spot_img
spot_img

ಸಿಂದಗಿ ಬಿ ಆರ್ ಸಿ ಕೇಂದ್ರದಲ್ಲಿ ಕೋವಿಡ್ 19 ಲಸಿಕೆ ಹಾಕಿಸಿಕೊಂಡ ಶಿಕ್ಷಕರು

Must Read

- Advertisement -

ಸಿಂದಗಿ: ಕೊರೊನಾ ಆರ್ಭಟ ತಡೆಗೆ ಕೋವಿಡ್ ಲಸಿಕೆಯೊಂದೇ ಸಂಜೀವಿನಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲ ದೇವಣಗಾಂವಿ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಧಿಕಾರಿಗಳ ಕಾರ್ಯಲಯದ ಬಿ ಆರ್ ಸಿ ಕೇಂದ್ರದಲ್ಲಿ ಸೋಮವಾರದಂದು ತಾಲೂಕಿನ ಶಿಕ್ಷಕರಿಗೆ ಮತ್ತು ಬಿ ಎಲ್ ಓ ಶಿಕ್ಷಕರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಹಾಗೂ ಬಿ ಆರ್ ಸಿ ಮತ್ತು ಸಿ ಆರ್ ಪಿಗಳಿಗೆ ಸರ್ವ ಸಿಬ್ಬಂದಿಗೆ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಶಿಕ್ಷಕರು ಚಿಕ್ಕ ಮಕ್ಕಳೊಂದಿಗೆ ಹೆಚ್ಚು ಒಡನಾಟ ಹೊಂದಿರುವರು, ನಾವು ಮೊದಲು ಲಸಿಕೆ ಹಾಕಿ ಕೊಂಡು ಇನ್ನೊಬ್ಬರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಬೇಕು , ಸೋಂಕು ನಮ್ಮೊಂದಿಗೇ ಇನ್ನೊಬ್ಬರಿಗೆ ಬಾರದಂತೆ ,ನಮ್ಮ ಕುಟುಂಬಸ್ಥರಿಗೆ , ನಮ್ಮ ನೆರೆಹೊರೆಯ ಜನರಿಗೆ ಮೊದಲು ಕೋವಿಡ್ ಲಸಿಕೆ ಹಾಕಿಸಿ ಕೊಳ್ಳುವಂತೆ ಶಿಕ್ಷಕರು ಪ್ರೇರಣೆ ನೀಡಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಮಾತನಾಡಿ, ಬಿ ಎಲ್ ಓ ಕಾರ್ಯ ನಿರ್ವಹಿಸುವ ಶಿಕ್ಷಕರು ತಾವು ಕೋವಿಡ್ ಪಾಸಿಟಿವ್ ಹೊಂದಿರುವ ವ್ಯಕ್ತಿಯನ್ನು ಹಾಗೂ ಅವರೊಂದಿಗೆ ಸಂಪರ್ಕ ಬರುವ ವ್ಯಕ್ತಿಗಳಿಗೆ ಕೊವಿಡ್ ರೋಗದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಶಿಕ್ಷಕರು ತೊಡಗಿಸಿಕೊಳ್ಳುವದರಿಂದ ಮೊದಲು ಕೋವಿಡ್ 19 ಲಸಿಕೆ ಹಾಕಿಸಿಕೊಂಡು ಆರೋಗ್ಯವಂತರಾಗಬೇಕು ಎಂದರು.

- Advertisement -

ಆರೋಗ್ಯ ಇಲಾಖೆಯ ಅಧಿಕಾರಿ ಜೆ.ಎ.ಸಿಂದಗಿಕರ್ ಮಾತನಾಡಿ, ಪ್ರತಿಯೊಬ್ಬರು ಮಾಸ್ಕ, ದೈಹಿಕ ಅಂತರ ಕಾಪಾಡಿ ಕೊಂಡು ಮತ್ತು ಆಗಾಗ ಕೈ ತೊಳೆಯುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ವಿರೇಂದ್ರ ಪವಾಡಿ ಬೀದರ ಮಾತನಾಡಿ, ಸಿಂದಗಿ ಸರಕಾರಿ ಆಸ್ವತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಕೋವಿಡ್ 19 ಲಸಿಕೆ ಹಾಕಿದರು.

