spot_img
spot_img

ಮಕರ ಸಂಕ್ರಮಣದ ಕವಿತೆಗಳು

Must Read

- Advertisement -

ಸಂಕ್ರಾಂತಿ ಹಬ್ಬ

ಸಂಕ್ರಾಂತಿ ಬಂತೋ ಬಂತೋ
ಎಳ್ಳು ಬೆಲ್ಲಾ ಹಂಚಿ ಬಂತೋ
ಉತ್ತರಾಯಣ ಪುಣ್ಯ ಕಾಲವೊ
ನದಿ ಸ್ನಾನ ಮಾಡುವ ಕಾಲವೊ||

ಕಹಿ ನನೆಪು ಮರೆವ ಹಬ್ಬ
ಸಿಹಿ ನೆನಪು ತರುವ ಹಬ್ಬ
ಸ್ನೇಹವನ್ನು ಕೊಡಿಸುವ ಹಬ್ಬ
ಪ್ರೀತಿಯನ್ನು ತೋರುವ ಹಬ್ಬ||

ಬಂಧು ಬಗಳಗವ ಬೆಸೆಯುವ ಹಬ್ಬ
ಸುಗ್ಗಿ ಕಾಲದಲ್ಲಿ ಬರುವ ಹಬ್ಬ
ಹಳ್ಳಿ ಗ ಬಹಳ ಸೊಗಸಿನ ಹಬ್ಬ
ಬಣ್ಣ ಬಣ್ಣ ಬಸವ ತೋಳುದು
ಪ್ರೀತಿ ಯಿಂದ ಆಚರಿಸುವ ಹಬ್ಬ||

- Advertisement -

ಮಹಾಂತೇಶ ಎನ್ ಪಾಟೀಲ್ ಸ,ಶಿ


ಸಂಕ್ರಾಂತಿ ಹಬ್ಬ

ಬಂದಿತಿಂದು ಸಂಕ್ರಮಣ
ಎಳ್ಳು ಬೆಲ್ಲ ಸಿಹಿ ಹಂಚೋಣ

ಕಳೆಯಿತು ದಕ್ಷಣಾಯಣ
ಶುರುವಾಯಿತು ಉತ್ತರಾಯಣ

- Advertisement -

ಹಿಗ್ಗುತ ಬಂದಿತು ಸುಗ್ಗಿಯ ಹಬ್ಬ
ತಿನ್ನೋಣ ಬನ್ನಿ ಸುಲುಗಾಯಿ ಕಬ್ಬ

ಸಜ್ಜಿಯ ರೊಟ್ಟಿ ಎಣ್ಣೆ ಬದನೆಕಾಯಿ
ತುಪ್ಪ ಹಚ್ಚಿದ ಸೇಂಗಾ ಹೋಳಿಗೆ

ಕೊರೆವ ಚಳಿಗೆ ಬಿರಿದ ಮೈಗೆ
ಅರೆದಎಳ್ಳಿನ ಎಣ್ಣೆಯನ್ನು
ಸ್ನಾನ

ಹಂಚುವರು ಮುತ್ತೈದೆಯರಿಗೆ
ಹಣ್ಣು ಹಂಪಲುಗಳ ಬಾಗಿನ

ಎಳ್ಳು ಬೆಲ್ಲ ಹಂಚಿ ತಿನ್ನೋಣ
ಒಳ್ಳೆ ಹಿತನುಡಿ ಮಾತನಾಡೋಣ

ಸುಗ್ಗಿಯ ಹಾಡಿನ ಸಂಕ್ರಾಂತಿ
ತರಲಿ ಎಲ್ಲರ ಬಾಳಲಿ ಸುಖಶಾಂತಿ

‌ನೀಲಮ್ಮ. ಎಸ್. ಸಾಲಿಮಠ, ಕಲಬುರ್ಗಿ


ಸಂಕ್ರಾಂತಿಯ ಸೊಬಗು

ಸುಗ್ಗಿಯ ಸೊಬಗಿನ ಸಮಯವು ಸಂತೋಷದಿ ತೇಲಿವ ಸಡಗರವು ಸಿಹಿ-ಕಹಿ ನೆನಪು ಮರೆಯುವೆವು ಸಂಕ್ರಾಂತಿಯ ಹಬ್ಬವ ಸವಿವೆವು

ಉತ್ತರಾಯಣ ಸೂರ್ಯನ ಕಿರಣವು ಕಾಂತಿ ಹೊಂಗಿರಣದ ಪುಣ್ಯಕಾಲವು ಸುಖ ಸಮೃದ್ಧಿಯ ಹೊತ್ತುತರುವವು ಸಂಕ್ರಾಂತಿಯ ಹಬ್ಬವ ಸವಿವೆವು

