Monthly Archives: December, 2024

ಹುಡುಗಿ ಕಳಿಸಿದ ಶುಭಾಶಯ

ಹೋದ ವರ್ಷ ಹುಡುಗಿಯೊಬ್ಬಳು                             ಹೊಸ ವರ್ಷಕ್ಕೆ, ಶುಭಾಶಯ ಕಳಿಸಿದ್ದಳು                 ಅದರಲ್ಲಿ ಎರಡು ಸಾಲು ಹೀಗೆ ಬರೆದಿದ್ದಳು               ...

ಕವನ : ಒಳಿತನ್ನೇ ಹಾರೈಸು

ಒಳಿತನ್ನೇ ಹಾರೈಸು ದುಃಖ ದುಮ್ಮಾನವನ್ನೆಲ್ಲ ಬದಿಗಿರಿಸಿ ಕಪಟವಿಲ್ಲದ ಮುಗುಳ್ನಗೆಯ ಚೆಲ್ಲಿ ಒಳಿತನ್ನೇ ಮತ್ತೆಲ್ಲರಿಗೂ ಹಾರೈಸಿ ಸಂಭ್ರಮಿಸು ಹೊಸ ವರುಷವನ್ನಿಲ್ಲಿ! ಸಮಯಕ್ಕೆ ಮಳೆ ಬೆಳೆಯು ಪಲ್ಲವಿಸಿ ಹೊತ್ತೊತ್ತಿಗೆಲ್ಲರಿಗೂ ತುತ್ತೆರಡು ಸಿಗಲಿ ಮರದ ಮರೆಯಲಿ ಚಿಲಿಪಿಲಿ ಕೇಳಿಸಿ ಸಡಗರದಿ ಹಕ್ಕಿಯು ಗರಿಗೆದರಿ ಹಾರಲಿ ಜೊತೆಯಾದ ಬಂಧನಗಳೆಲ್ಲವ ಗಟ್ಟಿಗೊಳಿಸಿ ಮೆಟ್ಟಿದ ಮನೆಯೂ ಮನವರಿವ ತವರಾಗಲಿ ಹೊರದಿದ್ದರೂ ತಾಯಾಗುವಾಸೆಯು ಫಲಿಸಿ ಅಮ್ಮ ಸಿಕ್ಕ ಕಂದನೂ ತುಸು, ನಕ್ಕು ನಗಿಸಲಿ! ಸರ್ವಾಂತರ್ಯಾಮಿ ಸಕಲರನ್ನೂ ಹರಸಿ ಕಾಯುವ ದೊರೆ ಮರೆಯದೇ ಕರುಣಿಸಲಿ ಜಗವ ಕಾಣುವ...

ಶಾಲೆಯತ್ತ ಪರಿಷತ್ತಿನ ನಡೆ ಕಾರ್ಯಕ್ರಮ

ಸವದತ್ತಿ -  ಸವದತ್ತಿಯ ಕುಮಾರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸವದತ್ತಿ‌ ವತಿಯಿಂದ ಶಾಲೆಯತ್ತ ಪರಿಷತ್ತಿನ ನಡೆ ಎಂಬ ವಿನೂತನ ಕಾರ್ಯಕ್ರಮದ ಎರಡನೆ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದ ಅಂಗವಾಗಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಆಚರಿಸಲಾಯಿತು. ಅದರೊಂದಿಗೆ ಕ.ಸಾಪ ತಾಲೂಕ ಘಟಕದ ಕಾರ್ಯದರ್ಶಿಗಳಾದ ಬಿ. ಎನ್ .ಹೊಸೂರ ಅವರ ಸೇವಾ ನಿವೃತ್ತಿ ಕಾರಣ...

 ಡಾ.ರಂಜನ್ ಪೇಜಾವರ ರವರ ಅನುವಾದಿತ ಕಾದಂಬರಿ ‘ಸ್ವರ್ಗ ನಾ ಕಂಡಂತೆ’ ಲೋಕಾರ್ಪಣೆ 

ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ  ಡಾ. ರಂಜನ್ ಪೇಜಾವರ ಅವರ ಮೊತ್ತಮೊದಲ ಕಾದಂಬರಿ ʼದ ಹೆವೆನ್ ಆಸ್ ಐ ಸಾʼ ನ ಕನ್ನಡ ಅನುವಾದ ʼಸ್ವರ್ಗ ನಾ ಕಂಡಂತೆʼ,   , ಬೆಂಗಳೂರಿನ ನೃಪತುಂಗ ರಸ್ತೆಯ ʼಮಿಥಿಕ್ ಸೊಸೈಟಿ ಶತಮಾನೋತ್ಸವ ಸಭಾಂಗಣʼದಲ್ಲಿ ನಿಮ್ಹಾನ್ಸ್ ನ ನಿವೃತ್ತ ಹಿರಿಯ ಪ್ರಾಧ್ಯಾಪಕ, ಖ್ಯಾತ ಮನೋವೈದ್ಯ ಹಾಗೂ ಲೇಖಕ ಡಾ.ಸಿ. ಆರ್.ಚಂದ್ರಶೇಖರ್  ಮತ್ತು...

