ಎಲ್ಲಿ ಇರುವೆ ?
ಎಲ್ಲಿ ಇರುವೆ ?
ಪಾರಿಜಾತವೇ
ಗಗನ ಕುಸುಮ
ಸ್ನೇಹ ಪ್ರೇಮವೇ
ಎಲ್ಲಿ ಇದ್ದೆ
ಕೊಳದ ತಾವರೆ
ಮುಳ್ಳು ಮುತ್ತಿದ
ಕೆಂಗುಲಾಬಿಯೇ
ಮನದ ಬಯಕೆ
ಮುರುಗ ಮಲ್ಲಿಗೆ
ಪ್ರೀತಿ ಪಯಣಕೆ
ಹೆಜ್ಜೆ ಮೆಲ್ಲಗೆ .
ಜಾಜಿ ಕನಕ
ಕಂಪು ಸಂಪಿಗೆ
ಮಧುರ ಬದುಕಿನ
ಸೊಂಪಿಗೆ
ಗೆಳತಿ ನೀನು
ಭಾವ ಭಾಷೆ
ನನ್ನ ಕಾವ್ಯದ
ಮುಗ್ಧ ಪದಗಳೇ
ಬನ್ನಿ ಭಾವಗಳೆ
ಕವನ ಲಹರಿ
ಒಲವು ಕಟ್ಟುವ
ಬಾಳ ಗೂಡಿಗೆ
-------------------------
ಡಾ. ಶಶಿಕಾಂತ ಪಟ್ಟಣ ಪುಣೆ
ಡಾಕ್ಟರ್ ಎಂ ಎಂ ಕಲಬುರ್ಗಿ ಅವರು ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನ ಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥ ಸಂಪಾದನೆ, ಹಸ್ತ ಪ್ರತಿ ಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇದೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ...
ಮೈಸೂರು -ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಂಘ, ಮಂಡ್ಯ ಹಾಗೂ ಲಗೋರಿ ಬಳಗ, ಮೈಸೂರು ಇವರ ವತಿಯಿಂದ ಸಾಹಿತಿ ಡಾ.ನೀ.ಗೂ.ರಮೇಶ್‌ರವರ ಹೊಸಗನ್ನಡ ಕಾವ್ಯ ‘ಜಲ ಸಂವೇದನೆ’ ಪುಸ್ತಕ ಲೋಕಾರ್ಪಣೆಯು ಸೆ.೧ರಂದು ಭಾನುವಾರ ಸಂಜೆ ೪.೩೦ಕ್ಕೆ ವಿಜಯನಗರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡುವವರು ಪ್ರಸಿದ್ಧ ವಿಮರ್ಶಕರಾದ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ. ಕಾರ್ಯಕ್ರಮದ...
ಮೂಡಲಗಿ: ಸಹಕಾರ ಸಂಘಗಳು ಜನರಿಂದ ಠೇವಣಿ ಸಂಗ್ರಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಎಂದಿಗೂ ಠೇವಣಿದಾರರ ವಿಶ್ವಾಸ ಕಳೆದುಕೊಳ್ಳಬಾರದು ಮತ್ತು ಪತ್ತಿನ ಸಹಕಾರ ಸಂಘಗಳು ಪ್ರಸ್ತುತ ದಿನಗಳಲ್ಲಿ ಬಹಳ ಜಾಗೃತದಿಂದ ಕಾರ್ಯನಿರ್ವಹಿಸ ಬೇಕಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಪಟ್ಟಣ ಬಸವೇಶ್ವರ ಅರ್ಬನ್ ಸೊಸೈಟಿಯ ಸಭಾ ಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ...
ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ ೨೪ ವರ್ಷಗಳಿಂದ ಪ್ರತಿವರ್ಷ ಜರುಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸೆ.೨ ಮತ್ತು ೩ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಮಂಡಳಿಯ ಮುರಿಗೆಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ.
ಸೋಮವಾರ ಸೆ.೨ ರಂದು ರಾತ್ರಿ...
ಮೂಡಲಗಿ: ಯಾವ ಶಿಕ್ಷಣ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಾರೆಯೋ ಆ ಸಂಸ್ಥೆಗೆ ಒಳ್ಳೆಯ ಭವಿಷ್ಯವಿದೆ. ಹೆಣ್ಣಿಲ್ಲದೇ ಪ್ರಪಂಚವೇ ಇಲ್ಲ ಎಂದು ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಹೇಳಿದರು.
ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುಂ.ವೀರಭದ್ರಪ್ಪ ಅವರ ಜೊತೆ ಮಾತು-ಕತೆ...
