ಮೂಡಲಗಿ: ದೇಶದ ವಿವಿಧ ಬಂದರುಗಳನ್ನು ಸಂಪರ್ಕಿಸಲು 88 ರಸ್ತೆ ಯೋಜನೆಗೆ ರೂ. 43,583 ಕೋಟಿ ಮತ್ತು 81 ರೈಲು ಯೋಜನೆಗೆ ರೂ. 74,591 ಕೋಟಿ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.
ನವದೆಹಲಿ ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರ ಚುಕ್ಕಿ ಗುರುತಿನ ಪ್ರಶ್ನೆಗೆ ಸಚಿವ ಮನ್ಸುಖ್ ಮಾಂಡವಿಯಾ ಲಿಖಿತವಾಗಿ ಉತ್ತರಿಸಿ, ದೇಶದ ವಿವಿಧ ಬಂದರುಗಳನ್ನು ಸಂಪರ್ಕಿಸುವ ಸಾಗರಮಾಲಾ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯದ ಬಂದರುಗಳನ್ನು ಸಂಪರ್ಕಿಸುವತ್ತ 6 ರಸ್ತೆ ಯೋಜನೆಗಳಿಗೆ 4,343 ಕೋಟಿ ಮತ್ತು 5 ರೈಲು ಯೋಜನೆಗಳು ರೂ. 788 ಕೋಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಶಿರಾಡಿ ಘಾಟ್ 4 ಪಥ ರಸ್ತೆ ಕಾಂಕ್ರೀಟೈಸಿಂಗ್, ಎಸ್.ಎಚ್-2 ಹಾವೇರಿ-ಯಕ್ಸಂಬಿ ರಸ್ತೆ, ಎಸ್.ಎಚ್-69 ಯಕ್ಸಂಬಿ-ಕುಮಟಾ- ಬೆಲೆಕೇರಿ ರಸ್ತೆ, ತುಮಕೂರು-ಹೊನ್ನಾವರ ಬಂದರು ರಸ್ತೆ 2 ಮತ್ತು 4 ಪಥ ರಸ್ತೆ ಕಾಮಗಾರಿ ಅನುಷ್ಠಾನದಲ್ಲಿವೆ. ಮಾರ್ಷಲಿಂಗ್ ಯಾರ್ಡ ಬಂದರನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಬೆಲೆಕೇರಿ ಬಂದರಿನ ರೈಲ್ವೆ ಸಂಪರ್ಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.