ಹೊಸ ವರ್ಷದಂದು ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ೨ ಲಕ್ಷ ಲಾಡು ವಿತರಣೆ

ಕಳೆದ ಹಲವಾರು ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ದಿನಾಂಕ: ೦೧.೦೧.2025 ರಂದು ಬೆಳಗ್ಗೆ ೦೪.೦೦ ಗಂಟೆಯಿಂದ ಪ್ರಾರಂಭಿಸಿ ಶ್ರೀ  ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ  ಮತ್ತು ಶ್ರೀರಂಗಕ್ಷೇತ್ರ  ಮಧುರೈ ಕ್ಷೇತ್ರಗಳಿಂದ ತರಿಸಿದ ವಿಶೇಷ "ತೋಮಾಲೆ"  ಮತ್ತು"ಸ್ವರ್ಣಪುಷ್ಪದಿಂದ" ಶ್ರೀಸ್ವಾಮಿಗೆ ``ಸಹಸ್ರನಾಮಾರ್ಚನೆ`` ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ,  ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ  ಆವರಣದಲ್ಲಿ ``ಏಕಾದಶ ಪ್ರಾಕಾರೋತ್ಸವ`` ಹಾಗೂ  ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ`` ಮತ್ತು  ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ``ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು  ವಿತರಣಾ`` ಕಾರ್ಯಕ್ರಮವನ್ನು ಪರಮ ಪೂಜ್ಯ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಏರ್ಪಡಿಸಲಾಗಿದೆ.                 ಪ್ರಾರಂಭದಲ್ಲಿ ಅಂದರೆ ೧೯೯೪ನೇ ಇಸವಿಯಲ್ಲಿ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ  ಪ್ರಾರಂಭಿಸಿ ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಒಂದು ಲಕ್ಷ ಮತ್ತು ಎರಡು ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುತ್ತದೆ. ಈ ವರ್ಷವೂ ಸಹ ಇನ್ನೂ ಹೆಚ್ಚು ಅಂದರೆ ಎರಡು ಲಕ್ಷ ಲಡ್ಡುವನ್ನು ವಿತರಣೆ ಮಾಡಲು ದೇವಸ್ಥಾನ ವತಿಯಿಂದ ತಯಾರಿ ನಡೆಯುತ್ತಿದೆ. ಈ ವರ್ಷ ಅಂದಾಜು (೨,೦೦೦) ಗ್ರಾಂ ತೂಕದ (೧೫,೦೦೦) ಲಡ್ಡುಗಳು ಹಾಗೂ (೧೫೦) ಗ್ರಾಂ ತೂಕದ (೨ ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಮತ ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು. ಲಡ್ಡು ಪ್ರಸಾದವನ್ನು ವಿಶೇಷವಾಗಿ ೬೦ ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, ದಿನಾಂಕ: ೨೦.೧೨.೨೦೨೩ ರಿಂದ ಪ್ರಾರಂಭಿಸಿ ೩೧.೧೨.೨೦೨೩ ರವರೆಗೂ  ಲಡ್ಡು ತಯಾರಿ ಕಾರ್ಯ ನಡೆಯುತ್ತದೆ. ಲಡ್ಡು ತಯಾರಿಕೆಗೆ  ಬಳಸಿರುವ ಸಾಮಗ್ರಿಗಳು: ೧೦೦ ಕ್ವಿಂಟಾಲ್ ಕಡ್ಲೆಹಿಟ್ಟು, ೨೦೦ ಕ್ವಿಂಟಾಲ್ ಸಕ್ಕರೆ,  ೧೦,೦೦೦ ಲೀಟರ್ ಖಾದ್ಯ ತೈಲ, ೫೦೦ ಕೆ.ಜಿ. ಗೋಡಂಬಿ,  ೫೦೦ ಕೆ.ಜಿ. ಒಣದ್ರಾಕ್ಷಿ, ೫೦೦ ಕೆ.ಜಿ. ಬಾದಾಮಿ, ೧೦೦೦ ಕೆ.ಜಿ ಡೈಮಂಡ್ ಸಕ್ಕರೆ, ೨೦೦೦, ಕೆ.ಜಿ. ಬೂರಾ ಸಕ್ಕರೆ, ೫೦ ಕೆ.ಜಿ. ಪಿಸ್ತಾ, ೫೦ ಕೆ.ಜಿ ಏಲಕ್ಕಿ, ೫೦ ಕೆ.ಜಿ. ಜಾಕಾಯಿ, ಮತ್ತು  ಜಾಪತ್ರೆ ೫೦ ಕೆ.ಜಿ. ಪಚ್ಚೆ ಕರ್ಪೂರ, ೨೦೦ ಕೆ.ಜಿ. ಬಳಸಿ  ತಯಾರಿಸಲಾಗಿದೆ. ಉದ್ದೇಶ: ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ  ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ ಭ್ರಾತೃತ್ವ ಮತ್ತು  ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ  ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ದೇವಾಲಯದ ಸಂಸ್ಥಾಪಕರಾದ ಪರಮ ಪೂಜ್ಯ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಎಲ್ಲಾ ಭಕ್ತಾದಿಗಳ ನೆರವಿನಿಂದ ಮತ್ತು  ಸಂಪೂರ್ಣ ಸಹಕಾರದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್  `ಸುದರ್ಶನ ನಾರಸಿಂಹ ಕ್ಷೇತ್ರ`, ಶ್ರೀ  ಯೋಗಾನರಸಿಂಹಸ್ವಾಮಿ ದೇವಸ್ಥಾನ ವಿಜಯನಗರ, ಒಂದನೇ ಹಂತ, ಮೈಸೂರು -೫೭೦೦೧೭, ಮೊಬೈಲ್ : ೦೯೯೦೦೪೦೦೦೦೦ ತಿಳಿಸಿರುತ್ತಾರೆ.

