Monthly Archives: September, 2020
ಸುದ್ದಿಗಳು
ಮಂಜುನಾಥ ರೇಳೇಕರ್… ಜವಾರಿ ತಿನ್ನಿ ಗೋ ಕೊರೊನ ಎನ್ನಿ !
ಪ್ರಿಯ ನಾಗರಿಕ ಬಂಧುಗಳಲ್ಲಿ ಚಿಕ್ಕ ಕಲಾವಿದರಿಂದ ಮನವಿ ಬಹಳ ಗಮನ ಹರಿಸಬೇಕಾದ ವಿಷಯ 256 ದೇಶಗಳಲ್ಲಿಯೇ ವಿಭಿನ್ನವಾದ ದೇಶ ಭಾರತ ಕೊರೊನದಂತಹ ಮಹಾಮಾರಿ ರೋಗ ನಮ್ಮ ದೇಶಕ್ಕೆ ಕಾಲಿಡಬಾರದಿತ್ತು ಆದರೂ ಕಾಲಿಟ್ಟಿದೆ.
ಇದರ ಹಿನ್ನಲೆ ಹೀಗಿದೆ. ಹಲವಾರು ದೇಶಗಳಿದ್ದರೂ ಪ್ರಮುಖವಾಗಿ ಚೀನಾ ದೇಶದಲ್ಲಿಯೇ ಮಹಾಮಾರಿ ಹುಟ್ಟಲು ಕಾರಣ ಇದೆ.
ಮನುಷ್ಯರು ಸಸ್ಯಾಹಾರಿ ಹಾಗೂ ಮಾಂಸಾಹಾರಿಯೂ ಎಂದು ಎಲ್ಲರಿಗೂ...
ಆರೋಗ್ಯ
ಕುಂಬಳಕಾಯಿಯ ಎಲೆಯನ್ನು ಸೇವಿಸಿ, ಅನೇಕ ಪ್ರಯೋಜನಗಳುಂಟು
ಕುಂಬಳಕಾಯಿ ಯಾರಿಗೆ ಗೊತ್ತಿಲ್ಲ ? ಎಲ್ಲ ಸಮಾರಂಭಗಳಲ್ಲಿ ಕುಂಬಳಕಾಯಿ ಪಲ್ಯ ಮೊದಲು ಇರುತ್ತದೆ. ಹಾಗೆಯೇ ಕುಂಬಳಕಾಯಿ ಗೊಜ್ಜು ತುಂಬಾ ರುಚಿಕರವಾಗಿರುತ್ತದೆ. ಅದರ ಆರೋಗ್ಯಕಾರಿ ಪ್ರಯೋಜನಗಳೂ ತುಂಬಾ ಇವೆ.
ಆದರೆ ನಾವಿಲ್ಲಿ ಹೇಳಲು ಹೊರಟಿರುವುದು ಕುಂಬಳಕಾಯಿ ಎಲೆಯ ಬಗ್ಗೆ ! ಹಾಗೂ ಅದರ ಪ್ರಯೋಜನಗಳ ಬಗ್ಗೆ, ಅಂದರೆ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ತಿನ್ನುವ 'ಕುಮ್ರೊ ಸಾಗ್' ಎಂಬ...
ಸುದ್ದಿಗಳು
ಯುವಕರು ಸ್ವಾಮಿ ವಿವೇಕಾನಂದರ ಬಗ್ಗೆ ಅವಶ್ಯ ತಿಳಿಯಲೇಬೇಕು
ಹಿಂದಿ ಶಿಕ್ಷಕರ ಸಂಘದಿಂದ ಪುಸ್ತಕ ವಿತರಣೆ
ಮೂಡಲಗಿ - ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ಬಗ್ಗೆ ಅವಶ್ಯವಾಗಿ ತಿಳಿದಿರಬೇಕು. ಅವರಿಗಾಗಿಯೇ ಬರೆಯಲಾದ ಪುಸ್ತಕ " ಎಚ್ಚತ್ತ ಭಾರತ " ರಚನೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಎಮ್.ಪಿ.ಗೀದಿ ಹೇಳಿದರು.
ಕಳೆದ ಸೆ. 5 ರಂದು ' ಶಿಕ್ಷಕರ...
