ವನಮಹೋತ್ಸವದ ಅಂಗವಾಗಿ ಇದೆ ಮಂಗಳವಾರ ೧೪.೦೭.೨೦೨೦ ಬೆಳಿಗ್ಗೆ ೭ ಘಂಟೆಗೆ ಸವದತ್ತಿ ತಾಲೂಕು ಗೊರವನಕೊಳ್ಳದ ನವಿಲು ತೀರ್ಥದ ಕೆಳಗಿನ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಸೀಡಾ ಥಾನ್ ಬೀಜ ಹಚ್ಚುವ/ ಹಾಕುವ ಕಾರ್ಯಕ್ರಮವಿದ್ದು. ಈಗಾಗಲೇ ಸವದತ್ತಿಯ "ವೃಕ್ಷ ಭಾರತ ಸೈನಿಕರು" ಸುಮಾರು ೧೨ ಲಕ್ಷ ಬೀಜಗಳನ್ನು ಸಂಗ್ರಹಣೆ ಮಾಡಿದ್ದು ಉಚಿತವಾಗಿ ಹಂಚಲಿದ್ದಾರೆ.
ಈ ನಿಸರ್ಗ ಸೇವೆಗಾಗಿ ಆಸಕ್ತರು...
ಖ್ಯಾತ ಬಾಲಿವುಡ್ ನಟ ಅಮಿತಾಭ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಸಂಜೆಗೆ ತಮಗೆ ಕೊರೋನಾ ಇರುವುದಾಗಿ ಬಿಗ್ ಬಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.ಎಪ್ರಿಲ್ ನಲ್ಲಿ ಅವರೇ ಒಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದೃಷ್ಟಿ ಮಂಜಾಗಿರುವ ಬಗ್ಗೆ ಬರೆದುಕೊಂಡಿದ್ದರು. ಆದರೆ ನಾನೇನು ಕುರುಡನಾಗಿಲ್ಲ...
ಎಲ್ಲರಿಗೂ ನಮಸ್ಕಾರ,
ಕೊರೋನಾ ಸೋಂಕಿತನಾಗಿ ಮೂರನೇ ದಿವಸದ ಚಿಕಿತ್ಸೆ ಪಡೀತಾ ಇರೋ ನಾನು ಇಲ್ಲಿ ನನಗನಿಸಿದ ಕೆಲ ಅನಿಸಿಕೆಗಳನ್ನು ಹಂಚಿಕೊಳ್ತಾ ಇದ್ದೀನಿ.
1) ಕೊರೊನಾ ಇದು ಒಬ್ಬ ಸಾಮಾನ್ಯ ಆರೋಗ್ಯವಂತನ ಒಂದು ಸಣ್ಣ ರೋಮವನ್ನೂ ಅಲುಗಾಡಿಸಲು ಆಗದ ನಿಷ್ಕೃಷ್ಠ , ದುರ್ಬಲ ವೈರಾಣು.
2) ಈಗಾಗಲೇ ಎಷ್ಟೋ ಜನರ ದೇಹವನ್ನು ಹೊಕ್ಕು ಅವರ ಅರಿವಿಗೆ ಬಾರದೆ ಹೊರಟು ಹೋಗಿರಬಹುದಾದ...
ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಡಲು ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಇವು ವೈರಾಣು ಒಬ್ಬರಿಗೆ ಹರಡದಂತೆ ಸಹಕಾರಿಯಾಗುತ್ತವೆ. ಆದರೆ ಎಲ್ಲ ಮಾಸ್ಕ್ ಗಳು ಹಾಗಲ್ಲ.
ಪ್ರತಿದಿನ ನೀವು ಮನೆಯಿಂದ ಹೊರಬರಬೇಕಾದರೆ ಮಾಸ್ಕ್ ಧರಿಸಲೇಬೇಕು. ಪೊಲೀಸರು ಕೂಡ ಮಾಸ್ಕನ್ನು ಕಡ್ಡಾಯ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಮಾಸ್ಕ್...
ಗುರುವಿಗೆ...
ಜಗವ ಕಾಣುವ ಮೊದಲೇ
ಅದರರಿವು ಇತ್ತವ ನೀನು...
ಹಸಿದಡೆ ಉಣ್ಣುವುದು,
ದಣಿದಡೆ ಮಲಗುವುದು,
ಸೂರ್ಯ ಚಂದ್ರರ ನೋಡಿ
ನಕ್ಕು ನಲಿದಾಡುವುದು
ತೊಟ್ಟಿಲಲಿ ಮಲಗಿದವಗೆ
ಎಲ್ಲಾ ಪ್ರೀತಿಯನಿತ್ತವ ನೀನು....
