ರಂಜಾನ ಸಾಹೇಬ ನದಾಫ್ ಏಕೀಕರಣದ ಎಕೈಕ ಹುತಾತ್ಮ

Must Read

೧೯೫೩ ಅಕ್ಟೋಬರ್ ೩ರಂದು ಬಳ್ಳಾರಿ ಜನ ಭಾರಿ ಸಂತೋಷದಿಂದ ವಿಜಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೂಂಡಿದ್ದರು. ಕಾರಣ ಇಷ್ಟೇ ಏಕೀಕರಣದ ಸಂದಿಗ್ದ ಸಮಯದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಅಧಿಕೃತವಾಗಿ ಸೇರಿತ್ತು.

ಆದರೆ ೨ನೇಯ ತಾರೀಖಿನಂದು ದುರಂತವೂಂದು ನಡೆದು ಹೋಗಿತ್ತು .ಅಪ್ಪಟ ಕನ್ನಡ ಪ್ರೇಮಿ ಪೈಲ್ವಾನ ರಂಜಾನ_ಸಾಹೇಬ_ನದಾಫನನ್ನು ದುಷ್ಕರ್ಮಿಗಳು ಆ್ಯಸಿಡ ತುಂಬಿದ ಬಲ್ಬನ್ನು ಆತನ ಮುಖದಮೇಲೆ ಹಾಕಿ ಜೀವಹಾನಿಮಾಡಿದ್ದರು.

ಕರ್ನಾಟಕ ಏಕೀಕರಣ ದ ಸಂದಿಗ್ಧ ಸಮಯದಲ್ಲಿ ಬಳ್ಲಾರಿ ಜಿಲ್ಲಾ ವ್ಯಾಪ್ತಿಯ ಆಲೂರು ಅದವಾನಿ ಮತ್ತು ರಾಯದುರ್ಗ, ಆಂಧ್ರಪ್ರದೇಶಕ್ಕೆ ಸೇರಿದವು.ಇನ್ನುಳಿದ ಏಳು ತಾಲೂಕುಗಳು ಕರ್ನಾಟಕಕ್ಕೆ ಸೇರಿದವು.ಇದು ಕನ್ನಡ ಹೋರಾಟಗಾರರಿಗೆ ಸಿಕ್ಕ ಜಯವಾಗಿತ್ತು.ಈ ಕಾರಣ ೧೯೫೩ ಅಕ್ಟೋಬರ್ ೧ ರ ಮಧ್ಯರಾತ್ರಿ ಬಳ್ಳಾರಿ ಕೋಟೆಯ ಮೇಲೆ ೨೧ ತೋಪುಗಳನ್ನು ಹಾರಿಸಿ ಸಂತಸ ಪಟ್ಟರು ಕನ್ನಡ ಹೋರಾಟಗಾರರು.

ಅಕ್ಟೋಬರ್ ೩ರಂದು ಬಳ್ಳಾರಿ ಕರ್ನಾಟಕ ಕ್ಕೆ ಸೇರ್ಪಡೆ ಯಾಗಿದ್ದನ್ನು ಅರ್ಥಪೂರ್ಣವಾಗಿ ಆಚರಿಸಲು ವಿಚಾರಿಸಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು..

ಈ ಕಾರ್ಯಕ್ರಮದ ವೇದಿಕೆಯನ್ನು ಸಿದ್ದಪಡಿಸುವ ಜವಾಬ್ದಾರಿ ಯನ್ನು ಕನ್ನಡ ಕ್ರಿಯಾಸಮೀತಿ ಸದಸ್ಯ ಮತ್ತು ಕನ್ನಡವನ್ನೆ ಉಸಿರಾಗಿಸಿಕೂಂಡಿದ್ದ ಪೈಲ್ವಾನ್ ರಂಜಾನ ಸಾಹೇಬ್ ಗೆ ನೀಡಲಾಗಿತ್ತು.

