spot_img
spot_img

ಮಾನವನಿಗೂ ದೇವರಿಗಿರುವ ವ್ಯತ್ಯಾಸವೇನು?

Must Read

- Advertisement -

ದೇವರು ನಿರಾಕಾರ ಮಾನವ ಸಾಕಾರ. ಆತ್ಮನಿರಾಕಾರ ದೇಹ ಸಾಕಾರ, ಸತ್ಯ ನಿರಾಕಾರ ಅಸತ್ಯ ಸಾಕಾರ, ಧರ್ಮ ನಿರಾಕಾರ ಧರ್ಮರಕ್ಷಕ ಸಾಕಾರ.ತತ್ವ ನಿರಾಕಾರ ತಂತ್ರ ಸಾಕಾರ. ಮಂತ್ರ ನಿರಾಕಾರ ಮಂತ್ರವಾದಿ ಸಾಕಾರ.

ಜ್ಞಾನ ನಿರಾಕಾರ ವಿಜ್ಞಾನ ಸಾಕಾರ. ಸತ್ಯಯುಗದಿಂದಲೂ ಭೂಮಿಯ ಮೇಲಿರುವ ಎಲ್ಲವೂ ಕಲಿಯುಗದಲ್ಲಿಯೂ ಇದೆ. ಆದರೆ ದೈವತ್ವ ಪಡೆದವರು ದೇವರಾದರು. ಅಸುರತ್ವ ಪಡೆದವರು ಮಾನವರಾಗೇ ಉಳಿದರು. ಇಲ್ಲಿ ನಾನೆಂಬ ಅಹಂಕಾರ ಸ್ವಾರ್ಥ ಕ್ಕೆ ಬಲಿಯಾಗಿರುವ ಮಾನವನ ದೇಹವನ್ನು ಮಾನವನೆ ಬೆಳೆಸಿಕೊಂಡು ತನ್ನ ಮೂಲ ಅಸ್ತಿತ್ವಕ್ಕೆ ಹೊರಗಿನ ಸತ್ಯದ ಬೆನ್ನೆತ್ತಿದರೆ ಒಳಗೇ ಅಡಗಿರುವ‌ ಸತ್ಯವೆಂಬ ದೇವರು ಕಾಣಬಹುದೆ? ಮಹಾತ್ಮ,ಪರಮಾತ್ಮ ಒಳಗೇ ಇರುವಾಗ ಒಳಗೆ ಹೊಕ್ಕು ನೋಡುವುದಕ್ಕೆ ಒಳಗಿನ ದೇವರು ಸಹಕರಿಸಬೇಕಿದೆ. ಅಂದರೆ, ಮನೆಯ ಒಳಗಿನ ದೇವರನ್ನು ಪೋಷಕರೆ ಮಕ್ಕಳಿಗೆ ತಿಳಿಸಬೇಕಿದೆ.ಅದು ನಮ್ಮೊಳಗೇ ಇರೋದನ್ನೂ ಮೊದಲು ಕಂಡುಕೊಳ್ಳಬೇಕಿದೆ.

ನಮಗೇ ಕಾಣದ,ಸಿಗದ ದೇವರು ಮಕ್ಕಳಿಗೆ ಸಿಗಬೇಕಾದರೆ ಅದಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕಿದೆ.ಒಳಗಿನ ಗುರುವಾದ ತಾಯಿಯಲ್ಲಿ ದೈವತ್ವವಿದ್ದರೆ ಕಲಿಸಬಹುದು. ಇಲ್ಲವಾದರೆ ಹೊರಗೆ ದೇವರನ್ನು ನಿಸ್ವಾರ್ಥ, ನಿರಹಂಕಾರದ ಸೇವೆ ಮಾಡುವುದರ ಮೂಲಕ ಕಂಡುಕೊಳ್ಳಬಹುದು. ಭೌತಿಕಆಸೆ, ಆಕಾಂಕ್ಷೆಗಳನ್ನು ದೇವರು ಈಡೇರಿಸುವ ಹಾಗೆಯೇ ಆಧ್ಯಾತ್ಮಿಕ ಆಸೆಯನ್ನೂ ಪೂರೈಸುವರು.