ದಿನಾಂಕ ೫ ರ ಸೆಪ್ಟೆಂಬರ ೨೪ ರಂದು ಕಟೀಲಿನ ದೇವಾಲಯದ ಎದುರಿನ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಏಳನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ ನಡೆಯಲಿದೆ.
ಕಟೀಲು ಹರಿನಾರಾಯಣ ಅಸ್ರಣ್ಣನವರು ದೀಪ ಬೆಳಗಿಸಿ ಉದ್ಘಾಟಿಸುವ ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಪುನರೂರು ಆಗಮಿಸಲಿದ್ದು ಹಿರಿಯ ಶಿಕ್ಷಕ ಹೊಸಕೋಟೆ ಶ್ರೀಕಾಂತ್ ಕೆ.ವಿ ಸರ್ವಾಧ್ಯಕ್ಷತೆ ವಹಿಸಲಿರುವರು. ಪರಿಷತ್ತಿನ...
ಬೆಳಗಾವಿ - ಬೆಳಗಾವಿ ತನ್ಮಯ ಚಿಂತನ ಚಾವಡಿ ರಾಮತೀಥ೯ನಗರ ಹಾಗೂ ಮಹೇಶ ಪ ಪೂ ಕಾಲೇಜ ಮಹಾಂತೇಶನಗರ ಬೆಳಗಾವಿ ಇವರ ಸಹಯೋಗದಲ್ಲಿ ರವಿವಾರ ದಿನಾಂಕ ೦೮. ೦೯. ೨೦೨೪ ರಂದು ಸಾಹಿತಿ ಸ ರಾ ಸುಳಕೂಡೆ ಅವರ ಆಯ್ದ ಕೃತಿಗಳ ವಿಮರ್ಶಾ ಲೇಖನಗಳ ಸಂಕಲನ "ಮಿಂಚಿನಗೊಂಚಲು" ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ಬೆಳಗಾವಿಯ ಮಹೇಶ್ ಪದವಿ...
ಶರಣಸತಿ ಲಿಂಗಪತಿ ಭಾವದ ಗಜೇಶ ಮಸಣಯ್ಯ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡನೇಯ ಶತಮಾನ ಅನೇಕ ವೈಶಿಷ್ಟ್ಯಗಳಿಂದ ಮೆರೆದ ಒಂದು ಮಹತ್ವಪೂರ್ಣಕಾಲ. ಅಂದು ಅಸಂಖ್ಯಾತ ಶರಣಶರಣೆಯರು ತಮ್ಮ ಸ್ವತಂತ್ರ ಮನೋಭಾವ ಸ್ವಚ್ಚಂದ ವಿಚಾರ, ಅಪಾರ ಲೋಕಾನುಭವ ಹಾಗೂ ಅನುಪಮ ಪ್ರತಿಭೆಗಳಿಂದ ಸಾಹಿತ್ಯ ಕ್ಷೇತ್ರಗಳಲ್ಲಿ ವಿನೂತನ ಕ್ರಾಂತಿಯನ್ನೆಸಗಿದರು. ಅವರ ಕ್ರಾಂತಿಯ ಫಲವಾಗಿ ಹೊಸ ವಸ್ತು, ರೂಪ, ಭಾಷೆ,...
ಅಂತಪ್ಪುದಿಂತಪ್ಪುದೆಂತಪ್ಪುದೆನಬೇಡ
ಚಿಂತಿಸುತ ಕಾಲವನು ಕಳೆಯಬೇಡ
ಎಂತಾದರೇನಂತೆ ಸಿದ್ಧನಿರು ಸಹಿಸಲಿಕೆ
ಸಂತೈಸುತಾತ್ಮವನು - ಎಮ್ಮೆತಮ್ಮ
ಶಬ್ಧಾರ್ಥ
ಅಂತಪ್ಪುದು = ಹಾಗೆ ಆಗುವುದು. ಇಂತಪ್ಪುದು = ಹೀಗೆ ಆಗುವುದು.ಎಂತಪ್ಪುದು = ಹೇಗಾಗುವುದು.ಎಂತು = ಹೇಗೆ
ನಾಳೆ ಹಾಗಾವುದು , ಹೀಗಾವುದು, ಹೇಗಾಗುವುದು ಎಂದು
ಕಳವಳಪಡಬೇಡ. ಅದೇ ಚಿಂತೆಯಲಿ ಸಮಯವನ್ನು ಹಾಳುಮಾಡಬೇಡ. ಮುಂದೆ ಹೇಗಾವುದೆನ್ನುವುದನ್ನು ಯಾರು ತಿಳಿದಿದ್ದಾರೆ. ಏನೇ ಬರಲಿ ಅದನ್ನು ಎದುರಿಸಲು ತಯಾರು ಇರಬೇಕು. ಬಂದದ್ದನ್ನು ಒಪ್ಪಿಕೊಂಡು...