ಜ. 3ರಂದು ಡಾ. ಎ.ರವೀಂದ್ರರವರ ‘ಸದ್ಧರ್ಮಗೀತ’ ನಾಲ್ಕು ಕಾವ್ಯ ಕಥನಗಳ ಗುಚ್ಛ ಕೃತಿ ಲೋಕಾರ್ಪಣೆ

     ಹಿರಿಯ ಐಎಎಸ್ ಅಧಿಕಾರಿ ರಾಜ್ಯ ಸರ್ಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಡಾ. ಎ.ರವೀಂದ್ರರವರ ನೂತನ ಕೃತಿ 'ಸದ್ಧರ್ಮಗೀತ ' ನಾಲ್ಕು ಕಾವ್ಯಕಥನಗಳ ಗುಚ್ಛ ಲೋಕಾರ್ಪಣೆ ಸಮಾರಂಭವನ್ನು ಇದೆ ಶುಕ್ರವಾರ ಜ. 3 ರಂದು ಸಂಜೆ 5:30 ಗಂಟೆಗೆ ನಗರದ ಇನ್ಫೆಂಟ್ರಿ ರಸ್ತೆಯ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಆಯೋಜಿಸಲಾಗಿದೆ .     ಸೆಂಟರ್...

ಹೊಸವರ್ಷದಂದು ಗುರ್ಲಾಪೂರದಲ್ಲಿ ಅಯ್ಯಪ್ಪ ಸ್ವಾಮಿ‌ ಮಹಾಪೂಜೆ

ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ಶ್ರೀ ಅಯ್ಯಪ್ಪಸ್ವಾಮಿ "ಮಹಾಪೂಜೆ/ಉತ್ಸವ" ದಿನಾಂಕ 01 ರಂದು ಪ್ರತಿ ವರ್ಷ ಜರುಗುತ್ತದೆ. ಅದೆ ರೀತಿಯಾಗಿ ಈ ವರ್ಷವೂ ಸಹ ಜನವರಿ 01, 2025 ರಂದು ನಡೆಯುವ ಉತ್ಸವದಲ್ಲಿ ಸಹಸ್ರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪಾಲ್ಗೊಳ್ಳುವರು. ಗುರ್ಲಾಪೂರದಲ್ಲಿ ಹದಿನೆಂಟು ಮೆಟ್ಟಿಲು ಇರುವ ಉತ್ತರ ಕರ್ನಾಟಕದ ಮೊದಲು ದೇವಸ್ಥಾನವಿದೆ. ಎದುರಿಗೆ ಹರಿಯುವ ಮಿನಿ ಪಂಪೆ...

