ಹೊಯ್ದಾಟ
ಬತ್ತಿಯ ಭಾವನೆ
ತೈಲವನು ನಾನು ಹನಿಹನಿಯಾಗಿ ನುಂಗುತ್ತಿದ್ದೇನೆಂಬುದು.
ತೈಲದ ಭಾವನೆ
ಬತ್ತಿಯನ್ನು ಸದ್ದಿಲ್ಲದೆ ಇಂಚಿಂಚು ಸುಟ್ಟು ಬೂದಿ ಮಾಡುತ್ತಿದ್ದೇನೆ ಎಂಬುದು.
ಇವೆರಡರ ನಡುವೆ ಯಾರಿಗೂ
ಕಿಂಚಿತ್ತೂ ಗೊತ್ತಾಗದಂತೆ
ಗೀರಿದ ಕಡ್ಡಿಯ ಬೆಂಕಿ
ದೀಪವಾಗಿ ಶಾಂತವಾಗಿ
ಬೆಳಕಾಗಿ ರಾರಾಜಿಸುತ್ತಿತ್ತು
ಜಗದ ಬೆಳಕು ನಾನೆ ಎಂದು.
ಉಮಾದೇವಿ.ಯು. ತೋಟಗಿ
ಸ. ಶಿ. ಸ. ಕ. ಹಿ. ಪ್ರಾ. ಶಾ. ರಾಮಾಪುರ
ತಾ. ಸವದತ್ತಿ. ಜಿ. ಬೆಳಗಾವಿ
ಸಿಂದಗಿ: ಸಂಘಟನೆಯಲ್ಲಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದವರಿಗೆ ಹುದ್ದೆಗಳು ಹುಡುಕುತ್ತ ಬರುತ್ತವೆ. ನಮ್ಮ ನಿರ್ಧಾರ ಸ್ಪಷ್ಟವಾಗಿಟ್ಟುಕೊಂಡು ಕಾಯಕವೇ ಕೈಲಾಸವೆಂದು ಶ್ರಮಿಸಬೇಕು ಎಂದು ಶಿಕ್ಷಕರ ಸಂಘದ ಮುಖಂಡ, ಉರ್ದು ಶಿಕ್ಷಕಕರ ಸೊಸೈಟಿಯ ಅಧ್ಯಕ್ಷ ಯು ಐ ಶೇಖ ಹೇಳಿದರು.
ಪಟ್ಟಣದ ಉರ್ದು ಶಿಕ್ಷಕರ ಸೊಸೈಟಿ ಸಭಾ ಭವನದಲ್ಲಿ ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲ ತಾಲೂಕು ಉರ್ದು ಶಿಕ್ಷಕರ ಸಂಘದ...
ಸಿಂದಗಿ: ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಿಂದಗಿಯ ಕರ್ನಾಟಕ ಅದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ಬೆಂಗಳೂರು ರವರು ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಿ. 06-03-2022 ರಂದು ಭಾನುವಾರ ಬೆಳಿಗ್ಗೆ ಸಾಯಿ ಕಲ್ಯಾಣ ಮಂಟಪ, ಬೆಂಗಳೂರಿನಲ್ಲಿ ಪ್ರಶಸ್ತಿ...
ಸಿಂದಗಿ: ಸ್ಥಳಿಯ ವಿದ್ಯಾಚೇತನ ಪ್ರಕಾಶನದ ರಜತ ವರ್ಷ 2021-22ರ ನಿಮಿತ್ತ ಪಟ್ಟಣದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಫೆ.28 ರಂದು ಬೆಳಿಗ್ಗೆ 10 ಗಂಟೆಗೆ ಪುಸ್ತಕ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಪುಸ್ತಕ ಸಂಸೃತಿಕ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಎಂ. ಪಡಶೆಟ್ಟಿ...
ಡಿ.ಎಸ್. ವೀರಯ್ಯ ಅವರ ʼಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳುʼ ಕೃತಿ ಬಿಡುಗಡೆ
ಬೆಂಗಳೂರು - ರಾಜಕಾರಣ ಮತ್ತು ಧರ್ಮ ಎರಡೂ ಪ್ರಸ್ತುತ ಸಂದರ್ಭದಲ್ಲಿ ಪ್ರಶ್ನಾತೀತ ನೆಲೆಗೆ ತಲುಪುತ್ತಿವೆಯೇನೋ ಎನ್ನುವ ಅನುಮಾನ ಬಲವಾಗಿದೆ. ಈ ವೇಳೆ ಜನಸಾಮಾನ್ಯ ಅನುಭವಿಸುತ್ತಿರುವ ಬಿಕ್ಕಟ್ಟುಗಳಿಂದ ಬಿಡುಗಡೆ ಪಡೆಯಲು ಡಿ.ಎಸ್. ವೀರಯ್ಯನವರು ಚಿಂತನೆ ನಡೆಸಿದ್ದಾರೆ.ಅನೇಕ ವರ್ಷಗಳಿಂದ ಅಂಬೇಡ್ಕರ್ ಅವರ ಸಿದ್ದಾಂತಗಳ ಬಗೆಗೆ...