ಗುರುವೇ ನಿನಗೆ ಶರಣು..
ಅಮ್ಮನೇ ಮೊದಲಾದ
ಬಂಧುಗಳ ತೋರಿದೆ ನೀನು
ಗಿಡ ಮರ ಬಳ್ಳಿಗಳ
ಕಾಣಲು ಕಲಿಸಿದೆ ನೀನು
ಓದು ಬರಹದಲಿ
ಬ್ರಹ್ಮಾಂಡವ ತೋರಿದೆ ನೀನು...
ನೂರು ದಾರಿಗಳಲ್ಲಿ
ಬದುಕನು ಕಲಿಸಿದೆ ನೀನು...
ಗುರುವೇ ನಿನಗೆ ಶರಣು....
ನಾನಾರೆಂಬುವ ಮಾತು
ಮರೆತು ಸಾಯುವ ಜಗಕೆ
ಪರಿಪರಿಯಾಗಿ ಅರುಹುವ
ಕರುಣಾಳು ನೀನೇ...
ಎಲ್ಲವೂ ನಾನೇ..
ಜಗವೆಲ್ಲವೂ ನನ್ನಿಂದೆ
ಎಂಬೀ ಬರೀ ಗುಡುಗಿನ
ಸದ್ದಡಗಿಸಿದ...
೧
ಭುಗಿಲೆದ್ದಿದೆ
ಜಗವು ಭಯದಲಿ
ಮಹಾಮಾರಿಯೇ
ನೀ ತಂದ ಫಜೀತಿಗೆ
ಸಾವೂ ಹೆದರುತಿದೆ
೨
ಒಕ್ಕಲೆದ್ದಿದೆ
ನೆಲೆಯು ಸಿಗದಲೆ
ಮಾರಿ ಕೊರೋನಾ
ಹೆಚ್ಚುವ ಭೀತಿಯಲಿ
ಹುಚ್ಚು ಹಿಡಿಯುತಿದೆ
೩
ಭಯಗೊಂಡಿದೆ
ಜಗದ ಜನವಿಂದು
ಮಾರಿಗೌಷಧಿ
ಸಿಗದ ಕಾರಣಕೆ
ಸಾವಿಗೆ ಹೆದರಿದೆ
೪
ದಿಕ್ಕುಗಾಣದೆ
ಜನ ಕಂಗಾಲಾಗಿದೆ
ಸಾವು ನೋವಿನ
ಲೆಕ್ಕ ಸಿಗದುದರ
ಭಯಕೆ ಬೆದರಿದೆ
೫
ರೋಗ ಮುಕ್ತಿಗೆ
ಭವವು ಬಯಸಿದೆ
ಕೈ ಮುಗಿಯತ
ಮೊರೆಯನಿಡುತಿದೆ
ಧರೆಯ ದೇವರಲಿ.
ಡಾ.ಗಜಾನಂದ ಸೊಗಲನ್ನವರ
ಚಿಕ್ಕಬಾಗೇವಾಡಿ
ಮಾನವ ಶರೀರದ ದೋಷಗಳಾದ ವಾತ, ಪಿತ್ತ ದೋಷಗಳನ್ನು ಸಮತೋಲಿತವಾಗಿ ಇಡಲು ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆಯೆಂದು ಆಯುರ್ವೇದ ಹೇಳುತ್ತದೆ. ತುಪ್ಪವನ್ನು ಮೂಗಿನಲ್ಲಿ ಹಾಕುವ ನಸ್ಯ ಥೆರಪಿ ಈ ದೋಷಗಳನ್ನು ಸಮತೋಲಿತವಾಗಿ ಕಾಪಾಡುತ್ತವೆ ಎನ್ನಲಾಗಿದೆ.
ವಾತ ಹಾಗೂ ಪಿತ್ತ ದೋಷದ ಸಂಕೇತಗಳಾದ ಮೈಗ್ರೇನ್, ಮಾನಸಿಕ ಗೊಂದಲ, ಉದ್ವೇಗ, ಖಿನ್ನತೆ, ಫೋಬಿಯಾ, ನಿದ್ರಾಹೀನತೆ ಇವುಗಳಲ್ಲಿ ತುಪ್ಪವನ್ನು ಮೂಗಿನಲ್ಲಿ ಹಾಕುವ...