spot_img
spot_img

ವಿದ್ಯಾರ್ಥಿ ಬರಹ: ನಾ ಕಂಡ ಜೀವನ

Must Read

- Advertisement -

ನಾ ಕಂಡ ಜೀವನ

ಸ್ನೇಹಿತರೇ… ಜೀವನ ಎಂದರೇನು? ಎಂಬ ಪ್ರಶ್ನೆ ಎಲ್ಲರಲ್ಲೂ ಯಾವುದೋ ಒಂದು ಕಾರಣಕ್ಕಾಗಿ ಮೂಡುವುದು ಸಹಜ. ನನ್ನ ಪ್ರಕಾರ ಜೀವನವೆಂದರೆ ಜೋಪಾನವಿರಿಸಿಕೊಳ್ಳಬೇಕಾದ ಮೌಲ್ಯಯುತ ಕನ್ನಡಿ. ನಾವು ನೋಡಿದಂತೆ ಅದು ಕಾಣುವುದು ಮತ್ತು ಮರೆತು ಕೂಡ ಕೈ ಬಿಟ್ಟರೂ ಚೂರಾಗುವುದು. ಹಾಗಾಗಿ ಎಚ್ಚರದಿಂದಿರಲೇಬೇಕು.

ಕನ್ನಡಿಗೂ ಜೀವನಕ್ಕಿರುವ ವ್ಯತ್ಯಾಸವೇನೆಂದರೆ ಕನ್ನಡಿ ಒಡೆದರೆ ಮತ್ತೆ ಕೊಳ್ಳಬಹುದು. ಅದೇ ರೀತಿ ಜೀವನದಲ್ಲಿ ನಾವು ಗಳಿಸಿದ ಮೌಲ್ಯಗಳಿಗೆ ಧಕ್ಕೆ ಉಂಟಾದರೆ ಮರಳಿ ಅದನ್ನ ತುಂಬಿಕೊಳ್ಳಲು ಕಷ್ಟ ಸಾಧ್ಯ. ಹಾಗಾಗಿ ಎಚ್ಚರದಿಂದ ಇರಬೇಕಾದುದು ಬಹಳ ಅಗತ್ಯವಾಗಿರುತ್ತದೆ.

ನಾನು ಜೀವನ ಎಂದರೇನು? ಎಂಬ ಪ್ರಶ್ನೆಯನ್ನ ಹಲವರಲ್ಲಿ ಕೇಳಿದೆ. ಅದರಲ್ಲಿ ಒಬ್ಬೊಬ್ಬರದ್ದೂ ಸಹ ವಿಚಿತ್ರ ಮತ್ತು ವಿಭಿನ್ನ ಉತ್ತರಗಳಾಗಿದ್ದವು. ಇದಕ್ಕೆ ಕಾರಣವೇನೆಂದರೆ ಎಲ್ಲರ ಮನಸ್ಸು ಸಹ ಒಂದೇ ರೀತಿ ಯೋಚಿಸುವುದಿಲ್ಲ. ಅವರವರ ಮನಸ್ಥಿತಿಗೆ ತಕ್ಕಂತೆ ಅವರವರ ಯೋಚನಾಶಕ್ತಿ ಮತ್ತು ಉತ್ತರಿಸುವ ಬಗೆ ಇರುತ್ತದೆ. ಇದರಿಂದ ನಾವು ಎಲ್ಲರ ಮನಸ್ಸು ಹಾಗೂ ಯೋಚನೆಯ ಬಗೆ ಬೇರೆಬೇರೆ ಯಾಗಿರುತ್ತದೆ ಎಂದು ತಿಳಿಯಬಹುದು.

- Advertisement -

ಸ್ನೇಹಿತರೇ ಈ ಕಾರಣದಿಂದಾಗಿ ನಾವು ಎಲ್ಲರನ್ನೂ ಮೆಚ್ಚಿಸಿ ಬದುಕಲು ಸಾಧ್ಯವೇ ಇಲ್ಲ. ಏಕೆಂದರೆ ನಾವು ಯೋಚಿಸಿದ ಮತ್ತು ಮಾಡುವ ಕಾರ್ಯ ಒಬ್ಬರಿಗೆ ಇಷ್ಟವಾದರೆ ಮತ್ತೊಬ್ಬರಿಗೆ ಕಷ್ಟವಾಗುತ್ತದೆಯಲ್ಲವೇ? ಏಕೆಂದರೆ ಎಲ್ಲರ ಮನವಿಚಾರಗಳು ಬೇರೆಯೇ ಆಗಿರುತ್ತವೆ ಅಲ್ಲವೇ?

