ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದ ಬಿ.ವ್ಹಿ.ನರಗುಂದ ಸರಕಾರಿ ಪ್ರೌಢ ಶಾಲೆಗೆ 2021-22 ಸಾಲಿನ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ 100ಕ್ಕೆ 100 ರಷ್ಟು ಫಲಿತಾಂಶ ಆಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್.ಭಾಗೋಜಿ ತಿಳಿಸಿದ್ದಾರೆ.
ಪರೀಕ್ಷೆ ಬರೆದ 121 ವಿದ್ಯಾರ್ಥಿಗಳಲ್ಲಿ 101 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಗೆ ಸುನೀತಾ ಶಂಭಣ್ಣಾ ಬೆಣ್ಣಿ ಶೇ.99.52(ಪ್ರಥಮ), ಮಲ್ಲಿಕಾರ್ಜುನ ಬಸವರಾಜ ಬಿ.ಗೌಡರ ಶೇ.9.78(ದ್ವಿತೀಯ), ವಿಜಯಲಕ್ಷ್ಮೀ ಲಕ್ಕಪ್ಪ ಜೋಗನ್ನವರ ಶೇ.98.24(ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮತ್ತು ಶಾಲೆಯ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.