- Advertisement -

ಭೌತಿಕ ಆಸೆಬೇಗ ಈಡೇರಿದರೆ,ಆಧ್ಯಾತ್ಮಿಕ ಆಸೆ ನಿಧಾನವಾಗಿ, ಕಷ್ಟ ಪಟ್ಟಾಗಲೆ ಸಿಗುವ ಕಾರಣ ಮಾನವ ಹೊರಗಿನ ಆಸೆಯಲ್ಲಿ ಮುಂದೆ ನಡೆದು ಆಕಾಶದೆತ್ತರ ಹಾರುತ್ತಾ ಕೆಳಗೆ ನೋಡದೆ,ಹಿಂದೆ ತಿರುಗದೆ,ಅಡ್ಡಬಂದವರನ್ನು ಹಿಂದೆ ತಳ್ಳಿ ವೇಗವಾಗಿ ಹೋಗಿ ಮರೆಯಾಗಿರೋದು.

ಆದರೆ,‌‌ ಮರೆಯಾದ ಜೀವಕ್ಕೆ ಮುಕ್ತಿ ಸಿಗದೆ ಮತ್ತೆ ಜನ್ಮ ತಳೆದಾಗ ಹಿಂದಿನ ಯಾವುದೇ ಸಂಬಂಧಿಸಿದ ವಿಚಾರ ಮರೆತು ಹೋದ ಕಾರಣ ಮತ್ತೆ ಹೊಸ ಜೀವನದಲ್ಲಿ ನಡೆಯಬೇಕಿದೆ. ಈ ಹೊಸ ಜೀವನಕ್ಕಾದರೂ ಮೂಲದ ಶಿಕ್ಷಣ ಆಧ್ಯಾತ್ಮವಾಗಿದ್ದರೆ ಉತ್ತಮ. ಅದೂ ಭೌತಿಕ ಕ್ಕೆ ಸೇರಿದರೆ ಇದೇ ಜೀವನ ಪುನರಾವರ್ತನೆ ಆಗುತ್ತದೆ.

ಇಲ್ಲಿ ಯಾರೂ ಪೂರ್ಣ ಒಳ್ಳೆಯವರಲ್ಲ.ಕೆಟ್ಟವರೂ ಇಲ್ಲ ಆದರೆ, ಅಜ್ಞಾನದ ಜನತೆಗೆ ತನಗೆ ಯಾರು ಉಪಕಾರ ಮಾಡುವರೋ ಅವರು ಒಳ್ಳೆಯವರು.ಅಪಕಾರ ಮಾಡುವರೋ ಕೆಟ್ಟವರಾಗಿ ಕಾಣುತ್ತಾರೆ. ಒಬ್ಬ ಸತ್ಯ ತಿಳಿಸಿ ನಿನ್ನ ಜೀವನದಲ್ಲಿ ಅಳವಡಿಸಿಕೋ ಎನ್ನುವುದು ಅಪಕಾರವೆಂದೆನಿಸಿದರೆ ಅಜ್ಞಾನವಷ್ಟೆ.ಅದೇ ಸುಳ್ಳಿನಿಂದ ಸಂಪಾಧಿಸಿ ಶ್ರೀಮಂತ ನಾಗು ಎನ್ನುವುದು ಧರ್ಮವೂ ಅಲ್ಲ,ಸತ್ಯವೂ ಅಲ್ಲ. ಜ್ಞಾನವಲ್ಲ. ಇದನ್ನು
ಮಾನವನಾದವರು ಅರ್ಥ ಮಾಡಿಕೊಳ್ಳಲೂ ಹಿಂದಿನ ಜನ್ಮದ ಪಾಪ ಕರ್ಮಗಳು ಬಿಡೋದಿಲ್ಲ.

- Advertisement -

ಅವರವರ ಕರ್ಮಫಲವನ್ನು ಅವರೇ ಅನುಭವಿಸುವುದಷ್ಟೆ ನಿರಾಕಾರ ಬ್ರಹ್ಮನ ಸೃಷ್ಟಿ ಯ ಸತ್ಯ. ಸೃಷ್ಟಿಸಿದ ಪರಮಾತ್ಮ ನೇರವಾಗಿ ನಡೆಸುವುದೂ ಸತ್ಯ. ಆದರೆ ಅದರ ಮಧ್ಯೆ ತನ್ನ ಬುದ್ದಿಶಕ್ತಿಯನ್ನು ಹೆಚ್ಚಿಸಿಕೊಂಡು ನಾನೇ ಬ್ರಹ್ಮ ಎಂದು ಆಳೋ ಮಧ್ಯವರ್ತಿಗಳು ಭೂಮಿ ಆಳೋದರಲ್ಲಿ ಯಾವ ಧರ್ಮವಿದೆ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಉತ್ತಮ. ಆಳೋದಕ್ಕೆ ಜ್ಞಾನ ಬೇಕು.