ಕವನ : ಸಜ್ಜಾಗಿದ್ದೇವೆ ಹೊಸ ವರುಷಕೆ

ಸಜ್ಜಾಗಿದ್ದೇವೆ ಹೊಸ ವರುಷಕೆ ತಿನ್ನಲು ಕೂಳಿಲ್ಲ ನೀರಿಲ್ಲ ಬಿರಿದ ನೆಲ ಬರಡು ಭೂಮಿ ಬ್ಯಾಂಕ್ ಮುಂದೆ ಹಣಕ್ಕೆ ಸಾಲು ಹೆಣಕ್ಕಿಲ್ಲ ಸಿಂಗಾರದ ಶಾಲು ಸಾಲಕ್ಕೆ ರೈತರ ಆತ್ಮ ಹತ್ಯೆ ಡಿಜಿಟಲ್ ಭಾರತದ ಕನಸು. ಕಪ್ಪು ಹಣ ಬಿಳಿ ಮಾಡುವ ಯತ್ನ ಎಲ್ಲಾ ಪಕ್ಷದವರು ಸತ್ಯವಂತರು. ನ್ಯಾಯ ನೀತಿಗೆ ಸಾಯುವವರು. ಪರ ದೇಶಕ್ಕೆ ಭೂಮಿ ಮಾರುವವರು. ವಿಶ್ವ ಬ್ಯಾಂಕಿಗೆ ನಮ್ಮನ್ನು ಅಡವಿಟ್ಟವರು. ಹೊರಗೆ ಕಚ್ಚಾಡಿ ಒಳಗೊಳಗೇ ಕೂಡಿದವರು ಧರ್ಮದ ಅಫಿಮ್ ಕೊಟ್ಟು ಕುಣಿಸಿದವರು. ಮರೆತಿದ್ದೇವೆ ಕುಣಿಕೆಗೆ...

ಎಣ್ಣೆಯ ತಾಕತ್ತು !!

ಪವ್ಯಾ... ಗಂಟಲತನಕ ಕುಡದು ತಡರಾತ್ರಿ ತೂ‌ರ‌್ಯಾಡಕೋಂತ ಮನೆಕಡೆ ಹೊಂಟಿದ್ದ. ಹಾದ್ಯಾಗ್ ಚೈನೀಸ್ ಸ್ನ್ಯಾಕ್ಸ್ ಗಾಡಿ ಕಾಣಿಸಿತು. ಪವ್ಯಾ " ಚಿಕನ್ ಮಂಚೂರಿ" ಕೊಡ್ರಿ ಅಂದ. ಅಂಗಡಿಯವ " ಎಲ್ಲ ಮುಗದೈತಿ ಅಂಗಡಿ ಬಂದ್ ಮಾಡಾಕ ಹತ್ತೇನಿ ಬೇಕಾದ್ರ ಹಸಿ ಚಿಕನ್ ಐತಿ ಪಾರ್ಸೆಲ್ ಕೊಡ್ಲೆನ್" ಅಂದ. ಕುಡದ ಮನಿಗಿ ಹೋಗಾಂವಗ ಸಿಗೋ ಮರ್ಯಾದೆ ನೆನಸಕೊಂಡು ಹೆಂಡ್ತಿಗೆ...

ಕಲಿಕೋಪಕರಣಗಳ ವಿತರಣಾ ಸಮಾರಂಭ

ಬೆನಕಟ್ಟಿ:ಯರಗಟ್ಟಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆನಕಟ್ಟಿ ಯಲ್ಲಿ ಸಮರ್ಥನಂ ಸಂಸ್ಥೆ ಬೆಳಗಾವಿ ಇವರು ಕೊಡಮಾಡಿದ ವಿಕಲಚೇತನ ಮಕ್ಕಳ ಕಲಿಕೋಪಕರಣಗಳ ವಿತರಣಾ ಸಮಾರಂಭ ಇಂದು ಜರುಗಿತು. ಸಮಾರಂಭ ದ ಅಧ್ಯಕ್ಷತೆ ಯನ್ನು ತಲ್ಲೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಗುರು ದೇವಿ ಮಲಕನ್ನವರ ವಹಿಸಿದ್ದರು. ಯರಗಟ್ಟಿ ಹಾಗೂ ಮುರಗೋಡ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ...
- Advertisement -spot_img

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -spot_img
close
error: Content is protected !!
Join WhatsApp Group