ಹಳ್ಳೂರ – ಆಧುನಿಕ ಭಾರತದ ಸಾಮಾಜಿಕ ಕ್ರಾಂತಿಯ ಮೂಲ ಪುರುಷರಲ್ಲಿ ಪ್ರಮುಖರು ಸಮಾಜ ಸುಧಾರಕರು, ಸಮಾನತೆಯ ಹರಿಕಾರರು ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ ಕ್ರಾಂತಿ ಜ್ಯೋತಿ ಮಹಾತ್ಮ ಜ್ಯೋತಿಭಾ ಪುಲೆ ಅವರ 198ನೇ ಜಯಂತ್ಯುತ್ಸವವನ್ನು ಗ್ರಾಮದ ತೋಟಗೇರ ದೈವದ ಆವರಣದಲ್ಲಿ ಆಚರಣೆಯನ್ನು ಮಾಡಲಾಯಿತು.
ಪ್ರಾರಂಭದಲ್ಲಿ ಮಹಾತ್ಮ ಜ್ಯೋತಿಭಾ ಪುಲೆ ಅವರ ಭಾವ ಚಿತ್ರಕ್ಕೆ ಅರ್ಚಕರಾದ ಪಾವಡೆಪ್ಪ ಪೂಜೇರಿ ಅವರು ಪೂಜೆ ನೆರವೇರಿಸಿದರು.
ಈ ಸಮಯದಲ್ಲಿ ಶಾಂತಯ್ಯ ಹಿರೇಮಠ, ಅಯ್ಯಪ್ಪ ಹಿರೇಮಠ, ಯಮನಪ್ಪ ನಿಡೋಣಿ, ಸಿದ್ದಪ್ಪ ಕುಲಿಗೋಡ, ಭೀಮಪ್ಪ ಹೊಸಟ್ಟಿ, ಮುರಿಗೆಪ್ಪ ಮಾಲಗಾರ, ದುಂಡಪ್ಪ ಕುಲಿಗೋಡ, ಭೀಮಪ್ಪ ಸಪ್ತಸಾಗರ, ಶ್ರೀಶೈಲ ಡಬ್ಬನವರ, ಡಾ ಪಂಡಿತ ಉಪಾದ್ಯೆ, ಬಸವರಾಜ ಕೌಜಲಗಿ, ಬಾಳಗೌಡ ನಾಯ್ಕ, ಮುತ್ತು ಹೊಸಟ್ಟಿ ಸೇರಿದಂತೆ ಅನೇಕರಿದ್ದರು.