ವಿಜ್ಞಾನ ಅಳಿಸುತ್ತದೆ.ಯಾವುದನ್ನು ಅಳಿಸಿದೆ ಎಂದಾಗ ಮಾನವೀಯತೆಯನ್ನು ,ಧರ್ಮ ,ಕರ್ಮ, ಸತ್ಯ, ನ್ಯಾಯ, ನೀತಿ, ಸಂಸ್ಕೃತಿ, ಭಾಷೆಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ತಾನೇ ಸರ್ವಾಧಿಕಾರಿ, ಸರ್ವಜ್ಞ, ಸರ್ವೋಚ್ಚ ಎನ್ನುವ ಅಹಂಕಾರದೆಡೆಗೆ ನಡೆಸಿ ಈಗಿದು ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಿದೆ. ಜನರನ್ನು ಆಳಲು ಹೋಗಬಾರದು.

ಮಾನವನನ್ನು ಆಳಲು ಹೋಗಬಾರದು.ದೇವರನ್ನು ಆಳಬಾರದು. ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದಷ್ಟು ಜ್ಞಾನವನ್ನು ಪಡೆದರೆ ,ನಾವು ದೇವರ ಆಳಾಗುತ್ತೇವೆ. ಸತ್ಯದ ದಾಸರಾಗುತ್ತೇವೆ,ಪರಮಾತ್ಮರಿಗೆ ಶರಣಾಗುತ್ತೇವೆ.‌ ಇಲ್ಲಿ
ಅಸಂಖ್ಯಾತ ದೇವಾನುದೇವತೆಗಳಿದ್ದರೂ ದೇಶದೊಳಗೆ ಪ್ರಜೆಗಳಲ್ಲಿ ದೈವತ್ವವಿಲ್ಲವಾದರೆ ಪ್ರಯೋಜನವಿಲ್ಲ.

ಹಾಗೇ ಎಲ್ಲಾ ದೇವರ ದೇವಸ್ಥಾನವು ಅಸಂಖ್ಯವಾಗಿದೆ ಆದರೂ ಎಲ್ಲಾ ದೇವಸ್ಥಾನ ಒಂದಾಗಿಲ್ಲ. ಧರ್ಮವೂ ಹಾಗೆಯೇ ಆಗಿದೆ.ದೇಶದೊಳಗೆ ಇಷ್ಟೊಂದು ಭಿನ್ನಾಭಿಪ್ರಾಯ ವಿರುವಾಗ ಇಡೀ ಜಗತ್ತನ್ನು ನಡೆಸುವ ಆ ಜಗದೀಶ್ವರಿ,ಜಗದೀಶ್ವರರ ಅರ್ಧನಾರೀಶ್ವರ ಶಕ್ತಿಯ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಾದರೆ ಹೇಳಿದರೆ ಕೇಳೋರಿಲ್ಲ. ಯಾರು ಹೇಳಲಿ ,ಕೇಳಲಿ,ಬಿಡಲಿ ಸತ್ಯ ಸತ್ಯವೆ.ನಿರಾಕಾರ ಸತ್ಯವೆ ಆ  ಇವೆರಡರ ಸಮಾನತೆಯನ್ನು ಮಾನವ ಅರ್ಥ ಮಾಡಿಕೊಳ್ಳಲು ಬೇಕಿದೆ ಸಾಮಾನ್ಯಜ್ಞಾನ.

