ್ನು ನಿರೂಪಿಸಿದ್ದಾರೆ.

ಮಕ್ಕಳ ಸಾಹಿತ್ಯದ ರಚನೆ ಮತ್ತು ಪ್ರಸಾರದ ಮಹತ್ವದಲ್ಲಿ ಮಗುವಿನ ಬಾಲ್ಯ ಅದರಲ್ಲಿ ಗಾಂಧಿಜಿಯವರ ಮೇಲೆ ಆದ ಪರಿಣಾಮ, ಜವಾಹರಲಾಲ ಅವರ ಮಗಳಿಗೆ ಪಾತ್ರ, ತಾಯಿ ಜೀಜಾಮಾತಾಳ ಕಥೆಗಳ ಪ್ರಭಾವ , ಆಧುನಿಕ ಲೇಖನಮಾಲೆಗಳು, ಸಾಹಿತಿಗಳು ಅವರ ನಿಲುವುಗಳು, ತಂದೆ ತಾಯಿ, ಶಿಕ್ಷಕರ ಪಾತ್ರ, ವಿಜ್ಞಾನ ಶಿಕ್ಷಕ ವಿಜ್ಞಾನಿಗಳ ಪಾತ್ರ ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರ ಪಾತ್ರ ಕಾನೂನು ಪ್ರಕಾಶಕರ ಪಾತ್ರ, ಸಮೂಹ ಮಾಧ್ಯಮಗಳ ಪಾತ್ರ, ಮುಂತಾದವುಗಳನ್ನು ಎಳೆಎಳೆಯಾಗಿ ಓದುಗರಿಗೆ ಓದಲು ಬಿಟ್ಟಿದ್ದಾರೆ. ಮಕ್ಕಳ ಸಾಹಿತ್ಯದ ಹಿನ್ನೋಟ ಮುನ್ನೋಟ ಉತ್ತಮವಾಗಿ ಮೂಡಿಬಂದಿದೆ. ಸಾಹಿತ್ಯಕ ಸವಾಲುಗಳೇನು?

ಮಕ್ಕಳ ಸಾಹಿತ್ಯ ಹೇಗೆ ರಚನೆಗೊಳ್ಳಬೇಕು?, ಮಕ್ಕಳ ಹಕ್ಕುಗಳ ಕೂಲಂಕುಷ ಪರಿಚಯ ಪುಸ್ತಕದಲ್ಲಿ ಮಕ್ಕಳ ಸಾಹಿತ್ಯದ ಅವಲೋಕನದೊಂದಿಗೆ ನಾಡಿನ ಹೆಸರಾಂತ ಮಕ್ಕಳ ಸಾಹಿತಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

ಪ್ರೊ. ಸಂಗಮೇಶ ಗುಜಗೊಂಡ ಮೂಡಲಗಿ ಅವರ ಬೆನ್ನುಡಿಯ ಬೆನ್ನುತಟ್ಟುವಿಕೆ ನುಡಿಯೊಂದಿಗೆ ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ ಪುಸ್ತಕ ಹಿರಿಯ ಸಾಹಿತಿ ಸ.ರಾ. ಸುಳಕೂಡೆ ಅವರಿಂದ ಅನಾವರಣಗೊಂಡಿದೆ. ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

ಸಹೃದಯರು ಸಂಗ್ರಹಯೋಗ್ಯವಾದ ಈ ಪುಸ್ತಕವನ್ನು ಕೊಂಡು ಓದಿ ಪ್ರೋತ್ಸಾಹಿಸಬೇಕೆಂದು ನನ್ನ ಅನಿಸಿಕೆ. ಸ.ರಾ. ಸುಳಕೂಡೆ ಸಾಹಿತಿಗಳಿಂದ ಇನ್ನಷ್ಟು ಪುಸ್ತಕ ಹೊರಬರಲಿ ಎಂದು ಆಶಿಸುತ್ತೇನೆ.

ಪರಿಚಯ:


ಲಲಿತಾ ಮ. ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ವಿಜೇತರು, ಶಿಕ್ಷಕಿ, ಬೆಳಗಾವಿ.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group