Monthly Archives: June, 2020
ಕವನ
ಹಳ್ಳೀ ಸೊಬಗು-ಪಟ್ಣದ ಬೆಡಗು- ಕವನ
"ಹಳ್ಳೀ ಸೊಬಗು-ಪಟ್ಣದ ಬೆಡಗು"
ತಿಂಗಳೂಟವ ಬಿಟ್ಟು
ತಂಗಳಿನ ಆಸೆಗೆ
ಕಂಗಳು ಕೋರೈಸಲು
ಹೊರ ಬಂದೆ ಈಚೆಗೆ
ಗಗನಚುಂಬಿತ ಮನೆಯು
ಝಗಮಗಿಸೋ ದೀಪಗಳು
ಹೊಸ ಬಗೆಯ ದಿನಚರ್ಯವು
ಹೊಸಿಲಿರದ ಹೊಸ ಮನೆಯು
ಹುಸಿ ಪ್ರೀತಿ, ಹೊಸ ನೀತಿ
ಹಿಂಡಿನಲ್ಲಿ ಉಂಡು
ಅದು ಎಷ್ಟೋ ದಿನವಾಯ್ತು
ಬಂಡು ಬಾಳಿಗೆ ಮನವು
ರೋಸಿ ಹೋಯ್ತು
ಹಸಿ ಬೆಣ್ಣೆ,ಹಸು ಗಿಣ್ಣ
ಕೆನೆಮೊಸರು ಬಿಸಿ ರೊಟ್ಟಿ
ಕಸಬೆಂಡೆ ಉಪ್ಪಿನಕಾಯಿ
ಮೆಂತ್ಯ ಮೆಣಸಿನ ಕಾಯಿ
ಹಪ್ಪಳ ಸಂಡಿಗೆ
ಶೇಂಗಾ ಹೋಳಿಗೆ ತುಪ್ಪ
ತರತರಹದ ಚಟ್ನಿಪುಡಿ
ನವಣೆಕ್ಕಿ ಹುಳಿಬಾನ
ಇವುಗಳಿಗೆ ಸಮನಲ್ಲಾ
ಪಂಚಭಕ್ಷ ಪರಮಾನ್ನ..!!
ಕೆಸರೊಳಗೆ ಕೊಸರಾಡಿ
ಕೆಸರಾಟವನು ಆಡಿ
ನದಿ...
ಸುದ್ದಿಗಳು
ವಿಶ್ವ ರಕ್ತದಾನಿಗಳ ದಿನ 2020
ಈ ವರ್ಷದ ವಿಶ್ವ ರಕ್ತದಾನಿಗಳ ದಿನಾಚರಣೆಯ ವಿಷಯವೆಂದರೆ “ಸುರಕ್ಷಿತ ರಕ್ತವು ಜೀವಗಳನ್ನು ಉಳಿಸುತ್ತದೆ” ಎಂಬ ಘೋಷಣೆಯೊಂದಿಗೆ “ರಕ್ತವನ್ನು ನೀಡಿ ಮತ್ತು ಜಗತ್ತನ್ನು ಆರೋಗ್ಯಕರ ಸ್ಥಳವನ್ನಾಗಿ ಮಾಡಿ”.
ಸಿನಿಮಾ
ದೀಪಿಕಾ ಪಡುಕೋಣೆ ತನ್ನ ಅಂಗರಕ್ಷಕನಿಗೆ ಕೊಡುವ ಸಂಬಳ ಎಷ್ಟು ಗೊತ್ತಾ ?
ಬಾಲಿವುಡ್ ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಸದ್ಯ ಅತ್ಯಂತ ಬೇಡಿಕೆಯ ಸ್ಟಾರ್ ನಟಿ. 2007 ರಲ್ಲಿ ಕನ್ನಡ ಚಿತ್ರ ' ಐಶ್ವರ್ಯಾ ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಬಾಲಿವುಡ್ ಗೆ ಕಾಲಿಟ್ಟ ನಂತರ ವೇಗವಾಗಿ ಬೆಳೆದ ದೀಪಿಕಾಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಯಿತು. ಅವರಿಗೆ ಹತ್ತಿರವಾಗುವವರೂ ಹೆಚ್ಚಾದರು ಆದರೆ ಅವರ ಕುಟುಂಬ ಅಥವಾ...