ಲೇಖನ
ಕಾಗೆಯೆಂದು ಹೀಗಳೆಯದಿರಿ! ಕಾಗೆ ಜನ್ಮವೇ ಶ್ರೇಷ್ಠ
ಕರ್ಕಶ ದನಿಯ, ಕಪ್ಪು ಮೈಯ ಕಾಗೆಯೆಂದರೆ ಎಲ್ಲರಿಗೂ ತಾತ್ಸಾರ. ಆದರೆ ಕಾಗೆಯೇ ಮಾನವ ಜನ್ಮದ ಮೋಕ್ಷದಾತ ಎಂಬುದು ಅಷ್ಟೇ ಸತ್ಯ. ಇದರ ಬಗ್ಗೆ ಒಂದು ಸಣ್ಣ ಕತೆಯಿದೆ. ಓದಿ
ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ:- "ಸ್ವಾಮೀಜಿ,ನಾವೇಕೆ, ಮಹಾಲಯದ ಸಂದರ್ಭದಲ್ಲಿ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ? ಅವರೇಕೆ ಕಾಗೆಗಳಂಥ ಹೀನ ಜನ್ಮ...
ಲೇಖನ
ಪುಸ್ತಕ ಪರಿಚಯ: ಓಹ್ ಕಲ್ಕತ್ತಾ! ಇದು ಹಳೇ ಕಲ್ಕತ್ತಾ!
ಪುಸ್ತಕದ ಹೆಸರು : ಓಹ್ ಕಲ್ಕತ್ತಾ! ಇದು ಹಳೇ ಕಲ್ಕತ್ತಾ!
ಲೇಖಕರು : ಆಗುಂಬೆ ಎಸ್. ನಟರಾಜ್
ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ)ಬೆಂಗಳೂರು.
ಮೊದಲ ಮುದ್ರಣ : 2020 ಅಗಷ್ಟ್
ಮುಖ ಪುಟ : ದೀಪಕ್ ಬಾಬು
ಪುಟಗಳು : 164, ಬೆಲೆ : 150/-
ಮುದ್ರಕರು : ಹೆಗಡೆ ಪ್ರಕಾಶನ ಬೆಂಗಳೂರು ಉತ್ತರ
ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು...
ಲೇಖನ
ಪುಸ್ತಕ ಪರಿಚಯ: ವಂದೇ ಗುರು ಪರಂಪರಾಮ್
ಲೇಖಕರು : ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ , ಬೆಂಗಳೂರು – 97393 69621
ಪುಟಗಳು : 184
ಬೆಲೆ : ರೂ 180/-
ಆಕಾರ : ಡೆಮ್ಮಿ 1/8
ಗುರು-ಗುರಿ ಇದ್ದರೆ ಯಶಸ್ಸು ಖಚಿತ
ಪಠ್ಯದಲ್ಲಿನ ವಿಷಯಗಳನ್ನು ಕಲಿಸುವುದರಾಚೆಗೆ ವಿದ್ಯಾರ್ಥಿಗಳನ್ನು ಅವರ ವೈಯಕ್ತಿಕ ಸಾಮರ್ಥ್ಯ ಮತ್ತು ಶಕ್ತಿಗೆ ಅನುಗುಣವಾಗಿ ತಿದ್ದುವ, ಅವರಿಗೆ ಮಾರ್ಗದರ್ಶನ ಮಾಡುವ...
ಕವನ
ಕವನ
..ವೃಕ್ಷ ಸಂದೇಶ....
ಬಾಳೆಂಬ ವಿಚಿತ್ರ ಸಂತೆಯಲಿ
ಭೀಕರ ಬಿರುಗಾಳಿ,ಭೂಕಂಪ,ಪ್ರವಾಹ
ನಿನ್ನನೆಂದೂ ಅಲುಗಿಸಲಾರವು
ನಿಲ್ಲು, ನೀ ಧೃಡವಾಗಿ ನಿಲ್ಲು !!!
ನಿನಗೆ ಅದೃಷ್ಟ ದೇವತೆಯ ಕಟಾಕ್ಷವಿದೆ,
ಧೃಡವಾಗಿ, ವಿಸ್ತರಿಸಿ,ಕೊಂಬೆ-ರೆಂಬೆಗಳ ಹರಡಿ
ನಿನ್ನದೇ ಸಾಮ್ರಾಜ್ಯದಲಿ ಸಂತಸದಿ ನಲಿಯುತ್ತಿದ್ದೀ,
ಹಸಿರಾಗಿ,ಪಕೃತಿಯ ಉಸಿರಾಗಿ ನಳನಳಿಸುತ್ತಿದ್ದೀ.....
