spot_img
spot_img

ವಿನಾಶಕಾಲೇ ವಿಪರೀತ ಬುದ್ಧಿ – ಮುಕ್ತಾನಂದ ಪೂಜ್ಯರು

Must Read

- Advertisement -

ಸವದತ್ತಿ: ಕಂಸನು ಶ್ರೀ ಕೃಷ್ಣನಿಂದ ತನ್ನ ಮರಣವೆಂದು ಅರಿತಿದ್ದನು.ಶ್ರೀ ಕೃಷ್ಣನು ಗೋಕುಲದಲ್ಲಿರುವ ಸಂಗತಿಯನ್ನು ನಾರದರು. ತಿಳಿಸಿದರು.ಆಗ ಕಂಸನು ಶ್ರೀ ಕೃಷ್ಣ ಬಲರಾಮರನನ್ನು ಕೊಲ್ಲಲು ತನ್ನ ಆಸ್ಥಾನಕ್ಕೆ ಅವರನ್ನು ಕರೆತರಲು ಅಕ್ರೂರನಿಗೆ ಜವಾಬ್ದಾರಿ ವಹಿಸಿದನು. ಆಗ ಅಕ್ರೂರನು ಮಹಾರಾಜ,ವಿಪತ್ತನ್ನು ಪರಿಹರಿಸಿಕೊಳ್ಳಬೇಕೆಂಬ ನಿನ್ನ ಆಲೋಚನೆ ಸಮೀಚೀನವಾಗಿದೆ. ಸಿದ್ದಿಸಲಿ-ಸಿದ್ದಿಸದಿರಲಿ,ಅಭಿನಿವೇಶನವಿಲ್ಲದೆ ಸಮಬುದ್ದಿಯಿಂದ ಆಚರಿಸಬೇಕು.ದೈವವೇ ಫಲವನ್ನು ಕೊಡತಕ್ಕುದು.ಮನುಷ್ಯನು ದೈವಹತವಾದ ದೊಡ್ಡದೊಡ್ಡ ಮನೋರಥಗಳನ್ನು ಸಂಕಲ್ಪಿಸಿಕೊಳ್ಳುತ್ತಾನೆ.

ಆದ್ದರಿಂದಲೇ ಹರ್ಷಶೋಕಗಳಿಗೆ ಒಳಗಾಗುತ್ತಾನೆ. ಆದರೂ ನಿನ್ನ ಆಜ್ಞೆಯನ್ನು ನಡೆಸುವೆನು ಎಂದನು. ಇಲ್ಲಿ ಅಕ್ರೂರನಿಗೆ ಕೃಷ್ಣನ ಮೇಲೆ ಭಕ್ತಿ ಈ ನೆಪದಿಂದಲಾದರೂ ಭಕ್ತಿಯಿಂದ ಕೃಷ್ಣನನ್ನು ಕಣ್ತುಂಬ ನೋಡುವ ಆಸೆ. ಕಂಸನ ವಿನಾಶ ಬುದ್ಧಿಗೆ ಕೇಡುಗಾಲ ಬಂದಿದೆ ಎಂಬುದನ್ನು ಮನದಲ್ಲಿ ನೆನೆಯುತ್ತ ನಡೆದನು. ವಿನಾಶಕಾಲೇ ವಿಪರೀತ ಬುದ್ದಿ ಎನ್ನುವಂತೆ ಅಕ್ರೂರನು ಕೃಷ್ಣ ಬಲರಾಮರನ್ನು ಕಂಸನ ಆಸ್ಥಾನಕ್ಕೆ ಕರೆ ತರುವಷ್ಟರಲ್ಲಿ ಅವರನ್ನು ಸಂಚಿನಿಂದ ಕೊಲ್ಲುವ ದುರಾಲೋಚನೆಯನ್ನು ಕಂಸನು ಮಾಡತೊಡಗಿದನು ಎಂದು ಭಾಗವತದ ಕಂಸ ಕೃಷ್ಣರ ವಿಚಾರವನ್ನು ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ತಿಳಿಸಿದರು.

- Advertisement -

ಅವರು ಸೋಮವಾರ ರಾತ್ರಿ ಸಿಂದೋಗಿಯ ಶ್ರೀ ಮುಕ್ತಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಮುಖಾಮುಖಿ ಮತ್ತು ಗೂಗಲ್ ಮೀಟ್ ಸತ್ಸಂಗದಲ್ಲಿ ಭಾಗವತದ ಸಂಗತಿಗಳನ್ನು ತಿಳಿಸುತ್ತ ಕಂಸನ ವಿಕೃತ ಬುದ್ಧಿ ಹೇಗಿತ್ತು ಎಂಬುದರ ವಿವರವನ್ನು ತಿಳಿಸಿದರು.ಹುಟ್ಟಿದ ಮನುಷ್ಯ ಸಾಯಲೇಬೇಕು. ಸಾವು ಎಂಬುದನ್ನು ಮುಂಚಿತವಾಗಿ ಊಹಾತ್ಮಕವಾಗಿ ಬಯಸಬಾರದು.ಬಾರದು ಬಪ್ಪದು ಬಪ್ಪದು ತಪ್ಪದು ಎಂಬುದನ್ನು ಅರಿತು ಬದುಕಬೇಕು.