ಸಂಪಾದಕೀಯ
ಚಿಪ್ಪು ಕಳಚಿದ ಆಮೆಯಂತಾಗದಿರಲಿ ಬದುಕು
ನಮ್ಮ ಪುರಸಭೆಯ ಆರೋಗ್ಯಾಧಿಕಾರಿಗಳು ವಾಟ್ಸಪ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆಮೆಯು ತನ್ನ ಚಿಪ್ಪನ್ನು ಕಳಚಿಕೊಂಡು ಅದರ ಮೇಲೆ ಹತ್ತಿ ನಿಂತು ಬೀಗುತ್ತಿರುವ ಚಿತ್ರ. ಅದನ್ನು ಅವರಿಗೆ ಯಾರು ಕಳಿಸಿದ್ದರೋ ಗೊತ್ತಿಲ್ಲ ಅವರು ಮಾತ್ರ ತಮ್ಮ ಕರ್ತವ್ಯ ಮಾಡಿದ್ದಾರೆ ಎಲ್ಲರಿಗೂ ಅದನ್ನು ಹಂಚಿ ಎಚ್ಚರಿಸುವ ಮೂಲಕ.
ಚಿಪ್ಪು ಕಳಚಿಕೊಂಡು ತಾನೇನೋ ಸ್ವಾತಂತ್ರ್ಯ ಗಳಿಸಿಕೊಂಡಂತೆ ಆಮೆ ಭಾವಿಸಿದರೆ ಹಾನಿ...
Uncategorized
“ಅಭಿಯಾನದ” ಎಂಭತ್ತನೇ ದಿನ ಬದಾಮಿಯ ಬನಶಂಕರಿ
"ಅಭಿಯಾನದ" ಎಂಭತ್ತನೇ ದಿನ ಬದಾಮಿಯ ಬನಶಂಕರಿ, ತುಳಸಿಗೆರೆ ಹಣಮಂತನ ಅರ್ಚಕರಿಗೂ ಕಿಟ್! ನೀರಲಕೆರೆಯ ವಿಠ್ಠಲನೂ ಹಸಿದಿದ್ದ ನಾವೂ ಹಸಿದಿದ್ದೆವು! ಹೊಲದ
ಶೆಡ್ ಕೆಳಗೇ ಖಡಕ್ ರೊಟ್ಟಿ, ಚಟ್ನಿ!!
ಮಾರ್ಚ 23 ರಂದು ಆರಂಭವಾದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ "ಹಸಿದವರತ್ತ ನಮ್ಮ ಚಿತ್ತ" ಅಭಿಯಾನವು ಬುಧವಾರ ಜೂನ್ 10 ಕ್ಕೆ 80 ದಿನಗಳನ್ನು ಪೂರ್ಣಗೊಳಿಸಿದೆ....
ಕವನ
ಕಾಣದ ಜೀವಿಯ ಹೋರಾಟ….ಕವನ
ಕಣ್ಣಿಗೆ ಕಾಣದ ಜೀವಿಯೊಂದು ಭೂಮಿಗೆ ಅವತರಿಸಿ ಬಂದಿದೆ ಎಷ್ಟು ವರ್ಷದ ಅದರ ತಪಸ್ಸಿನ ಫಲವೇನು ಗಟ್ಟಿ ಮೆಟ್ಟು ಮಾಡಿದೆ
ಕೊರೋನಾ ಎಂಬ ಹೆಸರಿನಿಂದ ನರ್ತನವ ನಡೆಸಿದೆ ಮಾನವ ಶಕ್ತಿಯನ್ನು ಮೀರಿ ಅಟ್ಟಹಾಸ ಮೆರೆದಿದೆ ಜಗದ ತುಂಬ ತಲ್ಲಣವಗೊಳಿಸಿದೆ
ಅಲ್ಲೋಲ ಕಲ್ಲೋಲ ಮಾಡುತ್ತಾ ದೇಶದಿಂದ ದೇಶಕ್ಕೆ ಹಬ್ಬುತ್ತ ಸಾಗಿದೆ ಅದೆಷ್ಟೋ ಜೀವಗಳನ್ನು ಬಲಿ ತೆಗೆದು ಕೇಕೆ ಯಾಕೆ ನಗುತ್ತಿದೆ
ಒಬ್ಬರನ್ನೊಬ್ಬರು...
ಕವನ
ಕವನ
ಗಜರಾಜನ ಆಕ್ರಂದನ...
ಓ ಸ್ವಾರ್ಥಿ ಮನುಜಾ...
ಕಾಡು ಕಡಿದೆ,ಬೆಟ್ಟಗುಡ್ಡಗಳ ದೋಚಿದೆ,
ಮನಬಂದಂತೆ ರಸ್ತೆಗಳ ನಿರ್ಮಿಸಿದೆ,
ಕಾನನದೊಳಗೆ ಮೋಜು-ಮಸ್ತಿಗಾಗಿ,
ವಸತಿ ಗೃಹಗಳ ,ಹೋಟೆಲ್ ಗಳ ಕಟ್ಟಿದೆ....
ನನ್ನ ನಾಡಿಗೆ ಕನ್ನ ಹಾಕಿದೆ,
ನಾನು ತಿನ್ನುವುದೆಲ್ಲವ ದೋಚಿದೆ,
ಹಿಂದೊಮ್ಮೆ ಇಂಪು-ತಂಪಾಗಿದ್ದ ನನ್ನ ಕಾಡು
ಮರುಭೂಮಿಯಾಯ್ತು;ಮಸಣ ಸದೃಶವಾಯ್ತು......