ನಿನ್ನ ಕೊಂಬೆಗಳಲಿ ಸಾವಿರ ಪಕ್ಷಿಗಳು ಕುಳಿತು,
'ಕುಹು-ಕುಹು' ಸಂಗೀತ ಹಾಡಿ ನಲಿಯಲಿ;
ನವಿಲು ನರ್ತಿಸಲಿ, ಶುಕ-ಪಿಕಗಳು ಆನಂದಿಸಲಿ,
ನಿನ್ನ ನೆರಳಲಿ ಜಿಂಕೆ,ಮೊಲ,ಸಾರಂಗಗಳು ನಲಿಯಲಿ...
ಓ ಮಾನವ ,ಈ ಹಸಿರು ವೃಕ್ಷದಂತೇ ನಿನ್ನ ಬಾಳು,
ಜಾತಿ,ಮತ,ಪಂಥಗಳೆಲ್ಲವ...
ಕವನ
ಚುಟುಕುಗಳು
ಸಹಜವಾಗಲಿದೆ ಜೀವನ !!
ಈ ಕೊರೊನಾ ಕಾಲದಲ್ಲಿ..
ನಾವಾಗಬಾರದು..
ಒಬ್ಬರೇ ಏಕಾಂಗಿ!
*ಮನಸ್ಸು* ಮಂಕಾಗಿ!!
ಮೊಬೈಲ್ ಗೆ ಸಿಂಕಾಗಿ!!! 🤳🤳
(sync)
ನಾವಾಗಬೇಕು..
ಸ್ನೇಹದ ಸೊಂಕಾಗಿ!
ಲವಲವಿಕೆಯ ಲಿಂಕಾಗಿ!!(link)
*ಆತ್ಮಸ್ಥೈರ್ಯದ* ಶಂಖವಾಗಿ!!!🐚🐚
ಕಣ್ಣಿಗೆ ಕಾಣದ
ವೈರಸ್ ವೊಂದು
ಕಾಡುತ್ತಿದೆ ಧರೆಯನಿಂದು;
ಹಿಂದೆಂದೂ ಕಂಡು ಕೇಳರಿಯದ
*ಅವಲಕ್ಷಣಗಳಲ್ಲಿ!!*
ಕಣ್ಣಿಗೆ ಕಾಣದ
ದೇವರಿಂದು
ಕಾಪಾಡುತ್ತಿದ್ದಾನೆ ಧರೆಯನಿಂದು;
ಹಿಂದೆಂದೂ ಕಂಡು ಕೇಳರಿಯದ
*ಅವತಾರಗಳಲ್ಲಿ!!*
ಮಾಸ್ಕ್ ಇದ್ದರೆ
ಜೀವಕ್ಕೆ
_ರಿಸ್ಕ್ ಇಲ್ಲ!_ 😷😷
ಪ್ರೇಮವಿದ್ದರೆ
ಜೀವನವು
_ಶುಷ್ಕವಲ್ಲ!!_ 💖💖
ಕಷ್ಟಗಳ ಬಂಡೆಗಳೇ
ಉರುಳಿದರೂ!
ಜಾರಬಾರದು ನಾವು
🙇🏻♂️ *ಖಿನ್ನತೆಗೆ* 🙇🏻♀️
ಸಾಮಾಜಿಕ ಅಂತರದಲ್ಲೂ
ಸನಿಹವಾಗಬೇಕಿದೆ!
ನಾವು ಮನ-ಮನಗಳ
🎭 *ಭಿನ್ನತೆಗೆ* 🎭
ಮೊನ್ನೆ
ಮೊನ್ನೆಯ
ನಿರುದ್ಯೋಗಿ,
ಇಂದಿನ
ಅಗರ್ಭ
*ಸಿರಿದ್ಯೋಗಿ!*
ಹೂಡಿಕೆ
ಮಾಡಿದ್ದ
ತಾಳ್ಮೆಯನ್ನು
*ನಿಯತ್ತಾಗಿ !*
ಹೃದಯಕ್ಕೆ
ನಾಟುವಂತೆ
ನಾಟಿ
ಮಾಡಿದ್ದಾನೆ
ಸಸಿಯನ್ನು
ಅನವರತ
ಅನ್ನದಾತ;
ಪೂಜಿಸುತ್ತಾ
ಭೂತಾಯಿಯನ್ನು
ಬೆಳೆಯಲು
*ಫಲವತ್ತಾಗಿ!*
ಗುರುವಿನ
ಗೋತ್ರ
ಶಿಷ್ಯನ
ಬಾಳಿನ
ಸೂತ್ರ;
ಸರಿಪಡಿಸುವನು
ಶಿಷ್ಯನ
ಜಾತಕ
ಮನದಲ್ಲಿ
ಮುಚ್ಚಿಟ್ಟುಕೊಂಡು
ಸೂತಕ!
