ಮಲೆನಾಡಿನ  ನಟರಾಜ್ ಅರಳ ಸುರುಳಿ ಅವರ ಆಕಾಶ  ಬುಟ್ಟಿ ಜೊತೆ  10 ಕೃತಿಗಳ ಲೋಕಾರ್ಪಣೆ 

0
329

ಮಲೆನಾಡಿನ  ನಟರಾಜ್ ಅರಳ ಸುರುಳಿ ಅವರ ಆಕಾಶ  ಬುಟ್ಟಿ ಜೊತೆ  10 ಕೃತಿಗಳ ಲೋಕಾರ್ಪಣೆ

   ಬೆಂಗಳೂರು : ನಗರದ  ಪುಟ್ಟಣ ಚೆಟ್ಟಿ ಪುರಭವನ (ಟೌನ್ ಹಾಲ್ ನ  ) ನಲ್ಲಿ  ವೀರಲೋಕದ ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ದಿ. ೨೩ ರಂದು ಬೆಳ್ಳಿಗ್ಗೆ 9.30ಕ್ಕೆ ಬೇಲೂರು ರಮಾಮೂರ್ತಿ ಅವರ  ಹಾಸ್ಯ ಯುಗಾದಿ ಕಾರ್ಯಕ್ರಮದೊಂದಿಗೆ ೧೦  ಕೃತಿಗಳ ಬಿಡುಗಡೆ ಕಾರ್ಯಕ್ರಮ ಕ್ಕೆ ಚಾಲನೆ ದೊರಯಲಿದೆ

    ಇಂದಿನ ತಲೆಮಾರಿನ ವಿದ್ಯಾರ್ಥಿ ಸಮೂಹದಲ್ಲಿ ಓದುವ ಅಭ್ಯಾಸವನ್ನು ಹೆಚ್ಚಿಸುವ ಮತ್ತು ಕನ್ನಡ ಪುಸ್ತಕ ಸಂಸ್ಕೃತಿಯನ್ನು ಇಮ್ಮಡಿಗೊಳಿಸುವ ಉದ್ದೇಶದಿಂದ ಆಯೋಜಿಸಲ್ಪಟ್ಟಿರುವ ವೀರಲೋಕ ಸಾಹಿತ್ಯ ಯುಗಾದಿ ಅತ್ಯಂತ ಮಹತ್ವದ ಕಾರ್ಯಕ್ರಮ ನಡೆಯಲಿದೆ.

     ಈ ಕಾರ್ಯಕ್ರಮದಲ್ಲಿ  ಮಲೆನಾಡಿನ ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ   ತುಂಗ ಕಾಲೇಜಿನಲ್ಲಿ  ಸಹಸ್ರ ಸಹಸ್ರ ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ  ಬೆಳಕು ನೀಡಿದ  ನಾಡಿನ ಹೆಸರಾಂತ ವ್ಯಂಗ್ಯ ಚಿತ್ರಕಾರರು ಹಾಗೂ ಲೇಖಕರು ಆದ ನಟರಾಜ್ ಅರಳಸುರುಳಿ ಅವರ ಆಕಾಶ ಬುಟ್ಟಿ ಅನುಭವ ಕಥನ ದ ಜೊತೆಗೆ ಈ ಕಾರ್ಯಕ್ರಮದಲ್ಲಿ ಹತ್ತು ವಿನೂತನವಾದ ವೀರಲೋಕ ಪ್ರಕಟಣೆಯ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

  ಎಲ್ಲ ಕೃತಿಗಳನ್ನು ಇದೇ ಮೊದಲ ಬಾರಿಗೆ ತಾಳಮದ್ದಲೆಯ ಮೂಲಕ ಪ್ರಾಯೋಗಿಕವಾಗಿ ಪರಿಚಯ ಮಾಡಿಕೊಡಲಾಗುತ್ತಿದೆ. ಕಾರ್ಯಕ್ರಮದ ಕೇಂದ್ರಬಿಂದು ಗಳಾಗಿ ವಿದ್ಯಾರ್ಥಿ ಸಮೂಹವೇ ಇರಲಿದ್ದು ಕಾರ್ಯಕ್ರಮದ
ಮುಖ್ಯ ಅತಿಥಿಗಳಾಗಿ ಗಿರೀಶ್ ಕಾಸರವಳ್ಳಿ, ಚಲನಚಿತ್ರ ನಿರ್ದೇಶಕರು, ಡಾ. ಬೈರಮಂಗಲ ರಾಮೇಗೌಡ, ಹಿರಿಯ ಸಾಹಿತಿಗಳು, ಶ್ರೀಮತಿ ಸಹನಾ ವಿಜಯಕುಮಾರ್, ಕಾದಂಬರಿಗಾರ್ತಿ, ಬಸವರಾಜ ಸಬರದ, ಹಿರಿಯ ಸಾಹಿತಿಗಳು ಆಗಮಿಸಲಿದ್ದಾರೆ
ಪ್ರಾಸ್ತಾವಿಕ ನುಡಿಯನ್ನು ವೀರಕಪುತ್ರ ಶ್ರೀನಿವಾಸ ವೀರಲೋಕ ಬುಕ್ಸ್  ಇವರು ಆಡಲಿದ್ದಾರೆ

ಕಾರ್ಯಕ್ರಮ ದಲ್ಲಿ  ಬಿಡುಗಡೆಯಾಗಲಿರುವ ಕೃತಿಗಳು ;

೧. ಎಸ್. ದಿವಾಕರ್ – ವಾಸ್ತವ ಪ್ರತಿವಾಸ್ತವ (ವಿಮರ್ಶಾ ಸಂಕಲನ)

೨. ಡಾ. ಎಂ ವೆಂಕಟಸ್ವಾಮಿ – ಟೈಟಾನಿಕ್ (ಅಧ್ಯಯನ)

೩. ಜಯಶ್ರೀ ಕಾಸರವಳ್ಳಿ – ಹೀಗೊಂದು ಏರೋಸ್ಪೇಸ್ ಪುರಾಣ (ಪ್ರವಾಸ ಕಥನ)

೪. ನಟರಾಜ ಅರಳಸುರಳಿ – ಆಕಾಶಬುಟ್ಟಿ (ಅನುಭವ ಕಥನ)

೫. ರಾಜಶೇಖರ ಎಂ – ಶತಮಾನಂಭವತಿ (ಕಾದಂಬರಿ)

೬. ಅರ್ಜುನ್ ದೇವಾಲದಕೆರೆ – ಮಿಕ್ಸ್ & ಮ್ಯಾಚ್ (ಸಣ್ಣ ಕತೆಗಳು)

೭. ಚೇತನ್ ನಾಡಿಗೇರ್ – ಚಂದನವನದೊಳ್ (ಸಿನೆಮಾ ಕೈಪಿಡಿ)

೮. ನಡಹಳ್ಳಿ ವಸಂತ್ – ಮಹಿಳೆಯರಿಗೆ ಮಾತ್ರವಲ್ಲ (ಮನೋವೈಜ್ಞಾನಿಕ ಬರಹಗಳು)

೯. ಪ್ರಸಾದ್ ನಾಯ್ಕ್ – ಮುಸ್ಸಂಜೆ ಮಾತು (ವೃದ್ಧಾಪ್ಯದ ಲಘು ಬರಹಗಳು)

೧೦. ಪ್ರಸಾದ್ ಶೆಣೈ ಆರ್.ಕೆ – ನೇರಳೆ ಐಸ್ಕ್ರೀಮ್ (ಕಥಾಸಂಕಲನ)

ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