ಮೂಡಲಗಿ: ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ನಬಾರ್ಡ್ 2017-18 ರಿಂದ 2019-20ರವರೆಗೆ ಕರ್ನಾಟಕ ರಾಜ್ಯದಲ್ಲಿ ಸುಮಾರು 20.73 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಕೇಂದ್ರ ರಾಜ್ಯ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
ನವದೆಹಲಿಯ ಸಂಸತ್ತಿನ ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ ಅವರು 2019 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ಪ್ರಕಾರ ಮುಕ್ತ ಕೃಷಿ ಸಾಲವನ್ನು ರೂ. 1 ಲಕ್ಷದಿಂದ ರೂ. 1.6 ಲಕ್ಷ ಹೆಚ್ಚಿಸಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲದ ಮಿತಿಯು ಬೆಳೆದ ಬೆಳೆಯ ಹಣಕಾಸು ಪ್ರಮಾಣವನ್ನು ಆಧರಿಸಿದೆ. ರಾಜ್ಯ ಮಟ್ಟದ ತಾಂತ್ರಿಕ ಸಮಿತಿಗಳು ಅಂತಿಮಗೊಳಿಸಿವೆ ಎಂದರು.
ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ನಬಾರ್ಡ್ ಈ ಯೋಜನೆಯಲ್ಲಿ ಸುಮಾರು 13.42 ಲಕ್ಷ ರೈತರು ಇದರ ವ್ಯಾಪ್ತಿಗೆ ಬಂದಿದ್ದಾರೆ. 05-03-2021ರಂತೆ ಕರ್ನಾಟಕದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳ ಯೋಜನೆಯ 4,489 ಅರ್ಜಿಗಳು ಬ್ಯಾಂಕುಗಳಲ್ಲಿ ಬಾಕಿ ಉಳಿದಿವೆ ಎಂದು ಉತ್ತರಿಸಿದರು.