ನಾವು ಜೀವನವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲ. ನಾವ್ಯಾರೂ ಕೂಡ ಇಲ್ಲಿ ಕಾಯಂ ನಿವಾಸಿಗಳಲ್ಲ. ಯಾರು ಯಾವಾಗ ಮತ್ತು ಹೇಗೆ? ಕೊನೆ ಉಸಿರು ಎಳೆಯುತ್ತಾರಂತ ಯಾರಿಗೆ ಗೊತ್ತು?. ನಾವೊಂತರ ನೀರ ಗುಳ್ಳೆಯಂತೆ. ಇರುವಷ್ಟು ದಿನ ಚನ್ನಾಗಿ ಬದುಕಬೇಕು. ನಾವು ಉತ್ತಮ ಕಾರ್ಯಗಳನ್ನ ಮಾಡದೆ ಇದ್ದರೂ ಸಹ ಕೆಟ್ಟದ್ದನ್ನು ಬಯಸಬಾರದು.

ಜೀವನದಲ್ಲಿ ಕಷ್ಟ ಮತ್ತು ಸುಖವನ್ನು ಸಮಾನವಾಗಿ ಸ್ವೀಕರಿಸುವುದು ತುಂಬಾ ಒಳಿತು. ನಾವೇನಾದರೂ ಜೀವನವನ್ನು ಎದುರಿಸುತ್ತಿದ್ದೇವೆ ಅಂದುಕೊಂಡರೆ ಅದು ನಮ್ಮ ಮೂರ್ಖತನವೇ ಸರಿ. ಏಕೆಂದರೆ ಜೀವನವನ್ನ ಎದುರಿಸಲು ನಾವ್ಯಾರು? ನಾವು ಜೀವನವನ್ನ ಎದುರಿಸುತ್ತಿಲ್ಲ. ಬದಲಿಗೆ ನಮ್ಮಿಂದಲೇ ಸೃಷ್ಟಿಸಲ್ಪಟ್ಟ ತೊಡಕುಗಳೊಡನೆ ಸೆಣಸಾಡುತ್ತಿದ್ದೇವೆ.

- Advertisement -

ಜೀವನದಲ್ಲಿ ಕಷ್ಟಗಳು ಏಕಾದರೂ ಬರುತ್ತವೆ ಅಂದುಕೊಂಡರೆ ನಮಗೆ ಸುಖದ ಅರಿವಾಗಲು ಸಾಧ್ಯವಿದೆಯೇ?. ಏಕೆಂದರೆ ಸೋತು ಗೆದ್ದವನು ಮಾತ್ರ ಜಯದ ಹದವನ್ನ ಅರಿಯಬಲ್ಲನು. ಎಲ್ಲರೂ ಹಣೆ ಬರಹ ಅಂತ ಕೈ ಚೆಲ್ಲಿ ಕೂತರೆ ನಾವು ಏಳಿಗೆಗೊಳ್ಳಲು ಸಾಧ್ಯವೇ?. ಯಾವುದಕ್ಕೂ ಕೂಡ ಹಣೆಬರಹ ಮತ್ತು ವಿಧಿಯಾಟ ಕಾರಣವಲ್ಲ. ನಾವು ಮಾಡುವ ಕಾರ್ಯ ಮಾತ್ರ ವಾಸ್ತವ. ಹಣೆಬರಹ ಹಾಗೂ ವಿಧಿಯಾಟವೆನ್ನುವುದು ನಮಗೆ ಮರಳಿ ಸಿಗದದ್ದಕ್ಕಾಗಿ (ಸತ್ತ ಜೀವಕ್ಕಾಗಿ, ಬಾರದ ವಸ್ತುವಿಗಾಗಿ) ನಾವು ಮಾಡಿಕೊಂಡ ಸಾಂತ್ವನದ ಪದಗಳಷ್ಟೇ.

