ವೈದ್ಯ – ಶಾಸಕರ ನಡುವೆ ಮಾತಿನ ಚಕಮಕಿ

Must Read

ಬೀದರ – ಪ್ರಚಾರದ ಅವಧಿ ಮುಕ್ತಾಯಗೊಂಡಿದ್ದರು ನಗರಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಶಾಸಕರಿಗೆ ವೈದ್ಯರೊಬ್ಬರು ಕ್ಲಾಸ್ ತೆಗೆದುಕೊಂಡ ಪರಿಣಾಮ ತಾಳ್ಮೆ ಕಳೆದುಕೊಂಡು ವಾಗ್ವಾದಕ್ಕಿಳಿದ ಶಾಸಕರು.

ಪ್ರಚಾರಕ್ಕೆ ಆಗಮಿಸಿದ್ದ ಶಾಸಕ ಶರಣು ಸಲಗಾರ ಅವರೊಂದಿಗೆ ಬಸವಕಲ್ಯಾಣದ ವೈದ್ಯ ಪೃಥ್ವಿರಾಜ್ ಬಿರಾದಾರ ಮಾತಿನ ಚಕಮಕಿಗೆ ನಿಂತರು. ಪ್ರಚಾರದ ಅವಧಿ ಮುಕ್ತಾಯಗೊಂಡಿದ್ದರೂ ಯಾಕೆ ಪ್ರಚಾರಕ್ಕೆ ಬಂದಿದ್ದೀರಿ ಎಂಬ ಮಾತಿಗೆ ತಾಳ್ಮೆ ಕಳೆದುಕೊಂಡ ಶಾಸಕ ಶರಣು ಸಲಗರ ಹಾಗೂ ವೈದ್ಯರ ಮಧ್ಯೆ ಮಾತಿನ ಚಕಮಕಿ ಒಂದು ಹಂತದಲ್ಲಿ ಪರಸ್ಪರ ಕೈ – ಕೈ ಮಿಲಾಸುವ ಹಂತಕ್ಕೆ ತಲುಪಿತ್ತು.

ತಾಳ್ಮೆ ಕಳೆದುಕೊಂಡ ಶಾಸಕರ ಏರೂ ಧ್ವನಿ ಮಾತುಗಳಿಗೆ ರೊಚ್ಚಿಗೆದ್ದ ವೈದ್ಯ ಹಾಗೂ ಸಾರ್ವಜನಿಕರು. ಕೆಲ ಕಾಲ ಗೊಂದಲ ಜೊತೆಗೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮೂರು ಜನರಿಗಿಂತ ಹೆಚ್ಚು ಜನ ಬರಬಾರದು ಎಂಬ ವಾದ ವೈದ್ಯ ಬಿರಾದಾರ ಅವರದು. ಅದಕ್ಕೆ ಸಾರ್ವಜನಿಕರ ಬೆಂಬಲ. ಎಲ್ಲಿಂದ ಬಂದಿದಿಯಾ ಯಾರು ನೀನು ಎಂದು ಶಾಸಕರಿಗೆ ಸಾರ್ವಜನಿಕರ ಪ್ರಶ್ನೆ. ಇದರಿಂದ ಕೆರಳಿದ ಶಾಸಕ ಶರಣು ಅವರು,ನಾನು ಬಸವಕಲ್ಯಾಣದವನು, ಸತ್ತರೂ ಇಲ್ಲೇ ನನ್ನ ಅಂತ್ಯಕ್ರಿಯೆ ಎಂದು ಉತ್ತರಿಸಿದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group