ಮುನವಳ್ಳಿಃ ಮಾನವನು ಎಲ್ಲ ದುಃಖಗಳಿಂದ ಬಿಡುಗಡೆಯನ್ನು ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುವರು. ಇದನ್ನು ಪಡೆಯಲು ಸಾಗುವ ಸಾಧನಾ ಮಾರ್ಗವೇ ಕೈವಲ್ಯ ಪದ್ಧತಿ.ಇದು ಪರಮಾತ್ಮನ ಕೃಪೆಯಿಂದ ಹಾಗೂ ಗುರುವಿನ ಮಾರ್ಗದರ್ಶನದಿಂದ ಆಗಬೇಕಾಗುತ್ತದೆ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಲಿಂ.ಪೂಜ್ಯ ಶ್ರೀ ವಿಜಯಾನಂದ ಮಹಾಸ್ವಾಮಿಗಳಿಂದ ಬಹಳ ಸರಳ ಸುಂದರವಾಗಿ ಸತ್ಸಂಗ ಸಂದರ್ಭದಲ್ಲಿ ತಿಳಿಸಿದ ವಿಚಾರಗಳನ್ನು ಸತ್ಸಂಗಿಗಳಾದ ಯಶವಂತ...
ಬೈಲಹೊಂಗಲ: ಇತ್ತೀಚೆಗೆ ನಿಧನರಾದ ನಾಡಿನ ಖ್ಯಾತ ಕವಿಗಳಾದ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು. ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮೌನಾಚರಣೆ ಮಾಡಿ ಅಗಲಿದ ಹಿರಿಯ ಚೇತನಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಲಾಯಿತು.
ಖ್ಯಾತ ಪ್ರವಚನಗಾರ್ತಿ ಪ್ರೇಮಕ್ಕ ಅಂಗಡಿ ಮಾತನಾಡಿ ಕಣವಿಯವರ ಮೌಲ್ಯಯುತ ಕವನಗಳು ಸರ್ವಕಾಲಿಕವಾಗಿದ್ದು...
ಮೂಡಲಗಿ: ಕೃಷಿಯ ಜೊತೆಯಾಗಿ ರೈತರು ಅವಲಂಬಿತವಾಗಿರುವ ಕುರಿ, ಆಡು, ಕೋಳಿ, ದನಕರುಗಳ ಸಾಕಾಣಿಕೆದಾರರಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿದಾಗ ಮಾತ್ರ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವದು ಎಂದು ಜೋಕಾನಟ್ಟಿಯ ಶ್ರೀ ಯೋಗಿಸಿದ್ದೇಶ್ವರ ಆಶ್ರಮದ ಬಿಳಿಯಾನಸಿದ್ಧ ಮಹಾಸ್ವಾಮೀಜಿ ನುಡಿದರು.
ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಜರುಗಿದ ರಾಯಣ್ಣ ಕುರಿ ಮತ್ತು ಆಡು ರೈತ ಉತ್ಪಾದಕರ ಸಂಸ್ಥೆಯ ಉದ್ಘಾಟನಾ...
ಬೆಳಗಾವಿ - ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ ಹಂಜಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಭೇಟಿಯಾಗಿ ಗಡಿ ತಾಲೂಕಿನ ಕನ್ನಡಪರ ಕೆಲಸಗಳಿಗೆ ಮತ್ತು ಸಾಹಿತ್ಯಕ ಚಟುವಟಿಕೆಗಳಿಗೆ ಸಹಕಾರ ನೀಡಲು ವಿನಂತಿಸಿದರು.
ಸಾಹಿತ್ಯ ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆಯೂ ಹಂಜಿಯವರು ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ...
ಬೀದರ - ಕೌಟುಂಬಿಕ ಕಲಹಕ್ಕೆ ಮನ ನೊಂದು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಲ್ಲೆಪೂರ್ ನಿವಾಸಿ ಪ್ರಕಾಶ್ ಎಂಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನು ರಕ್ಷಿಸಲಾಗಿದೆ. ಮೈ ಮೇಲೆ ಪೆಟ್ರೋಲ್ ಸುರಿದುಕೊಳ್ಳುತ್ತಿದ್ದಂತೆ ಓಡಿ ಬಂದ ಪೊಲೀಸರು ಆತನನ್ನು ರಕ್ಷಣೆ ಮಾಡಿ...