ನಾವು ಜೀವನದಲ್ಲಿ “ನಾನು ಅವನ ಮನವನ್ನು ಅರಿತಿದ್ದೇನೆ. ಅವನು ನನ್ನನ್ನು ತಿರಸ್ಕರಿಸುತ್ತಿದ್ದಾನೆ”ಅಂದರೆ, ಮೊದಲಿಗೆ ನೀನೇ ನಿನ್ನ ಮನವನ್ನ ಅರಿಯುವಲ್ಲಿ ವಿಫಲವಾಗಿದ್ದೀಯ ಎಂದರ್ಥ. ತನ್ನನ್ನ ತಾನು ಅರಿತವ ತನ್ನದಲ್ಲದ್ದಕ್ಕಾಗಿ ತಾನೆಂದೂ ಚಿಂತಿಸಲಾರ.

ನಾವಿರುವ ಕೆಲವು ದಿನಗಳಲ್ಲಿ ಆಕಸ್ಮಿಕವಾಗಿ ಒಂದೆರೆಡು ತಪ್ಪುಗಳಾದರೆ ಅದೇನು ಗಂಭೀರವಲ್ಲ. ಆದರೆ ಅದನ್ನ ತಿದ್ದಿ ನಡೆಯುವ ಗುಣ ಸಹ ನಮ್ಮಲ್ಲಿರಬೇಕು. ಕಾಣದ ರೋಗ ಕಾಡುತ್ತಿದೆಯಲ್ಲ ಎಂದು ಕೊರಗುವುದು ಬೇಡ. ಅದರಿಂದ ಹೊರಬರಲು ಮನಸ್ಸು ಗಟ್ಟಿಗೊಳ್ಳಬೇಕು. ಕಷ್ಟ ಸುಖಗಳು ಮನುಜನಿಗೆ ಬರುವುದೇ ವಿನಹ ಮರಗಳಿಗಲ್ಲ.

ನಾವು ಜೀವನದಲ್ಲಿ ಶಿಕ್ಷಣವನ್ನ ಪಡೆಯುತ್ತಿದ್ದರೆ ಅದು ಬರೀ ನಮ್ಮ ಉದ್ದಾರಕ್ಕಾಗಿರಬಾರದು. ಬದಲಿಗೆ ನಾವು ಕಲಿತ ವಿಧ್ಯೆ ಕೆಲವರಿಗೆ ನೆರವಾಗಿ ನೆರಳಾಗುವಂತಿರಬೇಕು. ನಮ್ಮ ವ್ಯಕ್ತಿತ್ತ್ವವನ್ನು ನಾವು ಆಗಾಗ ಕಂಡುಕೊಳ್ಳುತ್ತಿರಬೇಕು ಮತ್ತು ಅದನ್ನು ಜೋಪಾನವಿರಿಸಿಕೊಳ್ಳಬೇಕು. ಏಕೆಂದರೆ ನಾನು ಆಗಲೇ ಹೇಳಿದ ಹಾಗೆ ಜೀವನ ಎಂಬುದು ಒಂದು ಕನ್ನಡಿ.ನಮ್ಮ್ತನವನ್ನ ನಮಗೆ ತೋರುತ್ತದೆ ಹಾಗೆಯೇ ತನ್ನನ್ನ ಜೋಪಾನವಿರಿಸಿಕೊಳ್ಳುವಂತೆ ಎಚ್ಚರಿಸುತ್ತದೆ.

ಮಣಿಕಂಠ ಗೊದಮನಿ
9ನೇ ತರಗತಿ
ತಾ||ಹಾನಗಲ್

- Advertisement -
- Advertisement -

Latest News

ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಸಿಂದಗಿ: ಪಟ್ಟಣದ ವೈಷ್ಣವಿ ಹೋಟೆಲಿನಲ್ಲಿ ಸಿದ್ದು ಗೌಡ ಪಾಟೀಲ್ ಇವರ ಪರಿವಾರ ವತಿಯಿಂದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳಿಗೆ  ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ...
- Advertisement -

More Articles Like This

- Advertisement -
close
error: Content is protected !!
Join WhatsApp Group