ಈಗ ಕೋರೋನಾ ಸಂದರ್ಭದಲ್ಲಿ ಅನೇಕರು ಕೆಮ್ಮುನೆಗಡಿ ಜ್ವರ ಬಂದರೆ ನಮಗೆ ಕೋರೋನಾ ಬಂದಿದೆ ಎಂದು ಭಯದಿಂದಲೇ ಹೃದಯಾಘಾತಕ್ಕೆ ಒಳಗಾಗುತ್ತಿರುವರು.ಅದಕ್ಕೆ ಚಿಕಿತ್ಸೆ ಇದೆ.ಅದನ್ನು ಎದುರಿಸಬೇಕು ಎಂಬ ದೈರ್ಯವನ್ನು ಯೋಚಿಸಿ ಇದ್ದರೆ ಬದುಕುವ ಸಾಧ್ಯತೆ ಇದೆ.ಆದರೆ ಬಹಳಷ್ಟು ಜನರು ಅದನ್ನು ಧೈರ್ಯದಿಂದ ಎದುರಿಸುವ ಪ್ರಯತ್ನ ಮಾಡದೇ ಸಾವನ್ನು ಹೊಂದುತ್ತಿರುವರು.ಹೀಗೆ ಅದೈರ್ಯ ಹೊಂದಬಾರದು. ಕೃಷ್ಣನಿಗೆ ಕಂಸನ ಕರೆ ಗೊತ್ತಿತ್ತು ಅಕ್ರೂರನು ಭಕ್ತಿಯಿಂದ ಬರುವ ಬಗ್ಗೆಯೂ ತಿಳಿದಿದ್ದನು.ತನ್ನ ಸಾವಿಗೆ ಕಂಸ ಯೋಜಿಸಿದ ಯೋಜನೆಯನ್ನು ವಿಫಲಗೊಳಿಸುವ ತಂತ್ರವೂ ದೇವಪುರುಷನಾದ ಶ್ರೀ ಕೃಷ್ಣನಿಗೆ ಗೊತ್ತಿತ್ತು ಎಂದು ತಿಳಿಸಿದರು.

- Advertisement -

ಶಿಶುನಾಳ ಷರೀಫರ ಗುರುಭಕ್ತಿಯನ್ನು ಇದೇ ಸಂದರ್ಭದಲ್ಲಿ ಉದಾಹರಿಸುತ್ತ. ಷರೀಫರು ಶಿಶುನಾಳ ಗ್ರಾಮಕ್ಕೆ ಹೋದಾಗ ಆ ಗ್ರಾಮವನ್ನು ಸಮೀಪಿಸುತ್ತಲೇ ತಮ್ಮ ಕಾಲಲ್ಲಿ ಧರಿಸಿದ್ದ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಿನಲ್ಲಿ ಹೊರಟರಂತೆ ಆಗ ಅವರ ಜೊತೆಗಿದ್ದವರು ಕಾರಣ ಕೇಳಲು ಗುರುವಿನ ಸನ್ನಿಧಿಗೆ ಹೊರಟಿರುವೆ ಬರಿಗಾಲಲ್ಲಿ ನಡೆಯುವುದು ಕ್ಷೇಮ.ಚಪ್ಪಲಿಯನ್ನು ಯಾರಾದರೂ ಗರ್ಭಗುಡಿಯಲ್ಲಿ ಧರಿಸಿಕೊಂಡೆ ಹೋಗುವರೋ ಎಂದು ಮಾರ್ಮಿಕವಾಗಿ ನುಡಿದು ಜೊತೆಗಾರರಿಗೆ ಗುರುವಿನ ಸೇವೆ ಮಾಡುವವರು ಗುರುವಿನ ಹತ್ತಿರ ಹೋಗುವಾಗ, ಗುರು ಸನ್ನಿಧಿಯಲ್ಲಿ ಇರುವಾಗ ಭಕ್ತಿಪರವಶನಾಗಿದ್ದರೆ ಒಳ್ಳೆಯದು.