ನಾನೊಬ್ಬ ಮಾನವನಾಗಿ ಅಮಾನವೀಯ ಗುಣವಿರಬೇಕು. ನಾನೊಬ್ಬ ಬ್ರಹ್ಮಜ್ಞಾನಿ ಎಂದು ತಿಳಿಯಲು ಬ್ರಹ್ಮಜ್ಞಾನ ಇರಬೇಕು. ನಾನೊಬ್ಬ ದಾಸ,ಶರಣ,ಸಂನ್ಯಾಸಿ, ಸಂತ ಎಂದು ತಿಳಿದವರಿಗೆ ವೈರಾಗ್ಯವಿರಬೇಕು. ಜ್ಞಾನವಿಲ್ಲದೆ ವೈರಾಗ್ಯವಿರೋದಿಲ್ಲ. ಒಟ್ಟಿನಲ್ಲಿ ಜ್ಞಾನದಲ್ಲಿ ಸಮಿಥ್ಯಜ್ಞಾನ ಸಾಕಾರ. ಭೂಮಿಯಿಲ್ಲದೆ ಮನುಕುಲವಿಲ್ಲ.ಮನುಕುಲವಿಲ್ಲದೆ ಸಂಸಾರವಿಲ್ಲ.ಸಂಸಾರವಿಲ್ಲದೆ ಪರಮಾತ್ಮನ ಅರಿವಿಲ್ಲ. ಅದ್ವೈತ ತತ್ವದಲ್ಲಿ ನಾನೆಂಬುದೇ ಇಲ್ಲ.

ಬದಲಾಗುವ ಈ ಜೀವನದಲ್ಲಿ ಶಾಶ್ವತವಾದದ್ದು ಆತ್ಮ ಮಾತ್ರ. ಆತ್ಮಜ್ಞಾನವೇ ಶಾಶ್ವತ. ಇದನ್ನು ಓದಿ, ನೋಡಿ, ಕೇಳಿ, ಹೇಳಿದ ಮಾತ್ರಕ್ಕೆ ಜ್ಞಾನಿಗಳಾಗೋದಿಲ್ಲ. ಅದನ್ನು ಒಳಗೆ ಅಳವಡಿಸಿಕೊಂಡು ಅನುಭವಿಸಿ ತಿಳಿದವರು ಜ್ಞಾನಿಗಳು ಈಗಿನ ವಿಜ್ಞಾನ ಜಗತ್ತು ಇದರಿಂದ ಹೊರಬಂದು ಆಕಾಶ ನೋಡುತ್ತಿದೆ.

ಭೂಮಿಯ ಮೇಲಿನ ಜೀವ ಆಕಾಶದೆತ್ತರ ಹೋಗಿ ಸಂಸಾರ ನಡೆಸಲಾಗುವುದೆ? ಸಂಸಾರದಿಂದ ಬಿ ಸಂಸಾರದಲ್ಲಿದ್ದೇ ಸತ್ಯ ಧರ್ಮ, ನ್ಯಾಯ, ನೀತಿ,ಸಂಸ್ಕೃತಿ ಯ ಉದ್ದೇಶ ತಿಳಿದು ಕರ್ಮ ಮಾಡಿ ಋಣಮುಕ್ತ ಆಗಬೇಕೆನ್ನುವುದೆ ಸತ್ಯ.

ಸಂಸಾರಿಯ ಸಮಸ್ಯೆಗೆ ಸಂನ್ಯಾಸಿ ಪರಿಹಾರ ಕೊಡಲು ಕಷ್ಟ. ಸಂನ್ಯಾಸಿಯ ಸಮಸ್ಯೆಗೆ ಸಂಸಾರಿ ಪರಿಹಾರ ಕೊಡಲು ಕಷ್ಟ. ಅವರವರ ಸಮಸ್ಯೆಯ ಮೂಲ ಅವರ‌

ಹಿಂದಿನ ಗುರು ಹಿರಿಯರ ಧರ್ಮ ಕರ್ಮದೊಳಗಿದೆ.ಅದೇ ಸಾಲವಾಗಿ ಕಾಡುವಾಗ,ಸತ್ಕರ್ಮದಿಂದ ಅದರಿಂದ ಬಿಡುಗಡೆ ಪಡೆಯಲು ಅವರ ಜ್ಞಾನದಲ್ಲಿ ಸತ್ಯವಿದ್ದರೆ ಮಾತ್ರ ಬಳಸಿ
ಮಿಥ್ಯವನ್ನು ಬಿಟ್ಟು ನಡೆದರೆ ಆಧ್ಯಾತ್ಮ ಸಾಧನೆ. ಆದರೆ ಅವರ ಬೌತಿಕ ಆಸ್ತಿ ಬೇಕು.

ಜ್ಞಾನ ಬೇಡ ಎಂದರೆ ಇದೇ ರಾಜಕೀಯವಾಗಿರುತ್ತದೆ. ರಾಜಕೀಯ ಕಣ್ಣಿಗೆ ಕಾಣುತ್ತದೆ.ರಾಜಯೋಗ ಕಣ್ಣಿಗೆ ಕಾಣೋದಿಲ್ಲ. ಹೀಗಾಗಿ ರಾಜಕೀಯ ಇಂದು ಮುಂ ಅದರ ಹಿಂದೆ ನಡೆದವರನ್ನು ಕೆಟ್ಟದಾಗಿ ಆಳುತ್ತಿದೆ.