ವರ್ಷವೆಲ್ಲ ರೈತನ ಶ್ರಮವು
ಬೆವರು ಸುರಿಸಿದ ಪ್ರತಿಫಲವು ಭೂತಾಯಿಗೆ ನಮಿಸುತ ತನ್ಮಯವು ಸಂಕ್ರಾಂತಿಯ ಹಬ್ಬವ ಸವಿವೆವು

ಎಳ್ಳು ಬೆಲ್ಲ ಸವಿದು ಹಂಚುವೆವು
ಪವಿತ್ರ ಪುಣ್ಯಸ್ನಾನವ ಮಾಡುವೆವು
ಇಷ್ಟಾರ್ಥ ದೇವರ ದರ್ಶನ ಪಡಿವೆವು ಸಂಕ್ರಾಂತಿಯ ಹಬ್ಬವ ಸವಿವೆವು

ದ್ವೇಷ ಅಸೂಯೆಗಳನು ಮರೆವೆವು ಸವಿ ಮಾತುಗಳನ್ನು ನುಡಿಯುವೆವು
ಸರಿ-ತಪ್ಪುಗಳನ್ನು ತಿದ್ದಿಕೊಳ್ಳುವೆವು ಸಂಕ್ರಾಂತಿಯ ಹಬ್ಬವ ಸವಿವೆವು

ಬಾಗಲದಾಚೆಗೆ ರಂಗೋಲಿಯ ಚಿತ್ತಾರವು
ಹೆಂಗಳೆಯರ ಕಣ್ಮನ ಸೆಳೆಯುವ ಅಲಂಕಾರವು
ಆಕಾಶದಲ್ಲಿ ತೇಲಿಬಿಟ್ಟ ಗಾಳಿಪಟವು
ಸಂಕ್ರಾಂತಿಯ ಹಬ್ಬವ ಸವಿವೆವು

ಚಳಿ-ಬಿಸಿಲು ಕಣ್ಣಾಮುಚ್ಚಾಲೆಯವು ಕರೋನಾ ಮುಕ್ತ ಲಸಿಕೆ ಸಮಯವು
ಆರೋಗ್ಯಕರ ಬದುಕಿನ ಜೀವನವು ಸಂಕ್ರಾಂತಿಯ ಹಬ್ಬವ ಸವಿವೆವು

ಬಂಧು ಬಳಗವನು ಸೇರಿಸುವೆವು
ನಗುವಿನಲ್ಲೂ ನೋವನ್ನು ಮರೆವೆವು
ಶತಮಾನ ಸಂಸ್ಕೃತಿ ಉಳಿಸುವೆವು
ಸಂಕ್ರಾಂತಿಯ ಹಬ್ಬವ ಸವಿವೆವು

ರಚನೆ : ಹೆಚ್ ಎಸ್ ಗೌಡರ (ಶಿಕ್ಷಕರು)


ಎಳ್ಳ ಅಮಾವಾಸ್ಯೆ

ಜಾನಪದ ಹಾಡು ಚೆಂದ
ಜನಪದ ಕಥೆಯು ಚೆಂದ
ಜೋಗುಳ ಹಾಡು ಬಲುಚೆಂದ
ಎಳ್ಳ ಅಮಾವಾಸ್ಯೆ ಚೆಂದದಲ್ಲಿ ಚೆಂದ

ಹಾಡು ಹಾಡು ಜಾನಪದ ಹಾಡು
ಹೇಳು ಹೇಳು ಜಾನಪದ ಹಾಡಿ ಹೇಳು
ಸಂಭ್ರಮ ಹಾಡು ಕೇಳು
ಎಳ್ಳ ಅಮಾವಾಸ್ಯೆ ನೋಡು

ಭೂತಾಯಿ ಮೈದುಂಬಿ ನಿಂತಿಹಳು
ಮುತ್ತೈದಿ ತಾಯಿ ಪುಜೆ ಮಾಡಿಹಳು
ಹೆಂಗೆಳೆಯರು ಬಂಡಿ ಹತ್ತಿರಲು
ಬಸವಣ್ಣನ ಬಂಡಿ ಸಾಗಿರಲು

ತಾಯಿ ನಮ್ಮ ಕರುಣಿಸು
ಕೈ ಹಿಡಿದು ನನ್ನ ನಡೆಸು
ನನ್ನ ಮೊರೆಯ ಆಲಿಸು
ನಮ್ಮನು ನೀ ಆರ್ಶಿವದಿಸು

ನಾನು ನನ್ನದು ಮರೆತಿರಲು
ಪ್ರೀತಿ ಪ್ರೇಮ ತುಂಬಿರಲು
ಸಿಹಿ ಸಂಭ್ರಮದಿಂದರಲು
ಸಂಸ್ಕೃತಿ ಮೈಗೂಡಿ ನಿಂತಿರಲು

ಶ್ರೀ.ಎಚ್.ವ್ಹಿ.ಈಟಿ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group