ನಾವೂ ಕೂಡ ದೇವಸ್ಥಾನಗಳಿಗೆ ತೆರಳಿದಾಗ ಕಾಲಲ್ಲಿ ಧರಿಸಿದ ಚಪ್ಪಲಿಗಳನ್ನು ಒಂದೆಡೆ ಇಟ್ಟು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತೇವೆ ಹಾಗೆಯೇ ಇಂದಿಗೂ ಪಾದಯಾತ್ರೆಯ ಮೂಲಕ ಸಂಚರಿಸುವ ಅನೇಕರು ಕಾಲಲ್ಲಿ ಚಪ್ಪಲಿ ಧರಿಸದೇ ಬರಿಗಾಲಿನಲ್ಲಿ ನಡೆದುಕೊಂಡು ಹೋಗುವುದರ ಸಂಕೇತ ಭಕ್ತಿ.ಎಂದು ತಿಳಿಸಿದರು.

ಮುಖಾಮುಖಿ ಸತ್ಸಂಗದಲ್ಲಿ ಯಶವಂತ ಗೌಡರ. ಬಸವರಾಜ ಹಲಗತ್ತಿ. ಮಲ್ಲಿಕಾರ್ಜುನ ಶಿವಪೇಟಿ. ವೈ.ಬಿ.ಕಡಕೋಳ ವೀರಣ್ಣ ಕೊಳಕಿ. ಪಂಚಪ್ಪ ಗಂಗನ್ನವರ.ಚನಬಸು ನಲವಡೆ.ಸುಭಾಸ ಗಂಗನ್ನವರ. ಮೊದಲಾವರು ಉಪಸ್ಥಿತರಿದ್ದರು.ಗೂಗಲ್ ಮೀಟ್ ಸತ್ಸಂಗದಲ್ಲಿ ಬಾಗಲಕೋಟೆಯಿಂದ ಪ್ರೊ.ಎಸ್.ವ್ಹಿ.ಚೌಡಾಪೂರ.ಕವಿತಾ ಶಲ್ಲೇದ.ಲತಾ ಗೌಡರ.ರಾಜಶ್ರೀ ಜವಳಿ.ಶಿವಾನಂದ ವನಹಳ್ಳಿ.ಶ್ರೀಕಾಂತ ಮಿರಜಕರ.ಸೋಮು ಗರಗದ.ವೆಂಕಪ್ಪ ಯಕ್ಕುಂಡಿ.ವಿಜಯಲಕ್ಷ್ಮೀ ಬಂಡಿ.ರಜನಿ ನಾಯ್ಕ. ರಾಮಕೃಷ್ಣ ಸಂಗಟಿ.ಸೋಮನಾಥ ಹೊನ್ನುಂಗರ.ಯಲ್ಲವ್ವ ಕುಸುಗಲ್.ಅನಂತ ಅಜವಾನ.ಅನಸೂಯ ಹೊನ್ನಳ್ಳಿ.ಅನುರಾಧ ಬೆಟಗೇರಿ.ಅರುಣ ಗುದಗಾಪೂರ.ಬಾಳಪ್ಪ ಸಿಂಗಾಡಿ.ಚಂಪಾ ಗುದಗಾಪೂರ.ದಿಲೀಪ ಅಚಿಟಿನ.ಗೌರಿ ಜಾವೂರ.ಜಯಶ್ರೀ ಕುಲಕರ್ಣಿ. ಅನುಪಮಾ ಬಡಿಗೇರ. ಸೇರಿದಂತೆ 30 ಕ್ಕೂ ಹೆಚ್ಚು ಸತ್ಸಂಗಿಗಳು ಹಾಜರಿದ್ದರು. ಶುಕ್ರವಾರದಂದು ಗುರುಪೂರ್ಣಿಮೆ ಶ್ರೀ ಮಠದಲ್ಲಿ ಜರಗುತ್ತಿದ್ದು ಕೋವಿಡ್ ನಿಯಮಾನುಸಾರ ಶ್ರೀಮಠಕ್ಕೆ ಸದ್ಭಕ್ತರು ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಬಂದು ಹೋಗಲು ಕರೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೋತ್ರೀಯ ಬ್ರಹ್ಮನಿಷ್ಟ ಮುಕ್ತಾನಂದ ಪೂಜ್ಯರು ಗುರುವೇ ತಂದೆ, ಗುರುವೇ ತಾಯಿ, ಗುರುವೇ ದೈವ ಭಕ್ತಿಗೀತೆಯನ್ನು ಹೇಳಿದರು. ಮಂಗಲಾರ್ಪಣೆಯನ್ನು ವೈ.ಬಿ.ಕಡಕೋಳ ನೆರವೇರಿಸಿದರು.ವೀರಣ್ಣ ಕೊಳಕಿ ಶಿಕ್ಷಕರು ಕಾರ್ಯಕ್ರಮವನ್ನು ನಿರ್ವಹಿಸಿದರು.

ವೈ.ಬಿ.ಕಡಕೋಳ ಸಂಪನ್ಮೂಲ ಶಿಕ್ಷಕರು ಮುನವಳ್ಳಿ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group