ಗಜರಾಜನಾದ ನಾನು ಭಿಕಾರಿಯಾದೆ,
ನಿರಾಶ್ರಿತ ನಾದೆ,ಆಹಾರ-ನೀರು ಅರಸಿ,
ಕಾಡು ಬಿಟ್ಟು ನಾಡಿಗೆ ಬಂದೆ,
ಮನುಜಾ,ತಿನ್ನುವ ಹಣ್ಣಿಗೆ
ಬಾಂಬಿಟ್ಟು ನನ್ನನ್ನೇ ಸಾಯಿಸಿಬಿಟ್ಟೆಯಲ್ಲೋ?
ಬರೀ ಬೆದರಿಸಿದರೆ ಸಾಕಿತ್ತಲ್ಲೋ..
ನಾವು ಓಡುತ್ತಿದ್ದೆವಲ್ಲೋ!!!
ನಿನ್ನ ಪತ್ನಿ, ಪುತ್ರಿ, ಸಹೋದರಿ
ಗರ್ಭಿಣಿ ಯಾದಾಗ...
ಸುದ್ದಿಗಳು
ನಿಷ್ಠಾವಂತರಿಗೆ ಸಿಕ್ಕ ಬೆಲೆ..
ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ನೀಡುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ರಾಜ್ಯಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಟಿಕೆಟ್ ತಮಗೇ ನೀಡಬೇಕು ಎಂಬುದನ್ನು ಬಾಯಲ್ಲಿ ಹೇಳದೆ ಭಿನ್ನರಾಗ ಹಾಡಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಸಲು ಹವಣಿಸಿದ ಘಟಾನುಘಟಿಗಳಿಗೆ ಮುಟ್ಟಿನೋಡಿಕೊಳ್ಳುವಂಥ ಶಾಕ್ ನೀಡಿದೆ ಪಕ್ಷದ ಹೈಕಮಾಂಡ್.
ಹೌದು, ಹೈಕಮಾಂಡ್ ಎಂದರೆ ಕೇವಲ ಹೌದಪ್ಪಗಳನ್ನು ಅಥವಾ...
ಸುದ್ದಿಗಳು
ಇಂದು National sex day
Creditಜೂನ್ 9 ವಿಶೇಷ ದಿನದ ಬಗ್ಗೆ ಗೂಗಲ್ scroll ಮಾಡಿದಾಗ ತಿಳಿದುಬಂದಿದ್ದು ಇವತ್ತು ' National sex day ಎಂದು !
ಆದರೆ ಮುಂದೆ ಓದಿದಾಗ ಅಲ್ಲಿರುವ ವಿವರಣೆಯೇ ಬೇರೆ. ಅದನ್ನು ಬಿಡಿ, ಸೆಕ್ಸ್ ಅಥವಾ ಲೈಂಗಿಕತೆಯ ಬಗ್ಗೆ ನಮ್ಮ ಭಾರತೀಯ ವಿಚಾರಧಾರೆಯ ಅಡಿಯಲ್ಲೇ ನಾವು ಚಿಂತಿಸೋಣ.
ಲೈಂಗಿಕತೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಪದ್ಧತಿ. ದೇಹಕ್ಕೆ...
ಸಂಪಾದಕೀಯ
ಕುಡಿಯೂದ ಬಿಡಬೇಕು, ಆದ್ರೆ ಆಗ್ತಾ ಇಲ್ಲ…
ಹೀಗೆಂದು ಎಷ್ಟು ಸಲ ಅಂದುಕೊಂಡಿರುತ್ತಾರೆ ಕುಡಿಯುವವರು. ಎಷ್ಟು ಸಲ ಏನು ಪ್ರತಿ ದಿನವೂ ಅಂದುಕೊಂಡೇ ಇರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಅವರ ತಲೆಯಲ್ಲಿ ಇವತ್ತಿನಿಂದ ಕುಡಿಯಬಾರದು ಎಂಬ ಯೋಚನೆಯೇ ಇರುತ್ತದೆ. ಸಂಜೆಯ ಹೊತ್ತಿಗೆ ಸ್ವಲ್ಪ ಎಡ ಮಿದುಳು ಒಂದು ಕ್ಷಣ ಕೆಲಸ ನಿಲ್ಲಿಸಿ ಮತ್ತೆ ಮುಂದುವರೆಸುತ್ತದೆ. ಮತ್ತದೇ ಲೋಕ ; ಬಾಟ್ಲು, ಗ್ಲಾಸು, ಸಾರಾಯಿ ಘಾಟು.....
ಇದು...
Latest News
ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ
ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...