ಇದನ್ನು ಸರಿಪಡಿಸಲು ಒಬ್ಬ ವ್ಯಕ್ತಿಯಿಂದಾಗಲಿ,ಶಕ್ತಿಯಿಂದಾಗಲಿ ಧರ್ಮದಿಂದಾಗಲಿ, ದೇವರಿಂದಾಗಲಿ ಕಷ್ಟ. ಒಂದೇ ದೇಶದೊಳಗೆ ಸೇರಿರುವ ಇವರೆಲ್ಲರೂ ಒಂದಾದರೆ ಸಾಧ್ಯ. ಅದು ಆಗೋದಿಲ್ಲವಾದರೆ ತಿಳಿದವರು ಅವರನ್ನು ಅವರೆ ಆಳಿಕೊಳ್ಳಲು ಜ್ಞಾನದೆಡೆಗೆ ಬಂದರೆ ಉತ್ತಮ. ಸೃಷ್ಟಿಸಲು ಸಾಧ್ಯವಾಗದವರು ಲಯಕ್ಕೆ ಮುಂದಾದರೆ ನಷ್ಟ ಯಾರಿಗೆ? ಮಾನವ ಕಾರಣಮಾತ್ರದವನಾದರೂ ನಾನೇ ಎನ್ನುವ ಅತಿಯಾದ ಆತ್ಮವಿಶ್ವಾಸ, ಅಹಂಕಾರ ಅವನನ್ನು ಕರ್ಮ ಬಂಧನ ಕ್ಕೆ ತಳ್ಳಿರುವುದೆ ನಮ್ಮ ಇಂದಿನ ಸ್ಥಿತಿಗೆ ಕಾರಣವೆನ್ನಬಹುದಷ್ಟೆ.

ಇದನ್ನು ಹಣ ,ಅಧಿಕಾರ, ಸ್ಥಾನಮಾನ,ರಾಜಕೀಯತೆಯಿಂದ
ಸರಿಪಡಿಸಲು ಹೋದರೆ ಇನ್ನಷ್ಟು ಅಸುರ ಶಕ್ತಿಗಳ ಜನನ ಆಗುವುದಂತೂ ಸತ್ಯವೆ. ಸ್ಥಿತಪ್ರಜ್ಞ ತೆ ಎಂದರೆ ನಮ್ಮ ಇಂದಿನ ಸ್ಥಿತಿಗೆ ನಾನೆಷ್ಟು ಕಾರಣವೆಂಬ ಅರಿವಿನಲ್ಲಿರುವುದು.

ಸಾಧ್ಯವಾದರೆ ಬದಲಾಯಿಸಿಕೊಳ್ಳಲು ಪ್ರಯತ್ನ ನಡೆಸಬಹುದು. ಇದಕ್ಕೆ ಹೊರಗಿನ ಸಹಕಾರದ ಅಗತ್ಯವಿಲ್ಲ. ಸಮಾಜಕಲ್ಯಾಣ ಸಮಾಜದ ಜನರಿಗೆ ನೀಡುವ ನೈತಿಕ ಶಿಕ್ಷಣದಲ್ಲಿತ್ತು. ಅದನ್ನು ಪೋಷಕರೆ ಮನೆಯೊಳಗೆ ನೀಡಿ,ಬೆಳೆಸಬಹುದು. ಇದೇ ನಿಜವಾದ ಸಮಾಜಸೇವೆ.

ಇದಕ್ಕೆ ಬೇಕಿದೆ ಸತ್ಯಜ್ಞಾನ.ಅದು ನಮ್ಮೊಳಗೇ ಅಡಗಿದೆ. ಜ್ಞಾನಕ್ಕೆ ಹಣವನ್ನು ದಾನ ಮಾಡಬೇಕು.ಅದರಲ್ಲಿ ರಾಜಕೀಯವಿರಬಾರದಷ್ಟೆ. ಕೊಟ್ಟು ಮರೆಯಬೇಕು. ಕೊಟ್ಟು ಪಡೆಯುವುದಲ್ಲ. ಕೊಟ್ಟು ಆಳೋದಂತೂ ಕೆಟ್ಟದ್ದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group