ಮೊಂಬತ್ತಿಯಂತೆ
ಮಾಯವಾಗುವನು
ಶಿಷ್ಯಂದಿರ
*ಉತ್ತಿಷ್ಠತೆಗಾಗಿ!*
ನಿನ್ನೆಯ
ಗದ್ಯವನ್ನೇ
ಬರೆಯುತ್ತಿದ್ದೇನೆ;
ನಾನಿಂದು
ಪದ್ಯವಾಗಿ
ಕೊರೊನಾ
ಕಾಲದಲ್ಲಿ
ಸಕಲರ
*ಸುರಕ್ಷತೆಗಾಗಿ!*
ಸಂತೋಷ ವಾಲಿ ಬಿ ಆರ್ ಪಿ...
ಲೇಖನ
ಪುಸ್ತಕ ಪರಿಚಯ: ಮನದಾಳದ ಮಾತುಗಳು
“ಡಾ ಭೇರ್ಯ ರಾಮಕುಮಾರ್” ಹೆಸರಿನಲ್ಲಿಯೇ ಒಂದು ರೀತಿಯ ಅದಮ್ಯ ವಿಶ್ವಾಸ, ಅಗಾಧ ಸಾಹಿತ್ಯ ಜ್ಞಾನವನ್ನು ಹೊಂದಿರುವ ಅಪರೂಪದ ವ್ಯಕ್ತಿತ್ವ ಇವರದು ಎಂದರೆ ಅತಿಶಯೋಕ್ತಿ ಆಗಲಾರದು ಎನ್ನುವುದು ಓದುಗರ ಅಭಿಪ್ರಾಯ.
ಕರ್ನಾಟಕದಲ್ಲಿ ಸಾಹಿತಿಗಳಿಗೆ ಏನೂ ಕೊರತೆ ಇಲ್ಲ ಬಿಡಿ, ಆದರೆ ವರ್ಣರಂಜಿತ ಬದುಕಿನ ಹೋರಾಟಗಳನ್ನು ಅನುಭವಿಸುತ್ತಾ ಸಾಹಿತ್ಯ ಸೇವೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಸಾಹಿತ್ಯ ಮಾತ್ರವಲ್ಲ...
ಕವನ
ಕವನಗಳು: ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಗುರುವೆ ಶಕ್ತಿ
ಗುರುವೆನ್ನ ಭಕ್ತಿ
ಗುರುವೆನ್ನ ಶಕ್ತಿ
ಗುರುವೇ ಪರಮೋದ್ಧಾರ
ಗುರುತರ ಜವಾಬ್ದಾರಿಯಲಿ
ಕರುಣೆಯ ಕಾರ್ಪಣ್ಯ ಸಿಂಧು
ಸಹಕಾರಕೆ ಮಾದರಿಯು
ಮಕ್ಕಳ ಪ್ರೀತಿಯಲಿ ಪೊರೆದು
ಗುರಿಯೆಡೆಗೆ ಪಯಣಕೆ
ದಾರಿ ತೋರಿಸುವ ದೀಪ
ತಪ್ಪಾದರೆ ಶಿಕ್ಷಿಸುವ
ನೋವಿನಲಿ ಸ್ಪಂದಿಸುವ
ಸಾಧನೆಗೆ ಬೆನ್ನು ತಟ್ಟುವ
ಬಾಳ ನೌಕೆಯ ದಿಕ್ಸೂಚಿ
ತಿಳಿವಳಿಕೆಯ ಹರಿಸಿ
ಅರಿವಿನ ಧಾರೆಯಲಿ
ಜೀವಿಸಲು ಕಲಿಸಿ
ಪರಿವರ್ತನೆಯ ತೋರಿ
ಮನದ ಕಲ್ಮಶವ ಕಳೆದು
ಕೌಶಲ್ಯ ವೃದ್ಧಿಗೆ
ಸಹನೆಯ ಗುಣದಿ
ವಿಚಾರವಂತಿಕೆಗೆ ಕಾರಣೀಭೂತ
ಸಮಾಜದ ಕೇಂದ್ರ ಬಿಂದು
ನಿರ್ವಹಣೆಗೆ ಹೊಂದಿಸಿ
ಲೆಕ್ಕ ಪಕ್ಕದಿ ಗಮನಿಸಿ
ಸೂಕ್ತ ವ್ಯವಸ್ಥೆ
ಶಕ್ತ ಸಮಾಜ ಕಲ್ಪಿಸಿ
ಸೂಕ್ತ ಪರಿಸರದ ಚಾಲಕ.
ರೇಷ್ಮಾ...
Latest News
ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ
ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...