spot_img
spot_img

ಕಲಾರಕೊಪ್ಪ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ 15 ಲಕ್ಷ ರೂ. ಮಂಜೂರು: ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಗೋಕಾಕ- ನಾಡದೇವತೆ ಮೈಸೂರು ಚಾಮುಂಡೇಶ್ವರಿ ಪ್ರತಿರೂಪದಂತಿರುವ ಕಲಾರಕೊಪ್ಪ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ 15 ಲಕ್ಷ ರೂ. ಮಂಜೂರಾಗಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಕಲಾರಕೊಪ್ಪ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಮೊದಲು ಸಣ್ಣ ದೇವಸ್ಥಾನವಿದ್ದ ಇದು ಈಗ ದೊಡ್ಡ ದೇವಸ್ಥಾನವಾಗಿ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.

ಗ್ರಾಮಸ್ಥರು ಕೂಡಿಕೊಂಡು ದೇವಸ್ಥಾನದ ನೂತನ ಕಟ್ಟಡಕ್ಕಾಗಿ ದೇಣಿಗೆ ನೀಡುವಂತೆ ಕೋರಿಕೊಂಡಾಗ ನಾನೂ ಕೂಡ ದೇವಸ್ಥಾನಕ್ಕೆ ದೇಣಿಗೆಯನ್ನು ನೀಡಿದ್ದೇನೆ. ಗ್ರಾಮಸ್ಥರು ಸಹ ಅನುದಾನ ಕ್ರೋಢಿಸಿಕೊಂಡು ದೇವಸ್ಥಾನದ ನೂತನ ಕಟ್ಟಡವನ್ನು ನಿರ್ಮಿಸಿದ್ದಾರೆ. ಈಗಂತೂ ಈ ಭಾಗದಲ್ಲಿ ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಂತೆ ಪ್ರಸಿದ್ಧಿ ಪಡೆದಿದೆ. ಇದರ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ತಿಳಿಸಿದರು.

- Advertisement -

ಈ ಬಾರಿಯೂ ಉತ್ತಮ ಮಳೆಯಾಗಿದೆ. ಬೆಳೆಗಳು ಸಹ ಉತ್ತಮವಾಗಿವೆ. ಘಟಪ್ರಭಾ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ರೈತರಿಗೆ ಈ ಸಲ ಉತ್ತಮ ದರವನ್ನು ಸಹ ನಿಗದಿ ಮಾಡಲಿದ್ದೇವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗ್ರಾಮಸ್ಥರು ಬೆಳ್ಳಿ ಗದೆ ನೀಡಿ ಸತ್ಕರಿಸಿದರು.

- Advertisement -

ಕಾರ್ಯಕ್ರಮದ ಸಾನ್ನಿಧ್ಯವನ್ನು ಅಂಕಲಗಿ ಅಡವಿಸಿದ್ಧೇಶ್ವರ ಮಠದ ಸ್ವಾಮಿಗಳು, ಖಡಕಬಾವಿಯ ಧರೇಶ್ವರ ಸ್ವಾಮಿಗಳು ಮತ್ತು ತೊಂಡಿಕಟ್ಟಿಯ ವೆಂಕಟೇಶ ಮಹಾರಾಜರು ವಹಿಸಿದ್ದರು.

ವೇದಿಕೆಯಲ್ಲಿ ಉದಗಟ್ಟಿ ಗ್ರಾಪಂ ಅಧ್ಯಕ್ಷ ಅರ್ಜುನ ಸನದಿ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎಲ್.ಎನ್. ಬೂದಿಗೊಪ್ಪ, ತಾಪಂ ಮಾಜಿ ಸದಸ್ಯ ಭೀಮಪ್ಪ ಗೌಡಪ್ಪನವರ, ಸಿದ್ದಪ್ಪ ಕಣವಿ, ಪರಸಪ್ಪ ಬಗಟಿ, ರಾಯಪ್ಪ ಗೌಡಪ್ಪನವರ, ಮಹಾದೇವ ಬಗಟಿ, ರಾಯಪ್ಪ ಚಿಗಡೊಳ್ಳಿ, ರಾಮಚಂದ್ರ ಪಾಟೀಲ, ಲಕ್ಷ್ಮಣ ಗೌಡಪ್ಪನವರ, ಸಣ್ಣಯಲ್ಲಪ್ಪ ದುರದುಂಡಿ, ಅಶೋಕ ಕಡಕೋಳ, ಸಿದ್ದಪ್ಪ ದಾಸಪ್ಪನವರ, ಶ್ರೀಶೈಲ ದಾಸಪ್ಪನವರ, ಉಮೇಶ ನಾಯ್ಕ, ಶಿಕ್ಷಕ ಕಲ್ಲಪ್ಪ ಸಿಂಗನ್ನವರ, ಕಲಾರಕೊಪ್ಪ ಗ್ರಾಮದ ಸಾಧಕ ಅಧಿಕಾರಿಗಳಾದ ಸಿಪಿಐ ಎಲ್.ಬಿ. ಅಗ್ನಿ, ಎಕ್ಸೈಜ್ ಸಿಪಿಐ ರಾಮಸಿದ್ಧ ಆನಿ, ಪಿಎಸ್‍ಐಗಳಾದ ಎಸ್.ಆರ್. ಕಣವಿ, ಶಿವಾನಂದ ಸಿಂಗನ್ನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group