spot_img
spot_img

ಬೀದರನಲ್ಲಿ 1 ಕಿ‌ಮೀ ಉದ್ದದ ರಾಷ್ಟ್ರಧ್ವಜ ವಾಕಥಾನ್

Must Read

ಬೀದರ – ಸ್ವಾತಂತ್ರ್ಯ ದ ಅಮೃತ ಮಹೋತ್ಸವ ನಿಮಿತ್ತ ನಗರದ ಸಿದ್ಧಾರೂಢ ಗುಂಪಾ ಮಠದಿಂದ 1 ಕಿಮೀ ರಾಷ್ಟ್ರಧ್ವಜ ವಾಕಥಾನ್ ನಡೆಯಿತು.

ಕೇಸರಿ ಟೀ ಶರ್ಟ ಧರಿಸಿ ರಾಷ್ಟ್ರದ ಧ್ವಜ ಬೀಸುವ ಮೂಲಕ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ವಾಕಥಾನಕ್ಕೆ ಚಾಲನೆ ನೀಡಿದರು.

ಕೇಸರಿ ಬಿಳಿ ಹಸಿರು ಬಣ್ಣದ ಟೀ ಶರ್ಟ್ ಧರಿಸಿದ್ದ ಮಕ್ಕಳು ಸಾಲಾಗಿ ಸಾಗಿ ನಗರದ ವಿವಿಧ ಪ್ರಮಖ ವೃತ್ತದ ಮೂಲಕ ಭವ್ಯ ತಿರಂಗ ರ್ಯಾಲಿ ನಡೆಸಿದರು.

ಒಂದು ಕಿಲೋ ಮೀಟರ್ ಉದ್ದ ರಾಷ್ಟ್ರಧ್ವಜ ಹಿಡಿದ ವಿವಿಧ ಶಾಲಾ ಕಾಲೇಜು ಮಕ್ಕಳು ಹಾಗು ನಗರದ ನಾಗರಿಕರು ಧ್ವಜ ಹಿಡಿದು ಜಯ ಘೋಷಣೆ ಹಾಕುತ್ತ ಸಾಗಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದ ರಡ್ಡಿ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಸಿಇಒ ಶಿಲ್ಪಾ ಎಂ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಶಾಲಾ ಕಾಲೇಜು ಮಕ್ಕಳು ಭಾಗಿಯಾಗಿ ಸಂಭ್ರಮಪಟ್ಟರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!