ಬಳ್ಳಾರಿ ಕರ್ನಾಟಕಕ್ಕೆ ಸೇರಿದ್ದನ್ನು ಸಹಿಸಲಾಗದ ಆಂಧ್ರಪ್ರದೇಶದ ಪರವಾದ ಗುಂಪು ವೇದಿಕೆಗೆ ಬೆಂಕಿಯನ್ನು ಹಚ್ಚುವ ಕುತಂತ್ರಕ್ಕೆ ಮಂದಾದದರು.ರಂಜಾನ್ ಸಾಹೇಬ ವೇದಿಕೆಯ ಕಾವಲು ಬಿಗಿಗೂಳಿಸಿದರು.ಕಾವಲು ಕಾಯಲು ತಾವೇ ಮುಂದಾದರು, ರಾತ್ರಿ ಮಲಗಿದಾಗ ದುಷ್ಕರ್ಮಿಗಳು ಮುಖದ ಮೇಲೆ ಆಸಿಡ್ ತುಂಬಿದ ಬಲ್ಬ್ ಎಸೆದರು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ದುಷ್ಕರ್ಮಿಗಳನ್ನು ಹಿಡಿಯಲು ಸ್ವತಃ ಬೆನ್ನು ಹತ್ತಿದರು.ಆದರೆ ಸಿಗಲಿಲ್ಲ ನಂತರ ಇವರನ್ನು ಆಸ್ಪತ್ರೆ ಗೆ ಸೇರಿಸಿದರು ಆದರೆ ರಂಜಾನ್ ಸಾಹೇಬರ ಪ್ರಾಣ ಪಕ್ಷಿ ಹಾರಿಹೋಯಿತು.

ಶವವನ್ನು ಆಸ್ಪತ್ರೆ ಯಿಂದ ಮನೆಗೆ ತರಲು ಹೆಣಗಾಡಬೇಕಾದಂಥ ಪರಿಸ್ಥಿತಿ ನಿರ್ಮಾಣವಾಯಿತು. ಅಷ್ಟೂಂದು ಅಭಿಮಾನಿಗಳನ್ನು
ಪೈಲ್ವಾನ್ ರಂಜಾನ ಸಾಹೇಬ ಹೊಂದಿದ್ದರು.

ರಂಜಾನ ಸಾಹೆಬ ನದಾಫ್ ಬಳ್ಳಾರಿ ನಗರದ ಪಿಂಜಾರವಾಡಿಯ ಹುಡುಗ .ತಂದೆಗೆ ಮಗನನ್ನು ಪೈಲ್ವಾನ್ ಮಾಡುವ ಆಸೆಯಿತ್ತು…ಇನ್ನೇನು ಮಗ ಕೈ ಗೆ ಬಂದ ಎನ್ನುವಷ್ಟರ ಹೊತ್ತಿಗೆ ವಿಧಿಯಾಟ ಬೇರೆಯದೇ ಆಗಿತ್ತು.ರಂಜಾನ ಸಾಹೇಬ ನದಾಫ ಕನ್ನಡ ಮಾತೆಯ ಮಡಿಲಲ್ಲಿ ಲೀನವಾಗಿದ್ದರು..

ಇವತ್ತು ಕನ್ನಡ ಹೋರಾಟಗಾರ ರಿಗೆ ರಂಜಾನ ಸಾಹೇಬ ನದಾಫ್ ರ ಹೆಸರು ಗೂತ್ತಿಲ್ಲ.ಆದರೆ ನಾಡು ನುಡಿಯ ಬಗ್ಗೆ ಜೀವ ಸವೆಸಿದ ಮಹನೀಯರ ಬಗೆಗೆ ತಿಳಿಯುವ ಯತ್ನವಾಗಬೇಕು.

ಇದರಿಂದ ಕನ್ನಡದ ಮನ,ಮನೆ,ಮನಸ್ಸುಗಳಲ್ಲವು ಹಿರಿ ಹಿರಿ ಹಿಗ್ಗುವವು.

ಸಮಸ್ತ ಕನ್ನಡ ಅಭಿಮಾನಿಗಳು ಕೆಲವೇ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಸಂದರ್ಭ.ಕಾರಣ ಏಕೀಕರಣ ಕ್ಕೆ ತಮ್ಮನ್ನು ಗಂಧದ ಕೊರಡಿನಂತೆ ಸವೆದುಕೊಂಡವರನ್ನು ನೆನೆಯಲಿ ಎಂಬ ಆಶಾಭಾವದಿಂದ ಪೂರ್ವಭಾವಿಯಾಗಿ ಈ
ಲೇಖನ

“ನಾನು ನವೆಂಬರ್ ಕನ್ನಡಿಗನಲ್ಲ ನಂಬರ ಒನ್ ಕನ್ನಡಿಗ”ಎಂದು ಕಂಗ್ಲಿಷನಲ್ಲಿ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ನಾನೆಂದೂ ತಿಳಿಸಲಾರೆ.*

ಮಹೇಶ ನೀಲಕಂಠ, ಚನ್ನಂಗಿ

ಮುಖ್ಯ ಶಿಕ್ಷಕರು.
ಚೆನ್ನಮ್ಮನ ಕಿತ್ತೂರ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group