ಕೋವಿಡ್ 19 ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಸರಕಾರ ಉತ್ತಮ ಆರೋಗ್ಯಕ್ಕೆ ಸಹಕಾರ ನೀಡುತ್ತದೆ ಕಾರಣ 45 ವಯೋಮಾನದಿಂದ 59 ರವರಿಗೆ, ಬಿ ಪಿ, ಸಕ್ಕರೆ ಕಾಯಿಲೆ ಇರುವವರು ಹಾಗೂ 60 ವರ್ಷ ಮೇಲ್ಪಟವರು ಎಲ್ಲರು ತಪ್ಪದೆ ಕೋವಿಡ್ 19 ಲಸಿಕೆ ಹಾಕಿ ಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಉತ್ತಮ ಮಾಹಿತಿ ನೀಡಿದರು.ಸರಕಾರಿ ಆಸ್ಪತ್ರೆಗೆ ಬರುವಾಗ ತಮ್ಮ ಆಧಾರ ಕಾರ್ಡ ಹಾಗೂ ಮೊಬೈಲ್ ಸಂಖ್ಯೆ ತಪ್ಪದೆ ತರಬೇಕು ಎಂದು ಸಲಹೆ ನೀಡಿದರು.

- Advertisement -

ಆರೋಗ್ಯ ಅಧಿಕಾರಿಗಳಾದ ಎಸ್ ಡಿ ಕುಲಕರ್ಣಿ , ಪ್ರಭು ಜಂಗಿನಮಠ , ಮಹಾಂತೇಶ ಬೂದಿ , ಜುಬೇದರ ಗುಂದಗಿ , ವೀರೇಂದ್ರ ಪವಾಡಿ(ಬೀದರ) ಮೋಸಿನ್ ಮಮದಾಪೂರ, ಶ್ರೀಮತಿ ಜೆ ಕೆ ಚಿಕ್ಕಂಡಿ , ಸದಾನಂದ ಹಂಗರಗಿ , ದೇವರಹಿಪ್ಪರಗಿ ತಾಲೂಕಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಡಗಿ, ಶಿಕ್ಷಣ ಸಂಯೋಜಕರಾದ ಸುದೀಪ ಕಮತಗಿ , ಆನಂದ ಮಾಡಗಿ , ಮಾಹಾಂತೇಶ ಯಡ್ರಾಮಿ.ಎಂ.ಎಂ.
ದೊಡಮನಿ ,ಸಿ .ಆರ್.ಪಿಗಳಾದ ವೀರೇಶ ಕರಿಕಳ್ಳಿಮಠ , ಭೀಮನಗೌಡ ಬಿರಾದಾರ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ಸಾಹಿತಿ ಬಸವರಾಜ ಅಗಸರ, ಸ್ಕೌಟ್ ಮತ್ತು ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಹಾಗೂ ಕ.ರ.ಪ್ರ.ಶಾ.ಶಿ.ಸಂಸ್ಥೆ ಕಾರ್ಯದರ್ಶಿ ಬಸವರಾಜ ಸೋಮಪೂರ , ಜೆ.ಎಂ.ಅಂಗಡಿ, ಶಿಕ್ಷಕ ಬಸಯ್ಯ ನಂದಿಕೋಲ , ಜೆ.ಎಂ.ಅಂಗಡಿ, ಮುಖ್ಯಗುರು ಪಿ.ಸಿ.ಚಲವಾದಿ, ಪಿ .ಸಿ .ಮ್ಯಾಗೇರಿ, ಆಶೆ ಕಾರ್ಯಕರ್ತರಾದ ಶ್ರೀಮತಿ ಜ್ಯೋತಿ ಕುಲಕರ್ಣಿ, ನಾಗಮ್ಮ ಎಮ್ಮಿ, ಬಸಮ್ಮ ಧಸ್ಮ , ಎಸ್ .ಎಂ.ಹಿರೇಮಠ ಇದ್ದರು,

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group